For Quick Alerts
ALLOW NOTIFICATIONS  
For Daily Alerts

ಚೆಂಡು ಹೂವಿನಿಂದ ದೃಷ್ಟಿ ದೋಷ ತಪ್ಪಿಸಬಹುದು

|
ಚೆಂಡು ಹೂವಿನ ಅಂಶವನ್ನು ಹೊಂದಿರುವ ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ದೃಷ್ಟಿದೋಷವನ್ನು ನಿವಾರಿಸಬಹುದು ಎಂದು ತಿಳಿದುಬಂದಿದೆ.

ಚೆಂಡು ಹೂವಿನಿಂದ ತಯಾರಿಸಿದ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ವಯೋ ಸಂಬಂಧಿ ದೃಷ್ಟಿದೋಷಕ್ಕೆ (ಏಜ್ ರಿಲೇಟೆಡ್ ಮ್ಯಾಕ್ಯುಲಾರ್ ಡಿಜೆನೆರೇಶನ್) ಲಕ್ಷಾಂತರ ಜನರು ಒಳಗಾಗುವುದನ್ನು ತಡೆಯಬಹುದಾಗಿದೆ.

ಚೆಂಡು ಹೂವಿನಲ್ಲಿರುವ ಮೂರು ರೀತಿಯ ಆಂಟಿಯಾಕ್ಸಿಡಂಟ್ ಗಳು ಕಣ್ಣುಗಳನ್ನು ಹೆಚ್ಚು ಸ್ವಾಸ್ಥ್ಯವಾಗಿಡಲು ಹೆಚ್ಚು ಸಹಕರಿಸುತ್ತದೆ ಎನ್ನಲಾಗಿದೆ. ಆದರೆ ಎಲ್ಲಾ ಆಹಾರಗಳಂತೆ ಇದು ತಕ್ಷಣವೇ ಸಿದ್ಧವಾಗಿ ದೊರೆಯುವುದಿಲ್ಲ.

ಬ್ರಿಟನ್ ನಲ್ಲಿ ಸುಮಾರು ಅರ್ಧದಷ್ಟು ಜನರು ಈ ಸಮಸ್ಯೆಗೆ ಒಳಗಾಗಿ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ, ವಯಸ್ಸಾಗುತ್ತಿದ್ದಂತೆ ಮೊದಲು ಕಣ್ಣಿನ ಮಧ್ಯದಲ್ಲಿ ದೃಷ್ಟಿ ಮಂಜಾಗುವುದು,ನಂತರ ಇನ್ನೊಬ್ಬರ ಮುಖವನ್ನು ಗುರುತಿಸಲಾಗದಷ್ಟು ದೃಷ್ಟಿ ದೋಷ ಉಂಟಾಗುತ್ತದೆ ಎಂದು ಡಾಕ್ಟರ್ ಸೂಸನ್ ಬೋವರ್ಸ್ ತಿಳಿಸಿದ್ದಾರೆ.

50 ವರ್ಷದ ನಂತರ ಪ್ರಾರಂಭವಾಗುವ ಈ ಸಮಸ್ಯೆ ಮುಂದೆ ಹೆಚ್ಚಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಶೇಕಡಾ 90 ರಷ್ಟು ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂದು ತಿಳಿದುಬಂದಿದೆ. ಕಣ್ಣಿನ ಹಿಂದಿರುವ ಹಳದಿ ಪಿಗ್ಮೆಂಟ್ ವಯಸ್ಸಾಗುತ್ತಿದ್ದಂತೆ ಕಡಿಮೆಯಾಗುವುದರಿಂದ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಹಳದಿ ಪಿಗ್ಮೆಂಟ್ ಗೆ ಚೆಂಡು ಹೂವಿನ ಅವಶ್ಯಕತೆಯಿದೆ ಎಂದು ತಿಳಿದುಬಂದಿದೆ.

English summary

Marigold Flower for Good Eyesight | Marigold Supplements for AMD | ಚೆಂಡು ಹೂವಿನಿಂದ ಕಣ್ಣಿನ ದೃಷ್ಟಿ | ವಯೋ ಸಂಬಂಧಿ ಕಣ್ಣಿನ ದೋಷಕ್ಕೆ ಚೆಂಡು ಹೂವಿನ ಪರಿಹಾರ

Taking a Marigold supplements daily may prevent people form losing their eyesight from age-related macular degeneration. Marigold contains 3 antioxidants which keeps the eyes healthy for long time
Story first published: Tuesday, December 6, 2011, 10:42 [IST]
X
Desktop Bottom Promotion