For Quick Alerts
ALLOW NOTIFICATIONS  
For Daily Alerts

ಬ್ರೆಸ್ಟ್ ಕ್ಯಾನ್ಸರ್ ನಿಯಂತ್ರಿಸಲು ಐದು ಬೆಸ್ಟ್ ಆಹಾರ

|
Food for Healthy Breast
ಅಕ್ಟೋಬರ್ ತಿಂಗಳು ವಿಶ್ವ ಸ್ತನ ಕ್ಯಾನ್ಸರ್ ತಡೆ ಮಾಸ. ಆದ್ದರಿಂದ ಮಹಿಳೆಯರನ್ನು ಕಾಡುತ್ತಿರುವ ಈ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಉಂಟುಮಾಡುವ ಸಲುವಾಗಿ ಸ್ತನ ಕ್ಯಾನ್ಸರ್ ತಡೆಯುವ ಕೆಲವು ಆಹಾರವನ್ನು ಇಲ್ಲಿ ನೀಡಲಾಗಿದೆ.

ಸ್ತನ ಕ್ಯಾನ್ಸರ್ ಗೆ ಸಂಬಂಧಿಸಿದಂತೆ, ಕ್ಯಾನ್ಸರ್ ಪತ್ತೆ ಹಚ್ಚುವಿಕೆ, ಸ್ವಯಂ ಪರೀಕ್ಷೆ, ಮ್ಯಾಮೊಗ್ರಫಿ ಮುಂತಾದುವುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಸ್ತನವನ್ನು ಆರೋಗ್ಯವಾಗಿಡಲು ಒಳ್ಳೆಯ ಆಹಾರ ಸೇವನೆಯತ್ತ ಗಮನ ಹರಿಸುವುದಿಲ್ಲ. ಆದ್ದರಿಂದ ಸ್ತನವನ್ನುಸ್ವಾಸ್ಥ್ಯವಾಗಿಡುವ ಐದು ಆಹಾರಗಳನ್ನು ಇಲ್ಲಿ ನೀಡಲಾಗಿದೆ.

ಸ್ತನದ ಸ್ವಾಸ್ಥ್ಯಕ್ಕೆ ಐದು ಆಹಾರ:

1. ಹಳದಿ/ಕೇಸರಿ ಹಣ್ಣು ಅಥವಾ ತರಕಾರಿ: ಹಳದಿ ದುಂಡುಮೆಣಸಿನ ಕಾಯಿ, ಬಾಳೆಹಣ್ಣು, ಕಿತ್ತಳೆ, ಕ್ಯಾರೆಟ್ ಮುಂತಾದವು ನಿಮ್ಮ ದೇಹಕ್ಕೆ ಅಗತ್ಯ ಶಕ್ತಿ ನೀಡುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿರುವ ವಿಟಮಿನ್ ಸಿ, ಎ ದೇಹಕ್ಕೆ ಅವಶ್ಯಕ. ಇವುಗಳಲ್ಲಿ ಯಾವುದಾದರೂ ಒಂದನ್ನು ದಿನನಿತ್ಯ ತಿನ್ನುತ್ತಿದ್ದರೆ ಸ್ತನ ಕ್ಯಾನ್ಸರ್ ಎಂಬ ಗಂಭೀರ ಸಮಸ್ಯೆಯಿಂದ ಪಾರಾಗಬಹುದು.

2. ಕೋಸು: ಹೂಕೋಸು, ಎಲೆಕೋಸು, ಮೊಳಕೆ ಒಡೆದ ಕಾಳು, ಬ್ರೊಕೊಲಿ, ಮರಕೋಸು, ಹೀಗೆ ಸಾಸಿವೆ ಜಾತಿಯಿಂದ ಬಂದಿರುವ ಈ ತರಕಾರಿಗಳು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ. ಇದರಲ್ಲಿರುವ ಐಸೊಥಿಯೊಸೈನೇಟ್ಸ್ ಅಂಶ ಸ್ತನ ಕ್ಯಾನ್ಸರ್ ನಿವಾರಣೆಗೆ ಸಹಕಾರಿ. ಆದರೆ ಥೈರಾಯ್ಡ್ ಸಮಸ್ಯೆ ಇದ್ದವರು ಇದನ್ನು ಹೆಚ್ಚು ಸೇವಿಸಬಾರದು.

3. ವಿಟಮಿನ್ ಇ ಪೂರಿತ ಆಹಾರ: ಹಲವು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸ್ತನದಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ವಿಟಮಿನ್ ಇ ಹೆಚ್ಚಿರುವ ಆಹಾರ ಸೇವನೆ ತುಂಬಾ ಮುಖ್ಯ. ಬಾದಾಮಿ ಮತ್ತು ಅವಕಾಡೊ ಈ ನೋವಿಗೆ ಉಪಶಮನ ನೀಡುತ್ತದೆ.

4. ಎಳ್ಳು ಮತ್ತು ಎಳ್ಳೆಣ್ಣೆ: ಎಳ್ಳು ಅಥವಾ ಹುಚ್ಚೆಳ್ಳಿನಲ್ಲಿ ಒಮೆಗಾ 3 ಮತ್ತು ಒಮೆಗಾ 6 ಫ್ಯಾಟಿ ಆಸಿಡ್ ಹೆಚ್ಚಿದೆ. ಎಳ್ಳಿನಲ್ಲಿರುವ ಈ ಅಂಶ ಸ್ತನ ಕ್ಯಾನ್ಸರ್ ಪ್ರಚೋದಕವಾಗಿರುವ ಈಸ್ಟ್ರೊಜೆನ್ ಮಟ್ಟವನ್ನು ನಿಯಂತ್ರಿಸುತ್ತದೆ. ಆದರಿಂದ ಎಳ್ಳಿನ ಸೇವನೆ ಸ್ತನ ಕ್ಯಾನ್ಸರ್ ತಡೆಗೆ ಸೂಕ್ತ.

5. ಆಲಿವ್ ಮತ್ತು ಮೀನೆಣ್ಣೆ: ಆಹಾರದಲ್ಲಿ ಆಲಿವ್ ಅಥವಾ ಮೀನೆಣ್ಣೆ ಬಳಕೆಯಿಂದ ದೇಹದಲ್ಲಿನ ಎಲ್ಲ ಜೀವಕಣಗಳಿಗೂ ಅನುಕೂಲವಾಗಲಿದೆ. ಸ್ತನ ಕ್ಯಾನ್ಸರ್ ತಡೆಯಲ್ಲೂ ಕೂಡ ಈ ಎಣ್ಣೆ ಹೆಚ್ಚು ಸಹಕಾರಿ. ಆದ್ದರಿಂದ ಯಾವುದೇ ಚಿಂತೆಯಿಲ್ಲದೆ ಈ ಎರಡೂ ಎಣ್ಣೆಯನ್ನು ನಿಮ್ಮ ಆಹಾರದೊಂದಿಗೆ ಬಳಸಬಹುದು.

English summary

Food for Healthy Breast | Breast Cancer Prevention | ಸ್ತನದ ಆರೋಗ್ಯಕ್ಕೆ ಅವಶ್ಯಕ ಆಹಾರ | ಸ್ತನ ಕ್ಯಾನ್ಸರ್ ತಡೆ

October is world Breast Cancer Prevention month and thus it is very pertinent to note that food for breasts can actually help keep them healthy and lump-free. Food is the best prevention for all your breast related disorders especially breast cance. Here is a list of 5 kinds of foods for breasts that have the nutrient groups necessary for healthy breasts.
Story first published: Thursday, October 20, 2011, 14:33 [IST]
X
Desktop Bottom Promotion