For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಜ್ವರಕ್ಕೆ ಮರುಗದಿರಲಿ ಮುದ್ದು ಮಕ್ಕಳು

|
Fever
ಇದು ಮಳೆಗಾಲ, ಕಾಯಿಲೆಗಳನ್ನು ಹೊತ್ತು ತರುವ ಮಳೆಗಾಲ ಬಂತೆಂದರೆ ಚಿಕ್ಕ ಮಕ್ಕಳಿರುವ ಪೋಷಕರು ಸ್ವಲ್ಪ ಜಾಗರೂಕರಾಗೇ ಇರಬೇಕು. ಆದರೆ ಸ್ಕೂಲಿಗೆ ಹೋಗೋ ಮಕ್ಕಳಿಗೆ ಕಾಯಿಲೆಗಳು ಗೊತ್ತೇ ಆಗದಂತೆ ತಗುಲಿಬಿಟ್ಟಿರುತ್ತದೆ. ನೆಗಡಿ, ಕೆಮ್ಮಿನೊಂದಿಗೆ ಜ್ವರವೂ ಕೂಡ ಮಕ್ಕಳ ಮೈ ಸುಡುತ್ತಿರುತ್ತದೆ. ಇಂತಹ ಸಮಯದಲ್ಲಿ ಒಂದಿಷ್ಟು ಸಲಹೆಗಳನ್ನು ಪಾಲಿಸಿದರೆ ಆದಷ್ಟು ಬೇಗನೆ ನಿಮ್ಮ ಮಗುವನ್ನು ಜ್ವರದಿಂದ ಪಾರುಮಾಡಬಹುದು.

1. ಜ್ವರ ಬರುವ ಸೂಚನೆಗಳನ್ನು ಮೊದಲೇ ತಿಳಿದುಕೊಳ್ಳಿ. ಸರಿಯಾಗಿ ಮೂತ್ರ ಹೋಗದಿರುವುದು, ಹೊಟ್ಟೆ ಹಸಿವಿಲ್ಲದಿರುವುದು, ಮತ್ತು ಹಟ ಮಾಡುವುದು ಈ ಲಕ್ಷಣಗಳು ಕಂಡುಬಂದರೆ ನಿಮ್ಮ ಮಕ್ಕಳಿಗೆ ಜ್ವರ ತಗುಲುವ ಸಾಧ್ಯತೆ ಇದೆ ಎಂದರ್ಥ.

2. ಜ್ವರ ಬರುವ ಮುನ್ನ ಸಾಮಾನ್ಯವಾಗಿ ಮಕ್ಕಳ ಕೈ ಮತ್ತು ಪಾದದಲ್ಲಿ ಹೆಚ್ಚು ಶಾಖ ಕಾಣಿಸಿಕೊಳ್ಳುತ್ತದೆ. ಥರ್ಮಾಮೀಟರ್ ನಿಂದ ದೇಹದ ಉಷ್ಣತೆ ಅಳೆದು ಜ್ವರದ ಸಾಧ್ಯತೆಯನ್ನು ತಿಳಿದುಕೊಳ್ಳಿ.

3. ದೇಹದ ಉಷ್ಣತೆ 101 ಡಿಗ್ರಿಗಿಂತ ಹೆಚ್ಚಿದ್ದರೆ ಮಕ್ಕಳ ಬಗ್ಗೆ ಗಂಭೀರವಾಗಿ ನಿಗಾವಹಿಸಲೇಬೇಕು. ಈ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಿದರೆ ಉತ್ತಮ.

4. ಜ್ವರವಿದ್ದ ಸಮಯದಲ್ಲಿ ಮಕ್ಕಳಿಗೆ ಹೆಚ್ಚು ಬಟ್ಟೆಗಳನ್ನು ಹೊದಿಸದೆ ಸ್ವಲ್ಪ ಸಡಿಲವಾದ ಬಟ್ಟೆ ತೊಡಿಸಿ ಬೆಚ್ಚಗಿರುವ ಜಾಗದಲ್ಲಿ ಮಲಗಿಸಿ. ಡಾಕ್ಟರ್ ನೀಡಿರುವ ಮಾತ್ರೆ ನೀಡಿ ಬೆಚ್ಚಗೆ ಮಲಗುವಂತೆ ನೋಡಿಕೊಳ್ಳಿ.

5. ದೇಹದ ಉಷ್ಣತೆ ಹೆಚ್ಚಾಗಿದ್ದರೆ, ಉಷ್ಣತೆ ಕಡಿಮೆಮಾಡುವತ್ತ ಗಮನ ಹರಿಸಿ ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಹಿಂಡಿ ಕೆಲವು ನಿಮಿಷ ಅದನ್ನು ಮಗುವಿನ ಮೈಮೇಲೆ ಹಾಕಿ ನಂತರ ಒಣ ಬಟ್ಟೆ ತೊಡಿಸಿ ಮಾತ್ರೆ ಕೊಟ್ಟು ಮಲಗಿಸಿ.

6. ದೇಹದ ಉಷ್ಣತೆಗೆ ತಕ್ಕಂತೆ 4-6 ಗಂಟೆಗೆ ಮಾತ್ರೆ ನೀಡಿ, ಆದರೆ ಮಕ್ಕಳಿಗೆ 24 ಗಂಟೆಯಲ್ಲಿ 5 ಮಾತ್ರೆಗಿಂತ ಹೆಚ್ಚು ನುಂಗಿಸಬಾರದು.

7. ಈ ಸಮಯದಲ್ಲಿ ಸೂಪ್ ಮತ್ತು ಬಿಸಿಯಾದ ಲಘು ಆಹಾರವನ್ನು ಮಕ್ಕಳಿಗೆ ನೀಡಿ. ಸರಾಗ ಜೀರ್ಣಕ್ರಿಯೆಗೆ ಸಹಾಯ ಮಾಡುವ ಮನೆಯಲ್ಲೇ ತಯಾರಿಸಿದ ಇಡ್ಲಿ ಮತ್ತು ಕೆಲವು ತರಕಾರಿಗಳ ಅನ್ನದ ಅಡುಗೆ ತಯಾರಿಸಿ ಕೊಡಿ.

8. ಮಕ್ಕಳು ಆದಷ್ಟು ಚೇತೋಹಾರಿಯಾಗಿರುವಂತೆ ನೋಡಿಕೊಳ್ಳಿ. ಅವರೊಂದಿಗೆ ಕುಳಿತು ಆಟ ಆಡುವುದು, ಕತೆ ಹೇಳುವುದು ಮಾಡಿದರೆ ಮಕ್ಕಳಿಗೆ ಖುಷಿಯಾಗುತ್ತದೆ. ಇದು ಪರೋಕ್ಷವಾಗಿ ಅವರ ಚೇತರಿಕೆಗೆ ಸಹಾಯ ಮಾಡುತ್ತದೆ.

9. ಮಾತ್ರೆ ನುಂಗಿಸಿ ಎರಡು ಗಂಟೆಗಳಾದರೂ ದೇಹದ ಉಷ್ಣತೆ ಕಡಿಮೆಗೊಳ್ಳದಿದ್ದ ಪಕ್ಷದಲ್ಲಿ ನಿರ್ಲಕ್ಷ್ಯ ಮಾಡದೆ ತಕ್ಷಣವೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಅವಶ್ಯಕವಿರುವ ಚಿಕಿತ್ಸೆಯನ್ನು ಮುಂದುವರೆಸಿ.

English summary

Fever in monsoon season | Cure fever in kids | ಮಳೆಗಾಲದಲ್ಲಿ ರೋಗರುಜಿನ | ಮಕ್ಕಳ ಜ್ವರಕ್ಕೆ ಸಲಹೆ

A constant change in the weather conditions brings along problems like cold, cough and fever in most of us. Children are worst effected by these harsh and inconsistent weather conditions. With the help of regular prescribed medicines and your care, you can cure fever in kids.
Story first published: Saturday, August 6, 2011, 16:39 [IST]
X
Desktop Bottom Promotion