For Quick Alerts
ALLOW NOTIFICATIONS  
For Daily Alerts

ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ

|

ಆಯುರ್ವೇದದ ಪ್ರಕಾರ ಜೀರ್ಣಕ್ರಿಯೆ ಸರಿಯಾಗಿ ಆಗದೇ ಇದ್ದರೆ ಅದು ಎಲ್ಲಾ ರೋಗಗಳಿಗೂ ಮೂಲವಾಗುತ್ತಂತೆ. ಪ್ರತಿನಿತ್ಯ ನಾವು ಸೇವಿಸುವ ಆಹಾರ ಕ್ರಮ ಶಿಸ್ತುಬದ್ಧವಾಗಿರ್ಬೇಕು.

ಬೇಕಾಬಿಟ್ಟಿ ಸಿಕ್ಕ ಸಿಕ್ಕದ್ದನ್ನೆಲ್ಲಾ ತಿಂದರೆ ಅಜೀರ್ಣದಂತಹ ಸಮಸ್ಯೆ ಎದುರಾಗುತ್ತದೆ. ಇದರಿಂದಾಗಿ ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ನಾವು ಸೇವಿಸುವ ಆಹಾರ ಚಯಾಪಚಯಕ್ರಿಯೆಗೆ ಒಳಗಾದ ಮಾತ್ರ ಆಹಾರ ದೇಹದಲ್ಲಿ ವಿಂಗಡನೆ ಆಗಿ ಮಲವಿಸರ್ಜನೆ ಸರಿಯಾಗಿ ಆಗುತ್ತದೆ, ಇಲ್ಲವಾದಲ್ಲಿ ಗ್ಯಾಸ್ ಟ್ರಬಲ್, ಅರ್ಜೀರ್ಣ ಉಂಟಾಗೋದು ಸಹಜ.

yoga asanas helps digestive

ಆದ್ರೆ ಇನ್ನು ಮುಂದೆ ನೀವು ಚಿಂತೆ ಮಾಡ್ಬೇಕಾಗಿಲ್ಲ. ಪ್ರತಿದಿನ ಬೆಳಗ್ಗೆ ಎದ್ದು ಯೋಗಾಸನ ಮಾಡಿದ್ರೆ ಸಾಕು ನಿಮ್ಮೆಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ.

ಯೋಗಾಸನ ಡೈಜೇಷನ್‌ಗೆ ಹೇಗೆ ಸಹಕಾರಿಯಾಗಲಿದೆ..?

1. ಯೋಗಾಸನ ಮಾಡುವುದರಿಂದ ಹಸಿವು ಹೆಚ್ಚಾಗುತ್ತದೆ ಮತ್ತು ಇದು ಚಯಾಪಚಯ ಕ್ರಿಯೆಗೆ ಸಹಕಾರಿಯಾಗಲಿದೆ
2. ಯೋಗಾಸನ ಮಾಡುವಾಗ ಬಾಡಿ ಸ್ಟ್ರೆಚ್ ಆಗುತ್ತದೆ. ಹಾಗೂ ಕಿಬ್ಬೊಟ್ಟೆಯ ಭಾಗಕ್ಕೆ ಸರಿಯಾದ ಮಾಚಾಜ್‌ ದೊರೆಯುತ್ತದೆ
3. ಆಹಾರವು ಜೀರ್ಣಾಂಗ ವ್ಯವಸ್ಥೆಯ ಮೂಲಕ ಸಾಗಲು ಸಹಕಾರಿ
4. ಮಲಬದ್ಧತೆ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಲಿದೆ
5. ಜೀರ್ಣಾಂಗಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ
6. ಯೋಗಾಸನ ಮಾಡುವುದರಿಂದ ಬಾಡಿ ಆಕ್ಟೀವ್ ಆಗಿರುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ
7. ಪ್ರತಿನಿತ್ಯ ಯೋಗ ಮಾಡುವುದರಿಂದ ಕೊಬ್ಬಿನ ಸಮಸ್ಯೆ ನಿವಾರಣೆಯಾಗುತ್ತದೆ

ಪ್ರತಿಯೊಂದು ರೋಗಕ್ಕೂ ಯೋಗಾಸನ ಮಾಡುವ ಮುಖಾಂತರ ಸೂಕ್ತ ಪರಿಹಾರವನ್ನು ಪಡೆಯಬಹುದು. ಅದೇ ರೀತಿ ಜೀರ್ಣಕ್ರಿಯೆ ಸರಿಯಾಗಿ ಆಗಲು ಈಗ ನಾವು ಹೇಳೋ ಕೆಲವೊಂದು ಆಸನಗಳನ್ನು ಪ್ರತಿನಿತ್ಯ ಫಾಲೋ ಮಾಡಿದ್ರೆ ಸಾಕು.

ಈ ಆಸನಗಳನ್ನ ಮಾಡಿದ್ರೆ ಅಜೀರ್ಣತೆಯಿದ ರಿಲೀಫ್‌..!

1. ತ್ರಿಕೋನಾಸನ

1. ತ್ರಿಕೋನಾಸನ

ತ್ರಿಕೋನಾಸನ ಅಥವಾ ತ್ರಿಭುಜಾಕೃತಿ ಈ ಆಸನ ಮಾಡುವುದರಿಂದ ಡೈಜೇಶನ್ ಸರಿಯಾಗಿ ಆಗುತ್ತದೆ. ಇದರ ಜೊತೆಗೆ ಹಸಿವು ಸರಿಯಾಗಿ ಆಗುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ.

ಮಾಡುವ ವಿಧಾನ : ನೆಟ್ಟಗೆ ನಿಂತು ನಂತರ ನಿಧಾನವಾಗಿ ನಿಮ್ಮ ದೇಹವನ್ನು ತ್ರಿಕೋನಾಕೃಗೆ ತನ್ನಿ ನಂತರ ಬೆಂಡ್ ಆಗಿ ನಿಮ್ಮ ಬಲ ಕೈ ಅನ್ನು ಬಲಗಾಲಿಗೆ ಜೋಡಿಸಿ. ನಂತರ ವಾಪಾಸ್ಸ್‌ ಮೊದಲ ಸ್ಥಿತಿಗೆ ಬಂದು ಎಡ ಬದಿಯಿಂದಲೂ ಅದೇ ರೀತಿ ಆಸನ ಮಾಡಿ.

2. ಪವನ ಮುಕ್ತಾಸನ

2. ಪವನ ಮುಕ್ತಾಸನ

ಇದು ಗಾಳಿಯನ್ನು ಹೊರಬಿಡುವ ಆಸನವಾಗಿದ್ದು, ಈ ಆಸನ ಮಾಡುವುದರಿಂದ ಗ್ಯಾಸ್‌ ಹಾಗೂ ಹೊಟ್ಟೆಗೆ ಸಂಬಂಧಿತ ಕಾಯಿಲೆಗಳು ನಿವಾರಣೆ ಆಗಲಿದೆ. ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದ್ದು, ಹೊಟ್ಟೆಯಿಂದ ಗ್ಯಾಸ್ ಹೊರಹಾಕಲು ಸಹಾಯಕಾರಿಯಾಗಿದೆ. ಜೊತೆಗೆ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ.

ಮಾಡುವ ವಿಧಾನ : ನೆಲದ ಮೇಲೆ ಮಲಗಿ ನಂತರ ಬೆನ್ನನ್ನು ಸ್ಪಲ್ಪ ಮೇಲಕ್ಕೆ ಎತ್ತಿ, ನಿಮ್ಮ ಎರಡು ಕಾಲುಗಳನ್ನು ಮಡಚಿ ಮೊಣಕಾಲನ್ನು ಎದೆಯ ಹತ್ತಿರಕ್ಕೆ ತನ್ನಿ. ಹಾಗೂ ಕಾಲನ್ನು ಕೈಗಳ ಸಹಾಯದಿಂದ ಗಟ್ಟಿಯಾಗಿ ಹಿಡಿದುಕೊಳ್ಳಿ. ನಿಮ್ಮ ಮೊಣಕಾಲನ್ನು ಮೂಗಿನಿಂದ ಸ್ಪರ್ಶಿಸಲು ಪ್ರಯತ್ನಿಸಿ. 30 ಸೆಕೆಂಡ್‌ಗಳ ಕಾಲ ಈ ಆಸನವನ್ನು ಮಾಡಿ ನಂತರ ಮೊದಲಿನ ಸ್ಥಿತಿಗೆ ಹಿಂತಿರುಗಿ.

 3. ಅರ್ಧ ಮತ್ಸ್ಯೇದ್ರಾಸನ

3. ಅರ್ಧ ಮತ್ಸ್ಯೇದ್ರಾಸನ

ಜೀರ್ಣಕ್ರಿಯೆಗೆ ಅರ್ಧಮತ್ಸ್ಯೇದ್ರಾಸನ ಸಹಕಾರಿಯಾಗಲಿದೆ. ಈ ಆಸನ ಮಾಡುವುದರಿಂದ ಕಿಬ್ಬೊಟ್ಟೆಯ ಅಂಗಗಳಿಗೆ ಮಸಾಜ್ ಮಾಡಲು ಸಹಕರಿಸುತ್ತದೆ. ಮತ್ತು ಮೇದೋಜ್ಜೀರಕ ಗ್ರಂಥಿ ಮತ್ತು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.

ಮಾಡುವ ವಿಧಾನ : ಮೊದಲಿಗೆ ನೆಲದ ಮೇಲೆ ಕುಳಿತುಕೊಳ್ಳಿ ಬೆನ್ನನ್ನು ನೇರವಾಗಿಸಿ ಎಡಗಾಲನ್ನು ಬಲ ಭಾಗಕ್ಕೆ ತನ್ನಿ ಬಲಗಾಲು ಇದ್ದಲ್ಲೇ ಇರಲಿ. ನಿಮ್ಮ ಬಾಡಿಯನ್ನು ಸ್ವಲ್ಪ ತಿರುಗಿಸಿ ಹಾಗೂ ಬಲ ಕೈಯನ್ನು ಎಡಭಾಗಕ್ಕೆ ತನ್ನಿ ಮತ್ತು ನಿಮ್ಮ ಎಡಕೈಯನ್ನು ಅಲ್ಲೆ ಪಕ್ಕದಲ್ಲಿ ಇಟ್ಟುಕೊಳ್ಳಿ ಸುಮಾರು ಒಂದು ನಿಮಿಷಗಳ ಕಾಲ ಇದೇ ಸ್ಥಿತಿಯಲ್ಲಿ ಇರಿ. ನಂತರ ಮತ್ತೆ ಮೊದಲಿನ ಸ್ಥಿತಿಗೆ ಹಿಂತಿರುಗಿ.

4. ಸೇತುಬಂಧ ಸರ್ವಾಂಗಾಸನ

4. ಸೇತುಬಂಧ ಸರ್ವಾಂಗಾಸನ

ಸೇತುಬಂಧ ಸರ್ವಾಂಗಾಸನವು ಹೃದಯಕ್ಕೆ ಶುದ್ಧ ರಕ್ತ ಸಂಚರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಜೀರ್ಣಕ್ರಿಯೆ ಸಲುಭವಾಗುವಂತೆ ಮಾಡುತ್ತದೆ.

ಮಾಡುವ ವಿಧಾನ : ಮ್ಯಾಟ್ ಮೇಲೆ ಮಲಗಿ ನಿಧಾನವಾಗಿ ನಿಮ್ಮ ಸೊಂಟ ಹಾಗೂ ಬೆನ್ನನ್ನ ಮೇಲಕ್ಕೆ ಎತ್ತಿ, ತಲೆ ಇದ್ದ ಜಾಗದಲ್ಲಿ ಇರಲಿ ಹಾಗೂ ಎರಡು ಕೈಗಳನ್ನು ನೇರವಾಗಿ ಮುಂದೆ ಚಾಚಿ ನಿಮ್ಮ ದೇಹವನ್ನು ಸೇತುವೆಯಂತೆ ಮಾಡಿಕೊಳ್ಳಿ. ಇದೇ ಸ್ಥಿತಿಯನ್ನ ಹತ್ತು ಬಾರಿ ಮಾಡಿ ಮತ್ತು ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿ. ನಂತರ ನಿಧಾನವಾಗಿ ಹಿಂದಿನ ಸ್ಥಿತಿಗೆ ಮರಳಿ.

 5. ಮಾರ್ಜರ್ಯಾಸನ (Cow Pose)

5. ಮಾರ್ಜರ್ಯಾಸನ (Cow Pose)

ಮಾರ್ಜರ್ಯಾಸನ ಇದನ್ನು ದನವನ್ನು ಹೋಲುವ ಆಸನ ಅಂತಾಲೂ ಕಪ್‌ ಮಾಡಲು ಸಹಕಾರಿಯಾಗಿದೆ. ಮತ್ತು ಕರುಳಿನ ಆರೋಗ್ಯಕ್ಕೂ ಈ ಆಸನ ಉತ್ತಮವಾಗಿದೆ.

ಮಾಡುವ ವಿಧಾನ : ಮೊದಲಿಗೆ ಅಂಬೆಗಾಲಿನಲ್ಲಿ ಕುಳಿತುಕೊಳ್ಳಿ ನಂತರ ನಿಮ್ಮ ತಲೆಯನ್ನು ಒಳಕ್ಕೆ ಬಗ್ಗಿಸಿ. ಹೀಗೆ ಸುಮಾರು ಹತ್ತು ಸಲ ಮಾಡಿ. ನಂತರ ಮೊದಲಿಗೆ ಸ್ಥಿತಿಗೆ ಮರಳಿ.

ಪ್ರತಿನಿತ್ಯ ಈ ಐದು ಆಸನಗಳನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳು ಉಂಟಾಗುತ್ತದೆ. ಕ್ರಮೇಣ ಅಜೀರ್ಣದಂತಹ ಸಮಸ್ಯೆಗಳು ಹೇಳ ಹೆಸರಿಲ್ಲದಂತೆ ಮಾಯಾವಾಗುತ್ತದೆ.

English summary

Yoga asanas for a strong digestive system

Yoga asanas which helps to digest food in Kannada.
X
Desktop Bottom Promotion