For Quick Alerts
ALLOW NOTIFICATIONS  
For Daily Alerts

ಚಾಟರ್‌ ಬಾಕ್ಸ್, ಜಗಳಗಂಟಿ ಈ ಸ್ವಭಾವಗಳಿದ್ದರೆ ನಿರ್ಲಕ್ಷ್ಯ ಮಾಡುವಂತದ್ದಲ್ಲ, ಅದು ಎಡಿಹೆಚ್‌ಡಿಯ ಲಕ್ಷಣ!

|

ಮಕ್ಕಳಲ್ಲಿ ಕಂಡುಬರುವ ಸಮಸ್ಯೆಗಳಲ್ಲಿ ಎಡಿಎಚ್‌ಡಿ ಅಥವಾ ಅಟೆನ್ಷನ್ ಡೆಫಿಸಿಟ್ ಹೈಪರ್ಆಕ್ಟಿವ್ ಡಿಸಾರ್ಡರ್ ಕೂಡಾ ಒಂದು. ಇದೊಂದು ಎಂಬುದು ನರಗಳ ಬೆಳವಣಿಗೆಯ ಸ್ಥಿತಿಯಾಗಿದ್ದು ಅದು ಬಾಲ್ಯದಲ್ಲಿ ಹೆಚ್ಚಾಗಿ ಪರಿಣಾಮ ಬೀರುತ್ತದೆ ಮತ್ತು ಅದನ್ನು ಬಾಲ್ಯದಲ್ಲಿಯೇ ಪತ್ತೆಹಚ್ಚದಿದ್ದಲ್ಲಿ ಮಗು ಪ್ರೌಢಾವಸ್ಥೆಗೆ ಬಂದಾಗ ಹೆಚ್ಚಿನ ಸಮಸ್ಯೆಗೆ ಕಾರಣವಾಗಬಹುದು. ಈ ಸಮಸ್ಯೆ ಹೊಂದಿರುವ ಮಕ್ಕಳು ಗಮನ ಹರಿಸಲು ತೊಂದರೆ ಹೊಂದಿರಬಹುದು ಮತ್ತು ಅವರ ಅನಿರೀಕ್ಷಿತ ವರ್ತನೆಯನ್ನು ನಿಯಂತ್ರಿಸಲು ಕಷ್ಟವಾಗಬಹುದು.

adhd in females

ಈ ಸಮಸ್ಯೆ ಗಂಡುಮಕ್ಕಳಲ್ಲಿ ಮಾತ್ರವಲ್ಲ ಹೆಣ್ಣುಮಕ್ಕಳಲ್ಲಿಯೂ ಕಂಡುಬರುತ್ತದೆ. ಆದರೆ ವಿಪರ್ಯಾಸವೆಂದರೆ ಈ ಸಮಸ್ಯೆ ಗಂಡುಮಕ್ಕಳಲ್ಲಿ ಮಾತ್ರ ಕಂಡುಬರುತ್ತೆ ಎನ್ನುವುದು ಸಾಮಾನ್ಯ ನಂಬಿಕೆ. ಹಾಗಾಗಿ ಹೆಣ್ಣುಮಕ್ಕಳಲ್ಲಿ ಈ ಸಮಸ್ಯೆ ಇದ್ದರೂ ಆರಂಭದಲ್ಲಿ ತಿಳಿಯದೇ ಮುಂದೆ ದೊಡ್ಡ ಸಮಸ್ಯೆಯನ್ನು ತಂದಿಡಬಹುದು. ಈಎಡಿಹೆಚ್‌ಡಿ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು ಎನ್ನುವುದು ಇದೇ ಕಾರಣಕ್ಕೆ..................

1 ಆರೋಗ್ಯದಲ್ಲೂ ಲಿಂಗ ಅಸಮಾನತೆ

ವರದಿಗಳ ಪ್ರಕಾರ, ವೈದ್ಯರು ಎಡಿಎಚ್‌ಡಿಯನ್ನು ಮಹಿಳೆಯರಿಗಿಂತ ಗಂಡು ಮಕ್ಕಳಲ್ಲಿ ಹೆಚ್ಚು ಪತ್ತೆ ಮಾಡುತ್ತಾರೆ. ಆದರೆ ರೋಗಲಕ್ಷಣಗಳನ್ನು ಗುರುತಿಸಲಾಗದ ಕಾರಣದಿಂದಾಗಿ ಹುಡುಗಿಯರಲ್ಲಿ ಈ ಸ್ಥಿತಿಯನ್ನು ಪತ್ತೆಹಚ್ಚದೆ ಉಳಿಯುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ತೋರಿಸಿವೆ. ಈ ಸಮಸ್ಯೆಯಲ್ಲಿ ಹಲವು ವಿಧಗಳಿವೆ. ಹುಡುಗರು ಹೆಚ್ಚಾಗಿ ಹೈಪರ್ಆಕ್ಟಿವಿಟಿ ಮತ್ತು ಹಠಾತ್ ವರ್ತನೆಯನ್ನು ಎಲ್ಲರೂ ಗಮನಿಸುವಂತೆ ತೋರಿಸಿದರೆ, ಹುಡುಗಿಯರು ಸಾಮಾನ್ಯವಾಗಿ ಮುಚ್ಚಿಡುವ ಗುಣವನ್ನು ಹೊಂದಿರುತ್ತಾರೆ, ಹಾಗಾಗಿ ಅದನ್ನು ಗಮನಿಸಲು ಸಾಧ್ಯವಾಗುವುದಿಲ್ಲ. ಲಿಂಗ ಪಕ್ಷಪಾತವು ಇಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ, ಅಲ್ಲಿ ಹಠಾತ್ ಪ್ರವೃತ್ತಿ ಮತ್ತು ಹೈಪರ್‌ ಆಕ್ಟೀವ್‌ ಗುಣಲಕ್ಷಣಗಳನ್ನು ರೋಗಲಕ್ಷಣಗಳಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ವ್ಯಕ್ತಿತ್ವ ಗುಣಲಕ್ಷಣಗಳಾಗಿ ತೆಗೆದುಕೊಳ್ಳಬಹುದು.

2. ಡಿಎಚ್‌ಡಿ: ಗಂಡು VS ಹೆಣ್ಣು
ಹುಡುಗಿಯರಲ್ಲಿ ಈ ಸಮಸ್ಯೆಯನ್ನು ಯಾಕೆ ಕಂಡು ಹಿಡಿಯಲಾಗುವುದಿಲ್ಲ ಎಂದರೆ ಈ ಸಮಸ್ಯೆಯ ಲಕ್ಷಣಗಳು ಎಡಿಹೆಚ್‌ಡಿ ಇರುವ ಹೆಣ್ಣು ಮಕ್ಕಳಲ್ಲಿನ ರೋಗಲಕ್ಷಣಗಳೊಂದಿಗೆ ಸಾಮಾನ್ಯವಾಗಿ ಹೊಂದಾಣಿಕೆಯಾಗುವುದಿಲ್ಲ. ಹುಡುಗರು ಶಾಲೆ ಮತ್ತು ಮನೆಯಲ್ಲಿ ಹೆಚ್ಚು ಹಠಮಾರಿತನ, ಅಳು ಮುಂತಾದ ನಡವಳಿಕೆಗಳನ್ನು ತೋರಿಸಬಹುದು. ಕೆಲವು ಮಕ್ಕಳು ಹೈಪರ್ಆಕ್ಟಿವ್ ಮತ್ತು ಹಠಾತ್ ಪ್ರವೃತ್ತಿ ಮತ್ತು ದೈಹಿಕ ಆಕ್ರಮಣ ಅಂದರೆ ಹೊಡೆಯುವುದು, ಪರಚುವುದು ಮುಂತಾದ ನಡವಳಿಕೆಯನ್ನು ತೋರಬಹುದು. ಆದರೆ ಈ ಸಮಸ್ಯೆಯಿರುವ ಹುಡುಗಿಯರು ಸಾಮಾನ್ಯವಾಗಿ ಕಡಿಮೆ ಸ್ವಾಭಿಮಾನ, ಆತಂಕ ಮತ್ತು ಗಮನ ಸೆಳೆಯುವ ಸಮಸ್ಯೆಯನ್ನು ಹೊಂದಿರುತ್ತಾರೆ ಮತ್ತು ಕಾಲು ಕೆರೆದು ಜಗಳಕ್ಕೆ ಬರುತ್ತಾರೆ.

ಎಡಿಎಚ್‌ಡಿ ಇರುವ ಹುಡುಗಿಯರು ಮಾಡಬಹುದಾದ ಕೆಲಸಗಳು
ಹುಡುಗಿಯರಲ್ಲಿ ಎಡಿಎಚ್‌ಡಿ ಹೆಚ್ಚಾಗಿ ಅಜಾಗರೂಕತೆಯ ರೂಪದಲ್ಲಿ ಪ್ರಕಟವಾಗುತ್ತದೆ, ಅಲ್ಲಿ ಅವರು ಗಮನ ಕೇಂದ್ರೀಕರಿಸಲು ಕಷ್ಟಪಡುತ್ತಾರೆ. ಇವರ ಪಟಪಟ ಮಾತನ್ನು ನೋಡಿ ಚಾಟರ್‌ ಬಾಕ್ಸ್‌ ಎಂದು ಕರೆಯಬಹುದು. ಅಲ್ಲದೇ ಈ ಸಮಸ್ಯೆ ಇರುವ ಹೆಣ್ಣುಮಕ್ಕಳು ತಮ್ಮಲ್ಲಿರುವ ವಸ್ತುಗಳನ್ನು ಕಳೆದುಕೊಳ್ಳುತ್ತಾರೆ ಮತ್ತು ಅಸಡ್ಡೆಯಿಂದ ಬೇಕಾಗಿಯೇ ತಪ್ಪುಗಳನ್ನು ಮಾಡುತ್ತಾರೆ. ಉದಾಹರಣೆ ನೀಡುವುದಾದರೆ ಅಸೈನ್‌ಮೆಂಟ್‌ಗಳಿಗೆ ಬಂದಾಗ ತರಗತಿಯಲ್ಲಿ ಹಿಂದೆ ಓಡುವುದು, ಹೇಳಿದ ವಾಕ್ಯಗಳನ್ನು ಮತ್ತೆ ಮತ್ತೆ ಓದುವುದು, ಪೆನ್‌, ಪೆನ್ಸಿಲ್‌ ಅಥವಾ ಪುಸ್ತಕಗಳನ್ನು ಕಳೆದುಕೊಳ್ಳುವುದು, ಇತರರ ಮಾತನ್ನು ಗಮನವಿಟ್ಟು ಕೇಳದಿರುವುದು ಮತ್ತು ಮಾತನಾಡುವಾಗ ಮತ್ತು ಇತರರಿಗೆ ಸ್ನೇಹಿತರನ್ನು ಅಡ್ಡಿಪಡಿಸುವುದು. ಈ ಮುಂತಾದ ಲಕ್ಷಣಗಳಿಂದ ಹೆಣ್ಣುಮ್ಕಕಳಲ್ಲಿ ಎಡಿಹೆಚ್‌ಡಿಯನ್ನು ಗುರುತಿಸಬಹುದು.

ಹುಡುಗಿಯರು ಈ ರೀತಿಯ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಬಹುದು
ಎಡಿಹೆಚ್‌ಡಿ ಇರುವ ಹೆಣ್ಣುಮಕ್ಕಳು ಆಳವಾದ ಭಾವನೆಗಳನ್ನು ಅನುಭವಿಸಬಹುದು. ಅವರು ಏನು ಹೇಳಬೇಕೆಂಬುದನ್ನು ಸ್ಪಷ್ಟವಾಗಿ ಯೋಚನೆ ಮಾಡದಂತೆ ತಡೆಯಬಹುದು. ಅನಿರೀಕ್ಷಿತವಾಗಿ ಆಕ್ರಮಣ ಮಾಡುವುದು ಈ ಸಮಸ್ಯೆಯ ಲಕ್ಷಣವಾಗಿರಬಹುದು. ಈ ಸಮಸ್ಯೆಯಿರುವ ಹೆಣ್ಣುಮಕ್ಕಳು ತಮ್ಮ ಭಾವನೆಗಳನ್ನು ನಿಯಂತ್ರಿಸುವುದರಲ್ಲಿ ವಿಫಲರಾಗಬಹುದು. ಉದಾಹರಣೆಗೆ ಕೋಪ ಬಂದಾಗ ಅದನ್ನು ನಿಯಂತ್ರಿಸಲಾಗದೇ ಒಮ್ಮೆಲೇ ಕೋಪವು ಸ್ಫೋಟಗೊಳ್ಳಬಹುದು. ಕೋಪ ಬಂದಾಗ ಜೋರಾಗಿ ಕಿರುಚಬಹುದು. ಈ ಲಕ್ಷಣಗಳು ಹೆಣ್ಣುಮಕ್ಕಳಲ್ಲಿನ ಎಡಿಹೆಚ್‌ಡಿ ಸಮಸ್ಯೆಯ ಸಂಕೇತವಾಗಿರಬಹುದು. ಹಾಗಾಗಿ ಈ ಲಕ್ಷಣಗಳು ನಿಮ್ಮ ಹೆಣ್ಣುಮಕ್ಕಳಲ್ಲಿ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಅವರಿಗೆ ವೈದ್ಯಕೀಯ ಸಲಹೆಯ ಅತೀ ಅವಶ್ಯವಿರಬಹುದು.

ಎಡಿಎಚ್‌ಡಿ ಚಿಕಿತ್ಸೆಯು ಮಹಿಳೆಯರಿಗೆ ಮುಖ್ಯ..ಏಕೆಂದರೆ
ADHD ಇರುವ ಮಹಿಳೆಯರು ಖಿನ್ನತೆ, ಆತಂಕ ಮತ್ತು ಕಡಿಮೆ ಆತ್ಮವಿಶ್ವಾಸದಂತಹ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಪ್ರೌಢಾವಸ್ಥೆಯವರೆಗೂ ಮಹಿಳೆಯರು ಸಾಮಾನ್ಯವಾಗಿ ರೋಗನಿರ್ಣಯವನ್ನು ಪಡೆಯದ ಕಾರಣ ಈ ರೀತಿಯ ಸಮಸ್ಯೆ ಬೆಳೆಯಬಹುದು. ಇದರ ಅರ್ಥವೇನೆಂದರೆ, ಮಹಿಳೆಯರು ಸಾಮಾನ್ಯವಾಗಿ ಈ ಸಮಸ್ಯೆಗಳನ್ನು ತಮ್ಮ ನ್ಯೂನ್ಯತೆ ಎಂದು ದೂಷಿಸುತ್ತಾರೆ, ಆದರೆ ಇದು ವಾಸ್ತವವಾಗಿ ಎಡಿಎಚ್‌ಡಿಯ ಲಕ್ಷಣಗಳಾಗಿವೆ.

ಎಡಿಎಚ್‌ಡಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪಡೆಯುವುದರಿಂದ ಈ ಮೇಲೆ ತಿಳಿಸಿರುವಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಹುದು. ಇತರರಿಗೆ ಸುಲಭವಾಗಿದ್ದು ನನಗೆ ಯಾಕೆ ಮಾತ್ರ ಕಷ್ಟವಾಗುತ್ತಿದೆ ಎನ್ನುವುದನ್ನು ವಿವರಿಸಲು ಸಹಾಯ ಮಾಡುತ್ತದೆ. ನೀವು ಅಜಾಗರೂಕರಲ್ಲ, ನಿಧಾನರಲ್ಲ, ಪ್ರತಿಯೊಂದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವುದನ್ನು ಅರ್ಥಮಾಡಿಸುತ್ತದೆ.

English summary

Why Girls' ADHD Symptoms Are Not Diagnosed in Kannada

ADHD: ADHD in females symptoms, why it is dangerous if not treated read on.....
Story first published: Sunday, December 4, 2022, 19:40 [IST]
X
Desktop Bottom Promotion