For Quick Alerts
ALLOW NOTIFICATIONS  
For Daily Alerts

ಕೆಲವರು ತಮ್ಮ ದೇಹದಲ್ಲಿ ಅಪರೂಪದ ವೈಶಿಷ್ಠ್ಯತೆ ಹೊಂದಿರುತ್ತಾರೆ, ಏನದು ಗೊತ್ತೇ?

|

ಜಗತ್ತಿನಾದ್ಯಂತ ಕೋಟಿ ಕೋಟಿ ಜನರು ವಾಸಿಸುತ್ತಿದ್ದಾರೆ. ಎಲ್ಲರ ನಡೆ, ನುಡಿ, ಮುಖದಲ್ಲಿ ವಿಭಿನ್ನತೆ ಇದೆ. ಇದು ಎಲ್ಲ ದೇಶಗಳಲ್ಲೂ ವಿಭಿನ್ನತೆ ಇದೆ ಎನ್ನುವುದು ನಮಗೆಲ್ಲ ಗೊತ್ತಿರುವ ವಿಚಾರ. ಆದರೆ ನಿಮಗೊಂದು ಗೊತ್ತಾ? ಕೆಲ ಮನುಷ್ಯರ ದೇಹದ ಭಾಗಗಳಲ್ಲಿ ಅಪರೂಪದಲ್ಲಿ ಅಪರೂಪ ದೇಹದ ಭಾಗಗಳನ್ನು ಹೊಂದಿರುತ್ತಾರೆ. ಹೌದು, ಆಶ್ಚರ್ಯವಾದರು ಇದು ನಿಜ ನಾವು ಅನೇಕ ಕಡೇ ನೋಡಿರಬಹುದು ಅಥವಾ ಕೇಳಿರಬಹುದು ಒಬ್ಬರನ್ನೇ ಹೋಲುವ ಮನುಷ್ಯರು ಇದ್ದಾರೆ ಎನ್ನುವುದುನ್ನು. ಇದು ಕೂಡ ವಿಶೇಷದಲ್ಲಿ ವಿಶೇಷತೆ ಆಗಿದೆ. ಒಂದೇ ರೀತಿಯ ಮುಖವನ್ನು ಹೊಂದುವುದು ಅಪರೂಪವಾಗಿದೆ. ಇದು ಇದರ ಭಾಗವಾಗಿದ್ದರು ಕೂಡ ಕೆಲವರು ದೇಹದ ಭಾಗಗಳಲ್ಲಿ ಅಪರೂಪದ ವೈಶಿಷ್ಟ್ಯ ಹೊಂದಿರುತ್ತಾರೆ. ಇದು ಜಗತ್ತಿನ ಜನ ಸಂಖ್ಯೆಯಲ್ಲಿ ಒಬ್ಬರಿಗೋ ಅಥವಾ ಇಬ್ಬರಿಗೂ ಈ ರೀತಿ ಸಂಭವಿಸಬಹುದಾಗಿದೆ. ಹಾಗಾದರೆ ಏನದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಬಲಗಡೆಯಲ್ಲಿ ಹೃದಯ!

ಬಲಗಡೆಯಲ್ಲಿ ಹೃದಯ!

ಯಸ್, ಈ ವಿಚಾರ ಆಶ್ಚರ್ಯವಾದ್ರು ಕೂಡ ಇದು ಕಟು ಸತ್ಯ. ಹೌದು, ನಮಗೆಲ್ಲ ಎಡಗಡೇ ಹೃದಯ ಇರುವುದು ಗೊತ್ತಿದೆ. ಆದರೆ ಬಲಗಡೆ ಇರುತ್ತೆ ಅನ್ನುವುದು ಅನೇಕರಿಗೆ ಗೊತ್ತೆ ಇರುವುದಿಲ್ಲ. ಆದರೆ ಅಧ್ಯಯನಗಳ ಪ್ರಕಾರ ಜಗತ್ತಿನ ಜನ ಸಂಖ್ಯೆಯಲ್ಲಿ ಕೆಲವರು ಬಲ ಭಾಗದಲ್ಲಿ ಹೃದಯವನ್ನು ಹೊಂದಿದ್ದಾರೆ ಅಂತೆ. ಇದು ಜಗತ್ತಿನ ಜನ ಸಂಖ್ಯೆಯಲ್ಲಿ ಒಂದು ಹತ್ತು ಜನಕ್ಕೆ ಈ ರೀತಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದೊಂದು ಆರೋಗ್ಯ ಸಮಸ್ಯೆಯಾಗಿದ್ದು, ಡೆಕ್ಸ್ಟ್ರೋಕಾರ್ಡಿಯಾ ಎಂದು ಇದನ್ನು ಕರೆಯಲಾಗುತ್ತೆ. ಇದು ಅಪರೂಪದ ಜನ್ಮಜಾತ ಹೃದಯ ಸ್ಥಿತಿಯಾಗಿದ್ದು, ಇದರಲ್ಲಿ ನಿಮ್ಮ ಹೃದಯವು ನಿಮ್ಮ ಎದೆಯ ಬಲಭಾಗದಲ್ಲಿರುತ್ತದೆ. ಡೆಕ್ಸ್ಟ್ರೋಕಾರ್ಡಿಯಾ ಹೊಂದಿರುವ ಜನರು ಸಂಪೂರ್ಣವಾಗಿ ಸಾಮಾನ್ಯ ಜೀವನವನ್ನು ನಡೆಸಬಹುದು ಅಥವಾ ಕೆಲವೊಮ್ಮೆ ಉಸಿರಾಟದ ತೊಂದರೆಗಳು ಮತ್ತು ರಾಜಿ ಮಾಡಿಕೊಂಡ ಪ್ರತಿರಕ್ಷಣಾ ವ್ಯವಸ್ಥೆಯಂತಹ ಕೆಲವು ಅಡ್ಡಪರಿಣಾಮಗಳನ್ನು ಅನುಭವಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ, ಇದು ಹೃದಯ ಮತ್ತು ಇತರ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು, ಕಾಮಾಲೆ ಮತ್ತು ಬಳಲಿಕೆಯಂತಹ ವಿಷಯಗಳನ್ನು ಉಂಟುಮಾಡಬಹುದು ಮತ್ತು ಸರಿಪಡಿಸಲು ಶಸ್ತ್ರಚಿಕಿತ್ಸಾ ಹಸ್ತಕ್ಷೇಪದ ಅಗತ್ಯವಿರಬಹುದು. ಹೀಗಾಗಿ ಇದು ಮಾನವನ ಅಂಗಗಳ ಅಪರೂಪದ ವಿಶಿಷ್ಟತೆಯಾಗಿದೆ.

ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ಉಗುರು ಇಲ್ಲದೆ ಇರುವುದು!

ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ಉಗುರು ಇಲ್ಲದೆ ಇರುವುದು!

ಅನೇಕರಿಗೆ ಈ ರೀತಿಯ ಅನುಭವ ಆಗದೆ ಇರಬಹುದು ಆದರೆ ಈ ರೀತಿಯ ವೈಶಿಷ್ಟ್ಯವಿದೆ. ಹೌದು, ಎಲ್ಲರೂ ಬೆರಳು ಮತ್ತು ಕಾಲ್ಬೆರಳಿಗೆ ಉಗುರು ಇರಬೇಕು ಎಂದು ಯೋಚಿಸುತ್ತಾರೆ. ಆದರೆ ಕೆಲವರಲ್ಲಿ ಈ ರೀತಿಯ ಸಮಸ್ಯೆ ಇದೆ ಎಂದು ಅಧ್ಯಯನಗಳು ಹೇಳಿವೆ. ಈ ರೀತಿಯ ಸಮಸ್ಯೆ ಅತ್ಯಂತ ವಿರಳವಾಗಿದೆ. ಈ ಸಮಸ್ಯೆಯನ್ನ ಅನೋನಿಚಿಯಾ ಕಂಜೆನಿಟಾ ಎಂದು ಕರೆಯಲಾಗುತ್ತದೆ. ಇದು ಅಸಾಮಾನ್ಯ ಸಮಸ್ಯೆಯಾಗಿದೆ. ಇದು ಇದು R-spondin-4 ಎಂಬ ಪ್ರೊಟೀನ್‌ನ ತಯಾರಿಕೆಯನ್ನು ನಿಯಂತ್ರಿಸುವ ಜೀನ್‌ನಲ್ಲಿನ ರೂಪಾಂತರದಿಂದ ಬರುತ್ತದೆ ಮತ್ತು ಅದೇ ಜೀನ್ ದೇಹದ ಅಂಗಾಂಶಗಳು ಮತ್ತು ಜೀವಕೋಶಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂದು ಹೇಳುವ ಪಾತ್ರವನ್ನು ವಹಿಸುತ್ತದೆ. ಇದು ನಮ್ಮ ತೋಳುಗಳು ಮತ್ತು ಕಾಲುಗಳ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದೆ ಮತ್ತು ಬೆರಳ ತುದಿಗಳು ಮತ್ತು ಕಾಲ್ಬೆರಳುಗಳ ರೂಪಕ್ಕೆ ಬಂದಾಗ ಇದು ಬಹಳ ಮುಖ್ಯವಾಗಿದೆ. ಆದರೆ ಇದು ಅತ್ಯಂತ ವಿರಳವಾಗಿದ್ದು ಮಾನವನ ದೇಹಗಳ ಭಾಗಗಳಲ್ಲಿ ಅಪರೂಪದ ವೈಶಿಷ್ಟ್ಯವಾಗಿದೆ.

ಪೈಬಾಲ್ಡಿಸಮ್!

ಪೈಬಾಲ್ಡಿಸಮ್!

ಪೈಬಾಲ್ಡಿಸಮ್ ಇದನ್ನು ಸುಲಭವಾಗಿ ಹೇಳುವುದಾದರೆ ಕೂದಲಿನ ಬಣ್ಣ ಬದಲಾಗುವುದು. ಇದು ಅನೇಕರಲ್ಲಿ ಸಾಮಾನ್ಯವಾಗಿದೆ ಅಂದರೂ ತಪ್ಪಾಗಲ್ಲ. ಕೂದಲು ಇರುವ ಜಾಗದಲ್ಲಿ ಪ್ಯಾಚ್ ರೂಪದಲ್ಲಿ ಬಿಳಿಯಾಗುವುದು ಅಂದರೆ ಕೂದಲಿನ ಭಾಗದಲ್ಲಿ ಪ್ಯಾಚ್ ರೂಪದಲ್ಲಿ ಬಿಳಿ ಬಣ್ಣದ ಕೂದಲು ಉಂಟಾಗುವುದು ಆಗಿದೆ. ಇದು ಕೆಲವು ಬಾರಿ ಮೀಸಿ, ಗಡ್ಡ, ಐಬ್ರೋದಲ್ಲೂ ಬಿಳಿ ಪ್ಯಾಚ್ ಗಳು ಅಥವಾ ಬಿಳಿ ಬಣ್ಣದ ಕೂದಲಿನ ಪ್ಯಾಚ್ ಉಂಟಾಗಬಹುದು. ಹಾಗಾದರೆ ಪೈಬಾಲ್ಡಿಸಮ್ ಎಂದರೆ ಏನು ಎಂಬುವುದನ್ನು ನೋಡುವುದಾದರೆ ಚರ್ಮ ಮತ್ತು ಕೂದಲಿನ ಕೆಲವು ಪ್ರದೇಶಗಳಲ್ಲಿ ಮೆಲನೋಸೈಟ್ಸ್ ಎಂಬ ಜೀವಕೋಶಗಳ ಅನುಪಸ್ಥಿತಿಯಿಂದ ನಿರೂಪಿಸಲ್ಪಟ್ಟ ಒಂದು ಸ್ಥಿತಿಯಾಗಿದೆ. ಮೆಲನೋಸೈಟ್ಗಳು ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸುತ್ತವೆ, ಇದು ಕೂದಲು, ಕಣ್ಣು ಮತ್ತು ಚರ್ಮದ ಬಣ್ಣಕ್ಕೆ ಕೊಡುಗೆ ನೀಡುತ್ತದೆ. ಅಂದರೆ ಕೂದಲಿನಲ್ಲಿನ ಬಣ್ಣ ಬದಲಾಗುವುದು ಆಗಿದೆ. ಇದು ಕೂಡ ವಿರಳವಾಗಿ ಕಂಡುಬರುವುದಾದರೂ ನಾವು ಈ ರೀತಿಯ ಸಮಸ್ಯೆಯ ಜನರನ್ನು ಗಮನಹರಿಸಿರಬಹುದು.

ಬಾಚಲು ಆಗದ ಕೂದಲು!

ಬಾಚಲು ಆಗದ ಕೂದಲು!

ಈ ರೀತಿಯ ಅನುಭವ ಯಾರಿಗೂ ಆಗಿರುವುದಿಲ್ಲ. ಆದರೆ ಜಗತ್ತಿನಲ್ಲಿ ಕೆಲವರಿಗೆ ಕೂದಲಿನಲ್ಲಿ ಅಪರೂಪದ ಸಮಸ್ಯೆ ಇರುತ್ತದೆ. ಅದುವೇ ಬಾಚಲು ಆಗದ ಪರಿಸ್ಥಿತಿ. ಹೌದು, ಅನ್ ಕೋಂಬೆಬಲ್ ಹೇರ್ ಸಿಂಡ್ರೋಮೋ ಅಂದರೆ ಕೂದಲು ಬಾಚಲು ಆಗದ ಸಮಸ್ಯೆಯನ್ನು ಜಗತ್ತಿನಲ್ಲಿ ಕೆಲವರು ಅನುಭವಿಸುತ್ತಾರೆ. ಇದನ್ನು "ಸ್ಪನ್ ಗ್ಲಾಸ್ ಕೂದಲು" ಎಂದೂ ಕರೆಯುತ್ತಾರೆ. ಈ ಸ್ಥಿತಿಯು 3 ತಿಂಗಳ ಮತ್ತು 12 ವರ್ಷ ವಯಸ್ಸಿನ ಮಕ್ಕಳಲ್ಲಿ ಬೆಳವಣಿಗೆಯಾಗುತ್ತದೆ ಮತ್ತು ಇದು ಚಪ್ಪಟೆಯಾದ ಮತ್ತು ಒಣ ಕೂದಲನ್ನು ಉಂಟುಮಾಡುತ್ತದೆ, ಅದು ಸಮತಟ್ಟಾದ ಬಾಚಣಿಗೆ ಸಾಧ್ಯವಿಲ್ಲ, ನೆತ್ತಿಯಿಂದ ಎಲ್ಲಾ ದಿಕ್ಕುಗಳಲ್ಲಿ ಬೆಳೆಯುತ್ತದೆ ಮತ್ತು ಸಾಮಾನ್ಯವಾಗಿ ಪ್ರಕಾಶಮಾನವಾದ ಹೊಂಬಣ್ಣ ಅಥವಾ ಸಿಲ್ವರ್ ಬಣ್ಣದಲ್ಲಿ ಇರುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಮೆಡ್‌ಲೈನ್‌ಪ್ಲಸ್ ಪ್ರಕಾರ, ಕೂದಲು ಹೇಗೆ ಬೆಳೆಯುತ್ತದೆ ಎಂಬುದನ್ನು ನಿಯಂತ್ರಿಸುವ ಜೀನ್‌ಗಳಲ್ಲಿನ ರೂಪಾಂತರದಿಂದ ಇದು ಉಂಟಾಗುತ್ತದೆ ಎಂದು ತಿಳಿಸಿದೆ.

ಆರು ಬೆರಳು!

ಆರು ಬೆರಳು!

ಇದು ಕೊಂಚ ಸಾಮಾನ್ಯವಾದ ಮನುಷ್ಯನ ದೇಹದ ಅಪರೂಪದ ವೈಶಿಷ್ಟ್ಯವಾಗಿದೆ. ಇದನ್ನು ನಾವು ಸಾಮಾನ್ಯವಾಗಿ ನೋಡಿರುವ ಸಾಧ್ಯತೆಯಾದರು ಕೂಡ ಇದು ಅತ್ಯಂತ ವಿರಳವಾಗಿದೆ. ಎಲ್ಲರಿಗೂ ಐದು ಬೆರಳುಗಳು ಇರುತ್ತದೆ ಆದರೆ ಈ ಮನುಷ್ಯನಿಗೆ ಆರು ಬೆರಳು ಇರುತ್ತದೆ. ಇದು 1000ದಲ್ಲಿ ಒಬ್ಬರಿಗೆ ಈ ರೀತಿಯ ವಿಶಿಷ್ಟೆತೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇನ್ನು ಕೆಲವರಿಗೆ ಕಾಲುಗಳಲ್ಲು ಆರು ಬೆರಳು ಹೊಂದಿರುವುದನ್ನು ನಾವು ನೋಡಿರುತ್ತೇವೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆದರೆ ಕೆಲವರಿಗೆ ಶೂ ಹಾಕುವಾಗ, ಕೈಯಿಂದ ಏನಾದರು ಕೆಲಸ ಮಾಡುವಾಗ ಅಡ್ಡಿಯಾಗುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.

 ದೀರ್ಘ ಉಸಿರಾಟ!

ದೀರ್ಘ ಉಸಿರಾಟ!

ಮನುಷ್ಯ ಅಬ್ಬಾಬ್ಬ ಎಂದರೆ ನೀರಿನಲ್ಲಿ 30 ಸೆಕೆಂಡ್ ನಿಂದ 1 ನಿಮಿಷದವರೆಗೆ ಉಸಿರು ಬಿಗಿ ಹಿ‍ಡಿದು ನಿಲ್ಲಬಹುದು. ತದ ಬಳಿಕ ಆಗುವುದಿಲ್ಲ ಕೂಡಲೇ ನೀರಿನಿಂದ ಮೇಲಕ್ಕೆ ಬರುತ್ತಾರೆ. ಆದರೆ ನಿಮಗೊಂದು ಗೊತ್ತ ಕೆಲವರು 10 ರಿಂದ 15 ನಿಮಿಷ ನೀರಿನಲ್ಲಿ ಉಸಿರು ಹಿಡಿದು ನಿಲ್ಲುತ್ತಾರೆ ಎನ್ನುವುದು? .ಹೌದು, ಇದು ಕೂಡ ಮನುಷ್ಯನ ಅಂಗಗಳ ವೈಶಿಷ್ಟವಾಗಿದೆ. ಇದು ಕೂಡ ಅಸಾಮಾನ್ಯವಾಗಿದ್ದು ಎಲ್ಲರಿಗೂ ಈ ರೀತಿ ವಿಶಿಷ್ಟತೆ ಇರುವುದಿಲ್ಲ. ಆದರೆ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷಿಯಾದ ನೀರಿನಲ್ಲಿ ಮನೆಗಳು ಮತ್ತು ಹೌಸ್‌ಬೋಟ್‌ಗಳಲ್ಲಿ ವಾಸಿಸುವ ಒಂದು ಗುಂಪಿನ ಬಜಾವು ಎಂಬ ಜನರು ನೀರಿನಲ್ಲಿ 15 ನಿಮಿಷಗಳ ಕಾಲ ಉಸಿರು ಹಿಡಿದು ನಿಲ್ಲುತ್ತಾರಂತೆ. ಈ ಪೈಕಿ ಕೆಲವರು ಈ ವಿಶಿಷ್ಟ ಗುಣವನ್ನು ಹೊಂದಿದ್ದಾರೆ.

ಎಲ್ಲ ಕಡೆ ಕೂದಲು!

ಎಲ್ಲ ಕಡೆ ಕೂದಲು!

ಸಾಮಾನ್ಯವಾಗಿ ಮನುಷ್ಯನಿಗೆ ಕೈಯಲ್ಲಿ, ತಲೆ ಮೆಲೆ, ಎದೆ ಮೇಲೆ, ಕಾಲಿನಲ್ಲಿ ಕೂದಲು ಇರುತ್ತದೆ. ಆದರೆ ಕೆಲವರಿಗೆ ಅಪರೂಪದ ವಿಶಿಷ್ಟ ಎನ್ನುವಂತೆ ಮುಖ ಸೇರಿ ಎಲ್ಲ ಕಡೆಗಳಲ್ಲಿ ಕೂದಲು ಹೊಂದಿರುತ್ತಾರೆ. ಇದನ್ನು ಹೈಪರ್ಟ್ರಿಕೋಸಿಸ್ ಎಂದು ಕರೆಯುತ್ತಾರೆ. ಇದು ಅಪರೂಪದ ಸ್ಥಿತಿಯಾಗಿದ್ದು, ಇದು ವ್ಯಕ್ತಿಯ ಸಂಪೂರ್ಣ ದೇಹದ ಮೇಲೆ ಅತಿಯಾದ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ. ವಿಚಿತ್ರವೆಂದರೆ, ಇದು ಆನುವಂಶಿಕ ಅಸ್ವಸ್ಥತೆ ಎಂದು ಪರಿಗಣಿಸಲ್ಪಟ್ಟಿದ್ದರೂ, ಇದು ಯಾವಾಗಲೂ ಹುಟ್ಟಿದಾಗ ಇರುವುದಿಲ್ಲ - ಇದು ಯಾವ ವಯಸ್ಸಿನಲ್ಲೂ ಬರಬಹುದು. ಇದನ್ನು ಸಂಶೋಧಕರು "ಸ್ವಾಭಾವಿಕ ರೂಪಾಂತರ" ಎಂದು ಕರೆಯುತ್ತಾರೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಇವುಗಳು ಅಪೌಷ್ಟಿಕತೆ ಮತ್ತು ಆಟೋಇಮ್ಯೂನ್ ಕಾಯಿಲೆಗಳಿಂದ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

ವಿಭಿನ್ನ ರಕ್ತದ ಗ್ರೂಪ್

ವಿಭಿನ್ನ ರಕ್ತದ ಗ್ರೂಪ್

NHS ಪ್ರಕಾರ, 36 ವಿವಿಧ ರಕ್ತ ಗುಂಪುಗಳು ಮತ್ತು ಎಂಟು ಮುಖ್ಯ ರಕ್ತ ಪ್ರಕಾರಗಳು ಇವೆ ಎಂಬುವುದು ನಮಗೆಲ್ಲ ಗೊತ್ತಿರುವ ವಿಚಾರ. O, A, B, ಮತ್ತು AB (ಧನಾತ್ಮಕ ಮತ್ತು ಋಣಾತ್ಮಕ) ನಂತಹ ಪರಿಚಿತ ಪದಗಳ ರಕ್ತದ ಗ್ರೂಪ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಮನುಷ್ಯನ ಅಂಗಗಳ ಅಪರೂಪದ ವಿಶೇಷತೆ ಬಗ್ಗೆ ನೋಡುವುದಾದರೆ ಅಪರೂಪದ ಎಬಿ ನೆಗೆಟಿವ್ ರಕ್ತದ ಗ್ರೂಪ್ ಕೂಡ ಒಂದು. ಹೌದು.ಜಗತ್ತಿನ ಜನಸಂಖ್ಯೆಯ ಕೇವಲ 1% ಜನರು ಮಾತ್ರ ಈ ರೀತಿಯ ರಕ್ತವನ್ನು ಹೊಂದಿದ್ದಾರೆ ಎನ್ನುವುದು ಅಧ್ಯಯನಗಳ ಮೂಲಕ ತಿಳಿದುಬಂದಿದೆ. ಈ ರಕ್ತವನ್ನು ಗೋಲ್ಡನ್ ಬ್ಲಡ್ ಎಂದು ಕೂಡ ಕರೆಯುತ್ತಾರೆ.

ಕೆಂಪು ತಲೆ ಮತ್ತು ನೀಲಿ ಕಣ್ಣು!

ಕೆಂಪು ತಲೆ ಮತ್ತು ನೀಲಿ ಕಣ್ಣು!

ಇದು ಕೂಡ ಅಪರೂಪದಲ್ಲಿ ಅಪರೂಪವಾಗಿದೆ. ಇದು ಎಲ್ಲರಿಗೂ ಬರೋದಿಲ್ಲ ಜಗತ್ತಿನ ಕೆಲವರಲ್ಲಿ ನಾವು ಈ ವಿಭಿನ್ನತೆಯನ್ನು ನೋಡಬಹುದಾಗಿದೆ. ಇಂತಹ ಜನರಲ್ಲಿ ಅವರ ಕಣ್ಣುಗಳು ನೀಲಿಯಾಗಿರುತ್ತದೆ. ಸಾಮಾನ್ಯ ಕಣ್ಣುಗಳು ಕಪ್ಪು ಬಣ್ಣದಿಂದ ಕೂಡಿದ್ದರೆ ಇವರಿಗೆ ನೀಲಿ ಕಣ್ಣು ಇರುತ್ತದೆ. ಅಲ್ಲದೇ ಕೆಲವರು ಕೆಂಪು ಬಣ್ಣದ ಕೂದಲನ್ನು ಹೊಂದಿರುವುದು ಗಮನಿಸಬಹುದು. ಜಗತ್ತಿನಲ ಶೇ.1ರಷ್ಟು ಜನಸಂಖ್ಯೆಯಲ್ಲಿ ಈ ರೀತಿಯ ವಿಶಿಷ್ಟತೆ ಕಾಣಬಹುದಾಗಿದೆ. ಇನ್ನು ಕೆಲವರಿಗೆ ಅವರ ಪೋಷಕರಿಂದಲೂ ನೀಲಿ ಕಣ್ಣು ದೊರಕಬಹುದು.

ಒಡೆಯಲಾಗದ ಮೂಳೆಗಳು

ಒಡೆಯಲಾಗದ ಮೂಳೆಗಳು

ನೀವು ಗಮನಿರಬಹುದು ಸಾಮಾನ್ಯವಾಗಿ ಮೇಲಿಂದ ಬಿದ್ದರೆ ಅವರ ಮೂಳೆಗಳು ಮುರಿದು ಸಮಸ್ಯೆ ತಂದಿಟ್ಟುಕೊಳ್ಳುತ್ತಾರೆ. ಆದರೆ ಕೆಲವರು ಮೇಲಿಂದ ಬಿದ್ದರೂ ಏನು ಆಗುವುದಿಲ್ಲ. ಹೌದು, ಕೆಲವರು ದಟ್ಟವಾದ ವಿಶಿಷ್ಟ ಮೂಳೆಗಳನ್ನು ಹೊಂದಿರುತ್ತಾರೆ. ಇಂತಹ ಕೆಲ ಜನರು ಈ ಜಗತ್ತಿನಲ್ಲಿ ಇದ್ದಾರೆ. ಅವರು ಒಡೆಯಲಾಗದ ಮೂಳೆಯನ್ನು ಹೊಂದಿರುತ್ತಾರೆ.

English summary

The Rarest Body Features Human Beings Can Have in Kannada

Here we are discussing about The rarest body features human beings can have in kannada. Read on
Story first published: Friday, September 23, 2022, 11:43 [IST]
X
Desktop Bottom Promotion