For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿಯೇ ಪುರುಷರಲ್ಲಿ ಕಡಿಮೆಯಾಗುತ್ತಿದೆ ವೀರ್ಯಾಣುಗಳ ಸಂಖ್ಯೆ, ಬಂಜೆತನ ಹೆಚ್ಚಾಗಲಿದೆ

|

ಇತ್ತೀಚಿನ ದಿನಗಳಲ್ಲಿ ಬಂಜೆತನ ಸಮಸ್ಯೆ ಹೆಚ್ಚಾಗುತ್ತಿದೆ. ಹಲವು ಕಾರಣಗಳಿಂದಾಗಿ ಈ ರೀತಿಯಾಗುತ್ತಿದೆ. ಈ ಬಂಜೆತನ ಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಏಕೆಂದರೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಅಧ್ಯಯನ ವರದಿಗಳು ಹೇಳಿವೆ. ವಿಶ್ವದೆಲ್ಲಡೆ ಈ ಸಮಸ್ಯೆ ಕಂಡು ಬರುತ್ತಿದೆ.

ಇಸ್ರೇಲ್‌ನ ಅಧ್ಯಯನ ಸಂಸ್ಥೆಯೊಂದು 2017ರಿಂದ ಇದರ ಕುರಿತು ಅಧ್ಯಯನ ನಡೆಸುತ್ತಿದ್ದು ಉತ್ತರ ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್‌ ಕಡೆಗಳಲ್ಲಿ ಸ್ಯಾಂಪಲ್‌ ಕಲೆಕ್ಟ್ ಮಾಡಿ ಅಧ್ಯಯನ ನಡೆಸಲಾಯಿತು.

ಸುಮಾರು 53 ರಾಷ್ಟ್ರಗಳಲ್ಲಿ ಈ ಅಧ್ಯಯನ ನಡೆಸಲಾಗಿದ್ದು 57, 000 ಪುರುಷರ ವೀರ್ಯಾಣು ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು, ಇದರ ಮೇಲೆ ಸುಮಾರು 223 ಅಧ್ಯಯನ ನಡೆಸಲಾಗಿದೆ.

ಕಳೆದ ನಾಲ್ಕು ದಶಕಗಳಿಂದ ಪುರುಷರಲ್ಲಿ ವೀರ್ಯಾಣುಗಳ ಸಾಮರ್ಥ್ಯ ಕಡಿಮೆಯಾಗುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ವೀರ್ಯಾಣುಗಳ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದೆ. ಇದರ ಕುರಿತು ತುರ್ತು ಅಧ್ಯಯನ ನಡೆಸಬೇಕಾಗಿದ ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಕಾರಣವೇನು?

ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಕಾರಣವೇನು?

ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿರಲು ಕಾರಣವೇನು ಎಂಬುವುದು ಇದುವರೆಗೆ ತಿಳಿದು ಬಂದಿಲ್ಲ. 2000 ಇಸವಿಯಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ತುಂಬಾನೇ ಕಡಿಮೆಯಾಗುತ್ತಿದೆ, ಕಳೆದ ಒಂದು ವರ್ಷದಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ತುಂಬಾನೇ ಕುಗ್ಗುತ್ತಿದೆ.

ಪುರುಷರಲ್ಲಿ ವೀರ್ಯಣು ಕಡಿಮೆಯಾದರೆ ಆಗುವ ತೊಂದರೆಗಳು

ಪುರುಷರಲ್ಲಿ ವೀರ್ಯಣು ಕಡಿಮೆಯಾದರೆ ಆಗುವ ತೊಂದರೆಗಳು

ಪುರುಷರಲ್ಲಿ ವೀರ್ಯಾಣುಗಳು ಕಡಿಮೆಯಾಗುವುದರಿಂದ ಬಂಜೆತನ ಸಮಸ್ಯೆ ಹೆಚ್ಚಾಗಲಿದೆ. ಇದರಿಂದ ಮಾನಸಿಕವಾಗಿ ಹಾಗೂ ಸಾಂಸಾರಿಕವಾಗಿ ಹಲವು ತೊಂದರೆಗಳು ಎದುರಾಗಬಹುದು.

ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿರಲು ಸಂಭವನೀಯತೆ ಕಾರಣವೇನಿರಬಹುದು?

ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿರಲು ಸಂಭವನೀಯತೆ ಕಾರಣವೇನಿರಬಹುದು?

* ಜೀವನಶೈಲಿ: ಈಗ ಜೀವನಶೈಲಿ ತುಂಬಾ ಬದಲಾಗುತ್ತಿದೆ. ತುಂಬಾ ಹೊತ್ತು ಲ್ಯಾಪ್‌ಟಾಪ್ ಮುಂದೆ ಕೂರುವುದು, ವ್ಯಾಯಾಮ ಇಲ್ಲದಿರುವುದು ಇವೆಲ್ಲಾ ಪರಿಣಾಮ ಬೀರುತ್ತಿರಬಹುದು.

* ಅನಾರೋಗ್ಯಕರ ಆಹಾರ ಶೈಲಿ ಕೂಡ ಒಂದು ಕಾರಣವಾಗಿದೆ.

* ಪರಿಸರ: ಪರಿಸರ ಮಾಲಿನ್ಯ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುವುದು

* ಧೂಮಪಾನ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುವುದು.

* ಒತ್ತಡದ ಜೀವನ

ಪುರುಷರಲ್ಲಿ ಬಂಜೆತನ ಹೆಚ್ಚಾಗುತ್ತಿರಲು ಈ ಆರೋಗ್ಯಸಮಸ್ಯೆ ಕೂಡ ಕಾರಣವಾಗುತ್ತಿದೆ

ವೇರಿಕೋಸಿಲೆ: ವೃಷಣಗಳಲ್ಲಿರುವ ನರಗಳಲ್ಲಿ ಊತ ಉಂಟಾದರೆ ಸರಿಯಾಗಿ ರಕ್ತ ಸಂಚಾರವಾಗದೆ, ಇದರಿಂದಲೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಬಂಜೆತನ ಉಂಟಾಗುವುದು.

ಕೆಲವರು ತುಂಬಾ ತಡವಾಗಿ ಮದುವೆಯಾಗುತ್ತಿದ್ದಾರೆ, ವಯಸ್ಸಾಗುತ್ತಿದ್ದಂತೆ ವೀರ್ಯಾಣುಗಳ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯಾಗುವುದು.

ಇನ್ನು ಕ್ಯಾನ್ಸರ್ ಚಿಕಿತ್ಸೆ ಪಡೆಯುವವರು ಮೊದಲೇ ವೀರ್ಯಾಣುಗಳನ್ನು ವೈದ್ಯಕೀಯ ವಿಧಾನದಲ್ಲಿ ಸ್ಟೋರ್ ಮಾಡಿ ನಂತರ ಮಗು ಪಡೆಯಲು ಬಳಸಬಹುದು.

 ವೀರ್ಯಾಣು ಸಂಖ್ಯೆ ಹೆಚ್ಚಿಸಲು ಏನು ಮಾಡಬೇಕು

ವೀರ್ಯಾಣು ಸಂಖ್ಯೆ ಹೆಚ್ಚಿಸಲು ಏನು ಮಾಡಬೇಕು

* ವ್ಯಾಯಾಮ ಮಾಡಿ: ದಿನಾ ಅರ್ಧ ಗಂಟೆ ವ್ಯಾಯಾಮ ,ಮಾಡಿ.

* ಚೆನ್ನಾಗಿ ನಿದ್ದೆ ಮಾಡಿ : ದಿನದಲ್ಲಿ 6 ಗಂಟೆ ನಿದ್ದೆ ಮಾಡಿ.

* ಮಾನಸಿಕ ಒತ್ತಡ ಕಡಿಮೆ ಮಾಡಿ: ಧ್ಯಾನ ನಿಮಗೆ ಮಾನಸಿಕ ಒತ್ತಡ ಹೊರ ಹಾಕಲು ಸಹಕಾರಿ

* ಧೂಮಪಾನ ಅಭ್ಯಾಸವಿದ್ದರೆ ಬಿಡಿ: ಧೂಮಪಾನಿಗಳಲ್ಲಿ ವೂರ್ಯಾಣುಗಳ ಸಂಖ್ಯೆ ತುಂಬಾನೇ ಕಡಿಮೆಯಾಗುತ್ತಿರುವುದರಿಂದ ಧೂಮಪಾನ ಮಾಡಬೇಡಿ.

* ಲ್ಯಾಪ್‌ಟಾಪ್‌ ತೊಡೆ ಮೇಲಿಟ್ಟು ಕೆಲಸ ಮಾಡಬೇಡಿ: ಟೇಬಲ್‌ ಮೇಲಿಟ್ಟು ಮಾಡಿ.

* ಜೇಬಿನಲ್ಲಿ ಮೊಬೈಲ್ ಇಡಬೇಡಿ: ಮೊಬೈಲ್‌ ಕೂಡ ವೀರ್ಯಾಣಗಳ ಸಂಖ್ಯೆ ಕಡಿಮೆ ಮಾಡುವುದರಿಂದ ಮೊಬೈಲ್‌ ಜೇಬಿನಲ್ಲಿ ಇರಬೇಡಿ.

* ಆರೋಗ್ಯಕರ ಮೈ ತೂಕ ಹೊಂದಿ: ಆಹಾರಶೈಲಿ, ವ್ಯಾಯಾಮದಿಂದ ಸಮತೂಕದ ಮೈಕಟ್ಟು ಪಡೆಯಬಹುದು.

* ಆರೋಗ್ಯಕರ ಆಹಾರಶೈಲಿ ಅಭ್ಯಾಸ ಮಾಡಿ.

English summary

Sperm count is declining at accelerating rate worldwide says study

Infertilities: Study says Sperm count is declining at accelerating rate,
X
Desktop Bottom Promotion