For Quick Alerts
ALLOW NOTIFICATIONS  
For Daily Alerts

ಈ ರೀತಿ ಕಂಡು ಬಂದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎನ್ನುವ ಸೂಚನೆಗಳಾಗಿವೆ

|

2019ರ ಕೊನೆಯಲ್ಲಿ ಶುರುವಾದ ಕೊರೊನಾ ಕಾಟ 2022 ಅರ್ಧ ವರ್ಷ ಕಳೆದರೂ ಇನ್ನೂ ಮುಗಿದಿಲ್ಲ, ಅದರ ಜೊತೆಗೆ ಈಗ ಮಂಕಿಪಾಕ್ಸ್‌ ಕೂಡ ವಿಶ್ವವನ್ನು ಕಾಡುತ್ತಿದೆ. ಮಳೆಗಾಲ, ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ ಈ ರೀತಿಯ ಕಾಯಿಲೆ ಕೂಡ ಹೆಚ್ಚಾಗುವುದು, ಈ ಎಲ್ಲಾ ಸಮಸ್ಯೆಗಳು ಯಾರಿಗೆ ಹೆಚ್ಚು ಅಪಾಯಕಾರಿ ಗೊತ್ತಾ? ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ.

ಹೌದು ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ ಬೇಗನೆ ಕಾಯಿಲೆಗಳು ಬರುತ್ತವೆ ಅಥವಾ ವೈರಸ್‌ಗಳು ತಗುಲಿದರೆ ಗಂಭೀರವಾಗುವ ಸಾಧ್ಯತೆ ಹೆಚ್ಚು. ನಮ್ಮ ದೇಹದಲ್ಲಿ ರೋಗ ನಿರೋಧಕ ಕಡಿಮೆ ಇದೆಯೇ ಎಂದು ತಿಳಿಯುವುದು ಹೇಗೆ. ಈ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆಯಿದೆ ಎಂಬುವುದರ ಸೂಚನೆಯಾಗಿದೆ, ಹೀಗಿದ್ದರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ಗಮನ ನೀಡಬೇಕಾಗಿದೆ.

ನೀವು ಗಮನಿಸಬೇಕಾದ ಎಚ್ಚರಿಕೆಯ ಸೂಚನೆಗಳಿವು:

ಅತ್ಯಧಿಕ ಒತ್ತಡ

ಅತ್ಯಧಿಕ ಒತ್ತಡ

ನಿಮ್ಮ ದೇಹದಲ್ಲಿ lymphocytes ಕಡಿಮೆಯಾದಾಗ ಅತ್ಯಧಿಕ ಮಾನಸಿಕ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ದೇಹದಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಾಗುವುದು. ಯಾವಾಗ ರಕ್ತದಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾದಾಗ ಯಾವುದಾದರೂ ವೈರಸ್‌ ದೇಹವನ್ನು ಪ್ರವೇಶಿಸಿದಾಗ ಅದರ ವಿರುದ್ಧ ಹೋರಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ದೇಹ ದುರ್ಬಲವಾಗುವುದು. ಆದ್ದರಿಂದ ಮಾನಸಿಕ ಒತ್ತಡದ ಕಡೆ ಗಮನ ನೀಡಿ, ಮಾನಸಿಕ ಒತ್ತಡ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.

ಆಗಾಗ ಶೀತ, ಕೆಮ್ಮು, ಜ್ವರ ಈ ರೀತಿಯ ಸಮಸ್ಯೆ ಕಾಡುವುದು

ಆಗಾಗ ಶೀತ, ಕೆಮ್ಮು, ಜ್ವರ ಈ ರೀತಿಯ ಸಮಸ್ಯೆ ಕಾಡುವುದು

ಅಪರೂಪಕ್ಕೆ ಶೀತ, ಕೆಮ್ಮು ಬರುವುದು ಸಹಜ. ಆದರೆ ಆಗಾಗ ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇದೆ ಎಂದರ್ಥ.

ಆಗಾಗ ಹೊಟ್ಟೆ ಸಮಸ್ಯೆ ಕಾಡುವುದು

ಆಗಾಗ ಹೊಟ್ಟೆ ಸಮಸ್ಯೆ ಕಾಡುವುದು

ಬೇಧಿ, ಗ್ಯಾಸ್ಟ್ರಿಕ್‌, ಮಲಬದ್ಧತೆ, ಹೊಟ್ಟೆ ನೋವು ಈ ರೀತಿಯ ಸಮಸ್ಯೆ ಆಗಾಗ ಕಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂದರ್ಥ. ಇದರಿಂದಾಗಿ ವೈರಲ್‌ ಸೋಂಕಿನ ಸಮಸ್ಯೆ ಹೆಚ್ಚಾಗುವುದು.

ಗಾಯ ಒಣಗಲು ತುಂಬಾ ಸಮಯ ತೆಗೆದುಕೊಂಡರೆ

ಗಾಯ ಒಣಗಲು ತುಂಬಾ ಸಮಯ ತೆಗೆದುಕೊಂಡರೆ

ಏನಾದರೂ ಗಾಯವಾದರೆ ಅದು ಒಣಗಲು ತುಂಬಾ ಸಮಯ ತೆಗೆದುಕೊಂಡರೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂದರ್ಥ. ಆಗ ಗಾಯ ಒಣಗದೆ ಚಿಕ್ಕ ಗಾಯ ದೊಡ್ಡದಾಗಿ ಇನ್ನಿತರ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು.

ತುಂಬಾ ಸುಸ್ತು, ಆಗಾಗ ತಲೆಸುತ್ತು ಬರುವುದು

ತುಂಬಾ ಸುಸ್ತು, ಆಗಾಗ ತಲೆಸುತ್ತು ಬರುವುದು

ನಿಮಗೆ ತುಂಬಾ ಸುಸ್ತು, ತಲೆ ಸುತ್ತು ಬರುವುದು ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಕುಂದಿದ್ದರೆ ಆ ರೀತಿಯೆಲ್ಲಾ ಆಗುವುದು.

ಆದ್ದರಿಂದ ಇದರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿದ್ದರೂ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

English summary

Signs You Have a Weakened Immune System in Kannada

If you face these type of issues, it's signs of your low immunity power, for more details read this....
Story first published: Friday, July 1, 2022, 11:36 [IST]
X
Desktop Bottom Promotion