For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಒಣ ದ್ರಾಕ್ಷಿ ನೀರು ಕುಡಿದರೆ ಸಿಗುತ್ತೆ ಈ 10 ಪ್ರಯೋಜನಗಳು

|

ಒಣ ದ್ರಾಕ್ಷಿಯನ್ನು ನೀರಿಗೆ ಹಾಕಿ ತಿಂದರೆ ಎಷ್ಟು ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ಇನ್ನು ಒಣದ್ರಾಕ್ಷಿಯನ್ನು ಹಾಗೇ ತಿನ್ನಲು ಚೆಂದ, ಡೆಸರ್ಟ್‌ಗಳಿಗೆ ಹಾಕಿದರೂ ಅಂತೂ ಅದರ ಟೇಸ್ಟ್‌ ಇನ್ನೂ ಸೂಪರ್. ಆದರೆ ಪ್ರತೀದಿನ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿದರೆ ಇದನ್ನು ಪ್ರತಿದಿನ ಮಿಸ್‌ ಮಾಡದೇ ಕುಡಿಯುವಿರಿ.

ನಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುವ ಸಾಮರ್ಥ್ಯ ಒಣ ದ್ರಾಕ್ಷಿ ನೆನೆ ಹಾಕಿದ ನೀರಿಗಿದೆ. ಲಿವರ್‌ ಸಂಬಂಧಿತ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಿಂದಿನ ಕಾಲದಿಂದಲೂ ಬಳಸುತ್ತಾ ಬರುತ್ತಿದೆ. ಲಿವರ್‌ ಸಮಸ್ಯೆ ಇದು ಅದ್ಭುತವಾದ ಮನೆಮದ್ದಾಗಿದೆ. ನಾವಿಲ್ಲಿ ಒಣ ದ್ರಾಕ್ಷಿಯ ನೀರಿನಿಂದ ದೊರೆಯುವ ಅದ್ಭುತ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಇಲ್ಲಿ ಮಾಹಿತಿ ನೀಡಲಾಗಿದೆ ನೋಡಿ.

ಒಣ ದ್ರಾಕ್ಷಿ ನೀರು ಮಾಡುವುದು ಹೇಗೆ?

ಒಣ ದ್ರಾಕ್ಷಿ ನೀರು ಮಾಡುವುದು ಹೇಗೆ?

2 ಕಪ್ ನೀರನ್ನು ಕುದಿಸಿ. ಆ ನೀರಿಗೆ 150 ಗ್ರಾಂ ಒಣ ದ್ರಾಕ್ಷಿಯನ್ನು ಹಾಕಿ ಒಂದು ರಾತ್ರಿ ಇಡಿ. ಬೆಳಗ್ಗೆ ಆ ನೀರನ್ನು ಸೋಸಿ ಸ್ವಲ್ಪ ಬಿಸಿ ಮಾಡಿ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸಬೇಕು. ಇದಾದ ಬಳಿಕ 30 ನಿಮಿಷದವರೆಗೆ ಮತ್ತೇನೂ ಸೇವಿಸಬಾರದು. ಈ ರೀತಿ ಪ್ರತೀದಿನ ಮಾಡಿದರೆ ಈ ಪ್ರಯೋಜನಗಳು ಸಿಗುವುದು ನೋಡಿ...

ಒಣದ್ರಾಕ್ಷಿ ನೀರಿನ ಪ್ರಯೋಜನಗಳು

ಒಣದ್ರಾಕ್ಷಿ ನೀರಿನ ಪ್ರಯೋಜನಗಳು

1. ಲಿವರ್‌ ಅನ್ನು ಶುದ್ಧೀಕರಿಸುತ್ತೆ

ನಮ್ಮ ಲಿವರ್‌ ಶುದ್ಧವಾಗಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಒಣ ದ್ರಾಕ್ಷಿ ನೀರು ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಕಾರಿಯಾಗಿದೆ. ಇದು ಲಿವರ್‌ನ ಕಾರ್ಯ ಚಟುವಟಿಕೆ ವೃದ್ಧಿಸುವುದರ ಜೊತೆಗೆ ರಕ್ತವನ್ನೂ ಕೂಡ ಶುದ್ಧೀಕರಿಸುವುದು.

2. ಅಸಿಡಿಟಿಗೆ ಅತ್ಯುತ್ತಮವಾದ ಮನೆಮದ್ದು

2. ಅಸಿಡಿಟಿಗೆ ಅತ್ಯುತ್ತಮವಾದ ಮನೆಮದ್ದು

ನಿಮಗೆ ತುಂಬಾ ಅಸಿಡಿಟಿ ಸಮಸ್ಯೆ ಇದ್ದರೆ ಇದನ್ನು ಟ್ರೈ ಮಾಡಿ ನೋಡಿ, ಉತ್ತಮ ಪರಿಹಾರ ಸಿಗುವುದು. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ನಿಯಂತ್ರಿಸಲು ಸಹಕಾರಿ. ಆದ್ದರಿಂದ ಆಮ್ಲೀಯ ಸಮಸ್ಯೆ ತಡೆಗಟ್ಟುತ್ತದೆ.

3. ರೋಗ ನಿರೋಧಕ ಶಕ್ತಿ ವೃದ್ಧಿಸುವುದು

3. ರೋಗ ನಿರೋಧಕ ಶಕ್ತಿ ವೃದ್ಧಿಸುವುದು

ಒಣ ದ್ರಾಕ್ಷಿ ನೀರು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಕೂಡ ಹೆಚ್ಚುವುದು. ಕೊರೊನಾವೈರಸ್‌ ಬಳಿಕ ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿ ವೃದ್ಧಿಸಲು ಗಮನ ಹರಿಸುತ್ತಿದ್ದಾರೆ. ಈ ಒಣದ್ರಾಕ್ಷಿಯನ್ನ ಪ್ರತಿದಿನ ಸೇವಿಸುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು.

4. ಹೃದಯದ ಆರೋಗ್ಯಕ್ಕೆ ಒಳ್ಳೆಯದು

4. ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಒಣ ದ್ರಾಕ್ಷಿಯ ನೀರು ರಕ್ತವನ್ನು ಶುದ್ಧೀಕರಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ನಿಮ್ಮ ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.

5. ಕ್ಯಾನ್ಸರ್ ತಡೆಗಟ್ಟುತ್ತೆ

5. ಕ್ಯಾನ್ಸರ್ ತಡೆಗಟ್ಟುತ್ತೆ

ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್‌ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಜೀವನಶೈಲಿ, ಪರಿಸರ, ಆಹಾರಶೈಲಿ ಹೀಗೆ ಅನೇಕ ಕಾರಣಗಳಿವೆ. ದೇಹದಲ್ಲಿ ಕಶ್ಮಲ ಹೆಚ್ಚಾದರೆ ಕ್ಯಾನ್ಸರ್‌ ಕಣಗಳ ಉತ್ಪತ್ತಿಯಾಗುವುದು. ಒಣ ದ್ರಾಕ್ಷಿಯ ನೀರು ದೇಹದಲ್ಲಿರುವ ಕಶ್ಮಲ ಹೊರ ಹಾಕುವುದರಿಂದ ಕ್ಯಾನ್ಸರ್‌ನಂಥ ಮಾರಕ ರೋಗ ತಡೆಗಟ್ಟಲು ಸಹಕಾರಿಯಾಗಿದೆ.

6. ಜೀರ್ಣಕ್ರಿಯೆಗೆ ಒಳ್ಳೆಯದು

6. ಜೀರ್ಣಕ್ರಿಯೆಗೆ ಒಳ್ಳೆಯದು

ನೀವು ದಿನಾ ಈ ನೀರು ಕುಡಿಯುತ್ತಿದ್ದರೆ ನಿಮಗೆ ಅಜೀರ್ಣ, ಮಲಬದ್ಧತೆ ಈ ಸಮಸ್ಯೆ ಇರಲ್ಲ. ಇದು ಜೀರ್ನಕ್ರಿಯೆಗೆ ತುಂಬಾನೇ ಸಹಕಾರಿಯಾಗಿರುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟುವುದು.

7. ತೂಕ ಇಳಿಕೆಗೂ ಸಹಕಾರಿ

7. ತೂಕ ಇಳಿಕೆಗೂ ಸಹಕಾರಿ

ಬೆಳಗ್ಗೆ ಈ ನೀರು ಕುಡಿಯುವುದರಿಂದ ತೂಕ ಇಳಿಕೆಗೂ ಸಹಕಾರಿ. ಒಣ ದ್ರಾಕ್ಷಿಯಲ್ಲಿ ಫ್ರಕ್ಟೋಸ್‌, ಗ್ಲುಕೋಸ್‌ ಹೆಚ್ಚಾಗಿದ್ದು ದೇಹಕ್ಕೆ ಶಕ್ತಿಯನ್ನು ತುಂಬುವುದು ಹಾಗೂ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೂ ಸಹಕಾರಿ. ತೂಕ ಇಳಿಕೆಗೆ ಈ ಎಲ್ಲಾ ಅಂಶಗಳು ಅವಶ್ಯಕವಾಗಿದೆ.

8. ರಕ್ತದೊತ್ತಡ ನಿಯಂತ್ರಿಸುತ್ತದೆ

8. ರಕ್ತದೊತ್ತಡ ನಿಯಂತ್ರಿಸುತ್ತದೆ

ಒಣ ದ್ರಾಕ್ಷಿಯಲ್ಲಿರುವ ಪೊಟಾಷ್ಯಿಯಂ ದೇಹದಲ್ಲಿ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ. ರಕ್ತದೊತ್ತಡ ಸಮಸ್ಯೆ ಇರುವವರು ಇದನ್ನು ಕುಡಿಯುವುದರಿಂದ ನೈಸರ್ಗಿಕವಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

9. ಕಬ್ಬಿಣದಂಶ ಕೊರತೆ ತಡೆಗಟ್ಟುತ್ತೆ

9. ಕಬ್ಬಿಣದಂಶ ಕೊರತೆ ತಡೆಗಟ್ಟುತ್ತೆ

ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾದರೆ ರಕ್ತ ಹೀನತೆ ಉಂಟಾಗುವುದು. ಒಣದ್ರಾಕ್ಷಿಯಲ್ಲಿ ಸಾಕಷ್ಟು ಕಬ್ಬಿಣದಂಶ ಇರುವುದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಲು ಸಹಕಾರಿಯಾಗಿದೆ.

10. ಬೆನ್ನು ಮೂಳೆಯ ಆರೋಗ್ಯಕ್ಕೂ ಒಳ್ಳೆಯದು

10. ಬೆನ್ನು ಮೂಳೆಯ ಆರೋಗ್ಯಕ್ಕೂ ಒಳ್ಳೆಯದು

ಒಣದ್ರಾಕ್ಷಿಯಲ್ಲಿ ಬೋರೋನ್ ಅಂಶವಿದೆ, ಅಲ್ಲದೆ ಕ್ಯಾಲ್ಸಿಯಂ ಅಂಶವೂ ಇದೆ.ಈ ನೀರು ಕುಡಿಯುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.

ಸಲಹೆ: ಇನ್ನು ನೀವು ಯಾವುದಾದರೂ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೆ ನಿಮ್ಮ ವೈದ್ಯರ ಬಳಿ ಇದನ್ನು ಕುಡಿಯಬಹುದೇ, ಇಲ್ಲವೇ ಎಂಬುವುದನ್ನು ವೈದ್ಯರಲ್ಲಿ ಖಚಿತ ಪಡಿಸಿ. ಆರೋಗ್ಯವಂತರು ಈ ನೀರು ಯಾವುದೇ ಭಯವಿಲ್ಲದೆ ಕುಡಿಯಬಹುದಾಗಿದ್ದು, ಇದನ್ನು ಕುಡಿಯುವುದರಿಂದ ಆರೋಗ್ಯ ಮತ್ತಷ್ಟು ವೃದ್ಧಿಸುವುದು.

FAQ's
  • ಒಣ ದ್ರಾಕ್ಷಿ ತ್ವಚೆಗೆ ಒಳ್ಳೆಯದಾ?

    ಒಣ ದ್ರಾಕ್ಷಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ ತ್ವಚೆಯನ್ನು ಶುದ್ಧವಾಗಿಡುತ್ತದೆ ಹಾಗೂ ತ್ವಚೆಯಲ್ಲಿ ತೇವಾಂಶ ಕಾಪಾಡಿ ತ್ವಚೆಯ ಹೊಳಪು ಹೆಚ್ಚಿಸುತ್ತದೆ. ಅಲ್ಲದೆ ಅಕಾಲಿಕ ನೆರಿಗೆ, ಮುಖದ ತ್ವಚೆ ಸಡಿಲವಾಗುವುದು, ಕಲೆ ಈ ರೀತಿಯ ಸಮಸ್ಯೆಗಳನ್ನು ತಪ್ಪಿಸುತ್ತದೆ.

  • ಒಣ ದ್ರಾಕ್ಷಿಯಿಂದ ಅಡ್ಡಪರಿಣಾಮವಿದೆಯೇ?

    ಒಂದು ದ್ರಾಕ್ಷಿಯಲ್ಲಿರುವ ಕ್ಯಾಲೋರಿ ಒಂದು ಒಣ ದ್ರಾಕ್ಷಿಯಲ್ಲಿರುತ್ತದೆ. ಆದ್ದರಿಂದ ತುಂಬಾ ತಿಂದರೆ ಕ್ಯಾಲೋರಿ ಹೆಚ್ಚಾಗಬಹುದು. ತುಂಬಾ ತಿಂದರೆ ಹೊಟ್ಟೆ ಹಾಳಾಗುವುದು, ಗ್ಯಾಸ್ ಸಮಸ್ಯೆ, ಹೊಟ್ಟೆ ಉಬ್ಬಿವಿಕೆ ಮುಂತಾದ ಸಮಸ್ಯೆ ಕಾಡಬಹುದು. ಆದ್ದರಿಂದ ಒಣ ದ್ರಾಕ್ಷಿಯನ್ನು ಮಿತಿಯಲ್ಲಿ ಸೇವಿಸಿ.

English summary

Raisin Water: Benefits, Side Effects, and How to Make It in Kannada

Raisin Water: Benefits, Side Effects, and How to Make It in Kannada,Read on...
Story first published: Tuesday, September 28, 2021, 11:31 [IST]
X
Desktop Bottom Promotion