For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19ನಿಂದ ಚೇತರಿಸಿದವರಲ್ಲಿ ಕಂಡು ಬರುತ್ತಿದೆ ದಂತ ಸಮಸ್ಯೆ, ತಡೆಗಟ್ಟುವುದು ಹೇಗೆ?

|

ಕೋವಿಡ್‌ 19ನಿಂದ ಚೇತರಿಸಿದವರಲ್ಲಿ ಬಹುತೇಕ ಜನರು ಇತರ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಕೆಲವರಿಗೆ ಕೊರೊನಾ ಬಂದು ಹೋಗಿ ಹಲವು ತಿಂಗಳಾದರೂ ಎರಡು ಹೆಜ್ಜೆ ಇಡುವಷ್ಟರಲ್ಲಿ ತುಂಬಾ ಸುಸ್ತು ಆಗುತ್ತಿದೆ ಎಂದು ಹೇಳುತ್ತಿದ್ದಾರೆ.

ಕೋವಿಡ್‌ 19ನ ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಂಡು ಚೇತರಿಸಿಕೊಂಡವರಲ್ಲಿ ಈ ಲಕ್ಷಣಗಳು ಹೆಚ್ಚು ಕಂಡು ಬರುತ್ತಿವೆ, ಹೆಚ್ಚಿನ ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂದು ಹೇಳುತ್ತಿದ್ದಾರೆ. ತಜ್ಞರು ಕೋವಿಡ್‌ 19ನಿಂದ ಚೇತರಿಸಿದವರು ಹಲ್ಲುಗಳ ಶುಚಿತ್ವ ಹಾಗೂ ಆರೈಕೆ ಕಡೆ ಹೆಚ್ಚಿನ ಗಮನ ನೀಡಬೇಕೆಂದು ಹೇಳುತ್ತಿದ್ದಾರೆ.

ಕೋವಿಡ್‌ 19ನಿಂದ ಚೇತರಿಸಿದವರಲ್ಲಿ ಈ ಕೆಳಗಿನ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುವುದರಿಂದ ಹಲ್ಲುಗಳ ಆರೈಕೆ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ:

ಬ್ಲ್ಯಾಕ್ ಫಂಗಸ್ ಅಪಾಯ

ಬ್ಲ್ಯಾಕ್ ಫಂಗಸ್ ಅಪಾಯ

ಕೋವಿಡ್‌ 19ನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್‌ ಫಂಗಸ್ ಅಪಾಯ ಹೆಚ್ಚು. ಆದ್ದರಿಂದ ಬಾಯಲ್ಲಿ ಹುಣ್ಣು, ದವಡೆಯಲ್ಲಿ ಊತ, ಹುಣ್ಣು ಮುಂತಾದ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬಾರದು. ಇವುಗಳನ್ನು ತಿಂಗಳವರೆಗೆ ನಿರ್ಲಕ್ಷ್ಯ ಮಾಡಿದರೆ ಅದು ಕ್ಯಾನ್ಸರ್ ಆಗಿ ಬದಲಾಗಬಹುದು. ಅಲ್ಲದೆ ಬ್ಲ್ಯಾಕ್‌ ಸಮಸ್ಯೆಯೂ ಆಗಿರಬಹುದು, ಏನೇ ಸಮಸ್ಯೆ ಆಗಿರಲಿ ಆರಂಭಿಕ ಹಂತದಲ್ಲಿ ಆದರೆ ಗುಣ ಪಡಿಸಲು ಸುಲಭ. ಆದ್ದರಿಂದ ಕೋವಿಡ್‌ 19 ಬಳಿಕ ಬಾಯಲ್ಲಿ ಹುಣ್ಣು, ಹಲ್ಲುಗಳಲ್ಲಿ ನೋವು ಮುಂತಾದ ಸಮಸ್ಯೆ ಇದ್ದರೆ ಕೂಡಲೇ ವೈದ್ಯರಿಗೆ ತೋರಿಸಿ.

ಹಲ್ಲುಗಳು ಹೋಗಬಹುದು

ಹಲ್ಲುಗಳು ಹೋಗಬಹುದು

ಕೆಲವರಿಗೆ ಕೋವಿಡ್‌ 19 ಬಳಿಕ ದವಡೆಯಲ್ಲಿ ರಕ್ತಸ್ರಾವ, ಹಲ್ಲುಗಳಲ್ಲಿ ನೋವು ಕಂಡು ಬಂದಿರುವುದರಿಂದ ಹಲ್ಲುಗಳನ್ನು ತೆಗೆಯಬೇಕಾಗಿದೆ. ಆದ್ದರಿಂದ ಕೋವಿಡ್‌ನಿಂದ ಚೇರಿಸಿದವರು ಹಲ್ಲುಗಳ ಆರೈಕೆ ಕಡೆ ತುಂಬಾನೇ ಗಮನ ನೀಡಬೇಕು.

ಹಲ್ಲುಗಳ ಆರೈಕೆ ಹೀಗಿರಲಿ

ಹಲ್ಲುಗಳ ಆರೈಕೆ ಹೀಗಿರಲಿ

ಮಲಗುವ ಮುನ್ನ ಹಲ್ಲುಜ್ಜಬೇಕು, ನಂತರ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಉ. ಸೇ. 1ರಷ್ಟು ಪೋವಿಡೋನ್ ಅಯೋಡಿಯನ್ ಮೌತ್‌ವಾಶ್‌ ಅನ್ನು ದಿನದಲ್ಲಿ ಬಾರಿ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸುವುದು ಅವಶ್ಯಕವಾಗಿದೆ.

ಮಧುಮೇಹಿಗಳು ಹಲ್ಲುಗಳ ಆರೈಕೆಗೆ ತುಂಬಾನೇ ಗಮನ ನೀಡಬೇಕು

ಮಧುಮೇಹಿಗಳು ಹಲ್ಲುಗಳ ಆರೈಕೆಗೆ ತುಂಬಾನೇ ಗಮನ ನೀಡಬೇಕು

ಮಧುಮೇಹಿಗಳಿಗೆ ಬೇಗನೆ ಹಲ್ಲುಗಳ ಸಮಸ್ಯೆ ಕಾಡುವುದು. ಆದ್ದರಿಂದ ಹಲ್ಲುಗಳ ಆರೈಕೆ ಕಡೆ ತುಂಬಾನೇ ಗಮನ ನೀಡಿ, ಜೊತೆಗೆ ನಿಯಮಿತವಾಗಿ ದಂತ ವೈದ್ಯರನ್ನು ಕಾಣಿ. ಹಲ್ಲುಗಳ ಬಣ್ಣ ಬದಲಾವಣೆ, ದವಡೆಯಲ್ಲಿ ನೋವು, ಹಲ್ಲು ನೋವು ಇದ್ದರೆ ತುಂಬಾ ದಿನ ಕಾಯಬೇಡಿ, ಕೂಡಲೇ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆಯಿರಿ.

ಇದರಿಂದಾಗಿ ಬ್ಲ್ಯಾಕ್‌ ಫಂಗಸ್‌ ತಡೆಗಟ್ಟಬಹುದು, ಜೊತೆಗೆ ಹಲ್ಲುಗಳ ಆರೈಕೆ ಮಾಡಬಹುದು.

English summary

Post-Covid Dental Complications In Kannada

Post-Covid dental complications In Kannada, read on...
Story first published: Saturday, August 28, 2021, 10:40 [IST]
X
Desktop Bottom Promotion