For Quick Alerts
ALLOW NOTIFICATIONS  
For Daily Alerts

ಪ್ಯಾಂಕ್ರಿಯಾಟೈಟಿಸ್‌ಗೆ ಯಾವ ಆಹಾರ ಒಳ್ಳೆಯದು, ಯಾವುದು ಒಳ್ಳೆಯದಲ್ಲ

|

ಪ್ಯಾಂಕ್ರಿಯಸ್ ಅಥವಾ ಮೇದೋಜ್ಜೀರಕ ಗ್ರಂಥಿಯು ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಮೇದೋಜ್ಜೀರಕ ಗ್ರಂಥಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಣ್ಣ ಗಾತ್ರದಲ್ಲಿ ಇದ್ದರೂ ಅದು ಮಾಡುವ ಕಾರ್ಯ ಮಾತ್ರ ದೊಡ್ಡದಾಗಿದೆ. ಈ ಗ್ರಂಥಿ ಜೀರ್ಣಕ್ರಿಯೆ, ಚಯಾಪಚಯ ಮತ್ತು ಶಕ್ತಿ ಉತ್ಪಾದನೆ ಇವುಗಳನ್ನು ಏಕ ಕಾಲದಲ್ಲಿ ನಿರ್ವಹಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹಾಗೂ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ಮೇದೋಜ್ಜೀರಕ ಗ್ರಂಥಿಯನ್ನು ಅವಲಂಬಿಸಿರುತ್ತದೆ.

Pancreatitis Diet

ಮೇದೋಜ್ಜೀರಕ ಗ್ರಂಥಿಗೆ ಹಾನಿ ಉಂಟಾದರೆ ಅದು ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ಸಾವು ಕೂಡ ಸಂಭವಿಸಬಹುದು. ನಮ್ಮ ದೇಹವನ್ನು ಸೇರಿದ ಆಹಾರ ಜೀರ್ಣವಾಗಲು ಈ ಗ್ರಂಥಿ ತುಂಬಾ ಅವಶ್ಯಕ. ವಯಸ್ಸಾಗುತ್ತಿದ್ದಂತೆ ಕೆಲವರಲ್ಲಿ ಮೇದೋಜ್ಜೀರಕ ಗ್ರಂಥಿಯ ಉರಿಯೂತ ಸಾಮಾನ್ಯವಾಗಿ ಕಂಡು ಬರುತ್ತದೆ. ಇನ್ನು ಮದ್ಯಪಾನಿಗಳಲ್ಲಿ ಮೇದೋಜ್ಜೀರಕ ಗ್ರಂಥಿಗೆ ಹಾನಿಯುಂಟಾಗಿ ಉರಿಯೂತದ ಸಮಸ್ಯೆ ಕಂಡು ಬರುವುದು. ಇನ್ನು ಅಧಿಕ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಕೂಡ ಪ್ಯಾಂಕ್ರಿಯಾಟೈಟಿಸ್ ಉಂಟಾಗುವುದು.

 ಪ್ಯಾಂಕ್ರಿಯಾಟೈಟಿಸ್‌ನಲ್ಲಿ ಎರಡು ವಿಧ

ಪ್ಯಾಂಕ್ರಿಯಾಟೈಟಿಸ್‌ನಲ್ಲಿ ಎರಡು ವಿಧ

1. ಅಕ್ಯೂಟ್‌ ಅಥವಾ ಉರಿಯೂತ: ಇದು ತಕ್ಷಣ ಕಂಡು ಬರುವ ಉರಿಯೂತ ಸಮಸ್ಯೆಯಾಗಿದೆ. ಈ ನೋವು ಬೇಗನೆ ಕೊನೆಯಾಗುತ್ತದೆ ಅಥವಾ ತುಂಬಾ ನೋವು ಉಂಟಾಗಿ ಸಾವು ಕೂಡ ಸಂಭವಿಸಬಹುದು. ಹೀಗೆ ಉಂಟಾದಾಗ ಗ್ರಂಥಿಯೊಳಗೆ ರಕ್ತಸ್ರಾವ, ಅಂಗಾಂಶಗಳಿಗೆ ಹಾನಿ, ಕೀವು ಉಂಟಾಗಬಹುದು ಹಾಗೂ ಇದರಿಂದಾಗಿ ಶ್ವಾಸಕೋಶ ಹಾಗೂ ಹೃದಯದ ಕಾರ್ಯಗಳಿಗೆ ತೊಂದರೆ ಉಂಟಾಗಬಹುದು.

ಲಕ್ಷಣಗಳು:

*ಮೇಲ್ಭಾಗದ ಹೊಟ್ಟೆಯಲ್ಲಿ ನೋವು ಉಂಟಾಗುವುದು.

* ಆಹಾರ ಸೇವನೆಯ ನಂತರ ಅದರಲ್ಲೂ ಜಿಡ್ಡಿನ ಆಹಾರ ಸೇವಿಸಿದ ನಂತರ ನೋವು ಪ್ರಾರಂಭವಾಗುವುದು.

* ಹೊಟ್ಟೆ ಮೇಲೆ ಕೈಯಿಂದ ಮೆಲ್ಲನೆ ಮುಟ್ಟಲೂ ಸಾಧ್ಯವಾಗದಷ್ಟು ನೋವು ಉಂಟಾಗುವುದು

* ವಾಂತಿ

* ಜ್ವರ

* ಹೃದಯ ಬಡಿತ

2. ಕ್ರೋನಿಕ್ ಅಥವಾ ದೀರ್ಘ ಕಾಲದ ಉರಿಯೂತ

2. ಕ್ರೋನಿಕ್ ಅಥವಾ ದೀರ್ಘ ಕಾಲದ ಉರಿಯೂತ

ಈ ಸಮಸ್ಯೆ ತುಂಬಾ ದಿನದಿಂದ ಕಾಡುತ್ತಿರುತ್ತದೆ. ಪ್ರಾರಂಭದಲ್ಲಿ ಅಷ್ಟಾಗಿ ತೊಂದರೆ ಕಾಣಿಸದಿದ್ದರೂ ಆಗಾಗ ಸಣ್ಣ ಸೂಚನೆಗಳನ್ನು ನೀಡುತ್ತಿರುತ್ತದೆ. ಅದರಲ್ಲೂ ಮದ್ಯಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅದನ್ನು ಅಲಕ್ಷ್ಯ ಮಾಡಿದರೆ ಮುಂದೆ ಇದ್ದಕ್ಕಿದ್ದಂತೆ ನೋವು ಹೆಚ್ಚಾಗಿ ಸಾವು ಉಂಟಾಗಬಹುದು.

ಲಕ್ಷಣಗಳು

* ಪದೇ ಪದೇ ಕಾಡುವ ಮೇಲುಹೊಟ್ಟೆಯ ನೋವು

* ನಡೆದಾಡಲೂ ಸಾಧ್ಯವಾಗಷ್ಟು ನೋವು

* ಭೇದಿ

* ತೂಕ ಇಳಿಕೆ

* ಇನ್ಸುಲಿನ್ ಹಾರ್ಮೋನ್ ಸ್ರವಿಸುವ ಜೀವಕೋಶಗಳಿಗೆ ಹಾನಿಯುಂಟಾಗುವುದರಿಂದ ಮಧುಮೇಹ ಕೂಡ ಉಂಟಾಗುವುದು.

ಪ್ಯಾಂಕ್ರಿಯಾಟೈಟಿಸ್‌ಗೆ ಪ್ರಮುಖ ಕಾರಣಗಳು

ಪ್ಯಾಂಕ್ರಿಯಾಟೈಟಿಸ್‌ಗೆ ಪ್ರಮುಖ ಕಾರಣಗಳು

* ನೋವು ತೀವ್ರವಾಗಲು ಪಿತ್ತಜನಕಾಂಗದ ಕಲ್ಲುಗಳು/ ಗಾಲ್‌ ಬ್ಲಡರ್ ಸ್ಟೋನ್‌ಗಳು ಕಾರಣವಾಗಿರಬಹುದು

* ಮದ್ಯಪಾನ

* ಕೆಲ ಔಷಧಗಳ ಅಡ್ಡಪರಿಣಾಮ

* ಸೋಂಕುಗಳು

* ಅಪಘಾತವಾದಾಗ ಹೊಟ್ಟೆಗೆ ಪೆಟ್ಟಾದರೆ

* ಚಯಾಪಚಯ ಕ್ರಿಯೆಯಲ್ಲಿ ತೊಂದರೆ

* ಶಸ್ತ್ರ ಚಿಕಿತ್ಸೆ

ಪ್ಯಾಂಕ್ರಿಯಾಟೈಟಿಸ್‌ಗೆ ಸೂಕ್ತವಾದ ಆಹಾರಕ್ರಮ

ಪ್ಯಾಂಕ್ರಿಯಾಟೈಟಿಸ್‌ಗೆ ಸೂಕ್ತವಾದ ಆಹಾರಕ್ರಮ

ಪ್ಯಾಂಕ್ರಿಯಸ್ಅಥವಾ ಮೇಧೋಜ್ಜೀರಕ ಗ್ರಂಥಿ ಆರೋಗ್ಯವಾಗಿರಲು ಪ್ರೊಟೀನ್ ಅಧಿಕವಿರುವ ಆಹಾರಗಳು, ಆರೋಗ್ಯಕರ ಕೊಬ್ಬಿನಂಶ, ಆ್ಯಂಟಿಆಕ್ಸಿಡೆಂಟ್‌ ಅಧಿಕ ಇರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಅದರಲ್ಲೂ ಸಸ್ಯಾಹಾರದಲ್ಲಿರುವ ಕೊಬ್ಬಿನಂಶ ಪ್ಯಾಂಕ್ರಿಯಸ್‌ ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿರುವ ಶೇ. 30ರಿಂದ 40ರಷ್ಟು ಕ್ಯಾಲೋರಿಗಳನ್ನು ತಡೆಯುವ ಶಕ್ತಿ ಪ್ಯಾಂಕ್ರಿಯಾಟೈಟಿಸ್‌ ಇರುವ ವ್ಯಕ್ತಿಗೆ ಸಾಧ್ಯವಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಗಾಲ ಸ್ಟೋನ್ ಕಡಿಮೆ ಮಾಡಿ ಪ್ಯಾಂಕ್ರಿಯಸ್ ಆರೋಗ್ಯ ಹೆಚ್ಚಿಸುವ ಆಹಾರಗಳಿವು

* ತರಕಾರಿಗಳು

* ಹಣ್ಣುಗಳು

* ಧಾನ್ಯಗಳು

* ಬೇಳೆ-ಕಾಳುಗಳು

* ಬಾದಾಮಿ, ಅನ್ನ, ಸೋಯಾ ಹಾಲು

* ಮೊಟ್ಟೆಯ ಬಿಳಿ

* ತುನಾ ಮೀನು

* ಹರ್ಬಲ್ ಟೀ

* ಬ್ಲ್ಯಾಕ್ ಟೀ

* ತೆಳು ಮಾಂಸ

* ಕಡಿಮೆ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳು

* ಗಿಡ ಮೂಲಿಕೆಗಳು

* ಟೋಫು

ಯಾವ ಆಹಾರಗಳನ್ನು ತಿನ್ನಬಾರದು

ಯಾವ ಆಹಾರಗಳನ್ನು ತಿನ್ನಬಾರದು

ಪ್ಯಾಂಕ್ರಿಯಾಟೈಟಿಸ್‌ ಸಮಸ್ಯೆ ಹತೋಟಿಯಲ್ಲಿರಬೇಕಾದರೆ ಅಧಿಕ ಕೊಬ್ಬಿನಂಶವಿರುವ ಆಹಾರಗಳಿಂದ ದೂರವಿರಬೇಕು. ಈ ಆಹಾರಗಳನ್ನು ತಿಂದರೆ ಸಮಸ್ಯೆ ಹೆಚ್ಚಾಗುವುದು

* ಕೆಂಪು ಮಾಂಸ

* ಕರಿದ ಪದಾರ್ಥಗಳು

* ಮಯೋನೈಸ್

* ಬೆಣ್ಣೆ ಹಾಗೂ ವನಸ್ಪತಿ

* ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳು

* ಅಧಿಕ ಸಕ್ಕರೆ ಹಾಕಿದ ಪಾನೀಯಗಳು

ಪ್ಯಾಂಕ್ರಿಯಾಟೈಟಿಸ್‌ ಕಾಯಿಲೆಯಿಂದ ಬೇಗನೆ ಚೇತರಿಸಿಕೊಳ್ಳು ದಿನದಲ್ಲಿ 5-6 ಬಾರಿ ಅಲ್ಪ ಆಹಾರ ಸೇವಿಸಿ, ಈ ಆಹಾರಗಳಲ್ಲಿ ನಾರಿನಂಶ ಅಧಿಕವಾಗಿರಲಿ.

English summary

Pancreatitis Diet Foods To Eat And Avoid

Sometimes, the pancreas can become swollen or inflamed which disrupts the normal functioning of the organ. This condition is called pancreatitis. Here are pancreatitis Diet which will help you to maintain health.
X
Desktop Bottom Promotion