For Quick Alerts
ALLOW NOTIFICATIONS  
For Daily Alerts

ಯೂರಿಕ್ ಆ್ಯಸಿಡ್‌ ಹೆಚ್ಚಿದರೆ ತಪ್ಪಿದ್ದಲ್ಲ ಅಪಾಯ: ಇದನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದು ಹೇಗೆ?

|

ಯೂರಿಕ್ ಆ್ಯಸಿಡ್‌/ಆಮ್ಲ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿರುತ್ತದೆ. ಆದರೆ ಇದು ಶರೀರದಲ್ಲಿ ಹೆಚ್ಚಾದರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಕೆಲವೇ ಕೆಲವರಿಗಷ್ಟೇ ಗೊತ್ತಿರುತ್ತದೆ. ಯೂರಿಕ್‌ ಆಮ್ಲ ನಮ್ಮ ದೇಹದಲ್ಲಿ ಸಹಜವಾಗಿಯೇ ಉತ್ಪತ್ತಿಯಾಗುತ್ತದೆ. ನಾವು ತಿಂದ ಆಹಾರವು ದೇಹದಲ್ಲಿ ವಿಭಜನೆಯಾದಾಗ ಯೂರಿಕ್ ಆಮ್ಲ ಉತ್ಪತ್ತಿಯಾಗುತ್ತದೆ.

ಈ ಯೂರಿಕ್ ಆಮ್ಲವು ಮೂತ್ರಪಿಂಡಗಳಿಂದ ಸೋಸಲ್ಪಡುತ್ತದೆ ಮತ್ತು ಮೂತ್ರದ ಮೂಲಕ ಶರೀರದಿಂದ ಹೊರಕ್ಕೆ ತಳ್ಪಡುತ್ತದೆ. ಅಲ್ಲದೆ ಮಲದ ಮೂಲಕವೂ ಸಲ್ಪ ಪ್ರಮಾಣದಲ್ಲಿ ಶರೀರದಿಂದ ಹೊರ ಹಾಕಲ್ಪಡುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ಯೂರಿಕ್ ಆಮ್ಲ ಉತ್ಪಾದನೆಯಾದರೆ ಅದನ್ನು ಹೊರಹಾಕಲು ಮೂತ್ರ ಪಿಂಡಗಳಿಗೆ ಸಾಧ್ಯವಾಗದಿದ್ದರೆ ಆಗ ರಕ್ತದಲ್ಲಿ ಆಮ್ಲದ ಮಟ್ಟ ಹೆಚ್ಚುತ್ತದೆ.

ಯೂರಿಕ್ ಆಮ್ಲದ ಪ್ರಮಾಣದ ಹೆಚ್ಚಾದರೆ ಸಂದುಗಳಲ್ಲಿ ಘನ ಹರಳುಗಳು ರೂಪುಗೊಂಡು ಅಸಾಧ್ಯ ನೋವುಂಟಾಗುವುದು, ಮೂತ್ರದಲ್ಲಿ ಕಲ್ಲು, ಕಿಡ್ನಿ ವೈಫಲ್ಯಕ್ಕೂ ಕಾರಣವಾಗುತ್ತದೆ.

ಯೂರಿಕ್ ಆಮ್ಲ ಅಧಿಕವಿರುವವರು ಆಹಾರಕ್ರಮದ ಬಗ್ಗೆ ತುಂಬಾನೇ ಗಮನ ಹರಿಸಬೇಕು. ನಾವಿಲ್ಲಿ ಯೂರಿಕ್ ಆಮ್ಲವನ್ನು ಸ್ವಾಭಾವಿಕವಾಗಿ ಕಡಿಮೆ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

ಯೂರಿಕ್ ಆಮ್ಲ ಅಧಿಕ ಉತ್ಪತ್ತಿ ಮಾಡುವ ಆಹಾರಗಳು

ಯೂರಿಕ್ ಆಮ್ಲ ಅಧಿಕ ಉತ್ಪತ್ತಿ ಮಾಡುವ ಆಹಾರಗಳು

ಪೂರೈನ್ಸ್ ಅಧಿಕವಿರುವ ಆಹಾರ ಸೇವನೆಯಿಂದ ಯೂರಿಕ್ ಆಮ್ಲದ ಉತ್ಪತ್ತಿ ಅಧಿಇಕವಾಗುವುದು. ಈ ಆಹಾರಗಳನ್ನು ತಿನ್ನುವುದರಿಮದ ಯೂರಿಕ್ ಆಮ್ಲದ ಉತ್ಪತ್ತಿ ಅಧಿಕವಾಗುವುದು

  • ಕೆಲವೊಂದು ಬಗೆಯ ಮಾಂಸಾಹಾರ
  • ಬೂತಾಯಿ ಮೀನು
  • ಒಣ ಬೀನ್ಸ್
  • ಬಿಯರ್
  • ಯೂರಿಕ್ ಆಮ್ಲ ದೇಹದಲ್ಲಿ ಸಂಗ್ರಹವಾಗಲು ಕಾರಣಗಳು

    ಯೂರಿಕ್ ಆಮ್ಲ ದೇಹದಲ್ಲಿ ಸಂಗ್ರಹವಾಗಲು ಕಾರಣಗಳು

    ಅನೇಕ ಕಾರಣಗಳಿಂದಾಗಿ ಯೂರಿಕ್ ಆಮ್ಲ ದೇಹದಿಂದ ಹೊರಹಾಕಲ್ಪಡುವುದಿಲ್ಲ, ಅವುಗಳೆಂದರೆ

    • ಆಹಾರಕ್ರಮ
    • ವಂಶವಾಹಿಯಾಗಿ ಬರಬಹುದು
    • ಒಬೆಸಿಟಿ ಅಥವಾ ಅತ್ಯಧಿಕ ಮೈ ತೂಕ ಹೊಂದಿರುವುದು
    • ಮಾನಸಿಕ ಒತ್ತಡ
    •  ಯೂರಿಕ್ ಆಮ್ಲ ಅಧಿಕವಾದರೆ ಉಂಟಾಗುವ ತೊಂದರೆಗಳು

      ಯೂರಿಕ್ ಆಮ್ಲ ಅಧಿಕವಾದರೆ ಉಂಟಾಗುವ ತೊಂದರೆಗಳು

      • ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು
      • ಮಧುಮೇಹ
      • ಹೈಪೋಥೈರಾಯ್ಡ್
      • ಕೆಲವೊಂದು ಬಗೆಯ ಕ್ಯಾನ್ಸರ್
      • ಸೋರಿಯಾಸಿಸ್
      • ಯಾವ ಆಹಾರ ಸೇವನೆ ಒಳ್ಳೆಯದಲ್ಲ

        ಯಾವ ಆಹಾರ ಸೇವನೆ ಒಳ್ಳೆಯದಲ್ಲ

        • ಒಳಮಾಂಸ(ಲಿವರ್, ಹಾರ್ಟ್, ಬೋಟಿ....)
        • ಹಂದಿ ಮಾಂಸ
        • ಟರ್ಕಿ ಮಾಂಸ
        • ಮೀನು ಹಾಗೂ ಕಪ್ಪೆಚಿಪ್ಪುವಿನಲ್ಲಿರುವ ಮಾಂಸ
        • ಮಟನ್
        • ಹೂ ಕೋಸು
        • ಬೀಫ್
        • ಬಟಾಣಿ
        • ಅಣಬೆ
        • ಹೂಕೋಸು
        • ಬೀನ್ಸ್
        • ಸಕ್ಕರೆ ಬಳಸಬೇಡಿ

          ಸಕ್ಕರೆ ಬಳಸಬೇಡಿ

          ಯೂರಿಕ್ ಆಮ್ಲ ಪ್ರೊಟೀನ್ ಅಧಿಕವಿರುವ ಆಹಾರವನ್ನು ತಿನ್ನುವುದರಿಂದ ಉಂಟಾಗುತ್ತದೆ. ಆದರೆ ಇತ್ತೀಚಿನ ಅಧ್ಯಯನವು ಸಕ್ಕರೆಯಂಶ, ಕಾರ್ನ್ ಸಿರಪ್ ಇವೆಲ್ಲಾ ಕೂಡ ಯೂರಿಕ್ ಆಮ್ಲ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ ಎಂದು ಹೇಳಿದೆ.

          ಸೋಡಾ, ಸಿಹಿ ಪಾನೀಯಗಳು ಇವುಗಳನ್ನು ತೆಗೆದುಕೊಳ್ಳಬೇಡಿ.

           ಸಾಕಷ್ಟು ನಿರು ಕುಡಿಯಿರಿ

          ಸಾಕಷ್ಟು ನಿರು ಕುಡಿಯಿರಿ

          ಸಾಕಷ್ಟು ನೀರು ಕುಡಿಯಿರಿ, ದಿನದಲ್ಲಿ ಮೂರರಿಂದ-ಮೂರುವರೆ ಲೀಟರ್ ನೀರು ಕುಡಿಯಿರಿ. ಆಗಾಗ ನೀರು ಕುಡಿಯುತ್ತಾ ಇರಿ. ಇದರಿಂದ ದೇಹದಿಂದ ಮೂತ್ರದ ಮೂಲಕ ಯೂರಿಕ್ ಆಮ್ಲ ಹೊರಹಾಕಬಹುದು.

          ತೂಕ ಇಳಿಕೆ ಮಾಡಿ

          ತೂಕ ಇಳಿಕೆ ಮಾಡಿ

          ಮೈ ತೂಕ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡಿ, ನೀವು ನಿಮ್ಮ ನ್ಯೂಟ್ರಿಷಿಯನಿಸ್ಟ್ ಬಳಿ ಸಲಹೆ ಪಡೆದು ಅವರು ಸೂಚಿಸಿದ ಆಹಾರ ಸೇವಿಸಿ. ವ್ಯಾಯಾಮ ಮಾಡಿ, ಮೈ ತೂಕ ಕಡಿಮೆ ಮಾಡಲು ಕ್ರಾಷ್ ಡಯಟ್ ಮೊರೆ ಹೋಗಬೇಡಿ, ಇದರಿಂದ ದೇಹದ ಆರೋಗ್ಯ ಮತ್ತಷ್ಟು ಹದಗೆಡುವುದು.

           ಇನ್ಸುಲಿನ್ ಪ್ರಮಾಣ ಸಮತೋಲನದಲ್ಲಿರಲಿ

          ಇನ್ಸುಲಿನ್ ಪ್ರಮಾಣ ಸಮತೋಲನದಲ್ಲಿರಲಿ

          ದೇಹದಲ್ಲಿ ಇನ್ಸುಲಿನ್ ಪ್ರಮಾಣ ಅಧಿಕವಿದ್ದರೆ ಇದರಿಂದ ಮಧುಮೇಹದ ಅಪಾಯವಿದೆ. ಅಧಿಕ ಇನ್ಸುಲಿನ್ ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚುವಂತೆ ಮಾಡುವುದು. ಆದ್ದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಣದಲ್ಲಿಡಿ.

          ನಾರಿನಂಶವಿರುವ ಆಹಾರ ಅಧಿಕ ಸೇವಿಸಿ

          ನಾರಿನಂಶವಿರುವ ಆಹಾರ ಅಧಿಕ ಸೇವಿಸಿ

          ಓಟ್ಸ್

          ನಟ್ಸ್

          ಬಾರ್ಲಿ

          ನಾರಿನಂಶ ಅಧಿಕವಿರುವ ತರಕಾರಿಗಳು ಇವುಗಳನ್ನು ಹೆಚ್ಚಾಗಿ ಬಳಸಿ.

          ಮಾನಸಿಕ ಒತ್ತಡ ಕಡಿಮೆ ಮಾಡಿ

          ಮಾನಸಿಕ ಒತ್ತಡ ಕಡಿಮೆ ಮಾಡಿ

          ಮಾನಸಿಕ ಒತ್ತಡ ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗೆ ಒಂದು ಕಾರಣವಾಗಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಇದಕ್ಕಾಗಿ ಧ್ಯಾನ, ಯೋಗ ಮಾಡಿ. ಇಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡುವ ಹವ್ಯಾಸ ರೂಢಸಿಕೊಳ್ಳಿ. ಸಂಗೀತ ಕೇಳುವುದು, ಚಿತ್ರ ಬರೆಯುವುದು ಹೀಗೆ...

English summary

Natural Ways to Reduce Uric Acid In The Body In kannada

Here are natural way to reduce uric acid in the body, have a look,
X
Desktop Bottom Promotion