For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಅನ್‌ಲಾಕ್: ಕೊರೊನಾ ತಡೆಗಟ್ಟಲು ಪಾಲಿಸಬೇಕಾದ ಗೋಲ್ಡನ್ ರೂಲ್ಸ್

|

ಜುಲೈ 7 ಕರ್ನಾಟಕದಲ್ಲಿ ಕೊರೊನಾ ಲಾಕ್‌ಡೌನ್‌ ಅನ್‌ಲಾಕ್‌ ಆಗಿದೆ. ಇಷ್ಟು ದಿನ ವಾರದಲ್ಲಿ 3 ದಿನಷ್ಟೇ ಮಧ್ಯಾಹ್ನದವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಅನ್‌ಲಾಕ್‌ ಆಗಿದೆ. ಆಫೀಸ್‌ಗಳು, ಹೋಟೆಲ್‌ಗಳು ಎಲ್ಲವೂ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ, ಬಸ್‌ ಸಂಚಾರವಿದೆ. ಬಸ್‌ಗಳಿಗೆ ಶೇ.100ರಷ್ಟು ಆಸನದಲ್ಲಿ ಜನ ಕೂತು ಸಂಚರಿಸಲು ಅವಕಾಶ ನೀಡಿದೆ.

ಇಷ್ಟು ದಿನ ಮನೆಯೊಳಗೆ ಕೂತು ಉಸಿರು ಕಟ್ಟಿದ ಅನುಭವಿಸಿದ್ದ ಜನರಿಗೆ ಸ್ವಲ್ಪ ನಿರಾಳ ಅನಿಸಿದೆ. ಮನೆಯಿಂದ ಹೊರಗೆ ಹೋಗಬಹುದು. ಶಾಪಿಂಗ್‌ ಮಾಲ್‌ಗಳಲ್ಲಿ ಸುತ್ತಾಡಬಹುದು, ಇಷ್ಟದ ಆಹಾರಗಳನ್ನು ತಮ್ಮ ಇಷ್ಟದ ಹೋಟೆಲ್‌ಗ:ಲ್ಲಿ ಕೂತುಕೊಂಡು ಸವಿಯಬಹುದು... ಕೊರೊನಾದಿಮದ ಉಸಿರು ಕಟ್ಟಿದ್ದ ವಾತಾವರಣ ಈಗ ಸ್ವಲ್ಪ ನಿರಾಳವಾಗಿದೆ. ಅನ್‌ಲಾಕ್‌ ಆಗಿದೆ ಎಂದು ಜನರು ತುಂಬಾ ನಿರ್ಲಕ್ಷ್ಯದಿಂದ ತಿರುಗಾಡಿದರೆ ಕೊರೊನಾ ಕೇಸ್‌ಗಳ ಸಂಖ್ಯೆಗಳಲ್ಲಿ ಏರಿಕೆಯಾಗಬಹುದು.

ಕೊರೊನಾ 3ನೇ ಅಲೆ ಬರುವುದಾಗಿ ತಜ್ಞರು ಎಚ್ಚರಿಸಿರುವುದರಿಂದ ಆ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಅನ್‌ಲಾಕ್ ಆಗಿದೆ ಎಂದು ಅನಗ್ಯತ ಓಡಾಡುವುದು ಯಾವುದೇ ಎಚ್ಚರಿಕೆ ಕ್ರಮಗಳನ್ನು ಪಾಲಿಸದಿದ್ದರೆ ಕೊರೊನಾ ಸೋಂಕು ತಗುಲುವ ಅಪಾಯವಿದೆ. ಆದ್ದರಿಂದ ಅನ್‌ಲಾಕ್‌ ಆಗಿರುವ ಈ ಸಂದರ್ಭದಲ್ಲಿ ಈ ಗೋಲ್ಡನ್ ರೂಲ್ಸ್ ಪಾಲನೆ ಮಾಡಲು ಮರೆಯದಿರಿ:

ಶುಚಿತ್ವ:

ಶುಚಿತ್ವ:

ಶುಚಿತ್ವದ ಕಡೆ ಗಮನ ಕೊಡುವುದು ಅವಶ್ಯಕ. ಆಫೀಸ್‌ಗಳು, ಹೋಟೆಗಳು, ಬಸ್‌, ಮೆಟ್ರೋ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಡೆ ತುಂಬಾನೇ ಗಮನ ನೀಡಬೇಕು. ಜೊತೆಗೆ ನೀವು ವೈಯಕ್ತಿಕವಾಗಿ ಶುಚಿತ್ವ ಕಡೆ ಗಮನ ಹರಿಸಬೇಕು. ಸಾವರ್ಜನಿಕ ಸ್ಥಳಗಳಿಗೆ ಹೋಗುವಾಗ ಕೈಗಳಿಗೆ ಆಗಾಗ ಸ್ಯಾನಿಟೈಸ್‌ ಮಾಡಿ. ಬೀದಿ ಬದಿಯ ಆಹಾರಗಳ ಸೇವನೆ ಮಾಡಬೇಡಿ. ನೀವು ಕೂರುವ ಸ್ಥಳವನ್ನು ಟಿಶ್ಯೂಗೆ ಸ್ವಲ್ಪ ಸ್ಯಾನಿಟೈಸ್ ಹಾಕಿ ಉಜ್ಜಿ, ಟಿಶ್ಯೂವನ್ನು ಕಸದ ಬುಟ್ಟಿಗೆ ಹಾಕಿ. ಕಸದ ಬುಟ್ಟಿಗೆ ಹಾಕಲು ಸಾಧ್ಯವಾಗದಿದ್ದರೆ ಒಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿಟ್ಟು ನಂತರ ಕಸದ ಬುಟ್ಟಿಗೆ ಹಾಕಿ. ಹೊರಗಡೆಯ ಆಹಾರ ಸೇವನೆ ಮಾಡುವುದಕ್ಕಿಂತ ಮನೆ ಆಹಾರ ಸೇವಿಸುವುದು ಸುರಕ್ಷಿತ ಹಾಗೂ ಆರೋಗ್ಯಕರ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವವರು

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವವರು

ಸ್ವಂತ ವಾಹನವಿದ್ದರೆ ಸ್ವಲ್ಪ ಸಮಯದವರೆಗೆ ಸಾರ್ವಜನಿಕ ವಾಹನ ಬಳಸದಿರುವುದು ಒಳ್ಳೆಯದು, ಆದರೆ ಎಲ್ಲರಿಗೆ ಇದು ಸಾಧ್ಯವಾಗುವುದಿಲ್ಲ, ವಾಹನ ಇಲ್ಲದವರು ಸಾರ್ವಜನಿಕ ವಾಹನಗಳನ್ನು ಬಳಸಲೇಬೇಕಾಗುತ್ತದೆ. ಆಗ ನೀವು ನಿಮ್ಮ ಆರೋಗ್ಯದ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು. ಡಬಲ್ ಮಾಸ್ಕ್‌ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಬಳಸಿ. ಸಾಧ್ಯವಾದರೆ ತುಂಬಾ ರಶ್‌ ಇರುವ ಬಸ್‌ಗಳಲ್ಲಿ ಸಂಚರಿಸಬೇಡಿ.

ಮಾಸ್ಕ್ ಧರಿಸಿ

ಮಾಸ್ಕ್ ಧರಿಸಿ

ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ನೀವು ಕಡ್ಡಾಯವಾಗಿ ಮಾಸ್ಕ್‌ ಧರಿಸಲೇಬೇಕು. ಡಬಲ್ ಮಾಸ್ಕ್ ಧರಿಸಿ. ಮಾಸ್ಕ್‌ಗಳನ್ನು ಪ್ರತಿನಿತ್ಯ ತೊಳೆದು ಹಾಕಿ. ಎಷ್ಟೇ ಬಡವರಾದರೂ ಒಂದು 10 ಜೊತೆ ಬಟ್ಟೆ ಮಾಸ್ಕ್‌ಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು. ಮಾಸ್ಕ್‌ಗಳನ್ನು ತಾವೇ ಮಾಡಬಹುದು ಕೂಡ. ಆದ್ದರಿಂದ ಒಂದೇ ಮಾಸ್ಕ್ ಬಳಸಬೇಡಿ. ಇದರಿಂದ ಬೇರೆ-ಬೇರೆ ಕಾಯಿಲೆ ಬರಬಹುದು. ಧರಿಸುವ ಮಾಸ್ಕ್ ಶುಚಿಯಾಗಿರಲಿ. ಅಲ್ಲದೆ ಬ್ಯಾಗ್‌ ಒಂದು ಮಾಸ್ಕ್‌ ಎಕ್ಸ್ಟ್ರಾ ಇಟ್ಟುಕೊಳ್ಳಿ.

ಸಾಮಾಜಿಕ ಅಂತರ

ಸಾಮಾಜಿಕ ಅಂತರ

ಇನ್ನು ಹೊರಗಡೆ ಹೋಗುವ ಜನರ ಗುಂಪು ತುಂಬಾ ಇರುವ ಕಡೆ ಹೋಗಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಇದ್ದರೆ ಹೆಚ್ಚು ಜಾಗ್ರತೆವಹಿಸಿ. ಅಲ್ಲದೆ ಮಕ್ಕಳನ್ನು ಈ ಸಮಯದಲ್ಲಿ ಹೆಚ್ಚು ಹೊರಗಡೆ ಕರೆದುಕೊಂಡು ಹೋಗಬೇಡಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಿ

ಪ್ರತಿಯೊಬ್ಬರು ಕೊವಿಶೀಲ್ಡ್ ಅಥವಾ ಕೊವಾಕ್ಸಿನ್ ಎರಡು ಡೋಸ್ ಲಸಿಕೆ ಪಡೆಯಿರಿ. ಇನ್ನು ಆರೋಗ್ಯಕರ ಆಹಾರಕ್ರಮ ಹಾಗೂ ಜೀವನಶೈಲಿ ಪಾಲಿಸಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯಗಳನ್ನು ಕುಡಿಯಿರಿ ( ಅತೀಯಾಗಿ ಬಳಸಬೇಡಿ). ನಿಮ್ಮ ಆಹಾರದಲ್ಲಿ ವಿಟಮಿನ್‌ ಸಿ, ಸತು ಮುಂತಾದ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ. ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ. ಯೋಗ, ಉಸಿರಾಟದ ವ್ಯಾಯಾಮ ಇವುಗಳು ರೋಗ ನಿರೋಧಕ ಶಕ್ತಿ ಹೆಚ್ಚುಸುವುದು.

English summary

Karnataka Unlock 3.0: Rules to reduce your risk of covid-19 in Kannada

Karnataka Unlock 3.0: Rules to reduce your risk of covid-19 in Kannada, read on...
Story first published: Monday, July 5, 2021, 12:09 [IST]
X
Desktop Bottom Promotion