For Quick Alerts
ALLOW NOTIFICATIONS  
For Daily Alerts

ಹುಳಿ ತೇಗಿನ ಸಮಸ್ಯೆ ಹೋಗಲಾಡಿಸಲು ಅರಿಶಿಣ ಹೇಗೆ ಬಳಸಬೇಕು?

|

ಸಾವಿರಾರು ವರ್ಷಗಳಿಂದಲೂ ಅರಿಶಿಣವನ್ನು ಒಂದು ಬದಲೀ ಜೌಷಧದ ರೂಪದಲ್ಲಿ ಬಳಸಲಾಗುತ್ತಿತ್ತೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಹೊಟ್ಟೆಗೆ ಸಂಬಂಧಿಸಿದ ಕಿರಿಕಿರಿಗಳು ಹಾಗೂ ಜೀರ್ಣಕ್ರಿಯೆಗಳಿಗೆ ಸಂಬಂಧಿಸಿದ ತೊಂದರೆಗಳನ್ನೂ ಒಳಗೊಂಡಂತೆ, ಅನೇಕ ಖಾಯಿಲೆಗಳಿಗೂ ಹಾಗೂ ಅಸ್ವಸ್ಥ ದೈಹಿಕ ಪರಿಸ್ಥಿತಿಗಳಿಗೂ ಅರಿಶಿಣವನ್ನು ಬಳಸಿಕೊಳ್ಳಲಾಗುತ್ತದೆ.

ಕೆಲವು ಸಾಕ್ಷ್ಯಾಧಾರಗಳ ಪ್ರಕಾರ, ಅರಿಶಿಣವು ಎದೆಯುರಿ ಅಥವಾ ಹುಳಿತೇಗಿಗೆ ಒಂದು ನೈಸರ್ಗಿಕ ಮನೆಮದ್ದೇ ಆಗಿರುವುದಾದರೂ ಕೂಡ, ಇದನ್ನು ಸಾಬೀತುಪಡಿಸುವ ವೈದ್ಯಕೀಯ ಸಾಕ್ಷ್ಯಾಧಾರಗಳು ಕಡಿಮೆಯೆಂದೇ ಹೇಳಬೇಕು.

ಅರಿಶಿಣದ ಪ್ರಯೋಜನಗಳು ಏನೇನು ಎಂಬುದರ ಬಗ್ಗೆ ಗಮನ ಹರಿಸೋಣ:

ಅರಿಶಿಣದ ಪ್ರಯೋಜನಗಳು ಏನೇನು ಎಂಬುದರ ಬಗ್ಗೆ ಗಮನ ಹರಿಸೋಣ:

ಅರಿಶಿಣವು ಉರಿಶಾಮಕ (ಆ್ಯಂಟಿ-ಇನ್ಫ಼್ಲೆಮೇಟರಿ) ಹಾಗೂ ಆ್ಯಂಟಿ-ಆಕ್ಸಿಡೆಂಟ್ ಸಂಯುಕ್ತ ವಸ್ತುಗಳ ಸಮೃದ್ಧ ಆಗರ. ಚೀನೀಯರ ಸಾಂಪ್ರದಾಯಿಕ ಜೌಷಧೋಪಚಾರಗಳಲ್ಲಿ ಹಾಗೂ ಆಯುರ್ವೇದೀಯ ಔಷಧ ಪದ್ಧತಿಯಲ್ಲಿ, ಸಂಧಿವಾತದ ನಿವಾರಣೆಗಾಗಿ ಹಾಗೂ ಋತುಚಕ್ರವನ್ನು ನಿಯಾಮಕಗೊಳಿಸುವುದಕ್ಕಾಗಿ ಅರಿಶಿಣವನ್ನು ಬಳಸುತ್ತಾರೆ. ಜೊತೆಗೆ ಜೀರ್ಣಕ್ರಿಯೆಯನ್ನು ಹಾಗೂ ಪಿತ್ತಕೋಶದ ಕಾರ್ಯನಿರ್ವಹಣೆಯನ್ನು ಸುಧಾರಿಸಲೂ ಅರಿಶಿಣವನ್ನು ಬಳಸುತ್ತಾರೆ.

ಇಂದು, ಅರಿಶಿಣವು ಎದೆಯುರಿ ಅಥವಾ ಹುಳಿತೇಗು, ಉರಿಯ ಕಿರಿಕಿರಿ, ಹಾಗೂ ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆಯ ಒಂದು ಬದಲೀ ವಸ್ತುವಿನ ರೂಪದಲ್ಲಿ ಗುರುತಿಸಲ್ಪಟ್ಟಿದೆ.

ನೀವು ಮೇಲೋಗರ(ಆಂಗ್ಲಭಾಷೆಯಲ್ಲಿ 'ಕರಿ' ಎಂದು ಕರೆಯಲ್ಪಡುವ) ವನ್ನು ಸೇವಿಸಿದ್ದೀರೆಂದಾದರೆ, ನೀವು ಅರಿಶಿಣವನ್ನೂ ಸೇವಿಸಿದ್ದೀರಿ ಎಂದೇ ಅರ್ಥ. ಏಕೆಂದರೆ, ಮೇಲೊಗರಕ್ಕೆ ಸಾಂಬಾರ ವಸ್ತುವಿನ ಸ್ವಾದ ಹಾಗೂ ಆಕರ್ಷಕ ಬಣ್ಣವನ್ನು ಕೊಡುವುದೇ ಈ ಅರಿಶಿಣ.

ಅರಿಶಿಣದ ಅತ್ಯಂತ ಸಕ್ರಿಯ ಘಟಕವೇ ಕರ್ಕ್ಯುಮಿನ್. ಅರಿಶಿಣವು ಅಗಾಧವಾದ ಜೌಷಧೀಯ ಪ್ರಯೋಜನಗಳನ್ನು ಹೊಂದಿದೆಯೆಂಬುದು ಸತ್ಯವೆಂದಾದಲ್ಲಿ, ಆ ಬಹುತೇಕ ಜೌಷಧೀಯ ಗುಣಗಳಿಗೆ ಅರಿಶಿಣದಲ್ಲಿರುವ ಈ ಕರ್ಕ್ಯುಮಿನ್ ಎಂಬ ಘಟಕವೇ ಕಾರಣ.

ಕರ್ಕ್ಯುಮಿನ್ ಒಂದು ಪಾಲಿಫೆನಾಲ್ ಆ್ಯಂಟಿ-ಆಕ್ಸಿಡೆಂಟ್ ಆಗಿದೆ. ಇದಕ್ಕೆ ಪ್ರಬಲವಾದ ವೈರಾಣು ಪ್ರತಿಬಂಧಕ (ಆ್ಯಂಟಿ-ವೈರಲ್), ಬ್ಯಾಕ್ಟೀರಿಯಾ ಪ್ರತಿರೋಧಕ (ಆ್ಯಂಟಿ-ಬ್ಯಾಕ್ಟೀರಿಯಲ್), ಮತ್ತು ಕ್ಯಾನ್ಸರ್ ಪ್ರತಿಬಂಧಕ (ಆ್ಯಂಟಿ-ಕ್ಯಾನ್ಸರ್) ಗುಣಧರ್ಮಗಳಿವೆ ಎಂದು ಹೇಳಲಾಗುತ್ತದೆ.

ಅರಿಶಿಣದ ಕುರಿತಾದ ಸಂಶೋಧನೆಯು ಏನನ್ನು ಹೇಳುತ್ತದೆ ?

ಅರಿಶಿಣದ ಕುರಿತಾದ ಸಂಶೋಧನೆಯು ಏನನ್ನು ಹೇಳುತ್ತದೆ ?

ಅರಿಶಿಣದ ಜೌಷಧೀಯ ಗುಣಧರ್ಮಗಳ ಬಗ್ಗೆ ಹಾಗೂ ಅರಿಶಿಣದ ಸಾರವೇ ಆಗಿರುವ ಕರ್ಕ್ಯುಮಿನ್ ನ ಬಗ್ಗೆ ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆಯಾದರೂ ಕೂಡ, ಹುಳಿತೇಗು ಅಥವಾ ಎದೆಯುರಿಯ ಕುರಿತಾಗಿ ಅರಿಶಿಣವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇದುವರೆಗೂ ಯಾವುದೇ ಸಂಶೋಧನೆಯು ನಡೆದಂತಿಲ್ಲ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಯಾವುದೇ ಅಸ್ವಸ್ಥ ಪರಿಸ್ಥಿತಿಗೆ ಅರಿಶಿಣವು ಹೇಗೆ ನೆರವಾಗಬಲ್ಲದು ಎಂಬುದನ್ನು ವಿವರಣಾತ್ಮಕವಾಗಿ ತಿಳಿಸಿಕೊಡುವ ಸಾಕ್ಷ್ಯಾಧಾರಗಳು ಇನ್ನೂ ಸಿಕ್ಕಿಲ್ಲವೆಂದೇ ಹೇಳಬೇಕು. ಜನರಲ್ಲಿ ಅರಿಶಿಣವು ಹೇಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ನಿರ್ಧರಿಸಲು ಇನ್ನಷ್ಟು ಸಂಶೋಧನೆಗಳನ್ನು ಕೈಗೊಳ್ಳಬೇಕಾದ ಅಗತ್ಯವಂತೂ ಖಂಡಿತಾ ಇದೆ.

ಇಸವಿ 2007 ರಲ್ಲಿ ಕೈಗೊಳ್ಳಲಾದ ಅಧ್ಯಯನವೊಂದರ ಪ್ರಕಾರ, ಹುಳಿತೇಗಿಗೆ (ಗ್ಯಾಸ್ಟ್ರೋ-ಈಸೋಫ಼ೇಜಿಯಲ್ ಡಿಸೀಸ್ - ಜಿ.ಇ.ಆರ್.ಡಿ) ಉರಿ ಹಾಗೂ ಉತ್ಕರ್ಷಕ ಒತ್ತಡವು (ಆಕ್ಸಿಡೇಟಿವ್ ಸ್ಟ್ರೆಸ್) ಕಾರಣವಾಗಿದೆ. ಈ ಅಧ್ಯಯನವು ಸಲಹೆ ಮಾಡುವ ಪ್ರಕಾರ ಜಿ.ಇ.ಆರ್.ಡಿ. ಯನ್ನು ಆ್ಯಂಟಿ-ಆಕ್ಸಿಡೆಂಟ್ ಗಳು ಹಾಗೂ ಆ್ಯಂಟಿ-ಇನ್ಫ಼್ಲೆಮೆಟರಿ (ಉರಿಶಾಮಕ) ಗಳಿಂದ ಉಪಚರಿಸಬೇಕು.

ಇಸವಿ 2011 ರಲ್ಲಿ ಕೈಗೊಳ್ಳಲಾದ ಒಂದು ಪ್ರತ್ಯೇಕ ಅಧ್ಯಯನವು ತೋರಿಸಿಕೊಟ್ಟಿರುವ ಪ್ರಕಾರ, ಕರ್ಕ್ಯುಮಿನ್ ನಲ್ಲಿರುವ ಆ್ಯಂಟಿ-ಇನ್ಫ಼್ಲೆಮೆಟರಿ (ಉರಿಶಾಮಕ) ಗುಣಧರ್ಮಗಳು ಹುಳಿತೇಗು ಅಥವಾ ಎದೆಯುರಿಯ ಕಿರಿಕಿರಿಯನ್ನು ತಡೆಗಟ್ಟಿದವು.

ಅರಿಶಿಣ ಹಾಗೂ ಅದರ ಸಾರವಾಗಿರುವ ಕರ್ಕ್ಯುಮಿನ್ ಗಳೆರಡರಲ್ಲೂ ಆ್ಯಂಟಿ-ಆಕ್ಸಿಡೆಂಟ್ ಹಾಗೂ ಆ್ಯಂಟಿ-ಇನ್ಫ಼್ಲೆಮೆಟರಿ (ಉರಿಶಾಮಕ) ಗುಣಧರ್ಮಗಳಿವೆ ಎಂದು ಹೇಳಲಾಗಿದ್ದು, ಇವುಗಳ ಕಾರಣದಿಂದಲೇ ಬಹುಶ: ಹುಳಿತೇಗನ್ನು ಹತ್ತಿಕ್ಕಲು ಅರಿಶಿಣಕ್ಕೆ ಸಾಧ್ಯವಾಗುತ್ತಿರಬೇಕು.

ಅರಿಶಿಣದ ಕುರಿತಾದ ಇನ್ನಷ್ಟು ಸಂಶೋಧನೆಗಳು ಪ್ರಸ್ತುತ ಚಾಲ್ತಿಯಲ್ಲಿವೆ. ಇಸವಿ 2019 ರಲ್ಲಿ ಪ್ರಕಟಣೆ ಕಂಡ ಲೇಖನವೊಂದು ಕರ್ಕ್ಯುಮಿನ್ ನ ಗೆಡ್ಡೆ-ಪ್ರತಿಬಂಧಕ (ಆ್ಯಂಟಿ-ಟ್ಯೂಮರ್), ಆ್ಯಂಟಿ-ಇನ್ಫ಼್ಲೆಮೆಟರಿ (ಉರಿಶಾಮಕ), ಹಾಗೂ ಆ್ಯಂಟಿ-ಆಕ್ಸಿಡೆಂಟ್ ಗುಣಧರ್ಮಗಳ ಕುರಿತು ಬೆಳಕು ಚೆಲ್ಲಿದ್ದು, ಜೀರ್ಣಾಂಗ ವ್ಯೂಹದ ತೊಂದರೆಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಲೇಖನವು ಅದಾಗಿತ್ತು.

ನಾನ್-ಸ್ಟೆರಾಯ್ಡಲ್ ಆ್ಯಂಟಿ-ಇನ್ಫ಼್ಲೆಮೆಟರಿ ಡ್ರಗ್ಸ್ (ಎನ್-ಎಸ್.ಎ.ಐ.ಡಿ) ನ ಸೇವನೆಯಿಂದ ಹಾಗೂ ತೀವ್ರಸ್ವರೂಪದ ಅಡ್ಡಪರಿಣಾಮಗಳನ್ನುಂಟು ಮಾಡುವ ಇತರ ಜೌಷಧಗಳ ಸೇವನೆಯಿಂದ ಜೀರ್ಣಾಂಗ ವ್ಯೂಹಕ್ಕೆ ಆಗಬಹುದಾದ ಹಾನಿಯನ್ನು ಕರ್ಕ್ಯುಮಿನ್ ತಡೆಯುತ್ತದೆ. ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ಬಗ್ಗೆ ಇದು ನಿಗಾ ವಹಿಸುತ್ತದೆ, ಹುಣ್ಣುಗಳು ಉಪಶಮನಗೊಳ್ಳಲು ನೆರವಾಗುತ್ತದೆ, ಹಾಗೂ ಜೊತೆಗೆ ಜೀರ್ಣಾಂಗ ವ್ಯೂಹದಲ್ಲಿ ಬೆಳೆಯಬಹುದಾದ ಕ್ಯಾನ್ಸರ್ ನ ಕೋಶಗಳನ್ನು ಸಕ್ರಿಯವಾಗಿ ನಾಶಪಡಿಸುತ್ತದೆ.

ಹುಳಿತೇಗನ್ನು ಉಪಚರಿಸಲು ಅರಿಶಿಣವನ್ನು ಬಳಸಿಕೊಳ್ಳುವ ಬಗೆ ಹೇಗೆ ?

ಹುಳಿತೇಗನ್ನು ಉಪಚರಿಸಲು ಅರಿಶಿಣವನ್ನು ಬಳಸಿಕೊಳ್ಳುವ ಬಗೆ ಹೇಗೆ ?

ಅರಿಶಿಣದ ಕಾಂಡಗಳನ್ನು ಅಥವಾ ಕೋಡುಗಳನ್ನು ಒಣಗಿಸಿ, ಕುಟ್ಟಿ, ನುಣ್ಣಗಿನ ಪುಡಿಯನ್ನಾಗಿ ಮಾಡಿಕೊಳ್ಳಬಹುದು. ಈ ಪುಡಿಯನ್ನು ಬಾಯಿಯಿಂದ ನೇರವಾಗಿ ಇಲ್ಲವೇ ಅಡುಗೆ ಪದಾರ್ಥಗಳೊಂದಿಗೆ ಸೇರಿಸಿಕೊಳ್ಳುವುದರ ಮೂಲಕವೂ ಬಳಸಬಹುದು.

ನೀವು ತಯಾರಿಸುವ ಎಲ್ಲ ಅಡುಗೆ ಪದಾರ್ಥಗಳಿಗೂ ಅರಿಶಿಣವನ್ನು ಸೇರಿಸಿಕೊಳ್ಳದ ಹೊರತು ಅಥವಾ ಸಿಕ್ಕಾಪಟ್ಟೆ ಅರಿಶಿಣದ ಚಹಾವನ್ನು ಕುಡಿಯದ ಹೊರತು, ಹುಳಿತೇಗನ್ನು ಉಪಚರಿಸಲು ಬೇಕಾಗುವಷ್ಟು ಅರಿಶಿಣವನ್ನು ಹಾಗೆಯೇ ಸೇವಿಸಲು ನಿಮಗೆ ಕಷ್ಟವಾದೀತು. ಅರಿಶಿಣದ ಸಾವಯವ ಎಕ್ಸ್ಟ್ಯಾಕ್ಟ್ ಅನ್ನು ಸಪ್ಲಿಮೆಂಟ್ ಗಳ ರೂಪದಲ್ಲಿ ಸೇವಿಸಿದಲ್ಲಿ ಅದು ಜೌಷಧ ರೂಪದ ಅರಿಶಿಣದ ಸೇವನೆಗೆ ಸರಿಸಮನಾದೀತು.

ನಿಜ ಹೇಳಬೇಕೆಂದರೆ ನಿಮ್ಮ ಶರೀರವು ಅರಿಶಿಣ ಹಾಗೂ ಕರ್ಕ್ಯುಮಿನ್ ಅನ್ನು ಹೀರಿಕೊಳ್ಳುವುದು ಮಂದಗತಿಯಲ್ಲಿಯೇ. ಆದರೆ ಅಡುಗೆ ಪದಾರ್ಥದಲ್ಲಿ ಬೆರೆಸಲಾಗಿರುವ ಅರಿಶಿಣ ಹಾಗೂ ಅರಿಶಿಣದ ಎಕ್ಸ್ಟ್ಯಾಕ್ಟ್ ಗಳೆರಡೂ ಕೂಡ ನಿಮ್ಮ ಪಿತ್ತಕೋಶ ಹಾಗೂ ಕರುಳಿನ ಗೋಡೆಗಳಿಂದ ಬಲುಬೇಗನೇ ಚಯಾಪಚಯ ಕ್ರಿಯೆಗೆ ಒಳಪಡುತ್ತವೆ.

ಜೈವಿಕ ರೂಪದಲ್ಲಿ ಕರ್ಕ್ಯುಮಿನ್ ನ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಪೂರೈಕೆಗಳ ವಿವಿಧ ವಿಧಾನಗಳನ್ನು ಕಂಡುಕೊಳ್ಳಲಾಗಿದೆಯಾದರೂ ಕೂಡ, ಅವುಗಳಲ್ಲಿ ಯಾವ ವಿಧಾನವೂ ಇದುವರೆಗೂ ಒಂದು ಖಚಿತ ಮಾರ್ಗೋಪಾಯದ ರೂಪದಲ್ಲಿ ಕಂಡುಬಂದಿಲ್ಲ.

ಶರೀರವು ಅರಿಶಿಣವನ್ನು ವೇಗವಾಗಿ ಹೀರಿಕೊಳ್ಳುವಂತೆ ಮಾಡಲು ಇರುವ ಒಂದು ಉಪಾಯವೇನೆಂದರೆ ಅರಿಶಿಣವನ್ನು ಪೈಪ್ರೈನ್ ಎಂಬ ಸಂಯುಕ್ತ ವಸ್ತುವಿನೊಂದಿಗೆ ಸೇವಿಸುವುದು. ಈ ಸಂಯುಕ್ತ ವಸ್ತುವು ಸರ್ವೇಸಾಮಾನ್ಯವಾಗಿ ಕಾಳುಮೆಣಸಿನಲ್ಲಿ ಕಂಡುಬರುತ್ತದೆ. ಹೀಗಾಗಿ ಅರಿಶಿಣವನ್ನು ಕಾಳುಮೆಣಸಿನ ಜೊತೆಗೆ ಸೇವಿಸಿದರೆ ಪ್ರಯೋಜನ ಅಧಿಕ.

ಅರಿಶಿಣ ಹಾಗೂ ಕಾಳುಮೆಣಸುಗಳನ್ನು ಸಪ್ಲಿಮೆಂಟ್ ಗಳ ರೂಪದಲ್ಲಿ ಜೊತೆಜೊತೆಯಾಗಿ ಮಾರುವುದುಂಟು. ಶರೀರದಿಂದ ಅರಿಶಿಣವು ಹೀರಿಕೊಳ್ಳಲ್ಪಡುವುದನ್ನು ಹಾಗೂ ಶರೀರದಲ್ಲಿ ಅರಿಶಿಣದ ಕ್ರಿಯಾತ್ಮಕತೆಯನ್ನು ಕಾಳುಮೆಣಸು ಹೆಚ್ಚಳಗೊಳಿಸುತ್ತದೆ. ಅರಿಶಿಣದ ಸಪ್ಲಿಮೆಂಟ್ ಗಳನ್ನು ಆಯ್ಕೆ ಮಾಡುವಾಗ ಕಾಳುಮೆಣಸಿನ ಎಕ್ಸ್ಟ್ಯಾಕ್ಟ್ ಇರುವ ಬ್ರ್ಯಾಂಡ್ ಗಳನ್ನೇ ಕೊಳ್ಳಿರಿ ಅಥವಾ ಆ ಸಪ್ಲಿಮೆಂಟ್ ನಲ್ಲಿ ಪೈಪ್ರೈನ್ ಒಂದು ಘಟಕದ ರೂಪದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಅಪಾಯಗಳು ಹಾಗೂ ಎಚ್ಚರಿಕೆಗಳು

ಅಪಾಯಗಳು ಹಾಗೂ ಎಚ್ಚರಿಕೆಗಳು

ಅರಿಶಿಣವು ರಕ್ತವನ್ನು ತಿಳಿಯಾಗಿಸುವ ಒಂದು ನೈಸರ್ಗಿಕ ವಸ್ತು. ಆದ್ದರಿಂದ, ರಕ್ತವನ್ನು ತಿಳಿಯಾಗಿಸುವ ಜೌಷಧಗಳೊಂದಿಗೆ ಅರಿಶಿಣವನ್ನು ಸೇವಿಸಬಾರದು.

ಮಧುಮೇಹಿಗಳು ಅರಿಶಿಣವನ್ನು ಸೇವಿಸಕೂಡದು. ಏಕೆಂದರೆ, ಅರಿಶಿಣವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಅಪಾಯಕಾರೀ ಮಟ್ಟದವರೆಗೆ ತಗ್ಗಿಸುವ ಸಾಧ್ಯತೆ ಇದೆ.

ಹುಳಿತೇಗು ಅಥವಾ ಎದೆಯುರಿಯ ಲಕ್ಷಣಗಳನ್ನು ಅರಿಶಿಣವು ಇನ್ನಷ್ಟು ಹೆಚ್ಚು ಮಾಡುತ್ತದೆ ಎಂದು ಕೆಲವರು ವರದಿ ಮಾಡಿದ್ದಾರೆ.

ಅರಿಶಿಣವು ರಕ್ತವನ್ನು ತಿಳಿಯಾಗಿಸುವ ಒಂದು ನೈಸರ್ಗಿಕ ವಸ್ತು. ಆದ್ದರಿಂದ, ರಕ್ತವನ್ನು ತಿಳಿಯಾಗಿಸುವ ಜೌಷಧಗಳನ್ನು ನೀವು ಸೇವಿಸುತ್ತಿದ್ದಲ್ಲಿ, ಅರಿಶಿಣವನ್ನು ಸೇವಿಸಬಾರದು ಅಥವಾ ಸದ್ಯದಲ್ಲೇ ನೀವು ಯಾವುದಾದರೂ ಶಸ್ತ್ರಚಿಕಿತ್ಸೆ ಒಳಗಾಗುತ್ತಿದ್ದಲ್ಲಿ, ಅಂತಹ ಸಂದರ್ಭದಲ್ಲಿಯೂ ಅರಿಶಿಣವನ್ನು ಸೇವಿಸಬಾರದು.

ಅರಿಶಿಣವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು, ರಕ್ತದ ಒತ್ತಡವನ್ನು ತಗ್ಗಿಸೀತು ಹಾಗೂ ಪ್ಲೀಹದ ಕಿರಿಕಿರಿಗಳನ್ನು ಇನ್ನಷ್ಟು ಹೆಚ್ಚಿಸೀತು.

ಕೆಲವರು ವರದಿ ಮಾಡುವ ಪ್ರಕಾರ ವಾಸ್ತವವಾಗಿ ಅರಿಶಿಣವು ಹುಳಿತೇಗು ಅಥವಾ ಎದೆಯುರಿಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅರಿಶಿಣದ ಖಾರ ಗುಣವು ಪ್ರಾಯಶ: ಇದಕ್ಕೆ ಕಾರಣವಿದ್ದಿರಲೂ ಬಹುದು.

ದೀರ್ಘಕಾಲದವರೆಗೆ ಅಥವಾ ಅಧಿಕ ಪ್ರಮಾಣಗಳಲ್ಲಿ ಅರಿಶಿಣದ ಸೇವನೆಯು ಅಜೀರ್ಣತೆಯ, ವಾಕರಿಕೆಯ, ಹಾಗೂ ಆಮಶಂಕೆಯ ಅಪಾಯಗಳನ್ನು ಹೆಚ್ಚಿಸೀತು. ಹಾಗಾದ ಪಕ್ಷದಲ್ಲಿ ಅರಿಶಿಣದ ಚಿಕಿತ್ಸೆಯು ಅಂತಹವರ ವಿಚಾರದಲ್ಲಿ ಯೋಗ್ಯವಲ್ಲ, ಹಾಗಾಗಿ ಅಂತಹವರು ಅರಿಶಿಣದ ಸೇವನೆಯನ್ನು ವರ್ಜಿಸಬೇಕು.

ದೀರ್ಘಕಾಲದವರೆಗೆ ಅರಿಶಿಣದ ಸೇವನೆಯು ಇಲಿಗಳ ಪಿತ್ತಕೋಶವನ್ನು ಹಾಳುಗೆಡವಿದ್ದೂ ಇದೆ. ಆದರೆ, ಮಾನವರ ವಿಚಾರದಲ್ಲಿ ಹಾಗೆ ಪಿತ್ತಕೋಶವು ಹಾನಿಗೀಡಾದುದರ ಬಗ್ಗೆ ವರದಿಯಾಗಿಲ್ಲ.

ನೀವು ಯಾವುದೇ ಜೌಷಧವನ್ನು ಸೇವಿಸುತ್ತಿದ್ದಲ್ಲಿ, ಯಾವುದೇ ಮೂಲಿಕೆಗಳು ಅಥವಾ ಸಪ್ಲಿಮೆಂಟ್ ಗಳನ್ನು, ಅದರಲ್ಲೂ ಅರಿಶಿಣದಂತಹ ಮೂಲಿಕೆಗಳನ್ನು ಸೇವಿಸುವ ಮೊದಲು ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ. ಏಕೆಂದರೆ, ಅರಿಶಿಣವು ಅನೇಕ ಬೇರೆ ಬೇರೆ ಔಷಧಗಳೊಂದಿಗೆ ಬಹು ಗಂಭೀರವಾಗಿ ವರ್ತಿಸುವ ಸಾಧ್ಯತೆ ಇದೆ.

ಗರ್ಭಿಣಿಯರು ಹಾಗೂ ಮೊಲೆಹಾಲುಣಿಸುವ ಸ್ತ್ರೀಯರು ಅಧಿಕ ಪ್ರಮಾಣಗಳಲ್ಲಿ ಅರಿಶಿಣವನ್ನು ಬಳಸಬಾರದು. ಅಡುಗೆಗೆ ಬಳಸುವ ಪ್ರಮಾಣಕ್ಕಿಂತ ಹೆಚ್ಚಾದ ಯಾವುದೇ ಪ್ರಮಾಣವೂ ಇಂತಹ ಸ್ತ್ರೀಯರ ವಿಚಾರದಲ್ಲಿ ಅಧಿಕವೆಂದೇ ಪರಿಗಣಿತವಾಗಿದೆ.

ಎಲ್ಲ ನೈಸರ್ಗಿಕ ಪರಿಹಾರೋಪಾಯಗಳ ವಿಚಾರದಲ್ಲೂ ಅಲರ್ಜಿಗೊಳಗಾಗುವ ಅಪಾಯ ಇದ್ದೇ ಇದೆ. ಅರಿಶಿಣದ ಸೇವನೆಯ ಬಳಿಕ ಮೈಮೇಲೆ ದದ್ದುಗಳು ಉಂಟಾದಲ್ಲಿ, ಹೃದಯದ ಜೋರಾಗಿ ಬಡಿದುಕೊಂಡಂತಾದಲ್ಲಿ, ಅಥವಾ ಉಸಿರಾಟದ ತೊಂದರೆಯು ಕಾಣಿಸಿಕೊಂಡಲ್ಲಿ ಅರಿಶಿಣದ ಸೇವನೆಯನ್ನು ನಿಲ್ಲಿಸಬೇಕು. ಒಂದೊಮ್ಮೆ ರೋಗಲಕ್ಷಣಗಳು ತೀವ್ರಗೊಂಡಲ್ಲಿ, ನೀವು ವೈದ್ಯಕೀಯ ನೆರವನ್ನು ಪಡೆದುಕೊಳ್ಳಬೇಕು.

English summary

How To Use Turmeric To Treat Acid Reflux in Kannada

How to use turmeric to treat Acid Reflux, Read On...
X
Desktop Bottom Promotion