For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ತಯಾರಿಸಬಹುದು ಮಿನರಲ್ ವಾಟರ್‌!

|

ನಾವೆಲ್ಲರೂ ಹೊರಗಡೆ ಸುತ್ತಾಡಲು ಹೋಗುವಾಗ ಮನೆಯಿಂದ ನೀರು ತೆಗೆದುಕೊಂಡು ಹೋಗದೆ ಇದ್ದರೆ ಆಗ ಅಲ್ಲೇ ಇರುವ ಅಂಗಡಿಯಲ್ಲಿ ಹೋಗಿ ನಮಗೊಂದು ಬಾಟಲಿ ಮಿನರಲ್ ವಾಟರ್ ಕೊಡಿ ಎಂದು ಕೇಳುತ್ತೇವೆ. ಕೆಲವರಿಗೆ ಬಾಟಲಿ ನೀರು ಕುಡಿಯುವುದು ಅಭ್ಯಾಸವಾಗಿ ಹೋಗಿದೆ. ಹೀಗಾಗಿ ಅವರು ಮನೆಯಿಂದ ಹೊರಗಡೆ ಕಾಲಿಟ್ಟರೆ ಆಗ ಒಂದು ಬಾಟಲಿ ನೀರು ಕೈಯಲ್ಲಿ ಹಿಡಿದುಕೊಂಡು ಸಾಗುವರು.

How To Prepare Mineral Water At Home

ಈ ಮಿನರಲ್ ವಾಟರ್ ನಲ್ಲಿ ನಮ್ಮ ದೇಹಕ್ಕೆ ಬೇಕಾಗುವಂತಹ ಹಲವಾರು ಖನಿಜಾಂಶಗಳು ಇವೆ ಮತ್ತು ಇದು ದೇಹ ಹಾಗೂ ಮನಸ್ಸಿಗೆ ತುಂಬಾ ಒಳ್ಳೆಯದು. ಆದರೆ ನಾವು ಇಂತಹ ನೀರನ್ನು ಅಂಗಡಿಯಲ್ಲಿ ಖರೀದಿಸುವ ಬದಲಿಗೆ ಮನೆಯಲ್ಲೇ ತಯಾರಿಸಬಹುದು. ಹೌದು, ಇದನ್ನು ಕೇಳಿ ನಿಮಗೆ ಸ್ವಲ್ಪ ಅಚ್ಚರಿ ಆದೂ ಇದು ನಿಜ. ಮನೆಯಲ್ಲೇ ಮಿನರಲ್ ವಾಟರ್ ತಯಾರಿ ಮಾಡುವುದು ಹೇಗೆ ಎಂದು ತಿಳಿಯಿರಿ.

ಮನೆಯಲ್ಲೇ ನೀವು ಮಿನರಲ್ ವಾಟರ್ ತಯಾರಿಸುವುದು ಹೇಗೆ?

ಇಲ್ಲಿ ನಾವೆಲ್ಲರೂ ಗೊಂದಲಕ್ಕೆ ಒಳಗಾಗಬಹುದು. ಯಾಕೆಂದರೆ ಮಿನರಲ್ ವಾಟರ್ ಮತ್ತು ಫಿಲ್ಟರ್ಡ್ ವಾಟರ್ ಸಂಪೂರ್ಣವಾಗಿ ಭಿನ್ನ. ಫೀಲ್ಟರ್ಡ್ ನಲ್ಲಿ ಬ್ಯಾಕ್ಟೀರಿಯಾ ಮತ್ತು ಕಲ್ಮಷವನ್ನು ತೆಗೆದು ಹಾಕಲಾಗುತ್ತದೆ. ಅದೇ ಮಿನರಲ್ ವಾಟರ್ ನಲ್ಲಿ ನಮ್ಮ ದೇಹಕ್ಕೆ ಬೇಕಾಗುವಂತಹ ಖನಿಜಾಂಶಗಳಾದ ಕ್ಯಾಲ್ಸಿಯಂ, ಮೆಗ್ನಿಶಿಯಂ, ಸೋಡಿಯಂ ಮತ್ತು ಪೊಟಾಶಿಯಂ ಇದೆ. ಹೀಗಾಗಿ ಮಿನರಲ್ ವಾಟರ್ ಎನ್ನುವುದು ಸ್ವಲ್ಪ ದುಬಾರಿ ಕೂಡ. ಇದನ್ನು ನೀವು ದಿನನಿತ್ಯವೂ ಖರೀದಿ ಮಾಡಲು ಹೋದರೆ ಅದರಿಂದ ನಿಮ್ಮ ಕಿಸೆಗೆ ದೊಡ್ಡ ಹೊಡೆತ ಬೀಳಬಹುದು. ಹೀಗಾಗಿ ನೀವು ಇದನ್ನು ಮನೆಯಲ್ಲೇ ತಯಾರಿಸಿ. ಇದಕ್ಕಾಗಿ ಐದು ಹಂತಗಳೂ ಇಲ್ಲಿವೆ.

 1. ನಲ್ಲಿ ನೀರು ಶುದ್ಧೀಕರಿಸಿ

1. ನಲ್ಲಿ ನೀರು ಶುದ್ಧೀಕರಿಸಿ

ಮನೆಯಲ್ಲೇ ನೀವು ಮಿನರಲ್ ವಾಟರ್ ತಯಾರಿ ಮಾಡಬೇಕಾದರೆ ಆಗ ನಿಮಗೆ ಇಲ್ಲಿ ಶುದ್ಧವಾದ ನೀರು ಬೇಕು. ಇದಕ್ಕಾಗಿ ನೀವು ಮೊದಲೇ ನಲ್ಲಿ ನೀರನ್ನು ಶುದ್ಧೀಕರಿಸಬೇಕು. 1-2 ಲೀಟರ್ ನೀರನ್ನು ಫಿಲ್ಟರ್ ಗೆ ಹಾಕಿ. ನೀರು ಸಂಪೂರ್ಣವಾಗಿ ಶುದ್ಧೀಕರಿಸಲ್ಪಟ್ಟ ಬಳಿಕ ನೀರನ್ನು ತೆಗೆದು ಒಂದು ಪಾತ್ರೆಗೆ ಹಾಕಿ. ಈ ಪಾತ್ರೆಯು ಸ್ವಚ್ಛವಾಗಿಸಬೇಕು ಮತ್ತು ಯಾವುದೇ ವಾಸನೆ ಬರುತ್ತಿರಬಾರದು.

2. ಬೇಕಿಂಗ್ ಸೋಡಾ ಹಾಕಿ

2. ಬೇಕಿಂಗ್ ಸೋಡಾ ಹಾಕಿ

ನೀರನ್ನು ಶುದ್ಧೀಕರಿಸಿದ ಬಳಿಕ ಮಾಡಬೇಕಾದ ಮೊದಲ ಕೆಲಸವೆಂದರೆ ಅದಕ್ಕೆ ಬೇಕಿಂಗ್ ಸೋಡಾ ಹಾಕಬೇಕು. 1/8 ಚಮಚದಷ್ಟು ಬೇಕಿಂಗ್ ಸೋಡಾವನ್ನು ಒಂದು ಲೀಟರ್ ಶುದ್ಧೀಕರಿಸಿದ ನೀರಿಗೆ ಹಾಕಿ. ಎರಡು ಲೀಟರ್ ನೀರಿಗೆ ಮತ್ತೆ ¼ ಚಮಚ ಹಾಕಿ. ಬೇಕಿಂಗ್ ಸೋಡಾವು ನೀರಿಗೆ ಸೋಡಿಯಂನ್ನು ಸೇರಿಸುವುದು. ಈ ಖನಿಜಾಂಶವು ಕೆಲವೊಂದು ಆರೋಗ್ಯ ಸಮಸ್ಯೆಗಳಾಗಿರುವಂತಹ ಅಜೀರ್ಣ, ಮಲಬದ್ಧತೆ, ಹೊಟ್ಟೆ ಉಬ್ಬರ, ಎದೆ ಉರಿ ಮತ್ತು ಸಂಧಿವಾತ ನಿವಾರಣೆ ಮಾಡುವುದು. ಇದು ಶುದ್ಧ ನೀರನ್ನು ಮಿನರಲ್ ವಾಟರ್ ಆಗಿ ಪರಿವರ್ತಿಸುವ ಮೊದಲ ವಿಧಾನ

3. ಕಲ್ಲುಪ್ಪು ಹಾಕಿ

3. ಕಲ್ಲುಪ್ಪು ಹಾಕಿ

ಈಗ ಎರಡನೇ ಹಂತದಲ್ಲಿ ನಿಮ್ಮ ನೀರಿನಲ್ಲಿ ಈಗಾಗಲೇ ಸೋಡಿಯಂ ಇದೆ. ಒಂದು ಲೀಟರ್ ನೀರಿಗೆ 1/8 ಚಮಚ ಕಲ್ಲುಪ್ಪು ಹಾಕಬೇಕು. ಈ ಉಪ್ಪು ಸೋಂಕು ನಿವಾರಕವಾಗಿ ಕೆಲಸ ಮಾಡುವುದು ಮತ್ತು ಬ್ಯಾಕ್ಟೀರಿಯಾ ದಾಳಿಯಿಂದ ದೇಹವನ್ನು ರಕ್ಷಿಸುವುದು. ಇದರಿಂದಾಗಿ ನೀರಿನ ಶುದ್ಧತೆಯನ್ನು ಮತ್ತಷ್ಟು ಹೆಚ್ಚಿಸುವುದು.

4. ಪೊಟಾಶಿಯಂ ಬೈಕಾರ್ಬೋನೇಟ್

4. ಪೊಟಾಶಿಯಂ ಬೈಕಾರ್ಬೋನೇಟ್

ಈಗಾಗಲೇ ಸೋಡಿಯಂ ಬೈಕಾರ್ಬೋನೇಟ್ ಮತ್ತು ಕಲ್ಲುಪ್ಪು ಹಾಕಿರುವ ನೀವು ಇದಕ್ಕೆ ಪೊಟಾಶಿಯಂ ಬೈಕಾರ್ಬೋನೇಟ್ ಹಾಕಬೇಕು. ಪೊಟಾಶಿಯಂ ಬೈಕಾರ್ಬೋನೇಟ್ ದೇಹದಲ್ಲಿ ರಕ್ತದೊತ್ತಡವನ್ನು ನಿರ್ವಹಿಸುವುದು. ಹೃದಯದ ಆರೋಗ್ಯಕ್ಕೆ ಇದು ತುಂಬಾ ಸಹಕಾರಿ ಆಗಿರುವುದು ಮತ್ತು ಹೃದಯ ಕಾಯಿಲೆ ಅಪಾಯವನ್ನು ತಗ್ಗಿಸುವುದು. ನೀರಿಗೆ ನೀವು 1/8 ಚಮಚ ಪೊಟಾಶಿಯಂ ಬೈಕಾರ್ಬೋನೇಟ್ ಹಾಕಿ.

5. ಸರಿಯಾಗಿ ಮಿಶ್ರಣ ಮಾಡಿ

5. ಸರಿಯಾಗಿ ಮಿಶ್ರಣ ಮಾಡಿ

ಈಗ ಕೊನೆಯದಾಗಿ ಈ ನೀರನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಶುದ್ಧೀಕರಿಸಿದ ನೀರಿಗೆ ಹಾಕಿರುವಂತಹ ಖನಿಜಾಂಶಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ನೀವು ಸೋಡಾ ಸಿಫೊನ್ ಕೂಡ ಬಳಸಬಹುದು. ಇದರಿಂದ ನೀರು ಒಳ್ಳೆಯ ರೀತಿ ಮಿಶ್ರಣ ಮಾಡಬಹುದು. ಇದರಲ್ಲಿ ಒಂದು ಕಾರ್ಟಿಡ್ಜ್ ಮತ್ತು ಹಿಡಿಕೆ ಬರುವುದು. ಕಾರ್ಟಿಡ್ಜ್ ನ್ನು ಸಿಫೋನ್ ಗೆ ಅಳವಡಿಸಿಕೊಳ್ಳಿ ಮತ್ತು ಹಿಡಿಕೆ ಮೂಲಕ ನೀರು ಹಾಕಿ. ಇದು ಸಿಫೋನ್ ನ ಇನ್ನೊಂದು ಬದಿಯಿಂದ ಬರುವಂತಹ ನೀರು ಸಂಪೂರ್ಣವಾಗಿ ಶುದ್ಧೀಕರಿಸಲ್ಪಡುವುದು. ನೀವು ಮನೆಯಲ್ಲೇ ಈ ಐದು ವಿಧಾನಗಳನ್ನು ಬಳಸಿಕೊಂಡು ಮಿನರಲ್ ವಾಟರ್ ತಯಾರಿಸಬಹುದು. ಇದರಿಂದ ಸೋಡಿಯಂ ಮತ್ತು ಪೊಟಾಶಿಯಂ ಸಮೃದ್ಧವಾಗಿದೆ.

English summary

How To Prepare Mineral Water At Home in Kannada

Here we are discussing about How To Prepare Mineral Water At Home. mineral water can be prepared in your home itself. And these 5 simple steps will show you how! Read more
X
Desktop Bottom Promotion