For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕಾಡುವ ಕೆಮ್ಮು-ಶೀತ ಕಡಿಮೆಯಾಗಲು ಜ್ಯೇಷ್ಠ ಮಧು ಹೀಗೆ ಬಳಸಿದರೆ ಸಾಕು

|

ಚಳಿಗಾಲದಲ್ಲಿ ಕೆಮ್ಮು, ಶೀತ ಈ ಬಗೆಯ ಸಮಸ್ಯೆ ಸರ್ವೇಸಾಮಾನ್ಯ. ಗಂಟಲು ಕಿಚಿಕಿಚಿ, ನಿರಂತರ ಕೆಮ್ಮು ಬಂದರೆ ಹೈರಾಣಾಗಿ ಬಿಡುತ್ತೇವೆ. ಇಂಥ ಸಮಸ್ಯೆ ತಡೆಗಟ್ಟಲು ಜ್ಯೇಷ್ಠ ಮಧು ತುಂಬಾನೇ ಸಹಾಯ ಮಾಡುತ್ತೆ. ಇದನ್ನು ಮನೆಮದ್ದಾಗಿ ಹಿಂದಿನ ಕಾಲದಿಂದಲೂ ಬಳಸಲಾಗುತ್ತಿದೆ, ಆಯರ್ವೇದದಲ್ಲೂ ಇದನ್ನು ಬಳಸಲಾಗುವುದು.

Winter Season

ಇದರಿಂದ ಕೆಮ್ಮು, ಶೀತದಂಥ ಸಮಸ್ಯೆ ತಡೆಗಟ್ಟುವುದು ಮಾತ್ರವಲ್ಲ ಇನ್ನು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಈ ಜ್ಯೇಷ್ಠ ಮಧುವನ್ನು ಹೇಗೆ ಬಳಸಬೇಕು, ಇದರಿಂದ ದೊರೆಯುವ ಇತರ ಪ್ರಯೋಜನಗಳೇನು ಎಂದು ತಿಳಿಯೋಣ ಬನ್ನಿ:

ಮೊದಲಿಗೆ ಜ್ಯೇಷ್ಠ ಮಧುವಿನ ಪ್ರಯೋಜನಗಳ ಬಗ್ಗೆ ತಿಳಿಯೋಣ

ಮೊದಲಿಗೆ ಜ್ಯೇಷ್ಠ ಮಧುವಿನ ಪ್ರಯೋಜನಗಳ ಬಗ್ಗೆ ತಿಳಿಯೋಣ

* ಜೀರ್ಣಕ್ರಿಯೆಗೆ ಸಹಕಾರಿ

* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

* ಮುಟ್ಟಿನ ಸಮಯದಲ್ಲಿ ಕಾಡುವ ಕಿಬ್ಬೊಟ್ಟೆ ನೋವು, ಸ್ನಾಯು ಸೆಳೆತ ಇವುಗಳನ್ನು ಕಡಿಮೆ ಮಾಡುತ್ತದೆ.

* ಬಾಯಿಯ ಸ್ವಾಸ್ಥ್ಯ ಹೆಚ್ಚಿಸುತ್ತೆ

* ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ

* ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು

* ತಲೆಹೊಟ್ಟು, ಕುದಲು ಉದುರುವ ಸಮಸ್ಯೆ ಕಡಿಮೆ ಮಾಡುತ್ತದೆ.

ಚಳಿಗಾಲದಲ್ಲಿ ಈ ಬಗೆಯ ಸಮಸ್ಯೆಗಳು ಅಧಿಕವಿರುವುದರಿಂದ ನೀವು ಜ್ಯೇಷ್ಠ ಮಧು ಬಳಸಿದರೆ ಪ್ರಯೋಜನಗಳನ್ನು ಪಡೆಯಬಹುದು.

ಕೆಮ್ಮಿಗೆ ಜ್ಯೇಷ್ಠ ಮಧು ಹೇಗೆ ಬಳಸಬೇಕು?

ಕೆಮ್ಮಿಗೆ ಜ್ಯೇಷ್ಠ ಮಧು ಹೇಗೆ ಬಳಸಬೇಕು?

* ಜ್ಯೇಷ್ಠ ಮಧುವಿನ ಪಾನೀಯ

ಗಂಟಲು ತುಂಬಾ ಕಿಚಿಚಿ ಆಗುತ್ತಿದೆಯೇ ನೀವು ಜ್ಯೇಷ್ಠ ಮಧುವನ್ನು ನೀರಿನಲ್ಲಿ ಹಾಕಿಕುದಿಸಿ, ಉಗುರು ಬೆಚ್ಚಗಿನ ಆ ನೀರಿನಿಂದ ಬಾಯಿ ಮುಕ್ಕಳಿಸಿ. ಜ್ಯೇಷ್ಠ ಮಧುವಿನ ಪುಡಿ ಅಥವಾ ಕಡ್ಡಿ ಬಳಸಬಹುದು.

ಜ್ಯೇಷ್ಠ ಮಧುವಿನ ಟೀ

ಜ್ಯೇಷ್ಠ ಮಧುವಿನ ಟೀ

ವಿಪರೀತ ಕೆಮ್ಮು ಇದೆಯೇ? ಜ್ಯೇಷ್ಠ ಮಧುವಿನಿಂದ ಮಾಡಿದ ಟೀ ಕೆಮ್ಮಿನ ಸಮಸ್ಯೆ ಸಮನ ಮಾಡುತ್ತೆ, ನೀವು ಜ್ಯೇಷ್ಠ ಮಧುವಿನ ಕಡ್ಡಿಯನ್ನು ಕುಟ್ಟಿ ಪುಡಿ-ಪುಡಿ ಮಾಡಿ ಅದನ್ನು ನೀರಿನಲ್ಲಿ ಹಾಕಿ ಕುದಿಸಿ, ಹೀಗೆ ಕುದಿಸುವಾಗ ತುಳಸಿ, ಶುಂಠಿ ಹಾಕಿದರೆ ಮತ್ತಷ್ಟು ಒಳ್ಳೆಯದು, ನಂತರ ಬಿಸಿ ಸ್ವಲ್ಪ ಕಡಿಮೆಯಾದ ಮೇಲೆ ಜೇನು ಸೇರಿಸಿ ಕುಡಿಯಿರಿ.

ಜ್ಯೇಷ್ಠ ಮಧು ಪುಡಿಯನ್ನು ನಾವೇ ತಯಾರಿಸಿಡಬಹುದೇ?

ಜ್ಯೇಷ್ಠ ಮಧು ಪುಡಿಯನ್ನು ನಾವೇ ತಯಾರಿಸಿಡಬಹುದೇ?

ಕಡ್ಡಿ ಕುಟ್ಟಿ ಮಾಡುವುದು ಕಷ್ಟ ಅನಿಸಿದರೆ ನೀವು ಮಿಕ್ಸಿಯಲ್ಲಿ ಪುಡಿ

ಮಾಡಿ ಇಟ್ಟು ಬಳಸಬಹುದು,

ಜ್ಯೇಷ್ಠ ಮಧು ಅಡ್ಡಪರಿಣಾಮವಿದೆಯೇ?

ಜ್ಯೇಷ್ಠ ಮಧು ಅಡ್ಡಪರಿಣಾಮವಿದೆಯೇ?

ಪ್ರತಿದಿನ ತೆಗೆದುಕೊಳ್ಳುತ್ತಿದ್ದರೆ ರಕ್ತದೊತ್ತಡ, ಸೋಡಿಯಂ , ಪೊಟಾಷ್ಯಿಯಂ ಕಡಿಮೆಯಾಗುವ ಸಾಧ್ಯತೆ ಇದೆ.

ಆದ್ದರಿಂದ ನಿಮಗೆ ಇತರ ಆರೋಗ್ಯ ಸಮಸ್ಯೆಯಿದ್ದರೆ ನೀವು ತಜ್ಞರ ಸಲಹೆ ಪಡೆದ ಬಳಿಕವಷ್ಟೇ ಸೇವಿಸಿ.

ಸೂಚನೆ: ಗರ್ಭಿಣಿಯರು ಹಾಗೂ ಬಾಣಂತಿಯರು, ಎದೆ ಹಾಲುಣಿಸುವವರು ಇದನ್ನು ಸೇವಿಸಬಹುದೇ , ಇಲ್ಲವೇ ಎಂಬುವುದರ ಕುರಿತು ಹೆಚ್ಚಿನ ಮಾಹಿತಿ ನಮಗೆ ಲಭ್ಯವಿಲ್ಲ, ಆದ್ದರಿಂದ ನೀವು ತಜ್ಞರನ್ನು ಕೇಳಿದ ಬಳಿಕವಷ್ಟೇ ಸೇವಿಸಿ.

English summary

How Can Use Mulethi or licorice To Treat Cold And Cough in Kannada

Winter Season: How to use muleti to treat common cough and cold, read on....
X
Desktop Bottom Promotion