For Quick Alerts
ALLOW NOTIFICATIONS  
For Daily Alerts

ಕತ್ತು ಹಿಡ್ಕೊಂಡ್ರೆ ಈ ಮನೆಮದ್ದುಗಳನ್ನೂ ಟ್ರೈ ಮಾಡಿ

|

ಕುತ್ತಿಗೆ ಭಾಗದ ಜಡ ಸ್ಥಿತಿಯಿಂದ ಕತ್ತನ್ನು ಅತ್ತಿತ್ತ ತಿರುಗಿಸಲಾಗದೆ ಯಾವ ಕೆಲಸದ ಮೇಲೆ ಗಮನವಿಟ್ಟು ಸರಿಯಾಗಿ ಮಾಡಲು ಬಿಡುವುದಿಲ್ಲ. ಕೆಲವೊಂದು ಬಾರಿ ವಿಪರೀತ ತಂಪಿನ ವಾತಾವರಣ ಉಂಟಾದರೆ ದೇಹದ ಕೈ ಕಾಲು ಮತ್ತು ನರ ನಾಡಿಗಳು ಸೆಟೆದುಕೊಂಡಂತಾಗಿ ರಕ್ತ ಸಂಚಾರ ಇಲ್ಲದೆ ಸೆಟೆದುಕೊಳ್ಳುತ್ತವೆ.

pinched nerve home remedies

ನರಗಳು ಹಿಡಿದುಕೊಂಡು ಕೆಲವೊಮ್ಮೆ ಬಹಳ ಘಾಸಿ ಕೊಡುತ್ತವೆ. ನಮ್ಮ ಕೈಲಾದ ಕೆಲಸಗಳನ್ನು ಮಾಡಿಕೊಳ್ಳಲು ಸಹ ಬಿಡುವುದಿಲ್ಲ. ಸೆಟೆದುಕೊಂಡ ನರದಿಂದ ಅಥವಾ ನರಗಳ ಗುಂಪಿನಿಂದ ದೇಹದ ಒಂದು ನಿರ್ಧಿಷ್ಟ ಭಾಗ ಜಡವಾಗಿ ಕೆಲವೊಮ್ಮೆ ಭಯವನ್ನು ಹುಟ್ಟು ಹಾಕುತ್ತದೆ. ಇದು ನರ ದೌರ್ಬಲ್ಯದ ಒಂದು ಕಾರಣ ಎಂದುಕೊಂಡರೂ ಆಶ್ಚರ್ಯ ಇಲ್ಲ. ಈ ಸಮಸ್ಯೆಯಿಂದ ದೇಹದಲ್ಲಿ ಸರಾಗವಾಗಿ ನಡೆಯುತ್ತಿರುವ ರಕ್ತ ಸಂಚಾರದಲ್ಲಿ ಕೂಡ ವ್ಯತ್ಯಾಸವಾಗಿ ದೇಹದಲ್ಲಿ ಇನ್ನಿತರ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಈ ಲೇಖನದಲ್ಲಿ ವಿಶೇಷವಾಗಿ ಇಂತಹ ಸಮಸ್ಯೆಗಳಿಗೆ ಪರಿಹಾರ ಅತ್ಯುತ್ತಮ ಮನೆಮದ್ದುಗಳನ್ನು ಸೂಚಿಸಲಾಗಿದೆ.

1. ಆಕ್ಯುಪ್ರೆಶರ್

1. ಆಕ್ಯುಪ್ರೆಶರ್

  • ಹಾಟ್ ಅಥವಾ ಕೋಲ್ಡ್ ಕಂಪ್ರೆಸ್
  • ಬೇಕಾಗಿರುವ ಪದಾರ್ಥಗಳು
  • ಐಸ್ ಕ್ಯೂಬ್ ಗಳು
  • ಶುಚಿಯಾದ ಒಂದು ಬಟ್ಟೆ
  • ಸೀಲ್ ಮಾಡುವಂತಹ ಒಂದು ಪ್ಲಾಸ್ಟಿಕ್ ಬ್ಯಾಗ್
  • ಹಾಟ್ ಕಂಪ್ರೆಸ್
  • ಆಕ್ಯುಪ್ರೆಶರ್ ಮಾಡುವ ವಿಧಾನ ?

    • ಮೊದಲಿಗೆ ಕೆಲವೊಂದು ಐಸ್ ಕ್ಯೂಬ್ ಗಳನ್ನು ತೆಗೆದುಕೊಂಡು ಅವುಗಳನ್ನು ಸೀಲ್ ಮಾಡುವಂತಹ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿಕೊಳ್ಳಿ.
    • ಒಂದು ಶುಚಿಯಾದ ಬಟ್ಟೆಯಿಂದ ಪ್ಲಾಸ್ಟಿಕ್ ಬ್ಯಾಗ್ ಅನ್ನು ಸುತ್ತಿ ಮತ್ತು ನಿಮ್ಮ ಕತ್ತಿನ ಬಳಿ ಇಟ್ಟುಕೊಳ್ಳಿ.
    • ಸುಮಾರು 10 ರಿಂದ 15 ನಿಮಿಷಗಳವರೆಗೆ ಹಾಗೆ ಬಿಡಿ.
    • ಒಂದು ದಿನದಲ್ಲಿ ಹಲವು ಬಾರಿ ಇದೇ ರೀತಿ ಮಾಡಿ.
    • ಇದನ್ನು ಬಿಟ್ಟು ನಿಮ್ಮ ಕುತ್ತಿಗೆಯ ಭಾಗಕ್ಕೆ ಹಾಟ್ ಕಂಪ್ರೆಸ್ ಅಪ್ಲೈ ಮಾಡಬಹುದು.
    • ಪ್ರತಿ ಗಂಟೆಗೊಮ್ಮೆ ಅಥವಾ ಎರಡು ಗಂಟೆಗೊಮ್ಮೆ ನಿಮ್ಮ ಕುತ್ತಿಗೆ ಭಾಗದಲ್ಲಿ ನೋವು ಕಡಿಮೆಯಾಗುವವರೆಗೂ ನೀವು ಈ ಪ್ರಯತ್ನವನ್ನು ಮುಂದುವರಿಸುವುದು ಒಳ್ಳೆಯದು.
    • ಈ ಪ್ರಯತ್ನ ನಿಜಕ್ಕೂ ಉಪಕಾರಿಯೇ?

      ಕೋಲ್ಡ್ ಕಂಪ್ರೆಸ್ ಅಪ್ಲೈ ಮಾಡುವುದರಿಂದ ನಿಮ್ಮ ನೋವು ಮತ್ತು ಉರಿಯೂತ ಉಪಶಮನ ಕಾಣುತ್ತದೆ. ಹಾಟ್ ಕಂಪ್ರೆಸ್ ಮಾಡುವುದರಿಂದ ನಿಮ್ಮ ಕುತ್ತಿಗೆಯ ಭಾಗದ ಮಾಂಸ - ಖಂಡಗಳು ವಿಶ್ರಾಂತಗೊಂಡು ಸೆಟೆದುಕೊಂಡಿರುವ ನರವನ್ನು ಸರಿಪಡಿಸುತ್ತದೆ. ಇದರ ಜೊತೆಗೆ ಕುತ್ತಿಗೆಯ ಭಾಗದಲ್ಲಿ ರಕ್ತ ಸಂಚಾರ ಕೂಡ ಹೆಚ್ಚಾಗಿ, ನೋವಿನಿಂದ ಬಳಲುತ್ತಿರುವ ನರ ಬಹು ಬೇಗನೆ ವಾಸಿಯಾಗುತ್ತದೆ.ನರ ಹಿಡಿದುಕೊಳ್ಳುತ್ತಿದೆಯೇ? ಹಾಗಿದ್ದರೆ ಇದೇ ಕಾರಣ

      2. ಬಿಸಿಯಾದ ಎಣ್ಣೆಯಿಂದ ಮಸಾಜ್ ಮಾಡಿ

      2. ಬಿಸಿಯಾದ ಎಣ್ಣೆಯಿಂದ ಮಸಾಜ್ ಮಾಡಿ

      ಬೇಕಾಗಿರುವ ಸಾಮಾಗ್ರಿಗಳು

      • ಅರ್ಧ ಕಪ್ ತಾಜಾ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆ.
      • ಮಾಡಬೇಕಾದುದು ಏನು?

        • ಮೊದಲಿಗೆ ಒಂದು ಸ್ಟೀಲ್ ಬಟ್ಟಲಿನಲ್ಲಿ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಸ್ಟವ್ ಮೇಲಿಟ್ಟು ಸ್ವಲ್ಪ ಬಿಸಿ ಮಾಡಿ.
        • ಬಿಸಿ ಆರುವ ಮೊದಲೇ ಉಗುರು ಬೆಚ್ಚಗಿನ ಎಣ್ಣೆಯನ್ನು ನಿಮ್ಮ ಕುತ್ತಿಗೆ ಭಾಗಕ್ಕೆ ಸುಮಾರು 10 ರಿಂದ 15 ನಿಮಿಷಗಳ ಕಾಲ ಮಸಾಜ್ ಮಾಡಿ
        • ಪ್ರತಿ ದಿನ ಒಂದು ಅಥವಾ ಎರಡು ಬಾರಿ ಎಣ್ಣೆಯಿಂದ ಮಸಾಜ್ ಮಾಡಿದರೆ ಸಾಕು.
        • ಈ ಪ್ರಯತ್ನ ನಿಜಕ್ಕೂ ಉಪಕಾರಿಯೇ?

          ನೋವಿರುವ ಭಾಗವನ್ನು ಮಸಾಜ್ ಮಾಡುವುದರಿಂದ ಕೆಲವೊಂದು ಪ್ರೆಷರ್ ಪಾಯಿಂಟ್ ಗಳನ್ನು ಉತ್ತೇಜಿಸಿ ನಿಮ್ಮ ಮಾಂಸ ಖಂಡಗಳನ್ನು ವಿಶ್ರಾಂತಗೊಳಿಸಿ ಕುತ್ತಿಗೆ ಭಾಗಕ್ಕೆ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ. ಸ್ವಲ್ಪ ಬಿಸಿ ಎಣ್ಣೆ ಆಗಿರುವುದರಿಂದ ನೋವು ನಿವಾರಣೆಯಲ್ಲಿ ಬಹಳಷ್ಟು ಸಹಾಯ ಆಗುವುದರ ಜೊತೆಗೆ ಕುತ್ತಿಗೆ ಭಾಗದ ಹಿಡಿದುಕೊಂಡಿರುವ ನರ ನಾಡಿಗಳನ್ನು ಬಿಡುಗಡೆಗೊಳಿಸಿ ನೋವಿನಿಂದ ಮುಕ್ತಿ ಕೊಡುತ್ತದೆ.

          3. ಎಸೆನ್ಶಿಯಲ್ ಆಯಿಲ್ ಗಳು

          3. ಎಸೆನ್ಶಿಯಲ್ ಆಯಿಲ್ ಗಳು

          ಎ) ಪೆಪ್ಪರ್‌ಮಿಂಟ್ ಎಣ್ಣೆ

          • ಎರಡರಿಂದ ಮೂರು ಹನಿಗಳಷ್ಟು ಪೆಪ್ಪರ್‌ಮಿಂಟ್ ಎಣ್ಣೆ
          • ಕೋಕೋನಟ್ ಅಥವಾ ಜೋಜೋಬ ಆಯಿಲ್ ( ಬೇಕಿದ್ದರೆ ಮಾತ್ರ)
          • ಏನು ಮಾಡಬೇಕು?

            • ಕೆಲವು ಹನಿಗಳಷ್ಟು ಪೆಪ್ಪರ್‌ಮಿಂಟ್ ಆಯಿಲ್ ಅನ್ನು ನಿಮ್ಮ ಬೆರಳುಗಳ ತುದಿಯಲ್ಲಿ ಹಚ್ಚಿಕೊಂಡು ನಿಮ್ಮ ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡಿ.
            • ನಿಮ್ಮ ಕುತ್ತಿಗೆ ಭಾಗದ ಚರ್ಮ ಸಂಪೂರ್ಣವಾಗಿ ನೀವು ಮಸಾಜ್ ಮಾಡುತ್ತಿರುವ ಎಣ್ಣೆಯನ್ನು ಹೀರಿಕೊಳ್ಳುವವರೆಗೂ ಚೆನ್ನಾಗಿ ಮಸಾಜ್ ಮಾಡಿ.
            • ಒಂದು ವೇಳೆ ನಿಮ್ಮ ದೇಹದ ಚರ್ಮ ಸೂಕ್ಷ್ಮವಾಗಿದ್ದರೆ, ಎಸೆನ್ಶಿಯಲ್ ಆಯಿಲ್ ಅನ್ನು ಯಾವುದಾದರೂ ಒಂದು ಕ್ಯಾರಿಯರ್ ಆಯಿಲ್ ಜೊತೆ ಮಿಶ್ರಣ ಮಾಡಿ ನಂತರ ಹಚ್ಚಿಕೊಳ್ಳಬಹುದು.
            • ಸಾಮಾನ್ಯವಾಗಿ ಎಸೆನ್ಶಿಯಲ್ ಆಯಿಲ್ ನ ಬಳಕೆ ದಿನಕ್ಕೆ ಎರಡು ಬಾರಿಗೆ ಸೀಮಿತವಾದರೆ ಒಳ್ಳೆಯದು.
            • ಈ ಪ್ರಯತ್ನ ನಿಜಕ್ಕೂ ಉಪಕಾರಿಯೇ?

              ಪೆಪ್ಪರ್‌ಮಿಂಟ್ ಆಯಿಲ್ ನೋವು ನಿವಾರಣೆಯ ಜೊತೆಗೆ ಡಿ - ಕಂಜೆಸ್ಟೆಂಟ್ ಕೆಲಸ ಮಾಡುತ್ತದೆ ಇದರ ಉರಿಯೂತ ಶಮನ ಮಾಡುವ ಗುಣ ಲಕ್ಷಣಗಳು ಮತ್ತು ಅನಲ್ಗೆಸಿಕ್, ಆಂಟಿ ಸ್ಪಸ್ಮೊಡಿಕ್ ಸ್ವಭಾವಗಳಿಂದ ಕುತ್ತಿಗೆ ಭಾಗದ ನರಗಳನ್ನು ರಿಲಾಕ್ಸ್ ಮಾಡುತ್ತದೆ. ಪೆಪ್ಪರ್‌ಮಿಂಟ್ ಆಯಿಲ್ ನ ಎಲ್ಲಾ ಗುಣ ಲಕ್ಷಣಗಳು ಸೆಟೆದುಕೊಂಡಿರುವ ನಿಮ್ಮ ಕುತ್ತಿಗೆ ಭಾಗದ ನರಗಳಿಗೆ ಹೇಳಿ ಮಾಡಿಸಿದ ಒಂದು ಎಸೆನ್ಸಿಯಲ್ ಆಯಿಲ್ ಆಗಿದೆ.

              3. ಎಸೆನ್ಶಿಯಲ್ ಆಯಿಲ್ ಗಳು

              3. ಎಸೆನ್ಶಿಯಲ್ ಆಯಿಲ್ ಗಳು

              ಬಿ) ಲ್ಯಾವೆಂಡರ್ ಆಯಿಲ್

              • ಬೇಕಾಗಿರುವ ಸಾಮಗ್ರಿಗಳು
              • ಎರಡರಿಂದ ಮೂರು ಹನಿಗಳಷ್ಟು ಲ್ಯಾವಂಡರ್ ಎಣ್ಣೆ
              • ತಾಜಾ ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ ( ಬೇಕಿದ್ದರೆ ಮಾತ್ರ)
              • ಹೇಗೆ ಬಳಸಬೇಕು ?

                • ಕೆಲವು ಹನಿಗಳಷ್ಟು ಲ್ಯಾವೆಂಡರ್ ಆಯಿಲ್ ಅನ್ನು ನಿಮ್ಮ ಕೈ ಬೆರಳುಗಳಲ್ಲಿ ತೆಗೆದುಕೊಂಡು ನೋವಿರುವ ಜಾಗಕ್ಕೆ ಚೆನ್ನಾಗಿ ಹಚ್ಚಿ
                • ಒಂದು ವೇಳೆ ನಿಮ್ಮ ದೇಹದ ಚರ್ಮ ಸೂಕ್ಷ್ಮವಾಗಿದ್ದರೆ, ಎಸೆನ್ಶಿಯಲ್ ಆಯಿಲ್ ಅನ್ನು ಯಾವುದಾದರೂ ಒಂದು ಕ್ಯಾರಿಯರ್ ಆಯಿಲ್ ಜೊತೆ ಮಿಶ್ರಣ ಮಾಡಿ ನಂತರ ಹಚ್ಚಿಕೊಳ್ಳಬಹುದು.
                • ಎರಡರಿಂದ ಮೂರು ನಿಮಿಷಗಳವರೆಗೆ ನಿಮ್ಮ ದೇಹದ ಚರ್ಮ ಸಂಪೂರ್ಣವಾಗಿ ನೀವು ಹಚ್ಚಿದ ಲ್ಯಾವೆಂಡರ್ ಆಯಿಲ್ ಅನ್ನು ಹೀರಿಕೊಳ್ಳುವವರೆಗೆ ನಿಧಾನವಾಗಿ ಮಸಾಜ್ ಮಾಡಿ.
                • ಲ್ಯಾವೆಂಡರ್ ಆಯಿಲ್ ಆಗಿರುವುದರಿಂದ ಪ್ರತಿ ದಿನ ಎರಡರಿಂದ ಮೂರು ಬಾರಿ ಚೆನ್ನಾಗಿ ಮಸಾಜ್ ಮಾಡಿದರೆ ನೋವು ನಿವಾರಣೆಯಾಗುತ್ತದೆ.
                • ಇದು ಹೇಗೆ ಕೆಲಸ ಮಾಡುತ್ತದೆ?

                  ಲ್ಯಾವೆಂಡರ್ ಆಯಿಲ್ ತನ್ನಲ್ಲಿರುವ ಸುವಾಸನಾಭರಿತ ವಾಸನೆಯಿಂದ ನಿಮ್ಮ ನಿದ್ರೆಯ ಗುಣ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಬಹಳಷ್ಟು ವಿಶ್ರಾಂತಿ ದೊರಕುತ್ತದೆ. ಇದರ ಅನಲ್ಗೆಸಿಕ್ ಮತ್ತು ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳು ನೋವು ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ಕುತ್ತಿಗೆಯ ಭಾಗದ ಯಾವ ನರ ಉರಿಯೂತದ ಸಮಸ್ಯೆಯಿಂದ ಬಳಲುತ್ತಿರುವುದುದೋ ಅದನ್ನು ಸರಿಪಡಿಸುವ ಶಕ್ತಿ ಹೊಂದಿರುತ್ತದೆ.

                  4. ಶುಂಠಿ

                  4. ಶುಂಠಿ

                  ಬೇಕಾಗಿರುವ ಸಾಮಗ್ರಿಗಳು

                  • 1 ಇಂಚು ಹೆಚ್ಚಿದ ಶುಂಠಿ
                  • ಒಂದು ಕಪ್ ಬಿಸಿ ನೀರು
                  • ಸ್ವಲ್ಪ ಹಸಿ ಜೇನು ತುಪ್ಪ
                  • ಹೇಗೆ ಬಳಸುವುದು?

                    • ಮೊದಲು ಒಂದು ಪಾತ್ರೆಯನ್ನು ಸ್ಟವ್ ಮೇಲಿಟ್ಟು ಅದಕ್ಕೆ ಒಂದು ಕಪ್ ನೀರು ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ.
                    • ಹೆಚ್ಚಿದ ಶುಂಠಿಯನ್ನು ಕುದಿಯುತ್ತಿರುವ ಬಿಸಿ ನೀರಿಗೆ ಹಾಕಿ.
                    • ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ನೀರನ್ನು ಚೆನ್ನಾಗಿ ಕುದಿಸಿ. ಹೀಗೆ ಮಾಡುವುದರಿಂದ ಶುಂಠಿಯಲ್ಲಿನ ಸಾರ ನೀರಿಗೆ ಬೆರೆಯುತ್ತದೆ.
                    • ಸ್ಟೌವ್ ಆರಿಸಿ ಈ ನೀರನ್ನು ಸ್ವಲ್ಪ ತಣ್ಣಗಾಗಲು ಬಿಡಿ
                    • ನಂತರ ಒಂದು ಶುಚಿಯಾದ ಬಟ್ಟೆಯಿಂದ ಈ ನೀರನ್ನು ಸೋಸಿಕೊಂಡು ಅದಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿ ಚೆನ್ನಾಗಿ ಕದಡಿ.
                    • ಉಗುರು ಬೆಚ್ಚಗಿರುವ ಸಮಯದಲ್ಲಿ ಜೇನು ತುಪ್ಪ ಮಿಶ್ರಿತ ಶುಂಠಿ ನೀರನ್ನು ಕುಡಿಯಿರಿ.
                    • ದೇಹದ ಯಾವುದೇ ಭಾಗದ ನೋವಿನಿಂದ ಬಳಲುತ್ತಿರುವವರು ಶುಂಠಿ ಚಹಾವನ್ನು ಒಂದು ದಿನಕ್ಕೆ 2 ರಿಂದ 3 ಬಾರಿ ಕುಡಿಯಲೇಬೇಕು.
                    • ಇದು ಹೇಗೆ ಕೆಲಸ ಮಾಡುತ್ತದೆ?

                      ಗಿಡಮೂಲಿಕೆಯ ಜಾತಿಗೆ ಸೇರಿದ ಶುಂಠಿ ತನ್ನ ನೋವು ನಿವಾರಕ ಗುಣ ಲಕ್ಷಣಗಳಿಂದ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಇದು ಬಹಳಷ್ಟು ಪರಿಣಾಮಕಾರಿ ಆಗಿರುವುದರಿಂದ ನೋವು ನಿವಾರಣೆಯಲ್ಲಿ ಮತ್ತು ನರನಾಡಿಗಳ ಉರಿಯೂತದ ಉಪಶಮನಗಳಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ.

                      5. ವಿಟಮಿನ್‌ಗಳು

                      5. ವಿಟಮಿನ್‌ಗಳು

                      ಮನುಷ್ಯನ ದೇಹದಲ್ಲಿ ಯಾವಾಗ ವಿಟಮಿನ್ ಅಂಶಗಳ ಕೊರತೆ ಉಂಟಾಗುವುದೋ ಆ ಸಮಯದಲ್ಲಿ ಮಾಂಸ ಖಂಡಗಳಲ್ಲಿ ಅವಿತಿರುವ ನರ ನಾಡಿಗಳಿಗೆ ತೊಂದರೆ ಉಂಟಾಗುವುದು ಸಹಜ. ಅಂದರೆ ವಿಟಮಿನ್ ಅಂಶಗಳಾದ ವಿಟಮಿನ್ ' ಬಿ6 ', ವಿಟಮಿನ್ ' ಬಿ12 ', ವಿಟಮಿನ್ ' ಸಿ ' ಮತ್ತು ವಿಟಮಿನ್ ' ಈ ' ಅಂಶಗಳು ದೇಹದಲ್ಲಿ ಕೊರತೆ ಕಂಡಾಗ ನರಗಳು ಸೆಟೆದುಕೊಂಡಿರುವ ರೀತಿ ಆಗುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ಬಹುಬೇಗನೆ ಪಾರಾಗಬೇಕಾದರೆ ಪ್ರತಿ ದಿನ ದೇಹದ ಅಗತ್ಯತೆಗೆ ತಕ್ಕಂತೆ ವಿಟಮಿನ್ ಗಳ ಸೇವನೆ ಬಹಳ ಮುಖ್ಯ. ಸಿಟ್ರಸ್ ಹಣ್ಣುಗಳು, ಹಸಿರು ಎಲೆ-ತರಕಾರಿಗಳು, ಬಾದಾಮಿ ಬೀಜಗಳು, ಅವಕ್ಯಾಡೊ ಗಳು, ಸಮುದ್ರ ಆಹಾರ ಮತ್ತು ಪೌಲ್ಟ್ರಿ ಸೇವನೆಯಿಂದ ಈ ವಿಟಮಿನ್ ಗಳನ್ನು ಆದಷ್ಟು ನಿಮ್ಮ ದೇಹಕ್ಕೆ ಹೆಚ್ಚಾಗಿ ಸೇರಿಸಿ. ಏಕೆಂದರೆ ಈ ಎಲ್ಲಾ ವಿಟಮಿನ್ ಗಳಲ್ಲಿ ಆಂಟಿ ಇನ್ಫಾಮೇಟರಿ ಮತ್ತು ಅನಲ್ಗೆಸಿಕ್ ಗುಣಲಕ್ಷಣಗಳು ಇದ್ದು ನೋವು ನಿವಾರಣೆಯಲ್ಲಿ ಬಹಳಷ್ಟು ಉತ್ತಮ ಪಾತ್ರ ವಹಿಸುತ್ತವೆ.

                      6. ಅರಿಶಿನ

                      6. ಅರಿಶಿನ

                      ಬೇಕಾಗಿರುವ ಸಾಮಗ್ರಿಗಳು

                      • ಒಂದು ಟೀ ಚಮಚದಷ್ಟು ಅರಿಶಿನ ಪುಡಿ
                      • ಒಂದು ಗ್ಲಾಸ್ ಹಾಲು
                      • ಹಸಿ ಜೇನು ತುಪ್ಪ (ಬೇಕಿದ್ದರೆ ಮಾತ್ರ)
                      • ಹೇಗೆ ಬಳಸಬೇಕು ?

                        • ಒಂದು ಗ್ಲಾಸ್ ಹಾಲನ್ನು ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಹಾಕಿ ಚೆನ್ನಾಗಿ ತಿರುವಿ.
                        • ಹಾಲು ಸ್ವಲ್ಪ ಆರಿದ ಮೇಲೆ ಅದಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿ ಕುಡಿಯಿರಿ.
                        • ಪ್ರತಿ ದಿನ ಎರಡು ಬಾರಿ ಅರಿಶಿಣ ಮತ್ತು ಜೇನು ತುಪ್ಪ ಮಿಶ್ರಣ ಮಾಡಿದ ಹಾಲನ್ನು ಸೇವಿಸಿದರೆ ಉತ್ತಮ.
                        • ಇದು ಹೇಗೆ ಕೆಲಸ ಮಾಡುತ್ತದೆ?

                          ಅರಿಶಿಣದಲ್ಲಿರುವ ಕರ್ಕ್ಯುಮಿನ್ ಅಂಶ ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳ ಜೊತೆಗೆ ಯಾವುದೇ ತರಹದ ನೋವನ್ನು ವಾಸಿ ಮಾಡುವ ಸ್ವಭಾವ ಹೊಂದಿದೆ. ಈ ಕಾರಣದಿಂದ ಕುತ್ತಿಗೆ ಭಾಗದ ಸೆಟೆದುಕೊಂಡಿರುವ ನರ ಬಹು ಬೇಗನೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

                           7. ಎಪಿಸೋಮ್ ಸಾಲ್ಟ್

                          7. ಎಪಿಸೋಮ್ ಸಾಲ್ಟ್

                          ಬೇಕಾಗಿರುವ ಸಾಮಾಗ್ರಿಗಳು

                          • 1 ಕಪ್ ಎಪಿಸೋಮ್ ಸಾಲ್ಟ್
                          • ಸ್ನಾನ ಮಾಡಲು ನೀರು
                          • ಇದರ ಬಳಕೆ ಹೇಗೆ ?

                            • ಮೊದಲು ನೀವು ಸ್ನಾನ ಮಾಡಲು ಉಗುರು ಬೆಚ್ಚಗಿನ ನೀರನ್ನು ಸಿದ್ಧಪಡಿಸಿಕೊಳ್ಳಿ
                            • ಇದಕ್ಕೆ 1 ಕಪ್ ಎಪಿಸೋಮ್ ಸಾಲ್ಟ್ ಹಾಕಿ ಅದು ಕರಗುವವರೆಗೆ ಚೆನ್ನಾಗಿ ಕದಡಿ.
                            • ನಿಮ್ಮ ದೇಹದ ಚರ್ಮವನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ಈ ನೀರಿನಲ್ಲಿ ಚೆನ್ನಾಗಿ ನೆನೆಸಿ.
                            • ಇದರಿಂದ ನಿಮ್ಮ ದೇಹದ ಮಾಂಸ ಖಂಡಗಳು ವಿಶ್ರಾಂತ ಸ್ಥಿತಿಗೆ ಬರುತ್ತವೆ
                            • ಬಹಳ ಬೇಗನೆ ನಿರೀಕ್ಷಿತ ಫಲಿತಾಂಶ ಲಭ್ಯ ಆಗಬೇಕಾದರೆ ಕನಿಷ್ಠ ವಾರಕ್ಕೆ ಎರಡರಿಂದ ಮೂರು ಬಾರಿ ಎಪಿಸೋಮ್ ಸಾಲ್ಟ್ ಬಾತ್ ಮಾಡಬೇಕು.
                            • ಇದು ಹೇಗೆ ಕೆಲಸ ಮಾಡುತ್ತದೆ ?

                              ಎಪ್ಸನ್ ಸಾಲ್ಟ್ ತನ್ನಲ್ಲಿ ಮೆಗ್ನೀಷಿಯಂ ಅಂಶವನ್ನು ಹೊಂದಿದ್ದು ತನ್ನ ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳಿಂದ ಮನುಷ್ಯನ ದೇಹದ ಯಾವುದೇ ನೋವು ಮತ್ತು ಉರಿಯೂತವನ್ನು ಬಹಳ ಬೇಗನೆ ಕಡಿಮೆಗೊಳಿಸುತ್ತದೆ. ಎಪಿಸೋಮ್ ಸಾಲ್ಟ್ ಬಾತ್ ಮಾಡುವುದರಿಂದ ನಿಮ್ಮ ದೇಹದ ಚರ್ಮ ಮೆಗ್ನೀಶಿಯಮ್ ಅಂಶವನ್ನು ಬಹಳಷ್ಟು ಹೀರಿಕೊಂಡು, ನಿಮ್ಮ ಕುತ್ತಿಗೆ ಭಾಗದಲ್ಲಿ ಸೆಟೆದುಕೊಂಡ ನರ ಉಂಟು ಮಾಡಿದ ನೋವು ಮತ್ತು ಉರಿಯೂತವನ್ನು ಶೀಘ್ರವಾಗಿ ಗುಣ ಪಡಿಸುತ್ತದೆ.

                              8. ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ

                              8. ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ

                              ಬೇಕಾಗಿರುವ ಸಾಮಾಗ್ರಿಗಳು

                              • ಅರ್ಧದಿಂದ ಒಂದು ಟೇಬಲ್ ಚಮಚದಷ್ಟು ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ.
                              • ಬಿಸಿ ಶಾಖ.
                              • ಏನು ಮಾಡಬೇಕು?

                                • ಸ್ವಲ್ಪ ಹರಳೆಣ್ಣೆಯನ್ನು ಬಿಸಿ ಮಾಡಿ ನಿಮ್ಮ ಕೈಗಳಿಂದ ತೆಗೆದುಕೊಂಡು ನೋವು ಉಂಟಾಗುತ್ತಿರುವ ಜಾಗಕ್ಕೆ ಹಚ್ಚಿ
                                • ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ
                                • ನೋವಿರುವ ಜಾಗಕ್ಕೆ ಬಿಸಿ ಶಾಖ ಕೊಟ್ಟು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಇರಲು ಬಿಡಿ.
                                • ಹರಳೆಣ್ಣೆಯ ಬಳಕೆ ಮಾಡುತ್ತಾ ಹೋದಂತೆ ನೋವು ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ಒಂದು ದಿನಕ್ಕೆ ಎರಡರಿಂದ ಮೂರು ಬಾರಿ ಈ ಪ್ರಯೋಗವನ್ನು ಪ್ರಯತ್ನಿಸಿ.
                                • ಇದು ಹೇಗೆ ಕೆಲಸ ಮಾಡುತ್ತದೆ?

                                  ಹರಳೆಣ್ಣೆ ತನ್ನಲ್ಲಿ ಸದಾ ಇರುವ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಮತ್ತು ಮಾಂಸಖಂಡಗಳನ್ನು ವಿಶ್ರಾಂತ ಗೊಳಿಸುವ ಸ್ವಭಾವಗಳಿಂದ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ನಗರ ಪ್ರದೇಶಗಳಲ್ಲಿ ಸಹ ಇದರ ಉಪಯೋಗ ಹೆಚ್ಚಾಗಿದೆ. ಇದಕ್ಕೆ ಕಾರಣ ಹರಳೆಣ್ಣೆ ಯಲ್ಲಿರುವ ರೈಸಿನೋಲಿಕ್ ಆಸಿಡ್ ಆದ್ದರಿಂದ ಹರಳೆಣ್ಣೆಯ ಉಪಯೋಗದಿಂದ ಮಸಾಜ್ ಮಾಡಿದ ನೋವಿರುವ ಭಾಗ ಬಹಳ ಬೇಗನೆ ಸೆಟೆದುಕೊಂಡಿರುವ ನರಗಳನ್ನು ಸರಿಪಡಿಸಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.

                                  9. ವ್ಯಾಯಾಮಗಳು

                                  9. ವ್ಯಾಯಾಮಗಳು

                                  ಸೆಟೆದುಕೊಂಡಿರುವ ನರಗಳಿಗೆ ಯಾವ ರೀತಿಯ ವ್ಯಾಯಾಮ ಅಗತ್ಯ?

                                  ನಿಧಾನವಾಗಿ ನಿಮ್ಮ ಕುತ್ತಿಗೆ ಭಾಗವನ್ನು ಪ್ರದಕ್ಷಿಣಾಕಾರವಾಗಿ ಮತ್ತು ವಿರುದ್ಧ ದಿಕ್ಕಿನಲ್ಲಿ ಸುತ್ತಲೂ ತಿರುಗಿಸಿ.

                                  ಬೇಕಾದರೆ ನಿಮ್ಮ ಕುತ್ತಿಗೆಯನ್ನು ಹಿಂದೆ ಮತ್ತು ಮುಂದೆ ಅಕ್ಕಪಕ್ಕಗಳಲ್ಲಿ ನಿಧಾನವಾಗಿ ಆಡಿಸಬಹುದು. ಇದರಿಂದ ನಿಮ್ಮ ಕುತ್ತಿಗೆಯ ಭಾಗದ ನರಗಳು ಸಡಿಲಗೊಂಡು ನೋವು ನಿವಾರಣೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತವೆ.

                                  ಸುಮಾರು 15 ರಿಂದ 20 ಬಾರಿ ಕುತ್ತಿಗೆಯನ್ನು ಅತ್ತಿತ್ತ, ಹಿಂದೆ ಮುಂದೆ ಮತ್ತು ಸುತ್ತಮುತ್ತಲು ಆಡಿಸಬೇಕು

                                  ಇದರಿಂದ ಏನು ಉಪಯೋಗ?

                                  ನಿಮ್ಮ ಕುತ್ತಿಗೆ ಭಾಗವನ್ನು ಆಕಡೆ ಈಕಡೆ ಆಡಿಸುವುದರಿಂದ ಮಾಂಸ ಖಂಡಗಳು ಹಿಡಿದುಕೊಂಡಂತೆ ಆಗಿದ್ದರೆ ಅವುಗಳನ್ನು ಸಡಿಲಗೊಳಿಸಿ ಕುತ್ತಿಗೆಯ ಭಾಗದಲ್ಲಿ ಯಾವುದೇ ನರಗಳು ಸೆಟೆದುಕೊಂಡು ರಕ್ತ ಸಂಚಾರವಿಲ್ಲದೆ ಹಾಗೆ ಇದ್ದರೆ ಅವುಗಳನ್ನು ಬಿಡುಗಡೆಗೊಳಿಸಿ ಮತ್ತೆ ರಕ್ತಸಂಚಾರ ಉಂಟಾಗುವಂತೆ ಏರ್ಪಡಿಸುತ್ತದೆ.

                                  10. ಯೋಗ

                                  10. ಯೋಗ

                                  ಯೋಗ ಹೇಗೆ ಮಾಡಬೇಕು?

                                  ಕುತ್ತಿಗೆಯ ಭಾಗದ ನರಗಳ ನೋವಿನ ನಿವಾರಣೆಗೆ ಉಪಯೋಗವಾಗುವಂತಹ ಕೆಲವೊಂದು ಯೋಗಾಭ್ಯಾಸಗಳು ಎಂದರೆ ಕೋಬ್ರಾ ಭಂಗಿ, ವಿಸ್ತರಿಸಿದ ಸೈಡ್ ಆಂಗಲ್ ಭಂಗಿ, ಫಿಶ್ ಭಂಗಿ ಮತ್ತು ಕೆಳಾಭಿಮುಖವಾದ ಡಾಗ್ ಭಂಗಿ.

                                  ಮೇಲೆ ತಿಳಿಸಿದ ಎಲ್ಲಾ ಭಂಗಿಗಳನ್ನು ಒಂದೊಂದು ಪೋಸ್ ಗೆ ಹತ್ತರಿಂದ ಹದಿನೈದು ಸೆಕೆಂಡ್ ಗಳಷ್ಟು ಕಾಲಾವಕಾಶ ಮಾಡಿ.

                                  ಇದು ಹೇಗೆ ಕೆಲಸ ಮಾಡುತ್ತದೆ?

                                  ಯೋಗ ಮಾಡುವುದರಿಂದ ಕುತ್ತಿಗೆಯ ಭಾಗದಲ್ಲಿರುವ ಮಾಂಸ ಖಂಡಗಳು ವಿಸ್ತರಿಸಿಕೊಳ್ಳುತ್ತದೆ ಇದರಿಂದ ಮೊದಲೇ ಸೆಟೆದುಕೊಂಡು ಇರುವ ನರಗಳು ಬಹಳ ಬೇಗನೆ ಬಿಟ್ಟು ಕುತ್ತಿಗೆ ನೋವನ್ನು ಬಹು ಬೇಗನೆ ವಾಸಿ ಮಾಡುತ್ತದೆ. ಜೊತೆಗೆ ಯಾವ ನರಕ್ಕೆ ಹಾನಿಯಾಗಿರುವುದೋ ಅದನ್ನು ಬಹು ಬೇಗನೆ ರಕ್ತ ಸಂಚಾರವಾಗುವಂತೆ ಮಾಡಿ ಸರಿ ಪಡಿಸುತ್ತದೆ.

                                  11. ಅಕ್ಯೂಪ್ರೆಶರ್

                                  11. ಅಕ್ಯೂಪ್ರೆಶರ್

                                  ನಿಮ್ಮ ಕತ್ತಿನ ಭಾಗದಲ್ಲಿ ಹಿಡಿದುಕೊಂಡಿರುವ ನರಗಳ ನೋವನ್ನು ಬಹಳ ಬೇಗನೆ ವಾಸಿ ಮಾಡಬೇಕಾದರೆ ಆಕ್ಯುಪ್ರೆಷರ್ ತಂತ್ರಗಾರಿಕೆಯನ್ನು ಅನುಸರಿಸುವುದು ಒಳ್ಳೆಯದು. ಈ ತಂತ್ರದಲ್ಲಿ ದೇಹದ ಮೇಲೆ ಗುರುತಿಸಲಾದ ಕೆಲವೊಂದು ಪ್ರೆಷರ್ ಪಾಯಿಂಟ್ಸ್ ಕಂಡು ಹಿಡಿದು ಅವುಗಳ ಮೇಲೆ ಒತ್ತಡವನ್ನು ಹೇರಲಾಗುತ್ತದೆ. ಇದು ಕೇವಲ ನೋವಿನ ನಿವಾರಣೆ ಮಾಡುವುದಲ್ಲದೆ ನರಗಳ ಹಾನಿಯನ್ನು ತಪ್ಪಿಸಿ ಮತ್ತೊಮ್ಮೆ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸರಿ ಪಡಿಸುತ್ತದೆ.

English summary

Home Remedies For Pinched Nerve in Neck

Here we are going to tell you home remedies for pinched nerve. How To Fix A Pinched Nerve In The Neck Read more.
X
Desktop Bottom Promotion