Just In
Don't Miss
- News
'ರಫೇಲ್' ಖ್ಯಾತಿಯ ಬಿಲಿಯನೇರ್ ಒಲಿವರ್ ಡಸಾಲ್ಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ
- Movies
ಬಿಗ್ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಸತು ಹೇಗೆ ಸಹಕಾರಿ?
ಕೋವಿಡ್ 19 ಎಂಬ ಸಾಂಕ್ರಾಮಿಕ ರೋಗ ಬಂದಾಗಿನಿಂದ ಜನರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಕೊರೊನಾ ಸೋಂಕಿ ತಗುಲಿದ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕುಂಠಿತವಾಗಿರುವುದಾಗಿ ಅಧ್ಯಯನಗಳು ಹೇಳಿದ್ದೆವು. ಇದೀಗ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಏನು ಮಾಡಬೇಕೆಂದು ಹೊಸ ಅಧ್ಯಯನಗಳು ಹೇಳಿವೆ.
ಮಗುವಿನ ಅಪೇಕ್ಷಿತ ದಂಪತಿ ಜಿಂಕ್ (ಸತು) ಸಪ್ಲಿಮೆಂಟ್ ತೆಗೆದುಕೊಳ್ಳುವುದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಾಗುವುದು ಎಂದು ವರದಿಗಳು ಹೇಳಿವೆ. ಸತು ವೀರ್ಯಾಣು ಹಾಗೂ ಅಂಡಾಣುವಿಗೆ ಹಾನಿಯುಂಟಾಗುವುದನ್ನು ತಪ್ಪಿಸುತ್ತದೆ.
Wayne State University School of Medicine ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ಈ ಅಂಶ ತಿಳಿದು ಬಂದಿದ್ದು, ಸತು ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಎಷ್ಟು ಪ್ರಮಾಣದಲ್ಲಿ ಸತು ಸಪ್ಲಿಮೆಂಟ್ ತೆಗೆದುಕೊಳ್ಳಬೇಕು?
ಈ ಅಧ್ಯಯನ ಪ್ರಕಾರ ಸತುವಿನ ಸಪ್ಲಿಮೆಂಟ್ ದಿನಕ್ಕೆ 50 ಮಿಗ್ರಾಂನಷ್ಟು ತೆಗೆದುಕೊಳ್ಳಬೇಕು. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯಲ್ಲಿ ಅತಿಯಾದ ಪ್ರತಿಕ್ರಿಯೆಯಿಂದಾಗಿ ಉರಿಯೂತ, ನರಗಳಿಗೆ ಹಾನಿ, ಅಂಗಾಂಗ ವೈಫಲ್ಯ ಮುಂತಾದ ಸಮಸ್ಯೆ ಉಂಟಾಗುವುದು, ಇದನ್ನು ತಡೆಗಟ್ಟುವಲ್ಲಿ ಸತು ಸಪ್ಲಿಮೆಂಟ್ ಸಹಾಯ ಮಾಡುತ್ತೆ. ಸತು ಮೈಟೊಕಾಂಡ್ರಿಯಕ್ಕೆ ಹಾನಿಯುಂಟಾಗುವುದನ್ನು ತಡೆಗಟ್ಟಿ ವೀರ್ಯಾಣು ಹಾಗೂ ಅಂಡಾಣುಗಳಿಗೆಆಮ್ಲಜನಕ ಪೂರೈಕೆಯಾಗುವಂತೆ ಮಾಡಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.

ಸತು ಸಪ್ಲಿಮೆಂಟ್ ಮಾತ್ರದಿಂದ ಹಾನಿಗೊಳಗಾದ ಜೀವ ಕಣಗಳನ್ನು ಸರಿಪಡಿಸಬಹುದೇ?
ಒಂದು ವೇಳೆ ಆಕ್ಸಿಡೇಟಿವ್ ಕಣಗಳಿಗೆ ಹಾನಿಯುಂಟಾಗಿದ್ದರೆ ಸತು ಸಪ್ಲಿಮೆಂಟ್ ಮಾತ್ರದಿಂದ ಈ ಹಾನಿ ಸರಿಪಡಿಸಲು ಸಾಧ್ಯವಿಲ್ಲ. ಕೋವಿಡ್ 19 ಸೋಂಕಿನಿಂದಾಗಿ Cytokine storm ಹಂತ ತಲುಪುವ ಮೊದಲೇ ಸತುವಿನ ಸಪ್ಲಿಮೆಂಟ್ ತೆಗೆದುಕೊಂಡರೆ ಜೀವ ಕಣಗಳಿಗೆ ಹಾನಿಯುಂಟಾಗುವುದನ್ನು ತಪ್ಪಿಸಬಹುದು.

ಸತುವಿನಂಶವಿರುವ ಆಹಾರಗಳು
ನೀವು ಸತುವಿನಂಶ ಇರುವ ಆಹಾರ ಸೇವಿಸುವ ಮೂಲಕ ಕೂಡ ದೇಹದಲ್ಲಿ ಸತುವಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು. ಅಲ್ಲದೆ ಮಗುವಿಗೆ ಪ್ರಯತ್ನಿಸುತ್ತಿರುವವರು ನೈಸರ್ಗಿಕವಾಗಿ ಸತುವಿನಂಶ ಅಧಿಕವಿರುವ ಈ ಆಹಾರಗಳ ಸೇವನೆ ಒಳ್ಳೆಯದು.
ಮೃದ್ವಂಗಿಗಳು: 100ಗ್ರಾಂ ಮೃದ್ವಂಗಿಗಳಲ್ಲಿ 61 ಮಿಗ್ರಾಂ ಸತುವಿನಂಶ ಇರುತ್ತದೆ.
ಚಿಕನ್ ಲೆಗ್: ಚಿಕನ್ ಪ್ರಿಯರಿಗೆ ಚಿಕನ್ ಲೆಗ್ ಎಂದರೆ ತುಂಬಾನೇ ಇಷ್ಟವಿರುತ್ತೆ, 100ಗ್ರಾಂ ಚಿಕನ್ ಲೆಗ್‌ಪೀಸ್‌ನಲ್ಲಿ 2 ಮಿಗ್ರಾಂ ಸತುವಿನಂಶ ಇರುತ್ತದೆ.
ಟೋಫು: ನೀವು ವೆಜಿಟೇರಿಯನ್ ಆದರೆ ಟೋಫು ತಿನ್ನಬಹುದು. 100ಗ್ರಾಂ ಸತುವಿನಲ್ಲಿ 2 ಗ್ರಾಂ ಸತುವಿನಂಶ ಇರುತ್ತದೆ.
ಧಾನ್ಯಗಳು: 100ಗ್ರಾಂ ಧಾನ್ಯದಲ್ಲಿ 1 ಗ್ರಾಂ ನಷ್ಟು ಸತುವಿನಂಶ ಇರುತ್ತದೆ.
ಕುಂಬಳಕಾಯಿ ಬೀಜ: 100ಗ್ರಾಂ ಕುಂಬಳಕಾಯಿ ಬೀಜದಲ್ಲಿ 7.9ಗ್ರಾಂನಷ್ಟು ಸತುವಿನಂಶ ಇರುತ್ತದೆ.

ಸೂಚನೆ
ಕೊರೊನಾ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ಸತುವಿನ ಸಪ್ಲಿಮೆಂಟ್ ನೀಡಲಾಗುವುದು, ಇತ್ತೀಚಿನ ಅಧ್ಯಯನ ವರದಿ ಪ್ರಕಾರ ಸತು ಸಪ್ಲಿಮೆಂಟ್ ಪುರುಷ ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಕೂಡ ಸಹಕಾರಿಯಾಗಿದೆ. ಆದರೆ ನೀವು ಸಪ್ಲಿಮೆಂಟ್ ತೆಗೆದುಕೊಳ್ಳುವುದಾದರೆ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ತೆಗೆದುಕೊಳ್ಳಿ.
ಜಿಂಕ್ ಸಪ್ಲಿಮೆಂಟ್ ಓವರ್ ಡೋಸ್ ಆದರೆ ವಾಂತಿ, ಭೇದಿ, ಸುಸ್ತು ಮುಂತಾದ ಅಡ್ಡಪರಿಣಾಮ ಉಂಟಾಗಬಹುದು.