For Quick Alerts
ALLOW NOTIFICATIONS  
For Daily Alerts

ವಿಟಮಿನ್‌ ಸಿಯಿಂದ ಇಂಥ ದೊಡ್ಡ ಕಾಯಿಲೆಗಳನ್ನೂ ತಡೆಗಟ್ಟಬಹುದು ನೋಡಿ

|

ನಮ್ಮ ದೇಹದ ರೋಗ - ನಿರೋಧಕ ಶಕ್ತಿ ಎಂದ ತಕ್ಷಣ ನೆನಪಿಗೆ ಬರುವುದು ವಿಟಮಿನ್ ಸಿ ಅಂಶ. ಈಗಿನ ಕೊರೋನಾ ಸಮಯದಲ್ಲಿ ಬಹುಶಃ ಇದಕ್ಕಿರುವ ಮಹತ್ವ ಜಗತ್ತಿನಲ್ಲಿ ಬೇರಾವುದಕ್ಕೂ ಇಲ್ಲ ಎನಿಸುತ್ತದೆ. ಸರ್ವರಿಗೂ ಆರೋಗ್ಯವೇ ಸಕಲ ಭಾಗ್ಯ. ಶ್ರೀಮಂತರಿಗೂ ಹಾಗೂ ಬಡವರಿಗೂ ಆರೋಗ್ಯದ ವಿಚಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮನುಷ್ಯ ದಿನ ಕಳೆದಂತೆ ರೂಡಿ ಮಾಡಿಕೊಳ್ಳುವ ಜೀವನಶೈಲಿ ಆತನ ಮುಂದಿನ ಆರೋಗ್ಯವನ್ನು ನಿರ್ಧರಿಸುತ್ತದೆ. ಇಂದು ಬಹಳಷ್ಟು ಜನರು ಚಿಕ್ಕ ವಯಸ್ಸಿಗೆ ರಕ್ತದ ಒತ್ತಡ, ಮಧುಮೇಹ, ಮಾನಸಿಕ ಒತ್ತಡ, ಮನಸಿಕ ಖಿನ್ನತೆ, ಮೂಳೆಗಳಿಗೆ ಸಂಬಂಧ ಪಟ್ಟ ಕಾಯಿಲೆಗಳು, ಕೊಲೆಸ್ಟ್ರಾಲ್, ಬೊಜ್ಜು ಇತ್ಯಾದಿಗಳಿಗೆ ದಾಸರಾಗುತ್ತಿದ್ದಾರೆ.

ಮಾರಕವಾಗಿ ಕಾಡುವ ಕ್ಯಾನ್ಸರ್, ಎಚ್ಐವಿ, ಈಗಿನ ಕೊರೋನದಂತಹ ಕಾಯಿಲೆಗಳು ಜನರನ್ನು ಆವರಿಸಿ ಸಾವಿಗೆ ತೀರಾ ಹತ್ತಿರದಲ್ಲಿ ಇರುವ ಬಗ್ಗೆ ಎಚ್ಚರಿಸುತ್ತಿವೆ. ಆದರೆ ಇಷ್ಟಕ್ಕೆಲ್ಲ ಬಹು ಮುಖ್ಯ ಕಾರಣ ಎಂದರೆ ದೇಹದಲ್ಲಿ ರೋಗ - ನಿರೋಧಕ ಶಕ್ತಿ ಕಡಿಮೆ ಇರುವುದು. ದುರ್ಬಲ ರೋಗ - ನಿರೋಧಕ ಶಕ್ತಿ ಹೊಂದಿರುವ ಜನರಿಗೆ ಸಣ್ಣ - ಪುಟ್ಟ ಕಾಯಿಲೆಗಳನ್ನು ಹಾಗೂ ಸೋಂಕುಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪೌಷ್ಟಿಕ ಸತ್ವಗಳನ್ನು ಒಳಗೊಂಡ ಆಹಾರಗಳನ್ನು ಸೇವಿಸುವ ಮೂಲಕ ಆರೋಗ್ಯಕರವಾದ ಜೀವನ ನಡೆಸಬಹುದು.

ನಮಗೆ ಆಹಾರಗಳ ಮೂಲಕ ಸಿಗುವ ಸಾಕಷ್ಟು ಪೌಷ್ಟಿಕಾಂಶಗಳ ನಡುವೆ ವಿಟಮಿನ್ ಸಿ ಅಂಶ ನಮ್ಮ ದೇಹದ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ. ಇಂದಿನ ಅನಾರೋಗ್ಯಕರ ವಾತಾವರಣದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾದಷ್ಟು ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

ನಾವು ಪ್ರತಿ ದಿನ ಹಲವಾರು ತರಕಾರಿಗಳನ್ನು, ಹಣ್ಣುಗಳನ್ನು ವಿವಿಧ ರೂಪಗಳಲ್ಲಿ ಸೇವನೆ ಮಾಡುತ್ತಲೇ ಇರುತ್ತೇವೆ. ಆದರೆ ಯಾವ ತರಕಾರಿಯಲ್ಲಿ ಯಾವ ಪೌಷ್ಟಿಕಾಂಶ ಅಡಗಿದೆ, ಯಾವ ಹಣ್ಣು ತಿಂದರೆ ನಮಗೆ ಏನು ಉಪಯೋಗ ಎಂಬುದು ನಮಗೆ ಗೊತ್ತೇ ಇರುವುದಿಲ್ಲ. ಹೀಗಿರುವಾಗ ಕೇವಲ ವಿಟಮಿನ್ ಸಿ ಅಂಶ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಹೇಗೆ ಪತ್ತೆ ಹಚ್ಚುವುದು ಎಂಬ ಗೊಂದಲ ಮನಸ್ಸಿಗೆ ಬರುತ್ತದೆ. ಚಿಂತೆ ಬೇಡ. ಈ ಲೇಖನದಲ್ಲಿ ಇದೇ ವಿಷಯದ ಬಗ್ಗೆ ಚರ್ಚೆ ಮಾಡಲಾಗಿದೆ.

ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳು

ವಿಟಮಿನ್ ಸಿ ಅಂಶವಿರುವ ಹಣ್ಣುಗಳು

ವಿಟಮಿನ್ ಸಿ ಅಂಶವಿರುವ ಹಣ್ಣುಗಳು

ನಿಂಬೆಹಣ್ಣು, ಕಿತ್ತಳೆ ಹಣ್ಣು, ನೆಲ್ಲಿಕಾಯಿ, ಮೋಸಂಬಿ ಹಣ್ಣು, ದ್ರಾಕ್ಷಿ ಹಣ್ಣು, ಸ್ಟ್ರಾಬೆರಿ ಹಣ್ಣು, ಕಿವಿ ಹಣ್ಣು, ಸೀಬೆಹಣ್ಣು, ಕರ್ಬುಜ ಹಣ್ಣು ಇತ್ಯಾದಿಗಳು

ವಿಟಮಿನ್ ಸಿ ಅಂಶವಿರುವ ತರಕಾರಿಗಳು

ವಿಟಮಿನ್ ಸಿ ಅಂಶವಿರುವ ತರಕಾರಿಗಳು

ಬ್ರೊಕೋಲಿ, ಎಲೆಕೋಸು, ಹೂಕೋಸು, ಟೊಮೆಟೊ, ಆಲೂಗಡ್ಡೆ, ಕೆಂಪು ದಪ್ಪ ಮೆಣಸಿನಕಾಯಿ, ಕೇಲ್, ಬ್ರಸೆಲ್ ಸ್ಪ್ರೌಟ್ಸ್ ಇತ್ಯಾದಿಗಳ ಜೊತೆಗೆ ಮೊಳಕೆ ಕಟ್ಟಿದ ಕಾಳುಗಳು ವಿಟಮಿನ್ ಸಿ ಅಂಶವನ್ನು ಒಳಗೊಂಡಿರುತ್ತವೆ.

ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಉಂಟಾಗುವ ಲಾಭಗಳನ್ನು ಈಗ ನೋಡೋಣ

ಅತ್ಯುತ್ತಮ ರೋಗನಿರೋಧಕ ಶಕ್ತಿ ನಿಮ್ಮದಾಗುತ್ತದೆ

ಅತ್ಯುತ್ತಮ ರೋಗನಿರೋಧಕ ಶಕ್ತಿ ನಿಮ್ಮದಾಗುತ್ತದೆ

ಸಮಾಜದಲ್ಲಿ ನಾವು ಸಹ ಇತರರಂತೆ ಆರೋಗ್ಯವಾಗಿ ಹೆಚ್ಚು ಕಾಲ ಬಾಳಬೇಕು ಎಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ಆದರೆ ಆರೋಗ್ಯವಾಗಿ ಇರುವುದಕ್ಕೆ ಅಗತ್ಯವಾಗಿ ಬೇಕಾದ ತಯಾರಿಯನ್ನು ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ವಿಟಮಿನ್ ಸಿ ಅಂಶ ಒಳಗೊಂಡ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಇದರ ನೇರವಾದ ಪರಿಣಾಮಕಾರಿ ಪ್ರಭಾವ ದೇಹದ ರೋಗ ನಿರೋಧಕ ಶಕ್ತಿಯನ್ನು ಅಂತರಿಕವಾಗಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಆಹಾರದಿಂದ ನಮ್ಮ ದೇಹ ವಿಟಮಿನ್-ಸಿ ಅಂಶವನ್ನು ಹೀರಿಕೊಂಡ ನಂತರದಲ್ಲಿ ಬಿಳಿ ರಕ್ತ ಕಣಗಳ ಉತ್ಪತ್ತಿಗೆ ಉತ್ತೇಜಿಸುತ್ತದೆ. ಜೊತೆಗೆ ರೋಗ ನಿರೋಧಕ ಜೀವ ಕೋಶಗಳನ್ನು ಅಚ್ಚುಕಟ್ಟಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ವಿಟಮಿನ್ ಸಿ ಅಂಶ ಸ್ವತಹ 18 ಆಕ್ಸಿಡೆಂಟ್ ಅಂಶವಾಗಿ ಕೆಲಸ ಮಾಡುವುದರಿಂದ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ಕಾರಣದಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡಕ್ಕೆ ನಿಯಂತ್ರಣ ಹಾಕಿ ದೇಹದ ಮೇಲೆ ಉಂಟಾಗುವ ಗಾಯಗಳಿಗೆ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕು ತಾಗದಂತೆ ಎಚ್ಚರವಹಿಸಿ ಗಾಯಗಳ ಭಾಗಕ್ಕೆ ಬಿಳಿರಕ್ತಕಣಗಳನ್ನು ಬಿಡುಗಡೆ ಮಾಡಿ ರಕ್ಷಣೆ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಕೋಮಲವಾದ ಹಾಗೂ ಸುಂದರವಾದ ತ್ವಚೆಯನ್ನು ಯಾವಾಗಲೂ ಹೊಂದಿರಲು ಆರೋಗ್ಯಕರವಾದ ಆಹಾರ ಸೇವನೆಗೆ ಪ್ರಮುಖ ಆದ್ಯತೆ ಕೊಡಬೇಕು. ವಿಟಮಿನ್ ಸಿ ಅಂಶ ಒಳಗೊಂಡ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹೊರಗಿನ ವಾತಾವರಣ ಬದಲಾವಣೆಯಿಂದ ಚರ್ಮದ ಆರೋಗ್ಯದ ಮೇಲೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಏಕೆಂದರೆ ವಿಟಮಿನ್ ಸಿ ಅಂಶ ಚರ್ಮದ ಅಲರ್ಜಿಗಳನ್ನು ದೂರ ಮಾಡುವ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸೋಂಕುಗಳು ಹತ್ತಿರ ಬರದಂತೆ ನೋಡಿಕೊಳ್ಳುತ್ತದೆ.

ಅಸ್ತಮಾ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ

ಅಸ್ತಮಾ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ

ಒಬ್ಬ ಮನುಷ್ಯ ಯಾವಾಗಲೂ ಕೆಮ್ಮುತ್ತಿದ್ದರೆ, ಆತನಿಗೆ ಅಸ್ತಮಾ ಸಮಸ್ಯೆ ಇರಬಹುದು ಎಂದು ಊಹಿಸಬಹುದು. ಒಳ್ಳೆಯ ಆಹಾರ ಪದ್ಧತಿಯಿಂದ ಅಸ್ತಮ ಸಮಸ್ಯೆಯನ್ನು ನಿಯಂತ್ರಣ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವಿಟಮಿನ್ ಸಿ ಅಂಶ ಒಳಗೊಂಡ ಆಹಾರಗಳನ್ನು ಸೇವನೆ ಮಾಡುವುದರಿಂದ ಅಸ್ತಮಾ ಸಮಸ್ಯೆಗೆ ಕಾರಣವಾಗುವ ಉರಿಯೂತವನ್ನು ನಿಯಂತ್ರಣ ಮಾಡಿಕೊಳ್ಳಬಹುದಾದ ಸಾಧ್ಯತೆ ಇದೆ.

ಶೀತಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ

ಶೀತಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ

ಮಳೆಗಾಲದಲ್ಲಿ ಉಂಟಾಗುವ ಸಾಮಾನ್ಯ ಶೀತದ ಪ್ರಭಾವದಿಂದ ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ. ಶೀತ ನೆಗಡಿ ಇವೆಲ್ಲವೂ ನೋಡಲು ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಂತೆ ಕಂಡರೂ ಸಹ ನಿರ್ಲಕ್ಷತೆ ಮಾಡಿದರೆ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳಿಗೆ ತಿರುಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರಂಭದಲ್ಲಿ ಇವುಗಳಿಗೆ ಕಡಿವಾಣ ಹಾಕಬೇಕು ಎಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲವಾಗಿರಬೇಕು. ಮಳೆಗಾಲದ ಹಲವಾರು ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ನಮಗೆ ಬರಬೇಕು ಎಂದರೆ ನಾವು ವಿಟಮಿನ್ ಸಿ ಅಂಶ ಒಳಗೊಂಡ ಆಹಾರಗಳನ್ನು ಹೆಚ್ಚು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

ಮೂತ್ರನಾಳದ ಸೋಂಕಿನ ವಿರುದ್ಧ ಹೋರಾಡುತ್ತದೆ

ಮೂತ್ರನಾಳದ ಸೋಂಕಿನ ವಿರುದ್ಧ ಹೋರಾಡುತ್ತದೆ

ಪುರುಷರಿಗೆ ಹೋಲಿಸಿದರೆ ಮಹಿಳೆಯರ ಆರೋಗ್ಯದಲ್ಲಿ ದೇಹದಲ್ಲಿ ಆಗುವ ಕೆಲವೊಂದು ಹಾರ್ಮೋನುಗಳ ಕಾರಣದಿಂದ ಸಾಕಷ್ಟು ಏರುಪೇರು ಕಂಡುಬರುತ್ತದೆ. ಮಹಿಳೆಯರು ತಮ್ಮ ಆಹಾರಪದ್ಧತಿಯಲ್ಲಿ ಹೆಚ್ಚು ಜಾಗರೂಕತೆ ವಹಿಸಬೇಕು. ಪ್ರತಿ ದಿನ ನಿಯಮಿತವಾಗಿ ವಿಟಮಿನ್ ಸಿ ಅಂಶವನ್ನು ಹೊಂದಿದ ಆಹಾರಗಳನ್ನು ಸೇವನೆ ಮಾಡುವುದರಿಂದ ಮೂತ್ರನಾಳದ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸಲು ಅನುಕೂಲವಾಗುತ್ತದೆ. ಇದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಯೋನಿಯ ಭಾಗದಲ್ಲಿ ಅತಿ ಹೆಚ್ಚು ಉರಿ ಮತ್ತು ನೋವು ಉಂಟಾಗುವ ಸಾಧ್ಯತೆ ತಪ್ಪುತ್ತದೆ.

 ಪಾರ್ಶ್ವವಾಯು ಕಂಡು ಬರುವ ಸಾಧ್ಯತೆ ಕಡಿಮೆಯಾಗುತ್ತದೆ

ಪಾರ್ಶ್ವವಾಯು ಕಂಡು ಬರುವ ಸಾಧ್ಯತೆ ಕಡಿಮೆಯಾಗುತ್ತದೆ

ಪಾರ್ಶ್ವವಾಯು ಸಮಸ್ಯೆ ಮನುಷ್ಯನ ದೇಹದಲ್ಲಿ ನಡೆಯುವ ರಕ್ತ ಸಂಚಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳುತ್ತಾರೆ. ರಕ್ತದೊತ್ತಡ ಸಮಸ್ಯೆ ಇರುವವರಿಗೆ ಯಾವುದೇ ಸಂದರ್ಭದಲ್ಲಿ ಮೆದುಳಿನ ಭಾಗಕ್ಕೆ ರಕ್ತಸಂಚಾರ ಇಲ್ಲವಾಗದೆ ಹೋಗಬಹುದು. ಈ ಸಂದರ್ಭದಲ್ಲಿ ಪಾರ್ಶ್ವವಾಯು ಉಂಟಾಗುತ್ತದೆ. ಆದರೆ ಆಗಾಗ ವಿಟಮಿನ್ ಸಿ ಅಂಶ ಇರುವ ಆಹಾರಗಳನ್ನು ತಿನ್ನುತ್ತಿದ್ದರೆ ಇಂತಹ ಒಂದು ಸಂದರ್ಭವನ್ನು ತಂದುಕೊಳ್ಳುವ ಸಾಧ್ಯತೆ ಇರುವುದಿಲ್ಲ.

ಇದರ ಜೊತೆಗೆ ವಯಸ್ಸಾದವರಲ್ಲಿ ಕಂಡುಬರುವ ಕಣ್ಣಿನ ಪೊರೆ ಸಮಸ್ಯೆ, ಮಾರಕ ಕ್ಯಾನ್ಸರ್ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ವಿಟಮಿನ್ ಸಿ ಅಂಶ ನೈಸರ್ಗಿಕ ಔಷಧಿಯ ರೂಪದಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಆಹಾರ ಪದ್ಧತಿಯಲ್ಲಿ ವಿಟಮಿನ್-ಸಿ ಅಂಶವನ್ನು ಸೇರಿಸಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

English summary

Health Benefits Of Vitamin C In Kannada

Vitamin c helps to cure and protect from many disease. here is health benefits of vitamin c read on....
Story first published: Saturday, June 26, 2021, 14:58 [IST]
X
Desktop Bottom Promotion