For Quick Alerts
ALLOW NOTIFICATIONS  
For Daily Alerts

ಬಿಸಿಹಾಲಿಗೆ ಬೆಲ್ಲ ಹಾಕಿ ಕುಡಿದರೆ ತೂಕ ಇಳಿಸಬಹುದಂತೆ..!

|

ನಮ್ಮ ರೋಗ ನಿರೋಧಕ ಶಕ್ತಿ ಬಹಳವಾಗಿ ಕ್ಷೀಣಿಸುವ ಸಮಯವೇ ಚಳಿಗಾಲ ಹಾಗೂ ಮಳೆಗಾಲ. ಈ ಸಮಯದಲ್ಲಿ ಋತುವಿನ ಪರಿಣಾಮದಿಂದ ದುರ್ಬಲ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ದೇಹವು ಅನೇಕ ರೋಗಗಳಿಗೆ ಸುಳಿಯುತ್ತದೆ.

123

ಅಂತಹ ಪರಿಸ್ಥಿತಿಯಲ್ಲಿ, ನಮ್ಮ ದೇಹವನ್ನು ಬೆಚ್ಚಗಾಗಿಸುವುದು ಮತ್ತು ಅದಕ್ಕಾಗಿ ಮನೆಮದ್ದುಗಳ ಆಯ್ಕೆ ಮಾಡುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಬೆಲ್ಲ ಕೂಡ ಬೆಚ್ಚಗಾಗುವ ಅಂಶಗಳಲ್ಲಿ ಒಂದಾಗಿದ್ದು ಅದನ್ನು ಹಾಲಿನ ಜತೆ ಮಿಶ್ರಣ ಮಾಡಿ ಸೇವಿಸಿದರೆ ಬಹಳ ಪ್ರಯೋಜನಕಾರಿ ಎನ್ನುತ್ತಾರೆ ವೈದ್ಯರು.

ಬೆಲ್ಲದ ಹಾಲು ಚಳಿಗಾಲದಲ್ಲಿ ಏಕೆ ಸೇವಿಸಬೇಕು, ಇದು ಯಾವೆಲ್ಲಾ ಅನಾರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತದೆ ಮುಂದೆ ನೋಡೋಣ:

ತೂಕ ನಷ್ಟಕ್ಕೆ ಸಹಾಯ

ತೂಕ ನಷ್ಟಕ್ಕೆ ಸಹಾಯ

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಬೆಲ್ಲವನ್ನು ಹಾಲಿನೊಂದಿಗೆ ಸೇವಿಸಬಹುದು. ಬೆಲ್ಲದ ಹಾಲು ನಿಮಗೆ ತುಂಬಾ ಪ್ರಯೋಜನಕಾರಿ. ಹಾಲಿನಲ್ಲಿ ಕ್ಯಾಲ್ಸಿಯಂ ಇದ್ದರೆ ಮತ್ತೊಂದೆಡೆ ಪೊಟ್ಯಾಸಿಯಮ್ ಇರುತ್ತದೆ. ಈ ಎರಡೂ ಅಂಶಗಳು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಬ್ಬಿಣದ ಕೊರತೆ ದೂರವಾಗುತ್ತದೆ

ಕಬ್ಬಿಣದ ಕೊರತೆ ದೂರವಾಗುತ್ತದೆ

ಬೆಲ್ಲ ಮತ್ತು ಹಾಲಿನ ಸೇವನೆಯು ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ. ಬೆಲ್ಲದಲ್ಲಿ ಕಬ್ಬಿಣಾಂಶವು ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ, ಈ ರೀತಿಯಾಗಿ ನೀವು ಈ ಹಾಲನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸಬಹುದು.

ಬಲವಾದ ಪ್ರತಿರಕ್ಷಣಾ ವ್ಯವಸ್ಥೆ

ಬಲವಾದ ಪ್ರತಿರಕ್ಷಣಾ ವ್ಯವಸ್ಥೆ

ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೀವು ಬೆಲ್ಲ ಮತ್ತು ಹಾಲನ್ನು ಸೇವಿಸಬಹುದು. ಈ ಕಾರಣದಿಂದ ನಿಮ್ಮ ದೇಹದಲ್ಲಿ ಯಾವುದೇ ಸೋಂಕು ಇರುವುದಿಲ್ಲ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯೂ ಬಲವಾಗಿರುತ್ತದೆ.

ಮಲಬದ್ಧತೆ ತೊಡೆದುಹಾಕಲು

ಮಲಬದ್ಧತೆ ತೊಡೆದುಹಾಕಲು

ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಬೆಲ್ಲ ಮತ್ತು ಹಾಲನ್ನು ಸೇವಿಸಬಹುದು. ಈ ಮಿಶ್ರಣವು ಅಜೀರ್ಣ ಸಮಸ್ಯೆಯಿಂದಲೂ ನಿಮಗೆ ಪರಿಹಾರವನ್ನು ನೀಡುತ್ತದೆ. ಮಲಬದ್ಧತೆಯನ್ನು ಬಹಳ ಬೇಗೆ ನಿಯಂತ್ರಿಸುತ್ತದೆ.

ಹೊಟ್ಟೆ ಸೆಳೆತ

ಹೊಟ್ಟೆ ಸೆಳೆತ

ಮಹಿಳೆಯರಲ್ಲಿ ಋತುಚಕ್ರದಿಂದ ಉಂಟಾಗುವ ನೋವನ್ನು ನಿವಾರಿಸಲು ನೀವು ಬೆಲ್ಲದ ಹಾಲನ್ನು ಸೇವಿಸಬಹುದು. ಇದು ನಿಮ್ಮ ಹೊಟ್ಟೆಯಲ್ಲಿನ ಸೆಳೆತದ ಸಮಸ್ಯೆಯನ್ನು ಸಹ ತೆಗೆದುಹಾಕುತ್ತದೆ.

ಹೊಟ್ಟೆಯ ಹುಳುಗಳು ಗುಣವಾಗುತ್ತವೆ

ಹೊಟ್ಟೆಯ ಹುಳುಗಳು ಗುಣವಾಗುತ್ತವೆ

ನಿಮ್ಮ ಕರುಳಿನಲ್ಲಿ ಹುಳುಗಳಿದ್ದರೆ ಬೆಲ್ಲದ ಹಾಲನ್ನು ಸೇವಿಸಬಹುದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ.

ಚರ್ಮವು ಆರೋಗ್ಯಕರವಾಗಿರಿಸುತ್ತೆ

ಚರ್ಮವು ಆರೋಗ್ಯಕರವಾಗಿರಿಸುತ್ತೆ

ಬೆಲ್ಲ ಮತ್ತು ಹಾಲನ್ನು ಸೇವಿಸಿ, ನಿಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ. ಹಾಲಿನ ಈ ಮಿಶ್ರಣವು ನಿಮ್ಮನ್ನು ಯೌವನವಾಗಿರಿಸುತ್ತದೆ. ವಯಸ್ಸಾಗವ ಲಕ್ಷಣಗಳನ್ನು ಕಡಿಮೆ ಮಾಡಲು ಬೆಲ್ಲದ ಹಾಲನ್ನು ಸೇವಿಸಬಹುದು.

ನೆನಪಿರಲಿ ಈ ಆರೋಗ್ಯ ಸಮಸ್ಯೆ ಇರುವವರು ಈ ಹಾಲು ಕುಡಿಯಬಾರದು

ನೆನಪಿರಲಿ ಈ ಆರೋಗ್ಯ ಸಮಸ್ಯೆ ಇರುವವರು ಈ ಹಾಲು ಕುಡಿಯಬಾರದು

ಮಧುಮೇಹಿಗಳು

ನೀವು ಮಧುಮೇಹಿಗಳಾಗಿದ್ದರೆ, ಬೆಲ್ಲವನ್ನು ಸೇವಿಸಬೇಡಿ. ಬೆಲ್ಲವನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು, ಇದು ನಿಮ್ಮ ಸಮಸ್ಯೆಯನ್ನೂ ಹೆಚ್ಚಿಸುತ್ತದೆ.

ಮೂಗಿನಿಂದ ರಕ್ತ ಬರಬಹುದು

ಮೂಗಿನಿಂದ ರಕ್ತ ಬರಬಹುದು

ಬೆಲ್ಲದ ಪರಿಣಾಮವು ಬಿಸಿಯಾಗಿರುತ್ತದೆ, ಆದ್ದರಿಂದ ಹೆಚ್ಚು ಹಾಲನ್ನು ಸೇವಿಸಬೇಡಿ. ಹೆಚ್ಚು ಹಾಲು ಸೇವಿಸುವುದರಿಂದ ಮೂಗಿನಿಂದ ರಕ್ತಸ್ರಾವವೂ ಉಂಟಾಗುತ್ತದೆ.

ಬೊಜ್ಜು ಹೆಚ್ಚಾಗಬಹುದು

ಬೊಜ್ಜು ಹೆಚ್ಚಾಗಬಹುದು

ಬೆಲ್ಲವನ್ನು ಅತಿಯಾಗಿ ತಿನ್ನುವುದರಿಂದ ನಿಮ್ಮ ತೂಕವನ್ನು ಹೆಚ್ಚಿಸಬಹುದು. ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಬೊಜ್ಜು ಹೆಚ್ಚಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ಹಾಲನ್ನು ಸೇವಿಸಬಾರದು.

English summary

Health Benefits of Drinking Jaggery with Hot Milk, Uses And Side Effects in Kannada

Here we are discussing about Health Benefits of Drinking Jaggery with Hot Milk, Uses And Side Effects in Kannafda. Read more.
X
Desktop Bottom Promotion