For Quick Alerts
ALLOW NOTIFICATIONS  
For Daily Alerts

9-14 ಪ್ರಾಯದ ವಿದ್ಯಾರ್ಥಿನಿಯರಿಗೆ HPV ಲಸಿಕೆ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಈ ಪ್ರಾಯದಲ್ಲಿಯೇ ತೆಗೆದುಕೊಳ್ಳಬೇಕು, ಏಕೆ

|

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ 9-14ರ ಪ್ರಾಯದ ಬಾಲಕಿಯರಿಗೆ ಶಾಲೆಯಲ್ಲಿಯೇ ಲಸಿಕೆ ನೀಡಲಾಗುವುದು. ಈ ನಿರ್ಧಾರವನ್ನು ರಾಷ್ಟ್ರೀಯ ತಾಂತ್ರಿಕ ಲಸಿಕೆ ಸಲಹಾ ಗುಂಪು (ಎನ್‌ಟಿಎಜಿಐ), ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ(ಯುಐಪಿ)ದಡಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

Govt to provide cervical cancer vaccine to girls aged 9 to 14 in schools; Know details in kannada

ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ 9-14 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರಿಗೆ ಎಚ್ ಪಿವಿ ಲಸಿಕೆಯನ್ನು( Human Papillomavirus (HPV)ನೀಡಲು ಶಿಫಾರಸು ಮಾಡಿದೆ. ಈ ಲಸಿಕೆಯನ್ನು ಹೆಣ್ಮಕ್ಕಳಿಗೆ 9ನೇ ವಯಸ್ಸಿನಿಂದ ನೀಡಬೇಕೆಂದು ತೀರ್ಮಾನಿಸಿದೆ.

5ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಗುತ್ತಿದೆ

ಲಸಿಕೆಯನ್ನು ಪ್ರಾಥಮಿಕವಾಗಿ ಶಾಲೆಗಳ ಮೂಲಕ ಒದಗಿಸಲಾಗುವುದು. ಈ ಸಮಯದಲ್ಲಿ ಶಾಲೆಗೆ ಹಾಜರಾಗದ ವಿದ್ಯಾರ್ಥಿನಿಯರು ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ಪಡೆಯಬಹುದು. ಇನ್ನು ಶಾಲೆಯಿಂದ ಹೊರಗುಳಿದಿರುವ ಹುಡುಗಿಯರಿಗೆ ಆಶಾಕಾರ್ಯತರ ಮೂಲಕ ಗುರುತಿಸಿ ಲಸಿಕೆಯನ್ನು ನೀಡಲಾಗುವುದು.
ಎಚ್ ಪಿವಿ ಲಸಿಕೆ ಪ್ರಾಮುಖ್ಯತೆಯ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿದೆ.

ಮಹಿಳೆಯರನ್ನು ಕಾಡುತ್ತಿರುವ ಕಾಯಿಲೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ 4ನೇ ಸ್ಥಾನದಲ್ಲಿದೆ

ಕೇಂದ್ರ ಶಿಕ್ಷಣ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಜಂಟಿಯಾಗಿ ಬರೆದಿರುವ ಪತ್ರದಲ್ಲಿ ಈ ಲಸಿಕೆ ಏಕೆ ಅವಶ್ಯಕ ಎಂಬುವುದರ ಬಗ್ಗೆ ಹೇಳಲಾಗಿದೆ.

ಗರ್ಭಕಂಠದ ಕ್ಯಾನ್ಸರ್ ಮಹಿಳೆಯರನ್ನು ಕಾಡುತ್ತಿರುವ 4ನೇ ಅತ್ಯಂತ ಸಾಮಾನ್ಯವಾದ ಕಾಯಿಲೆಯಾಗಿದೆ. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ.

ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಅವಶ್ಯಕ ಏಕೆ?

ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್‌ಗಳು ಹ್ಯೂಮನ್ ಪ್ಯಾಪಿಲೋಮಾ ವೈರಸ್‌ಗೆ (ಎಚ್‌ಪಿವಿ) ಸಂಬಂಧಿಸಿವೆ, ಮಹಿಳೆಯರು ವೈರಸ್‌ಗೆ ತೆರೆದುಕೊಳ್ಳುವ ಮೊದಲು ಅಂದರೆ ಬಾಲಕಿಯಾಗಿರುವಾಗಲೇ ಲಸಿಕೆಯನ್ನು ನೀಡಿದರೆ ಎಚ್‌ಪಿವಿ ಲಸಿಕೆ ಗರ್ಭಕಂಠದ ಕ್ಯಾನ್ಸರ್ ಪ್ರಕರಣ ತಡೆಗಟ್ಟಬಹುದಾಗಿದೆ.

ಗರ್ಭಕಂಠದ ಕ್ಯಾನ್ಸರ್ ಹೇಗೆ ಬರುತ್ತದೆ?

ಗರ್ಭಕಂಠದ ಕ್ಯಾನ್ಸರ್‌ ಪ್ರಮುಖವಾಗಿ ಲೈಂಗಿಕ ಸೋಂಕಿನಿಂದ ಬರುತ್ತದೆ. HPV ಅಂದರೆ human papillomaviruses ಲೈಂಗಿಕ ಸೋಂಕಿನಿಂದಾಗಿ ಬರುತ್ತದೆ. ಈ ಲೈಂಗಿಕ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುವುದು. ಮಹಿಳೆಯರಿಗೆ ಈ ಸೋಂಕು ತಗುಲಿದಾಗ ಗರ್ಭಕಂಠದ ಕ್ಯಾನ್ಸರ್ ಉಂಟಾಗುವುದು. ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟುವ ಲಸಿಕೆ ಪಡೆಯುವುದರಿಂದ ಈ ಕಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ.

ಗರ್ಭಕಂಠದ ಕ್ಯಾನ್ಸರ್‌ ಗುಣಪಡಿಸಬಹುದೇ?

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಇದನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸುವುದು ಸುಲಭ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆಯನ್ನು ಹದಿಹರೆಯದ ಪ್ರಾಯದಲ್ಲಿಯೇ ತೆಗೆದುಕೊಳ್ಳುವುದರಿಂದ ಮುಂದೆ ಈ ಕ್ಯಾನ್ಸರ್ ತಡೆಗಟ್ಟಬಹುದು.

ಗರ್ಭಕಂಠದ ಕ್ಯಾನ್ಸರ್ ಅಡ್ಡಪರಿಣಾಮಗಳು

ಈ ಲಸಿಕೆ ಸುರಕ್ಷಿತವಾಗಿದೆ, ಎಲ್ಲಾ ಲಸಿಕೆಗಳಂತೆ ಇದರಲ್ಲೂ ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು, ಇದು ಒಂದೆರಡು ದಿನ ಮಾತ್ರ ಇರುತ್ತದೆ.
ಕೆಲವರಿಗೆ ಈ ತೊಂದರೆಗಳಾಗುವುದು
ಜ್ವರ

* ಸುಸ್ತು
*ಲಸಿಕೆ ಚುಚ್ಚಿದ ಭಾಗದಲ್ಲಿ ನೋವು
* ಮೈಕೈ ನೋವು
* ಸಂಧಿಗಳಲ್ಲಿ ನೋವು

ಈ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು

ಅಭಿಯಾನವನ್ನು ಯಶಸ್ವಿಗೊಳಿಸಲು ಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.

* ಶಾಲೆಗಳಲ್ಲಿ ಎಚ್‌ಪಿವಿ ಲಸಿಕಾ ಕೇಂದ್ರಗಳನ್ನು ತೆರೆಯುವುದು.

* ಜಿಲ್ಲಾ ಲಸಿಕಾ ಅಧಿಕಾರಿಯನ್ನು ಬೆಂಬಲಿಸಲು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಡಿಯಲ್ಲಿ ಜಿಲ್ಲಾ ಲಸಿಕಾ ಕಾರ್ಯಪಡೆಯ (ಡಿಟಿಎಫ್‌ಐ) ಪ್ರಯತ್ನಗಳ ಭಾಗವಾಗಲು ಜಿಲ್ಲಾ ಶಿಕ್ಷಣ ಅಧಿಕಾರಿಗೆ ನಿರ್ದೇಶನ ನೀಡುವುದು.

* ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಯೊಂದಿಗೆ ಸಮನ್ವಯ ಸಾಧಿಸುವುದು.

* ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿ ಶಾಲೆಯಲ್ಲಿ ನೋಡಲ್ ವ್ಯಕ್ತಿಯನ್ನು ಗುರುತಿಸುವುದು. ಇವರು ಶಾಲೆಯಲ್ಲಿ 9-14 ವರ್ಷ ವಯಸ್ಸಿನ ವಿದ್ಯಾರ್ಥಿನಿಯರ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಾರೆ.

* ಪೋಷಕರ ಸಭೆ ಕರೆದು ಎಲ್ಲಾ ಪೋಷಕರಿಗೆ ಶಾಲಾ ಶಿಕ್ಷಕರ ಮೂಲಕ ಜಾಗೃತಿ ಮೂಡಿಸುವುದು.

* ಪರೀಕ್ಷೆ ಮತ್ತು ರಜೆಯ ತಿಂಗಳುಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಲಸಿಕಾ ಅಭಿಯಾನವನ್ನು ಯೋಜಿಸಲು ಆರೋಗ್ಯ ಇಲಾಖೆಗಳು ಮುಂದಾಗಿವೆ.

English summary

Govt to provide cervical cancer vaccine to girls aged 9 to 14 in schools; Know details in kannada

HPV Vaccine: cervical cancer vaccine to girls aged 9 to 14 in schools, read on...
Story first published: Friday, December 23, 2022, 10:15 [IST]
X
Desktop Bottom Promotion