For Quick Alerts
ALLOW NOTIFICATIONS  
For Daily Alerts

ಮದ್ಯಪಾನ ವೀರ್ಯಾಣು ನಾಶ ಮಾಡಿ ಪುರುಷಲ್ಲಿ ಬಂಜೆತನ ತರುವುದೇ?

|

ಅತಿಯಾದ ಮದ್ಯಪಾನ ಮಾಡಿದರೆ ವೀರ್ಯಾಣುಗಳು ಸಂಖ್ಯೆ ಕಡಿಮೆಯಾಗುವುದು ಎಂದು 2015ರಲ್ಲಿ ನಡೆಸಿದ ಅಧ್ಯಯನ ಹೇಳಿದೆ. ಮದ್ಯಪಾನ ಮಾಡಿದರೆ ಪುರುಷರಲ್ಲಿ ಬಂಜೆತನದ ಸಾಧ್ಯತೆ ಶೇ. 35ರಷ್ಟು ಹೆಚ್ಚುವುದು ಎಂದು ಸಿಡಿಸಿ ಕೂಡ ಹೇಳಿದೆ.

Alcohol Kill Sperm

ಮದ್ಯಪಾನ ಮಿತಿಯಲ್ಲಿ ಮಾಡಿದರೆ ತೊಂದರೆಯಿಲ್ಲ, ಆದರೆ ಅತಿಯಾಗಿ ಮಾಡಿದವರಲ್ಲಿ ಟೆಸ್ಟೋಸ್ಟಿರೋನೆ ಅಂಶ ಕಡಿಮೆಯಾಗುವುದು, ಇದರಿಂದ ವೀರ್ಯಾಣುಗಳು ಕಡಿಮೆಯಾಗಿ ಬಂಜೆತನ ಹೆಚ್ಚಾಗುವುದು.

2019ಲ್ಲಿ ಅಮೆರಿಕದಲ್ಲಿ ಒಂದು ಅಧ್ಯಯನ ನಡೆಸಲಾಯಿತು, ಅದರಲ್ಲಿ 12 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಪುರುಷರು ಮದ್ಯಪಾನ ಮಾಡುವವರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಎಂದು ಅಧ್ಯಯನ ಹೇಳಿದೆ.

ಅತ್ಯಧಿಕ ಮದ್ಯಪಾನ ಮಾಡಿದರೆ ಅಂದರೆ 3-4 ಗ್ಲಾಸ್‌ ಮದ್ಯ ತೆಗೆದುಕೊಳ್ಳುವುದರಲ್ಲಿ ಅಂದರೆ ವಾರದಲ್ಲಿ 7-14 ಲೋಟ ಮದ್ಯ ತೆಗೆದುಕೊಳ್ಳುವವರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದಾಗಿ ಅಧ್ಯಯನ ಹೇಳಿದೆ.

ಮತ್ತೊಂದು ಅಧ್ಯಯನ ವರದಿ journal Andrologyನಲ್ಲಿ ಪ್ರಕಟವಾಗಿತ್ತು. ಆ ಅಧ್ಯಯನ ವರದಿ ಪ್ರಕಾರ ಅವರು 323 ಪುರುಷರನ್ನು ಅಧ್ಯಯನದಲ್ಲಿ ಒಳಪಡಿಸಿ ಅವರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿತು.

ಅತ್ಯಧಿಕ ಮದ್ಯಪಾನ ಮಾಡುವವರು, ಮಿತಿಯಲ್ಲಿ ಮದ್ಯಪಾನ ಮಾಡುವವರು, ತುಂಬಾ ಕಡಿಮೆ ಮದ್ಯಪಾನ ಮಾಡುವವರು, ಮದ್ಯಪಾನ ಮಾಡದೇ ಇರುವವರು.

ಈ ಅಧ್ಯಯನದಲ್ಲಿ ತಿಳಿದು ಬಂದ ಅಂಶವೆಂದರೆ ಕುಡಿಯುವುದಕ್ಕೂ ,ವೀರ್ಯಾಣುಗಳ ಸಂಖ್ಯೆಗೂ ಸಂಬಂಧವಿದೆ.

ಮಿತಿಯಲ್ಲಿ ಕುಡಿದರೆ ವೀರ್ಯಾಣುಗಳ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅತಿಯಾಗಿ ಕುಡಿದರೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು, ಇದರಿಂದ ಬಂಜೆತನ ಉಂಟಾಗುವುದು ಎಂದು ಹೇಳಿದೆ.

ಪುರುಷರು ಅತಿಯಾಗಿ ಮದ್ಯಪಾನ ಮಾಡಿದರೆ ಈ ತೊಂದರೆಗಳು ಉಂಟಾಗುವುದು

* ಅವರಲ್ಲಿ ಟೆಸ್ಟೋಸ್ಟಿರೋನೆ ಹಾರ್ಮೋನ್‌ಗಳು ಕಡಿಮೆಯಾಗುವುದು ಅಲ್ಲದೆ ಫಾಲಿಕಲ್ ಉತ್ಪತ್ತಿ ಮಾಡುವ ಹಾರ್ಮೋನ್‌ಗಳು ಕಡಿಮೆಯಾಗುವುದು, ಇದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.
* ಶಿಶ್ನ ಗಾತ್ರ ಕುಗ್ಗುವುದು, ಇದರಿಂದ ಕೂಡ ಬಂಜೆತನ ಉಂಟಾಗುವುದು
* gonadotropin ಉತ್ಪತ್ತಿ ಕಡಿಮೆಯಾಗುವುದು, ಇದರಿಂದ ಕೂಡ ವೀರ್ಯಾಣು ಕಡಿಮೆಯಾಗುವುದು. * ಶೀಘ್ರಸ್ಖಲನ ಉಂಟಾಗುವುದು
* ವೀರ್ಯಾಣುಗಳ ಗಾತ್ರದಲ್ಲಿ, ಆಕಾರದಲ್ಲಿ, ಅದರ ಚಲನೆಯಲ್ಲಿ ವ್ಯತ್ಯಾಸ ಉಂಟಾಗುವುದು.
ಇನ್ನು ಮದ್ಯಪಾನದ ಜೊತೆ ಗಾಂಜಾ ಹಾಗೂ ಧೂಮಪಾನದಿಂದ ಕೂಡ ವೀರ್ಯಾಣುಗಳು ಕಡಿಮೆಯಾಗುವುದು.
ಇನ್ನು ತುಬಾ ಚಿಕ್ಕ ಪ್ರಾಯದಲ್ಲಿ ಕುಡಿಯಲಾರಂಭಿಸಿದರೆ ಅವರಲ್ಲಿ ಕ್ರಮೇಣ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.

ಎಷ್ಟು ಕುಡಿದರೆ ಹಾನಿಕರವಲ್ಲ?
ಅಪೋಲೋಫರ್ಟಿಲಿಟಿ. ಕಾಮ್‌ ಪ್ರಕಾರ ದಿನದಲ್ಲಿ ಒಂದು ಅಥವಾ 2 ಪೆಗ್‌ ಕುಡಿದರೆ ದೊಡ್ಡ ಹಾನಿಯುಂಟಾಗುವುದಿಲ್ಲ, ಆದರೆ ಯಾರು ಅತಿಯಾಗಿ ಕುಡಿಯುತ್ತಾರೋ ಅವರಲ್ಲಿ ಬಂಜೆತನ ಸಮಸ್ಯೆ ಕಂಡು ಬರುವುದು.

ಮಗುವಿಗಾಗಿ ಪ್ಲ್ಯಾನ್‌ ಮಾಡುತ್ತಿದ್ದರೆ ಕುಡಿಯಬಾರದೇ?
ಮಿತಿಯಲ್ಲಿ ಕುಡಿದರೆ ವೀರ್ಯಾಣುಗಳ ಉತ್ಪತ್ತಿಗೆ ಯಾವುದೇ ಹಾನಿಯುಂಟಾಗುವುದಿಲ್ಲ, ಆದರೆ ತುಂಬಾ ಅಧಿಕ ಕುಡಿಯುವುದರಿಂದ ವೀರ್ಯಾಣುಗಳ ಉತ್ಪತ್ತಿಗೆ ಹಾನಿಯುಂಟಾಗುವುದು. ಸಂಶೋದಕರ ಪ್ರಕಾರ ವೀರ್ಯಾಣು ಮೆಚ್ಯೂರಿಟಿ ತಲುಪಲು 30 ದಿನಬೇಕು, ಪ್ರತಿದಿನ ಅಧಿಕ ಕುಡಿಯುವುದರಿಂದ ವೀರ್ಯಾಣುಗಳ ಸಾಮರ್ಥ್ಯ ಕಡಿಯಾಗುವುದು.

ಮದ್ಯಪಾನ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವುದು
ಮಹಿಳೆಯರು ಮದ್ಯಪಾನ ಮಾಡುವುದರಿಂದ ಅಂಡೋತ್ಪತ್ತಿ ಬಿಡುಗಡೆ ಮೇಲೆ ಪರಿಣಾಮ ಬೀರಿ ಗರ್ಭಧಾರಣೆಗೆ ತೊಂದರೆಯಾಗುವುದು.

ಮಹಿಳೆಯರು ಮದ್ಯಪಾಮನ ಮಾಡಿದರೆ ವೀರ್ಯಾಣು ಸಾಯುವುದೇ?
ತಜ್ಞರ ಪ್ರಕಾರ ಮದ್ಯ ಗರ್ಭಕಂಠ ಅಥವಾ ಗರ್ಭಕೋಶದ ಒಳಗಡೆ ಹೋಗಲ್ಲ, ಆದ್ದರಿಂದ ಮಹಿಳೆ ದೇಹ ಹೊಕ್ಕ ವೀರ್ಯಾಣುವನ್ನು ಮದ್ಯ ಏನೂ ಮಾಡಲ್ಲ. ಆದ್ದರಿಂದ ಮದ್ಯಪಾನ ಮಾಡಿ ಗರ್ಭಧಾರಣೆ ತಡೆಗಟ್ಟಲು ಸಾಧ್ಯವಿಲ್ಲ.

ಈ ಕಾರಣಗಳಿಂದಲೂ ಪುರುಷರಲ್ಲಿ ಬಂಜೆತನ ಉಂಟಾಗುವುದು
* ಅತ್ಯಧಿಕ ಮೈ ತೂಕ ಅಥವಾ ಒಬೆಸಿಟಿ
* ವಯಸ್ಸು 40 ದಾಟಿದ್ದರೆ'
* ರೇಡಿಯೇಷನ್‌ ಚಿಕಿತ್ಸೆ ಪಡೆದಿದ್ದರೆ
* ತಂಬಾಕು ಸೇವನೆ , ಧೂಮಪಾನ
* cyproterone, flutamide, spironolactone, bicalutamide, cimetidine ಅಥವಾ ketoconazole ಈ ಬಗೆಯ ಔಷಧಿ ತೆಗೆದುಕೊಳ್ಳುತ್ತಿದ್ದರೆ
* ಶಿಶ್ನ ಭಾಗದಲ್ಲಿ ವೇರಿಕೋಸ್ಲೆ ಸಮಸ್ಯೆಯಿದ್ದರೆ

ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಚಿಕಿತ್ಸೆಯೇನು?

* ವೀರ್ಯಾಣುಗಳನ್ನು ಹೆಚ್ಚಿಸಲು ಹಾರ್ಮೋನ್‌ ಥೆರಪಿ ನೀಡಲಾಗುವುದು
* ಆರೋಗ್ಯಕರ ಮೈ ತೂಕ ಹೊಂದಬೇಕು, ಅಧಿಕ ಮೈ ತೂಕವನ್ನು ವ್ಯಾಯಾಮ ಹಾಗೂ ಆಹಾರಕ್ರಮದ ಮೂಲಕ ಕಡಿಮೆ ಮಾಡಬೇಕು
* ಧೂಮಪಾನ ಬಿಡಬೇಕು
* ಗಾಂಜಾ ಸೇವನೆ ಮಾಡಬಾರದು
* ಇತರ ಡ್ರಗ್ಸ್ ತೆಗೆದುಕೊಳ್ಳಬಾರದು

English summary

Does Alcohol Kill Sperm? And Know Other Fertility Facts in Kannada

Does Alcohol Kill Sperm: What study says read on...
X
Desktop Bottom Promotion