For Quick Alerts
ALLOW NOTIFICATIONS  
For Daily Alerts

World Cancer Day:ಈ ಆಹಾರಕ್ರಮ ಹಾಗೂ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು

|

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಸಂಭವಿಸುವ ಮರಣಗಳಿಗೆ ಕ್ಯಾನ್ಸರ್ ರೋಗವು ಎರಡನೆಯ ಅತ್ಯಂತ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಬಗೆಯ ಖಾಯಿಲೆಯನ್ನೂ ಹಾಗೂ ಪ್ರತಿಯೋರ್ವ ವ್ಯಕ್ತಿಯ ಖಾಯಿಲೆಗೆ ತುತ್ತಾಗುವ ಅಪಾಯದ ಪ್ರಮಾಣವನ್ನೂ ಅವಲಂಬಿಸಿ, ಕ್ಯಾನ್ಸರ್ ಗೆ ಈಡಾಗುವ ಅಪಾಯದ ಪ್ರಮಾಣವು ವ್ಯತ್ಯಯಗೊಳ್ಳುತ್ತದೆಯಾದರೂ, ಕೆಲವು ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಕ್ಯಾನ್ಸರ್ ಸಂಬಂಧಿತ ಮರಣಗಳು ಜೀವನಶೈಲಿಯ ಆಯ್ಕೆಯನ್ನು ಅಗಾಧವಾಗಿ ಅವಲಂಬಿಸಿವೆ. ಬೇರೊಂದು ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಹಾಗೂ ನಿಮ್ಮ ಸೌಖ್ಯದ ಮೇಲೆ ನೀವು ಹೇಗೆ ಬಾಳುತ್ತಿದ್ದೀರಿ ಎಂಬ ಅಂಶವು ಗಾಢವಾದ ಪ್ರಭಾವ ಬೀರುತ್ತದೆ. ಒಂದು ಆರೋಗ್ಯದಾಯಕ ಜೀವನಶೈಲಿಯು ಕೇವಲ ಕ್ಯಾನ್ಸರ್ ಉಂಟಾಗುವ ಅಪಾಯವನ್ನಷ್ಟೇ ಹತ್ತಿಕ್ಕುವುದಲ್ಲದೇ ದೀರ್ಘಾಯುಷಿಯಾಗಿಯೂ, ಆರೋಗ್ಯವಂತರಾಗಿಯೂ ಬಾಳಲೂ ನೆರವಾಗುತ್ತದೆ.

Diet And Lifestyle Tips To Reduce The Risk Of Cancer

ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ ಸಮತೋಲನ ಆಹಾರಪದ್ಧತಿಯನ್ನು ನಿರ್ಲಕ್ಷಿಸುವುದರಿಂದ ಹಾಗೂ ಅನಾರೋಗ್ಯಕರ ಆಹಾರವಸ್ತುಗಳ ಸೇವನೆಯಿಂದ ಗಂಭೀರ ಸ್ವರೂಪದ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಅತೀ ಹೆಚ್ಚಾಗಿರುತ್ತದೆ. ಅದೇ ವೇಳೆಗೆ ಇಂತಹ ಅನಾರೋಗ್ಯಕರ ಜೀವನಶೈಲಿಯಿಂದ ಹೊರಬರುವುದರಿಂದ ಕ್ಯಾನ್ಸರ್ ಗೆ ತುತ್ತಾಗುವ ಅಪಾಯ ತಗ್ಗುತ್ತದೆ. ಈ ದಿಶೆಯಲ್ಲಿ ನೀವು ಮಾಡಬೇಕಾದುದೇನೆಂಬುದರ ಬಗ್ಗೆ ಈ ಕೆಳಗೆ ನೀಡಲಾಗಿದೆ.

ನಾರಿನಂಶದಿಂದ ಸಮೃದ್ಧವಾಗಿರುವ ಆಹಾರಪದಾರ್ಥಗಳನ್ನು ಸೇವಿಸಿರಿ

ನಾರಿನಂಶದಿಂದ ಸಮೃದ್ಧವಾಗಿರುವ ಆಹಾರಪದಾರ್ಥಗಳನ್ನು ಸೇವಿಸಿರಿ

ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಹಾಗೂ ಕ್ಯಾನ್ಸರ್ ಸಂಯುಕ್ತವಸ್ತುಗಳು ನಿಮ್ಮ ದೇಹವನ್ನ ಹಾನಿಗೀಡು ಮಾಡುವುದಕ್ಕಿಂತ ಮೊದಲೇ ಅವುಗಳನ್ನ ದೇಹದಿಂದ ಹೊರಹಾಕುವಲ್ಲಿ ನೆರವಾಗುವ ಅತ್ಯಂತ ಮಹತ್ವದ ಪೋಷಕ ವಸ್ತುವೆಂದರೆ ಅದು ನಾರಿನಂಶ.

ಸಂಸ್ಕರಿತ ಆಹಾರವಸ್ತುಗಳ ಸೇವನೆ ಬೇಡ

ಸಂಸ್ಕರಿತ ಆಹಾರವಸ್ತುಗಳ ಸೇವನೆ ಬೇಡ

ಬ್ರಿಟೀಷ್ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟಣೆ ಕಂಡಿರುವ ಅಧ್ಯಯನವೊಂದರ ಪ್ರಕಾರ, ಆಹಾರಪದ್ಧತಿಯಲ್ಲಿ ಸಂಸ್ಕರಿತ ಆಹಾರವಸ್ತುಗಳೇ ಅಧಿಕಾಂಶವಿದ್ದರೆ, ಅಂತಹ ಆಹಾರಪದ್ಧತಿಯು ಒಟ್ಟಾರೆ ಕ್ಯಾನ್ಸರ್ ನ ಅಪಾಯವನ್ನ ಶೇ. 12 ರಷ್ಟು ಹಾಗೂ ಸ್ತನ ಕ್ಯಾನ್ಸರ್ ನ ಅಪಾಯವನ್ನ ಶೇ. 11 ರಷ್ಟು ಅಧಿಕಗೊಳಿಸುತ್ತದೆ. ಹಾಗಾಗಿ, ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುವ ದಿಶೆಯಲ್ಲಿ ಸಂಸ್ಕರಿತ ಆಹಾರವಸ್ತುಗಳ ಸೇವನೆಯನ್ನು ಸಾಧ್ಯವಾದಷ್ಟು ವರ್ಜಿಸಿರಿ.

ಧೂಮಪಾನವನ್ನು ವರ್ಜಿಸಿರಿ

ಧೂಮಪಾನವನ್ನು ವರ್ಜಿಸಿರಿ

ಧೂಮಪಾನವು ಗಂಟಲು, ಮೇದೋಜೀರಕ ಗ್ರಂಥಿ, ಮೂತ್ರಕೋಶ, ಗರ್ಭಕಂಠ, ಮೂತ್ರಪಿಂಡ ಹಾಗೂ ಬಾಯಿಯ ಕ್ಯಾನ್ಸರ್ ಅನ್ನೂ ಒಳಗೊಂಡಂತೆ ಹಲವಾರು ಪ್ರಾಣಾಂತಿಕ ಖಾಯಿಲೆಗಳಿಗೆ ಆಹ್ವಾನವನ್ನೀಯುತ್ತದೆ. ಅನ್ಯ ಧೂಮಪಾನಿಯ ಹೊಗೆಯನ್ನು ಉಸಿರಾಟದ ಮೂಲಕ ತೆಗೆದುಕೊಂಡರೂ ಕೂಡ, ಅದು ಶ್ವಾಸಕೋಶದ ಕ್ಯಾನ್ಸರ್ ನ ಆಪತ್ತನ್ನು ಹೆಚ್ಚಿಸುತ್ತದೆ. ಆದ್ದರಿಂದ, ದೀರ್ಘಕಾಲೀನ ರೋಗಗಳಿಗೆ ತುತ್ತಾಗುವ ಅಪಾಯವನ್ನ ತಗ್ಗಿಸುವುದಕ್ಕಾಗಿ ಧೂಮಪಾನವನ್ನು ತ್ಯಜಿಸಿರಿ

ದೈಹಿಕವಾಗಿ ಕ್ರಿಯಾಶೀಲರಾಗಿದ್ದು, ನಿಮ್ಮ ದೇಹತೂಕದ ಬಗ್ಗೆ ನಿಗಾ ವಹಿಸಿರಿ

ದೈಹಿಕವಾಗಿ ಕ್ರಿಯಾಶೀಲರಾಗಿದ್ದು, ನಿಮ್ಮ ದೇಹತೂಕದ ಬಗ್ಗೆ ನಿಗಾ ವಹಿಸಿರಿ

ಬಗೆಬಗೆಯ ಕ್ಯಾನ್ಸರ್ ಗಳಿಗೆ ತುತ್ತಾಗುವ ಅಪಾಯವನ್ನು ತಗ್ಗಿಸುವುದಕ್ಕಾಗಿ ದೈಹಿಕವಾಗಿ ಸದೃಢರಾಗಿರುವುದು ಅತ್ಯಂತ ಅಗತ್ಯ. ದೀರ್ಘಕಾಲೀನ ಖಾಯಿಲೆಗಳು ಶರೀರದಲ್ಲಿ ಕಾಣಿಸಿಕೊಳ್ಳುವುದನ್ನು ತಡೆಗಟ್ಟಲು ವಾರಕ್ಕೆ ಕನಿಷ್ಟ 5 ದಿನಗಳವರೆಗೆ 30 ನಿಮಿಷಗಳ ಕಾಲ ಏರೋಬಿಕ್ ವ್ಯಾಯಾಮಗಳನ್ನು ಕೈಗೊಳ್ಳಬೇಕೆಂದು ತಜ್ಞರು ಸಲಹೆ ಮಾಡುತ್ತಾರೆ. ವ್ಯಾಯಾಮವು ಉರಿಶಾಮಕವಾಗಿದೆ, ನಿಮ್ಮ ದೇಹದ ತೂಕವನ್ನು ಹದ್ದುಬಸ್ತಿನಲ್ಲಿಡುತ್ತದೆ, ಹಾಗೂ ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ.

ಉರಿಬಿಸಿಲಿನಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಿರಿ

ಉರಿಬಿಸಿಲಿನಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಿರಿ

ಜಗತ್ತಿನಾದ್ಯಂತ ಕಂಡುಬರುವ ಕ್ಯಾನ್ಸರ್ ನ ಒಂದು ಅತ್ಯಂತ ಸಾಮಾನ್ಯ ಪ್ರಕಾರವೆಂದರೆ ಅದು ಚರ್ಮದ ಕ್ಯಾನ್ಸರ್. ಈ ಖಾಯಿಲೆಯನ್ನು ತಡೆಗಟ್ಟುವ ದಿಶೆಯಲ್ಲಿ ವರ್ಷವಿಡೀ ನೇರಳಾತೀತ ಕಿರಣ (ಯು.ವಿ) ಗಳಿಂದ ಶರೀರವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸೂರ್ಯರಶ್ಮಿಗೆ ದೇಹವನ್ನು ಒಡ್ಡಿಕೊಳ್ಳುವುದು ಒಳ್ಳೆಯದೆನ್ನುವುದೇನೋ ನಿಜ, ಆದರೆ ದೇಹವನ್ನ ಅತಿಯಾಗಿ, ಅದರಲ್ಲೂ ಉರಿಬಿಸಿಲಿಗೆ ಒಡ್ಡಿಕೊಂಡರೆ ಅದು ತರಹೇವಾರಿ ಆರೋಗ್ಯ ಸಂಬಂಧಿತ ತೊಂದರೆಗಳಿಗೆ ಎಡೆಮಾಡಿಕೊಟ್ಟೀತು. ಸಾಧ್ಯವಾದಷ್ಟು ನೆರಳಿನಾಶ್ರಯದಲ್ಲಿರುವುದು, ನಿಮ್ಮ ತೋಳುಗಳನ್ನು ಹಾಗೂ ಕಾಲುಗಳನ್ನು ಆವರಿಸಿಕೊಳ್ಳುವಂತಹ ಬಟ್ಟೆಗಳನ್ನು ಧರಿಸುವುದು, ಟೋಪಿಯನ್ನು ಹಾಕಿಕೊಳ್ಳುವುದು, ಹಾಗೂ ಸನ್ ಸ್ಕ್ರೀನ್ ನ ಬಳಕೆ - ಇವೆಲ್ಲವೂ ಚರ್ಮದ ಕ್ಯಾನ್ಸರ್ ಗೆ ತುತ್ತಾಗುವ ಅಪಾಯವನ್ನು ತಗ್ಗಿಸುವಲ್ಲಿ ಬಲು ಪ್ರಯೋಜನಕಾರಿ ಅಂತಾ ಸಲಹೆ ಮಾಡುತ್ತಾರೆ ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಸಂಸ್ಥೆಯವರು.

ಮದ್ಯಪಾನ ಹಿತಮಿತವಾಗಿರಲಿ

ಮದ್ಯಪಾನ ಹಿತಮಿತವಾಗಿರಲಿ

ಹಿತಮಿತವಾದ ಮದ್ಯಪಾನ ಅಷ್ಟೇನೂ ಹಾನಿಕರವಲ್ಲವಾದರೂ, ಅತಿಯಾದ ಮದ್ಯಪಾನವು ಕೆಲಬಗೆಯ ಕ್ಯಾನ್ಸರ್ ಗಳಿಗೆ ಆಹ್ವಾನವನ್ನೀಯುತ್ತದೆ. ಸಿ.ಡಿ.ಸಿ. ಯ ಪ್ರಕಾರ, ಯಾವುದೇ ಬಗೆಯ ಮದ್ಯವನ್ನು ಸೇವಿಸಿದರೂ ಕೂಡ, ಅದು ಬಾಯಿ ಮತ್ತು ಗಂಟಲು, ಧ್ವನಿಪೆಟ್ಟಿಗೆ, ಅನ್ನನಾಳ, ಕರುಳು, ಮತ್ತು ಗುದ, ಯಕೃತ್ ಹಾಗೂ ಸ್ತನ ಕ್ಯಾನ್ಸರ್ ಗೆ ತನ್ನ ಕಾಣಿಕೆಯನ್ನು ಸಲ್ಲಿಸುತ್ತದೆ. ಹಾಗಾಗಿ, ಇದರಿಂದ ಪಾರಾಗುವ ಏಕೈಕ ಮಾರ್ಗೋಪಾಯವೆಂದರೆ ಮದ್ಯಪಾನವನ್ನು ಇತಿಮಿತಿಯಾಗಿ ಮಾಡುವುದು, ಸಂಪೂರ್ಣ ಕೈಬಿಟ್ಟರೆ ಇನ್ನೂ ಒಳ್ಳೆಯದು.

ಅಪಾಯವನ್ನು ತಂದೊಡ್ಡುವ ನಡವಳಿಕೆಗಳನ್ನು ಕೈಬಿಡಿ

ಅಪಾಯವನ್ನು ತಂದೊಡ್ಡುವ ನಡವಳಿಕೆಗಳನ್ನು ಕೈಬಿಡಿ

ಸುರಕ್ಷಿತ ಲೈಂಗಿಕತೆಯನ್ನು ಅನುಸರಿಸಿರಿ, ಸೋಂಕುಗಳ ಅಪಾಯಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳುವ ದಿಶೆಯಲ್ಲಿ ಸೂಜಿಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ. ಶರೀರವು ಪದೇ ಪದೇ ಸೋಂಕಿಗೀಡಾಗುತ್ತಿದ್ದಲ್ಲಿ, ಅದು ಕ್ಯಾನ್ಸರ್ ನ ಅಪಾಯವನ್ನೂ ಹೆಚ್ಚಿಸುತ್ತದೆ. ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ದಿಶೆಯಲ್ಲಿ ಕಾಲಕಾಲಕ್ಕೆ ಶಿಫ಼ಾರಿತ ಲಸಿಕೆಗಳನ್ನು ಹಾಕಿಸಿಕೊಳ್ಳುತ್ತಿರಬೇಕು.

ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಿ

ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಿ

ನಿಮ್ಮ ಶರೀರದಲ್ಲೇನಾದರೂ ಕ್ಯಾನ್ಸರ್ ಖಾಯಿಲೆಯು ಹುಟ್ಟಿಕೊಂಡಿದ್ದಲ್ಲಿ, ಅದನ್ನು ಆರಂಭದ ಹಂತದಲ್ಲಿಯೇ ಕಂಡುಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುವುದಕ್ಕಾಗಿ ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗುವುದು ತುಂಬಾ ಮುಖ್ಯ. ಆಗಾಗ್ಗೆ ಸ್ವಯಂ-ಪರೀಕ್ಷೆ ಮಾಡಿಕೊಳ್ಳುವುದು ಹಾಗೂ ಸ್ಕ್ರೀನಿಂಗ್ ಗೆ ಒಳಗಾಗುವುದು ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುವ ದಿಶೆಯಲ್ಲಿ ಬಲು ಪ್ರಯೋಜನಕಾರಿ.

English summary

Diet And Lifestyle Tips To Reduce The Risk Of Cancer

February 4th is world Cancer Day. Here we have given Diet and lifestyle tips to reduce the risk of cancer , Read on.
X
Desktop Bottom Promotion