For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19: ಮಾಂಸಾಹಾರ ಸೇವನೆ ಬಗ್ಗೆ ಪೇಟಾ ಎಚ್ಚರಿಕಾ ಸಂದೇಶ

|

ಕೋರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ವಿಶ್ವದಾದ್ಯಂತ ಕೈಗೊಳ್ಳುತ್ತಿರುವ ಕ್ರಮಗಳು ಜೀವನವನ್ನೇ ಹೆಚ್ಚೂ ಕಡಿಮೆ ಸ್ತಬ್ಧಗೊಳಿಸಿದೆ. ಸ್ವಚ್ಛತೆ ಕಾಪಾಡಲು ಜಗತ್ತಿನ ಇತಿಹಾಸದಲ್ಲಿಯೇ ಇಲ್ಲದಷ್ಟು ಮಟ್ಟಿಗಿನ ಜಾಗ್ರತೆ ಎದುರಾಗಿದೆ. ಆದರೆ ಈ ಜಾಗ್ರತೆ ಮಾಂಸಾಹಾರದ ಬಗ್ಗೆ ಎಷ್ಟು ಅನ್ವಯವಾಗುತ್ತದೆ? ಪ್ರಾಣಿದಯಾ ಸಂಘವಾದ ಪೆಟಾ (People for the Ethical Treatment of Animals) ಎಂಬ ಅಂತಾರಾಷ್ಟ್ರೀಯ ಸಂಘಟನೆಯ ಭಾರತದ ವಿಭಾಗಾಧಿಕಾರಿಗಳು ಈ ಬಗ್ಗೆ ನೀಡಿರುವ ವಿವರಣೆಗಳು ಇಲ್ಲಿವೆ:

peta says about having nonveg
ಮಾಂಸಾಹಾರದಿಂದ ಕೋವಿಡ್-19 ಸೋಂಕು ಎದುರಾಗಬಹುದೇ?

ಮಾಂಸಾಹಾರದಿಂದ ಕೋವಿಡ್-19 ಸೋಂಕು ಎದುರಾಗಬಹುದೇ?

ಮಾಂಸಾಹಾರ ಎಲ್ಲಾ ಋತುಮಾನಗಳಿಗೆ ಸೂಕ್ತವಲ್ಲ. ಕೆಲವು ಸಮಯದಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ವರ್ಜಿಸಬೇಕು. ಮೊಟ್ಟೆ, ಸ್ಥಳೀಯವಾಗಿ ಸಿಗುವ ಮಾಂಸ ಮತ್ತು ಬೃಹತ್ ಕೈಗಾರಿಕೆಗಳ ಮೂಲಕ ಲಭಿಸುವ ಸಿದ್ಧರೂಪದ ಅಹಾರ. ಈ ಅಹಾರಗಳ ಸೇವನೆಯಿಂದ ಹೃದಯ ರೋಗ, ಮಧುಮೇಹ, ಕ್ಯಾನ್ಸರ್ ಮತ್ತಿತರ ಕಾಯಿಲೆಗಳು ಆವರಿಸುವ ಸಾಧ್ಯತೆ ಹೆಚ್ಚು.

ಕೆಲವು ಪ್ರಾಣಿಗಳ ದೇಹದಲ್ಲಿ ಆಶ್ರಯ ಪಡೆದಿರುವ ಪರಾವಲಂಬಿ ಜೀವಿಗಳನ್ನು ಕೊಲ್ಲುವುದು ಸುಲಭವಲ್ಲ ಹಾಗೂ ಇವುಗಳ ಮಾಂಸವನ್ನು ಸೇವಿಸಿದ ವ್ಯಕ್ತಿಗಳ ದೇಹವನ್ನೂ ಇವು ಸೇರಬಹುದು. ಹೊಸದಾಗಿ ಬಂದಿರುವ ಈ ಕ್ರಿಮಿಗಳಿಗೆ ಮಾನವ ದೇಹ ಪ್ರತಿರೋಧ ಶಕ್ತಿಯನ್ನು ಇನ್ನೂ ಸೃಷ್ಟಿಸಿಕೊಳ್ಳದೇ ಇರಬಹುದು ಹಾಗೂ ಕಾಯಿಲೆ ಎದುರಾಗಬಹುದು.

ಮಾಂಸಾಹಾರದಿಂದ ಕೋವಿಡ್-19 ಸೋಂಕು ಎದುರಾಗಬಹುದೇ?

ಮಾಂಸಾಹಾರದಿಂದ ಕೋವಿಡ್-19 ಸೋಂಕು ಎದುರಾಗಬಹುದೇ?

ಕೋವಿಡ್-19 ಸೋಂಕಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮೊದಲಾಗಿ ನೀವು ಸೋಂಕು ಇರುವಂತಹ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಆದಷ್ಟೂ ತಪ್ಪಿಸಬೇಕು. ಪ್ರಾಣಿಗಳ ಮಾರುಕಟ್ಟೆಗೆ ಭೇಟಿ, ಪ್ರಾಣಿಗಳನ್ನು ಸ್ಪರ್ಶಿಸುವುದು, ಹಸಿ ಮಾಂಸವನ್ನು ಮುಟ್ಟುವುದು, ಹಸಿ ಹಾಲು ಅಥವಾ ಪ್ರಾಣಿಗಳ ಅಂಗಗಳನ್ನು ಮುಟ್ಟುವುದು, ಹಸಿಯಾಗಿರುವ ಅಥವಾ ಪೂರ್ಣವಾಗಿ ಬೆಂದಿಲ್ಲದ ಆಹಾರ ಸೇವನೆ, ಹಸಿ ಮೊಟ್ಟೆ, ಹಸಿ ಹಾಲು ಮೊದಲಾದವುಗಳ ಸೇವನೆ ಎಲ್ಲವನ್ನೂ ವರ್ಜಿಸುವುದೇ ಉತ್ತಮ.

ಪ್ರಸ್ತುತ ಇಡೀ ವಿಶ್ವವೇ ಕೋವಿಡ್-19 ಸೋಂಕಿನ ಭಯದ ನೆರಳಿನಲ್ಲಿರುವಾಗ ಸಸ್ಯಾಹಾರಕ್ಕೆ ನಿಮ್ಮನ್ನು ಬದಲಿಸಿಕೊಳ್ಳುವುದೇ ಅತಿ ಸುರಕ್ಷಿತ ಮಾರ್ಗವಾಗಿದ್ದು ಮಾಂಸಾಹಾರದಿಂದ ಎದುರಾಗಬಹುದಾದ ಅಲ್ಪ ಸಾಧ್ಯತೆಯನ್ನೂ ತಳ್ಳಿಹಾಕಬಹುದು. ಸಸ್ಯಾಹಾರ ಮಾಂಸಾಹಾರಕ್ಕಿಂತಲೂ ಉತ್ತಮ ಎನ್ನಲು ಈಗಾಗಲೇ ಹಲವಾರು ಕಾರಣಗಳಿವೆ.

ಪ್ರಸ್ತುತ ಎದುರಾಗಿರುವ ಕೋವಿಡ್-19 ಸೋಂಕಿನ ಬಿಕ್ಕಟ್ಟಿಗೆ ಮಾಂಸ ರಫ್ತು ಉದ್ದಿಮೆಗಳು ಕಾರಣವೇ?

ಪ್ರಸ್ತುತ ಎದುರಾಗಿರುವ ಕೋವಿಡ್-19 ಸೋಂಕಿನ ಬಿಕ್ಕಟ್ಟಿಗೆ ಮಾಂಸ ರಫ್ತು ಉದ್ದಿಮೆಗಳು ಕಾರಣವೇ?

ಈ ಬಗ್ಗೆ ಖಚಿತ ಮಾಹಿತಿ ಇಲ್ಲವಾದರೂ ಈ ಸೋಂಕಿಗೂ ಮಾಂಸ ರಫ್ತು ಉದ್ದಿಮೆಗೂ ಇರುವ ಸಂಬಂಧವನ್ನು ಕಂಡುಕೊಳ್ಳುವುದು ಮಾತ್ರ ಅಗತ್ಯವಾಗಿದೆ. ಮಾನವರು ಹೆಚ್ಚಾಗಿ ಸೇವಿಸಲಾಗುವ ಮಾಂಸಾಹಾರಗಳೆಂದರೆ ಕೋಳಿ, ಕೋಳಿಮೊಟ್ಟೆ, ಹಸು, ಹಂದಿ ಮತ್ತು ಮೀನು. ಈ ಪ್ರಾಣಿಗಳನ್ನು ಕೊಂಡೊಯ್ಯುವ ವಾಹನಗಳು, ಇವುಗಳನ್ನು ಕೂಡಿ ಹಾಕುವ ಕೊಟ್ಟಿಗೆಗಳು, ಪಂಜರಗಳು ಮೊದಲಾದವುಗಳನ್ನು ನೋಡಿದರೆ ಸ್ವಚ್ಛತೆಗೆ ಈ ಉದ್ಯಮ ನೀಡಿರುವ ಕನಿಷ್ಟ ಆದ್ಯತೆಯನ್ನು ಸ್ಪಷ್ಟವಾಗಿಯೇ ಕಾಣಬಹುದು.

ಈ ಉದ್ದಿಮೆಗಳಿಗೆ ತಮ್ಮ ಲಾಭ ಮುಖ್ಯವೇ ಹೊರತು ಮನುಷ್ಯರಿಗೆ ಎದುರಾಗಬಹುದಾದ ಸೋಂಕು ಅಥವಾ ಕಾಯಿಲೆಗಳಲ್ಲ. ಈ ಪ್ರಾಣಿಗಳನ್ನು ವಧಿಸುವ ಸ್ಥಳಗಳಂತೂ ರಕ್ತ, ಮೂತ್ರಗಳ ರಾಡಿಯಿಂದ ಕೊಚ್ಚೆಯಾಗಿದ್ದು ಇವುಗಳಲ್ಲಿ ಕ್ರಿಮಿಗಳಿರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಿತ್ಯವೂ ಕೊಳೆಯಾಗುತ್ತಲೇ ಇರುವ ಕಾರಣ ಈ ಸ್ಥಳಗಳನ್ನು ನಾಮಕಾವಾಸ್ತೇ ಸ್ವಚ್ಛ ಮಾಡಲಾಗುತ್ತದೆಯೇ ವಿನಃ ಪರಿಪೂರ್ಣ ಸ್ವಚ್ಛತೆಗೆ ಇವರಲ್ಲಿ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ ಮತ್ತು ಇದಕ್ಕೆ ಸಂಸ್ಥೆ ಹಣವನ್ನೂ ಕೊಡುವುದಿಲ್ಲ. ಪರಿಣಾಮವಾಗಿ ಈ ಸ್ಥಳಗಳಲ್ಲಿ ಮಾರಕ ವೈರಸ್ಸುಗಳು ಮತ್ತು ಬ್ಯಾಕ್ಟೀರಿಯಾಗಳು ಶಾಶ್ವತ ಬೀಡು ಬಿಟ್ಟಿರುತ್ತವೆ.

ಪ್ರಸ್ತುತ ಎದುರಾಗಿರುವ ಕೋವಿಡ್-19 ಸೋಂಕಿನ ಬಿಕ್ಕಟ್ಟಿಗೆ ಮಾಂಸ ರಫ್ತು ಉದ್ದಿಮೆಗಳು ಕಾರಣವೇ?

ಪ್ರಸ್ತುತ ಎದುರಾಗಿರುವ ಕೋವಿಡ್-19 ಸೋಂಕಿನ ಬಿಕ್ಕಟ್ಟಿಗೆ ಮಾಂಸ ರಫ್ತು ಉದ್ದಿಮೆಗಳು ಕಾರಣವೇ?

ಸಾರ್ವಜನಿಕ ಆರೋಗ್ಯ ತಜ್ಞರು ಕೋವಿಡ್-19 ಸೋಂಕು ಇಂತಹ ಒಂದು ಪ್ರಾಣಿಯ ವಧಾಗಾರದಿಂದಲೇ ಅಥವಾ ಮಾರುಕಟ್ಟೆಯಿಂದಲೇ ಪ್ರಾರಂಭವಾಗಿರಬಹುದು ಎಂದು ತಮ್ಮ ಅನುಮಾನವನ್ನು ವ್ಯಕ್ತಪಡಿಸುತ್ತಾರೆ.

ಅಮೇರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಭಾಗದ ತಜ್ಞರು ಹೇಗೆ ಹೇಳುತ್ತಾರೆ: "ಇದುವರೆಗೆ ಮನುಷ್ಯರಲ್ಲಿ ಕಂಡುಬಂದಿರುವ ಸಾಂಕ್ರಾಮಿಕ ರೋಗಗಳಲ್ಲಿ ಮುಕ್ಕಾಲು ಪಾಲು ರೋಗಗಳು ಮೊದಲು ಪ್ರಾಣಿಗಳಲ್ಲಿ ಕಂಡುಬಂದಿದ್ದು ನಂತರ ಮನುಷ್ಯರಿಗೆ ಹರಡಿವೆ" ಈ ಮಾಹಿತಿಯನ್ನು ಆಧರಿಸಿ ಸಾರ್ಸ್ ಮತ್ತು ಮರ್ಸ್ ಎಂಬ ವೈರಸ್ಸುಗಳಂತೆಯೇ ಈಗ ಕೋವಿಡ್-19 ವೈರಸ್ ಸಹಾ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿರಬಹುದಾದ ಎಲ್ಲಾ ಸಾಧ್ಯತೆಗಳಿವೆ.

ಭಾರತದಲ್ಲಿ ಈಗಾಗಲೇ ಹಂದಿಜ್ವರ ಅಥವಾ ಸ್ವೈನ್ ಫ್ಲೂ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಾಗಿದೆ. ಹಕ್ಕಿ ಜ್ವರ ಅಥವಾ ಹೆಚ್1ಎನ್1 ಎಂಬ ವೈರಸ್ ಸಹಾ ಭಾರತದಲ್ಲಿ ಆವರಿಸಿದೆ. ಇವು ಆವರಿಸಿದಾಗಲೆಲ್ಲಾ ಹಂದಿಗಳನ್ನು ಮತ್ತು ಕೋಳಿಗಳನ್ನು, ಅವುಗಳಲ್ಲಿ ಸೋಂಕುಕಾರಕ ವೈರಸ್ಸುಗಳಿರಲೀ ಇಲ್ಲದೇ ಇರಲಿ ಸಾಮೂಹಿಕವಾಗಿ ಸುಟ್ಟು ಹಾಕಲಾಗುತ್ತದೆ.

ಹಕ್ಕಿಜ್ವರಕ್ಕೆ ಕಾರಣವಾಗುವ ಈ ವೈರಸ್ಸು ಹಾರುವ ಯಾವುದೇ ಹಕ್ಕಿಯಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುತ್ತದೆ. ಹಾಗೂ ಒಂದೇ ಕೋಳಿಗೆ ಬಂದರೂ ಇಡಿಯ ಕೋಳಿ ಫಾರಮ್ಮೇ ಸೋಂಕುಪೀಡಿತವಾಗುತ್ತದೆ. ಇದುವರೆಗೆ ಈ ವೈರಸ್ಸಿನ ನೂರಾ ನಲವತ್ತ ನಾಲ್ಕು ಪ್ರಬೇಧಗಳನ್ನು ಗುರುತಿಸಲಾಗಿದೆ. ಹಕ್ಕಿ ಜ್ವರ ಹಕ್ಕಿಗಳಿಂದ ಮನುಷ್ಯರಿಗೆ ಹರಡಿದರೆ ಸೋಂಕು ಶೀಘ್ರವಾಗಿ ಉಲ್ಬಣಗೊಳ್ಳುತ್ತದೆ ಮತ್ತು ಇವರಲ್ಲಿ 60% ಜನರು ಸಾವನ್ನಪ್ಪುತ್ತಾರೆ.

ಈ ಮಹಾಮಾರಿ ಸೋಂಕು ಹರಡುವಿಕೆಯಲ್ಲಿ ಮಾಂಸ ರಫ್ತು ಉದ್ದಿಮೆಗಳ ಪಾತ್ರವೇನು?

ಈ ಮಹಾಮಾರಿ ಸೋಂಕು ಹರಡುವಿಕೆಯಲ್ಲಿ ಮಾಂಸ ರಫ್ತು ಉದ್ದಿಮೆಗಳ ಪಾತ್ರವೇನು?

ಮಾಂಸಾಹಾರದ ಯಾವುದೇ ಉದ್ದಿಮೆಯಲ್ಲಿ ಲಾಭಕ್ಕೆ ಅತಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇದೇ ಪ್ರಕಾರ ಒಂದೇ ದಿನದಲ್ಲಿ ಲಕ್ಷಾಂತರ ಕೋಳಿಗಳನ್ನು ಕೃತಕವಾಗಿ ಉತ್ಪಾದಿಸಿ ಕೃತಕ ರಸದೂತ, ವೇಗವಾಗಿ ಮಾಂಸ ಬೆಳೆಯುವ ರಾಸಾಯನಿಕಗಳನ್ನು ಕೊಟ್ಟು ಆರೇ ವಾರದಲ್ಲಿ ಬಲವಂತವಾಗಿ ಕೊಬ್ಬುವಂತೆ ಮಾಡಲಾಗುತ್ತದೆ.

ಮುಂದಿನ ಎರಡು ವಾರಗಳಲ್ಲಿ ಇವು ಪೂರ್ಣವಾಗಿ ಮಾರಾಟವಾಗಿ ಹೋಗಬೇಕು, ಇಲ್ಲದಿದ್ದರೆ ಆ ಅವಧಿಯಲ್ಲಿ ಈ ಕೋಳಿಗಳು ತಿನ್ನುವ ಆಹಾರವನ್ನೂ ಲೆಕ್ಕ ಹಾಕಿ ಇವುಗಳನ್ನು ನಷ್ಟದಂತೆ ಪರಿಗಣಿಸಲಾಗುತ್ತದೆ. ಆರೋಗ್ಯ ಆರು ವಾರದಿಂದ ಎಂಟು ವಾರ ಚೆನ್ನಾಗಿದ್ದರೆ ಸಾಕು ಎಂಬಷ್ಟೇ ಪ್ರತಿಜೀವಕಗಳನ್ನು ನೀಡಲಾಗುತ್ತದೆ. ಇವುಗಳನ್ನು ಸೇವಿಸುವ ಮನುಷ್ಯರಿಗೆ ಯಾವ ರೋಗ ಬರುತ್ತದೆಯೋ ಅದರ ಬಗ್ಗೆ ಈ ಸಂಸ್ಥೆಗಳಿಗೆ ಚಿಂತೆಯಿಲ್ಲ.

ಆದರೆ ಈ ಔಷಧಿಗಳು ಪ್ರಾಣಿ ಮತ್ತು ಹಕ್ಕಿಗಳ ಮಾಂಸದಲ್ಲಿಯೂ ಉಳಿದುಕೊಳ್ಳುತ್ತವೆ ಹಾಗೂ ಇವುಗಳನ್ನು ಸೇವಿಸುವ ಮನುಷ್ಯರಿಗೂ ಹಾನಿ ಉಂಟು ಮಾಡಬಹುದು. ಬ್ಯಾಕ್ಟೀರಿಯಾಗಳು ಮತ್ತು ವೈರಸ್ಸುಗಳು ಸದಾ ತಮ್ಮ ರೂಪವನ್ನು ಬದಲಿಸಿಕೊಂಡು ಹೊಸ ಹೊಸ ಅವತಾರದಲ್ಲಿ ಬರುತ್ತಲೇ ಇರುತ್ತವೆ. ಈ ಹೊಸ ಅವತಾರಗಳು ಹಿಂದಿನ ಅವತಾರಗಳಿಗಿಂತ ಹೆಚ್ಚು ಬಲಿಷ್ಟ ಮತ್ತು ಮಾನವರು ಇದುವರೆಗೆ ಆವಿಷ್ಕರಿಸಿದ ಪ್ರತಿಜೀವಕ ಮದ್ದುಗಳಿಗೆ ಮಣಿಯದಂತೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಬಿಟ್ಟಿರುತ್ತವೆ.

ಈ ಮಹಾಮಾರಿ ಸೋಂಕು ಹರಡುವಿಕೆಯಲ್ಲಿ ಮಾಂಸ ರಫ್ತು ಉದ್ದಿಮೆಗಳ ಪಾತ್ರವೇನು?

ಈ ಮಹಾಮಾರಿ ಸೋಂಕು ಹರಡುವಿಕೆಯಲ್ಲಿ ಮಾಂಸ ರಫ್ತು ಉದ್ದಿಮೆಗಳ ಪಾತ್ರವೇನು?

ವೈದ್ಯ ವಿಜ್ಞಾನ ಈ ಅವತಾರಗಳನ್ನು ಸುಪರ್ ಬಗ್ (superbugs) ಎಂದು ಕರೆಯುತ್ತದೆ. ಕೊರೋನಾ ವೈರಸ್ ಸಹಾ ಹೀಗೇ ಒಂದು ಅವತಾರ ಎತ್ತಿದ್ದು ಯಾವುದೇ ಔಷಧಿಗೆ ಮಣಿಯದ ಮತ್ತು ಅತಿ ಸುಲಭವಾಗಿ ಮತ್ತು ವೇಗವಾಗಿ ಹರಡುವ ಗುಣವನ್ನು ಪಡೆದ ಅವತಾರ ಎತ್ತಿದೆ. ಇದನ್ನು 2019ರಲ್ಲಿ ಪತ್ತೆ ಮಾಡಲಾಗಿದ್ದರಿಂದಲೇ ಕೋವಿಡ್-19 ರಲ್ಲಿ 19 ಎಂಬ ಸಂಖ್ಯೆಯನ್ನು ಸೇರಿಸಲಾಗಿದೆ.

ಭಾರತದಲ್ಲಿ ಈಗಾಗಲೇ ನೂರಾರು ಬಗೆಯ ಸುಪರ್ ಬಗ್ ಗಳು ವ್ಯಾಪಕವಾಗಿವೆ. 2013 ರಲ್ಲಿ 58,000ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪಿವೆ. ಏಕೆಂದರೆ ಆ ಸಮಯದಲ್ಲಿ ಇಂತಹ ಒಂದು ಸುಪರ್ ಬಗ್ ಗೆ ಔಷಧಿಯೇ ಇರಲಿಲ್ಲ ಮತ್ತು ಆ ಸಮಯದಲ್ಲಿ ಆ ಬ್ಯಾಕ್ಟೀರಿಯಾಕ್ಕೆ ಇದ್ದ ಔಷಧಿಯನ್ನು ಈ ಅವತಾರ ಗೆದ್ದು ಆಗಿತ್ತು. ಈ ಸುಪರ್ ಬಗ್ ಗಳು ಯೂರೋಪ್ ನಲ್ಲಿ ವಾರ್ಷಿಕ 33,000 ಜನರನ್ನು ಕೊಲ್ಲುತ್ತಿವೆ.

ಪೆಟಾ ಭಾರತದ ವಿಭಾಗದ ಧ್ಯೇಯವಾಕ್ಯ ಹೀಗಿದೆ : "ಪ್ರಾಣಿಗಳನ್ನು ಯಾವುದೇ ರೀತಿಯಲ್ಲಿ ಶೋಷಣೆ ಮಾಡಲು ಅವೇನೂ ನಮ್ಮವಲ್ಲ" ಈ ವಾಕ್ಯ ಮನುಷ್ಯನೇ ಸಾರ್ವಭೌಮ ಎಂಬ ಹೇಳಿಕೆಗೆ ತದ್ವಿರುದ್ದವಾಗಿದ್ದು ಈ ಜಗತ್ತಿನ ಸಕಲ ಜೀವಿಗಳು ಸಹಬಾಳ್ವೆ ನಡೆಸುವತ್ತ ಒತ್ತು ನೀಡುತ್ತದೆ.

"ಹಲವಾರು ಉತ್ತಮ ಕಾರಣಗಳು, ಪ್ರಾಣಿಗಳ ರಕ್ಷಣೆ ಮಾಡಲು ಮತ್ತು ಈ ಭೂಮಿಯ ಆರೋಗ್ಯವನ್ನು ರಕ್ಷಿಸಲು ನಾವು ಮಾಡಬಹುದಾದ ಅತಿ ಸುಲಭ ಕ್ರಮ ಎಂದರೆ ನಮ್ಮ ಆಹಾರವನ್ನು ಸಸ್ಯಾಹಾರಕ್ಕೆ ಬದಲಿಸಿಕೊಳ್ಳುವುದು" ಎಂದು ಪೆಟಾ ಭಾರತ ವಿಭಾಗದ ಸಸ್ಯಾಹಾರ ಸಂಯೋಜಕ ಡಾ. ಕಿರಣ್ ಅಹುಜಾ ರವರು ವಿವರಿಸುತ್ತಾರೆ.

English summary

COVID 19: What Peta Says About Having Nonveg

Here we are discussing about COVID 19 effects what peta says about having nonveg. M umbai –You have questions about the meat industry's role in the COVID-19 outbreak and whether meat consumption is safe. PETA India has answers. Read more.
X
Desktop Bottom Promotion