For Quick Alerts
ALLOW NOTIFICATIONS  
For Daily Alerts

ನಾನು ಕೋವಿಡ್‌ 19 ನಿಂದ ಚೇತರಿಸಲು ಲಸಿಕೆಯೇ ಕಾರಣ: ವೈದ್ಯ ಸಿ ಎಸ್ ರಾಜನ್

|

'Story Of strength' ಎನ್ನುವುದು ಒನ್‌ ಇಂಡಿಯಾ ಕೈಗೊಂಡಿರುವ ಒಂದು ಅಭಿಯಾನವಾಗಿದೆ. ಕೋವಿಡ್‌ 19ನಿಂದ ಗುಣಮುಖರಾದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಇತರರಲ್ಲಿ ಧೈರ್ಯ ತುಂಬುವುದು ಈ ಅಭಿಯಾನದ ಉದ್ದೇಶವಾಗಿದೆ.

Covid-19 Positive Story

ನಮ್ಮೊಂದಿಗೆ ಡಾ ಸಿ. ಎಸ್ ರಾಜನ್ ತಾವು ಕೋವಿಡ್‌ 19 ಮಣಿಸಿದ್ದು ಹೇಗೆ ಎಂಬುವುದಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇವರು ನಿವೃತ್ತ ಸರ್ಜನ್‌, 30 ವರ್ಷಗಳವರೆಗೆ ಬೆಂಗಳೂರಿನ ಮಿಷನ್‌ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿದ್ದಾರೆ. ನಿವೃತ್ತಿ ಬಳಿಕ ಕ್ಲಿನಿಕ್ ಇಟ್ಟು ರೋಗಿಗಳ ಆರೈಕೆ ಮಾಡುತ್ತಿದ್ದರು. ದಿನದ ಸ್ವಲ್ಪ ಸಮಯ ರೋಗಿಗಳ ಆರೈಕೆಯಲ್ಲಿ ಕಳೆದರೆ ಮತ್ತೆ ಸ್ವಲ್ಪ ಸಮಯ ತಮ್ಮ ನಿವೃತ್ತಿ ಜೀವನವನ್ನು ಆಸ್ವಾದಿಸುತ್ತಿದ್ದರು.

 ಎಲ್ಲಾ ಮುನ್ನೆಚ್ಚರಿಕೆ ವಹಿಸಿದರೂ ಸೋಂಕು ತಗುಲಿತ್ತು

ಎಲ್ಲಾ ಮುನ್ನೆಚ್ಚರಿಕೆ ವಹಿಸಿದರೂ ಸೋಂಕು ತಗುಲಿತ್ತು

ಅವರೇ ಹೇಳುವ ಪ್ರಕಾರ 'ಕೋವಿಡ್‌ 19 ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದೆ, ಕೊರೊನಾ ಬಾರದಂತೆ ಸಾಕಷ್ಟು ಮುನ್ನೆಚ್ಚರಿಕೆವಹಿಸಿದ್ದೆ, ಆದರೂ ಸೋಂಕು ತಗುಲಿತು. ಮೂಗು ಸೋರುವುದು, ಗಂಟಲು ಕಟ್ಟುವುದು ಮುಂತಾದ ಲಕ್ಷಣಗಳು ಕಂಡು ಬಂದವು. ನನಗೆ ಮಾತ್ರ ಕುಟುಂಬದವರಿಗೂ ಸೋಂಕು ತಗುಲಿತ್ತು. ಔಷಧಿಗಳನ್ನು ತೆಗೆದುಕೊಂಡೆ, ಆದರೆ ನನಗೆ ಉಸಿರಾಟದ ತೊಂದರೆ ಉಂಟಾದ ಕಾರಣ ಮನೆಯವರು ಆಸ್ಪತ್ರೆಗೆ ಕೊಂಡೊಯ್ಯದ್ದರು.

ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತಿತ್ತು

ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತಿತ್ತು

ನನ್ನ ಆಕ್ಸಿಜನ್ ಪ್ರಮಾಣ ತುಂಬ ಕಡಿಮೆಯಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ ಇಟ್ಟು ಆರೈಕೆ ಮಾಡುತ್ತಿದ್ದರು, ಇನ್ನೇನು ICUಗೆ ಹಾಕಬೇಕು ಎಂಬ ಪರಿಸ್ಥಿತಿ ಉಂಟಾಯಿತು, ಆದರೆ ಆಕ್ಸಿಜನ್‌ ಸಪ್ಲಿಮೆಂಟ್‌ ನೀಡುತ್ತಿರುವಾಗಲೇ ದೇಹದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂತು, ಆರೋಗ್ಯ ಕುಸಿದಿದ್ದರೂ, ಮುಖದಲ್ಲಿ ನಗು ಮಯವಾಗಿರಲಿಲ್ಲ. ಮನಸ್ಸಿನಲ್ಲಿ ಧೈರ್ಯ ಇತ್ತು. ನಂತರ ವಾರದಲ್ಲಿ ಸುಧಾರಿಸಿ ಮನೆಗೆ ಬಂದೆ'

 ಲಸಿಕೆ ನನ್ನ ಉಳಿಸಿದ್ದು

ಲಸಿಕೆ ನನ್ನ ಉಳಿಸಿದ್ದು

ನನ್ನ ಉಳಿಸಿದ್ದು ಲಸಿಕೆ ಎಂದೇ ನಾನು ಹೇಳುತ್ತೇನೆ. ಜನವರಿ-ಮಾರ್ಚ್‌ ಅಂತರದಲ್ಲಿ ಎರಡು ಡೋಸ್‌ ಲಸಿಕೆ ಪಡೆದಿದ್ದೆ. ಅದೇ ನನ್ನ ಪ್ರಾಣ ಉಳಿಸಿದ್ದು, ಲಸಿಕೆ ಪಡೆದ ಬಳಿಕ ಆ್ಯಂಟಿ ಬಾಡಿ ಬರಲು ಕೆಲವು ವಾರ ತೆಗೆದುಕೊಳ್ಳುತ್ತದೆ, ನನ್ನಲ್ಲಿ ಸೋಂಕು ತಗುಲಿದ ಬಳಿಕ ಈ ರೋಗ ನಿರೋಧಕ ಶಕ್ತಿ ಮರಳಿ, ನನಗೆ ಬೇಗನೆ ಚೇತರಿಸಿಕೊಳ್ಳಲು ಸಹಾಯವಾಯ್ತು' ಎಂದಿದ್ದಾರೆ.

ಎಲ್ಲರೂ ಲಸಿಕೆ ಪಡೆಯಿರಿ

ಎಲ್ಲರೂ ಲಸಿಕೆ ಪಡೆಯಿರಿ

ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಎರಡರ ನಡುವೆ ದೊಡ್ಡ ವ್ಯತ್ಯಾಸವೇನು ಇಲ್ಲ, ಇದರಲ್ಲಿ ಯಾವ ಲಸಿಕೆಯಾದರೂ ಪಡೆಯಿರಿ, ಇದರಿಂದ ಕೊರೊನಾ ಗೆಲ್ಲಲು ಸಾಧ್ಯವಾಗುವುದು ಎಂದು ಜನರಿಗೆ ಸಲಹೆ ನೀಡಿದ್ದಾರೆ.

English summary

Covid-19 Positive Story: Dr CS Rajan Shares His Covid 19 Experience And Importance Of Covid-19 Vaccine

Covid-19 Positive Story: Dr CS Rajan shares his covid 19 experience and importance Of covid-19 vaccine...
X
Desktop Bottom Promotion