For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಚೇತರಿಸಿದವರ ಮೆದುಳಿಗೆ ಬೇಗನೆ ವಯಸ್ಸಾಗಲಿದೆ!

|

ಕೊರೊನಾ ಎಂಬ ಮಹಾಮಾರಿ ಈ ಜಗತ್ತಿಗೆ ಬಂದು ಮೂರು ವರ್ಷಗಳಾಗುತ್ತಿದೆ. 2019 ಡಿಸೆಂಬರ್‌ನಲ್ಲಿ ಈ ಹೆಸರು ಚೀನಾದಲ್ಲಿ ಕೇಳಿ ಬಂದಾಗ ಅದರ ಪರಿಣಾಮ ಇಡೀ ವಿಶ್ವಕ್ಕೆ ತುಂಬಾ ಭೀಕರವಾಗಿರುತ್ತದೆ ಎಂಬ ಕಲ್ಪನೆಯೂ ಯಾರಲ್ಲಿ ಮೂಡಿರಲಿಲ್ಲ.... ನೋಡು ನೋಡುತ್ತಿದ್ದಂತೆ ಈ ಕೊರೊನಾ ವಿವಿಧ ರೂಪಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿ ಜನರ ಜೀವ ಬಲಿ ಪಡೆದು ಇಡೀ ವಿಶ್ವವನ್ನೇ ಸ್ತಬ್ಧ ಮಾಡಿತು.

COVID-19 affects

ಇದು ಜನರ ಆರೋಗ್ಯದ ಮೇಲೆ ಮಾತ್ರವಲ್ಲ, ಅವರ ಆರ್ಥಿಕ ಸ್ಥಿತಿ, ಮಾನಸಿಕ ಸ್ಥಿತಿ, ವೃತ್ತಿ ಎಲ್ಲದರ ಮೇಲೂ ಪರಿಣಾಮ ಬೀರಿತು. ಈಗಷ್ಟೇ ಜಗತ್ತು ಸಹಜ ಸ್ಥಿತಿಗೆ ಮರಳುತ್ತಿದೆ, ಕೊರೊನಾದ ಕಾಟ ಕಡಿಮೆಯಾಗಿದ್ದರೂ ಅದರ ರೂಪಾಂತರಗಳು ಇನ್ನೂ ಇರುವುದರಿಂದ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೊನಾದಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಲಕ್ಷಾಂತರ ಮಂದಿ ಈ ಕೊರೊನಾ ಎಂಬ ಮಹಾಮಾರಿಗೆ ಸಿಲುಕಿ ಒದ್ದಾಡಿ ಅದೃಷ್ಟದಿಂದಾಗಿ ಪ್ರಾಣ ಉಳಿಸಿಕೊಂಡಿದ್ದಾರೆ, ಕೊರೊನಾದಿಂದ ಪಾರಾದರೂ ಅದರ ಅಡ್ಡಪರಿಣಾಮಗಳಿಂದ ಪಾರಾಗಿಲ್ಲ ಅಂತಿದೆ ಹೊಸ ಅಧ್ಯಯನ. ಕೊರೊನಾದಿಂದ ಚೇತರಿಸಿಕೊಂಡವರು ದೀರ್ಘಕಾಲದ ಅಡ್ಡಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ...

ಕೊರೊನಾ ಬಂದವರ ಮೆದುಳು ಬೇಗನೆ ವಯಸ್ಸಾಗಲಿದೆ

ಕೊರೊನಾ ಬಂದವರ ಮೆದುಳು ಬೇಗನೆ ವಯಸ್ಸಾಗಲಿದೆ

ಇತ್ತೀಚೆಗೆ ವಿಜ್ಞಾನಿಗಳು ಒಂದು ಅಧ್ಯಯನ ಮಾಡಿದರು ಅದರಲ್ಲಿ ಯಾರಿಗೆ ಕೊರೊನಾ ತುಂಬಾ ಬಾಧಿಸಿ, ಚೇತರಿಸಿಕೊಂಡಿದ್ದಾರೋ ಅವರ ಮೆದುಳಿಗೆ ಬೇಗನೆ ವಯಸ್ಸಾಗಲಿದೆ ಎಂದು ಹೊಸ ಅಧ್ಯಯನ ವರದಿ ಹೇಳಿದೆ.

ಮೆದುಳಿಗೆ ವಯಸ್ಸಾಗುವುದು ಎಂದರೆ ವಯಸ್ಸಾದಾಗ ನಮ್ಮ ಮೆದುಳು ಹೇಗೆ ಬದಲಾಗುತ್ತೋ ಅದೇ ರೀತಿ ಇವರ ಮೆದುಳು ಕೂಡ ಬೇಗನೆ ವಯಸ್ಸಾಗಲಿದೆ.ಇಂಥವರಲ್ಲಿ ವಯೋಸಹಜವಾಗಿ ಕಾಣಿಸಿಕೊಳ್ಳುವ ಮರೆವು, ಮತ್ತಿತರ ಸಮಸ್ಯೆ ಬೇಗನೆ ಕಾಣಿಸಿಕೊಳ್ಳಬಹುದು.

ಈ ಹೊಸ ಅಧ್ಯಯನ ವರದಿಯನ್ನು Nature Agingನಲ್ಲಿ ಪಬ್ಲಿಷ್ ಮಾಡಲಾಗಿದೆ.

ನೆನಪಿನ ಶಕ್ತಿ, ಚಿಂತನಾ ಶಕ್ತಿ ಕಡಿಮೆಯಾಗಲಿದೆ

ನೆನಪಿನ ಶಕ್ತಿ, ಚಿಂತನಾ ಶಕ್ತಿ ಕಡಿಮೆಯಾಗಲಿದೆ

ಇಸ್ರೇಲ್‌ನ ಬೋಸ್ಟನ್‌ನ Deaconess Medical Centerನಲ್ಲಿ ಎರಡು ವರ್ಷಗಳ ಹಿಂದೆಯೇ ಈ ಅಧ್ಯಯನ ಕೈಗೊಳ್ಳಲಾಯಿತು. ಆಗ ಈ ಕೋವಿಡ್‌ 19 ಜನರ ನೆನಪಿನ ಶಕ್ತಿ ಹಾಗೂ ಚಿಂತನಾ ಶಕ್ತಿ ಮೇಲೆ ಅಡ್ಡಪರಿಣಾಮ ಬೀರಿದೆ ಎಂಬ ಅಂಶ ತಿಳಿದು ಬಂದಿದೆ.

ಕೋವಿಡ್‌ನಿಂದ ಆರೋಗ್ಯ ಸ್ಥಿತಿ ಗಂಭೀರವಾಗಿ ವೆಂಟಿಲೇಟರ್‌ನಲ್ಲಿ ಮಲಗಿದ್ದವರ ಸ್ಯಾಂಪಲ್ ನಂತರ ಕೋವಿಡ್‌ ಸೋಂಕು ತಗುಲದೇ ಇರುವವರ ಸ್ಯಾಂಪಲ್ ತೆಗೆದುಕೊಳ್ಳಲಾಯಿತು, ಅಲ್ಲದೆ ಬೇರೆ ಆರೋಗ್ಯ ಸಮಸ್ಯೆಯಿಂದಾಗಿ ವೆಂಟಿಲೇಟರ್ ಚಿಕಿತ್ಸೆ ಅವಶ್ಯ ಬಿದ್ದ ಇತರ 9 ರೋಗಿಗಳನ್ನು ಕೂಡ ಈ ಅಧ್ಯಯನದಲ್ಲಿ ಒಳಪಡಿಸಲಾಗಿತ್ತು. ಆಗ ಯಾರಲ್ಲಿ ಕೊರೊನಾ ಲಕ್ಷಣಗಳು ತುಂಬಾ ಕಂಡು ಬಂದಿರುತ್ತಾದೋ ಅವರ ಮೆದುಳಿಗೆ ಬೇಗನೆ ವಯಸ್ಸಾಗುತ್ತಿರುವುದು ಕಂಡು ಬಂದಿದೆ.

 ಮೆದುಳಿಗೆ ಬೇಗನೆ ವಯಸ್ಸಾದರೆ ಏನಾಗುತ್ತೆ?

ಮೆದುಳಿಗೆ ಬೇಗನೆ ವಯಸ್ಸಾದರೆ ಏನಾಗುತ್ತೆ?

* ಮರೆವು ಸಮಸ್ಯೆ ಊಂಟಾಗುವುದು , ಕೆಲವರಲ್ಲಿ ಅಲ್ಜೈಮರ್ಸ್ ಸಮಸ್ಯೆ ಕೂಡ ಬರಬಹುದು.

* ಖಿನ್ನತೆ ಉಂಟಾಗುವುದು

* ಬೇಗನೆ ವಯಸ್ಸಾಗುವುದು.

ಕೋವಿಡ್‌ 19 ಬಳಿಕ ಕಂಡು ಬರುತ್ತಿರುವ ಅಡ್ಡಪರಿಣಾಮಗಳು

ಕೋವಿಡ್‌ 19 ಬಳಿಕ ಕಂಡು ಬರುತ್ತಿರುವ ಅಡ್ಡಪರಿಣಾಮಗಳು

ಕೋವಿಡ್ 19 ಬಂದು ಚೇತರಿಸಿದವರು ಈ ಬಗೆಯ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ಹೇಳುತ್ತಿದ್ದಾರೆ

* ಮೈ ಕೈ ನೋವು, ಆಗಾಗ ಕಾಡುತ್ತಿರುವ ತಲೆನೋವು: ಕೊರೊನಾದಿಂದ ಚೇತರಿಸಿದವರಲ್ಲಿ ಹೆಚ್ಚಿನವರು ಈ ಬಗ್ಗೆ ಹೇಳುತ್ತಿರುತ್ತಾರೆ, ಮೊದಲಿನಂತೆ ಶರೀರ ಇಲ್ಲ ತುಂಬಾ ಮೈಕೈ ನೋವು, ಸ್ವಲ್ಪ ಕೆಲಸ ಮಾಡಿದರೂ ಸುಸ್ತು ಅನ್ನುತ್ತಿರುತ್ತಾರೆ.

* ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಿರುವುದು: ಕೋವಿಡ್ 19ನಿಂದ ಚೇತರಿಸಿದವರಲ್ಲಿ ಮಧುಮೇಹದ ಸಮಸ್ಯೆ ಕಂಡು ಬರುತ್ತಿದೆ.

* ಜ್ವರ

* ಸುಸ್ತು

* ಉಸಿರಾಟಕ್ಕೆ ತೊಂದರೆ: ಕೆಲವೊಮ್ಮೆ ಉಸಿರಾಟಕ್ಕೆ ತೊಂದರೆಯಾದಂತೆ ಅನಿಸುವುದು, ಸ್ವಲ್ಪ ನಡೆದಾಡಿದರೆ ಉಸಿರಾಡಲು ಕಷ್ಟವಾಗುವುದು.

* ಯಾವುದಾದರೂ ಕೆಲಸ ಮಾಡಲು ಆಸಕ್ತಿ ಕಡಿಮೆಯಾಗುವುದು, ಸುಸ್ತು

* ತೀವ್ರವಾದ ಎದೆ ಬಡಿತ: ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಕೆಲವರಲ್ಲಿ ತೀವ್ರವಾದ ಎದೆ ಬಡಿತದ ಲಕ್ಷಣಗಳು ಕಂಡು ಬರುತ್ತಿದೆ.

* ಖಿನ್ನತೆ: ಕೋವಿಡ್‌ 19 ತಗುಲಿದಾಗ ತುಂಬಾ ಜನ ಖಿನ್ನತೆಗೆ ಒಳಗಾಗಿದ್ದರು, ಕೋವಿಡ್ 19ನಿಂದ ಚೇತರಿಸಿಕೊಂಡಿದ್ದರೂ ಮೊದಲಿನಂತೆ ನನ್ನ ಶರೀರ ಇಲ್ಲ ಎಂಬ ಭಾವನೆಯಿಂದ ಖಿನ್ನತೆ ಕಾಡುತ್ತಿದೆ.

* ತಲೆಸುತ್ತು

* ನರಗಳಲ್ಲಿ ರಕ್ತ ಹೆಪ್ಪುಗಟ್ಟುವುದು: ಕೋವಿಡ್‌ 19ನಿಂದ ಚೇತರಿಸಿದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

* ಹೊಟ್ಟೆ ಸಂಬಂಧಿತ ಲಕ್ಷಣಗಳು

* ಉಸಿರಾಟಕ್ಕೆ ತೊಂದರೆ

* ಫಂಗಲ್ ಸೋಂಕುಗಳು ( mycormycosis, aspergillosis, yellow fungus )

ಕೋವಿಡ್ 19 ಬಳಿಕ ಹೃದಯಾಘಾತ

ಕೋವಿಡ್‌ 19ನಿಂದ ಚೇತರಿಸಿಕೊಂಡವರಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತಿದೆ. ಕೋವಿಡ್‌ 19 ತೀವ್ರವಾಗಿ ಬಾಧಿಸಿ ಆಸ್ಪತ್ರೆಗೆ ದಾಖಲಾಗಿದ್ದ ಅನೇಕರ ಹೃದಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ತಜ್ಷರು ಹೇಳುತ್ತಿದ್ದಾರೆ.

English summary

COVID-19: Long-term Side Effects in Kannada

COVID-19 affects, coronavirus, covid 19 side affects, corona affects on brain....
X
Desktop Bottom Promotion