For Quick Alerts
ALLOW NOTIFICATIONS  
For Daily Alerts

ವಿಟಮಿನ್ ಡಿ ಕೋವಿಡ್-19 ರೋಗಿಗಳನ್ನು ಸಾವಿನಿಂದ ಪಾರು ಮಾಡುತ್ತದೆಯೇ?

|

ಕೊರೊನಾವೈರಸ್‌ ಹೇಗೆ ಹುಟ್ಟಿಕೊಂಡಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ, ಅದೇ ಈ ವೈರಸ್‌ನ ನಾಶ ಹೇಗೆ ಮಾಡಬೇಕೆಂದು ಜಗತ್ತಿಗೆ ಇನ್ನೂ ತಿಳಿದಿಲ್ಲ. ಚೀನಾದ ವುಹಾನ್‌ನ ಮಾಂಸದ ಮಾರುಕಟ್ಟೆಯಲ್ಲಿ ಹುಟ್ಟಿದೆ ಎನ್ನಲಾಗಿರುವ ಈ ವೈರಸ್‌ನ ಆತಂಕ ಶುರುವಾಗಿ 4 ತಿಂಗಳುಗಳೇ ಕಳೆದಿವೆ. ಇದರ ಕ್ರೌರ್ಯಕ್ಕೆ ಸಿಲುಕಿ ಇಡೀ ವಿಶ್ವವೇ ನಲುಗಿದೆ.

ಶ್ರೀಮಂತ ರಾಷ್ಟ್ರಗಳು ಎಂದು ಕರೆಸಿಕೊಂಡಿದ್ದ ಅಮೆರಿಕ, ಇಟಲಿ ಮುಂತಾದ ದೇಶಗಳಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯವಿದ್ದರೂ ಹೆಣಗಳ ರಾಶಿಗಳೇ ಉರುಳಿವೆ ಹಾಗೂ ಈಗಲೂ ದಿನನಿತ್ಯ ಜನ ಸಾಯುತ್ತಲೇ ಇದ್ದಾರೆ.

ಇನ್ನು ಭಾರತದ ದೇಶದಲ್ಲಿ ಎರಡು ತಿಂಗಳ ಹಿಂದೆ ಸಾವಿರದೊಳಗಿದ್ದ ಕೊರೊನಾ ರೋಗಿಗಳ ಸಂಖ್ಯೆ ಇದೀಗ
70,000 ಗಡಿ ದಾಟಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಹಾಗೆಯೇ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿರುವುದು ಸಮಧಾನದ ವಿಷಯ.

ಭಾರತದಲ್ಲಿ ಇದೀಗ ನಮ್ಮ ಮೂಲ ಔಷಧ ಆಯುರ್ವೇದ ಪದ್ಧತಿ ಮೂಲಕ ಕೊರೊನಾ ನಿಯಂತ್ರಣಕ್ಕೆ ತರಬಹುದೇ ಎಂಬ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಭಾರತದಲ್ಲಿ ಕೊರೊನಾ ಸೋಂಕಿತರು ಬೇಗನೆ ಗುಣಮುಖವಾಗುತ್ತಿರಲು ವಿಟಮಿನ್ ಡಿ ಕೂಡ ಒಂದು ಕಾರಣ ಎನ್ನಲಾಗುತ್ತಿದೆ.

ವಿಟಮಿನ್ ಡಿ ಹಾಗೂ ಕೋವಿಡ್-19 ನಡುವಿನ ಸಂಬಂಧವೇನು ಎಂದು ನೋಡೋಣ ಬನ್ನಿ:

 ವಿಟಮಿನ್ ಡಿ ಹಾಗೂ ಕೊರೊನಾವೈರಸ್‌ಗೂ ಸಂಬಂಧವಿದೆಯೇ?

ವಿಟಮಿನ್ ಡಿ ಹಾಗೂ ಕೊರೊನಾವೈರಸ್‌ಗೂ ಸಂಬಂಧವಿದೆಯೇ?

ಒಬ್ಬ ವ್ಯಕ್ತಿಯರೋಗ ನಿರೋಧ ಶಕ್ತಿ ಹೆಚ್ಚಿಸುವಲ್ಲಿ ವಿಟಮಿನ್ ಡಿ ಮಾತ್ರ ಪ್ರಮುಖವಾದದ್ದು, ಇದು ದೇಹವನ್ನು ವೈರಲ್ ಸೋಂಕಿನ ವಿರುದ್ಧ ರಕ್ಷಣೆ ಮಾಡುತ್ತದೆ. ವಿಟಮಿನ್ ಡಿ ಉರಿಯೂತದಂಥ ಸಮಸ್ಯೆ ನಿವಾರಿಸುವಲ್ಲಿ ತುಂಬಾ ಸಹಕಾರಿ. ಇದೀಗ ಸಂಶೋಧಕರು ವಿಟಮಿನ್‌ ಡಿಗೂ, ಕೋವಿಡ್ 19 ರೋಗಿಗಳು ಬೇಗನೆ ಚೇತರಿಸಿಕೊಳ್ಳುವುದಕ್ಕೂ ಸಂಬಂಧವಿದೆ ಎನ್ನುತ್ತಿದ್ದಾರೆ.

ವಿಟಮಿನ್ ಡಿ ಪಾತ್ರ

ವಿಟಮಿನ್ ಡಿ ಪಾತ್ರ

ಕೊರೊನಾವೈರಸ್ ದೇಹವನ್ನು ಸೇರಿದಾಗ ಆ ವ್ಯಕ್ತಿಯ ಶ್ವಾಸಕೋಶವನ್ನು ಹಾಳು ಮಾಡುತ್ತದೆ, ಇದರಿಂದ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು. ಕೊರೊನಾವೈರಸ್ ತಡೆಗಟ್ಟುವಲ್ಲಿ ಹಾಗೂ ರೋಗಿ ಬೇಗನೆ ಚೇತರಿಸಿಕೊಳ್ಳುವಲ್ಲಿ ವಿಟಮಿನ್‌ ಡಿ ಪಾತ್ರ ಪ್ರಮುಖವಾದದ್ದು ಎಂದು ಈ ಕುರಿತು ನಡೆಸಿದ ಹಲವಾರು ಅಧ್ಯಯನಗಳು ಹೇಳಿವೆ.

ಅಧ್ಯಯನಗಳು ಏನು ಹೇಳುತ್ತಿವೆ?

ಅಧ್ಯಯನಗಳು ಏನು ಹೇಳುತ್ತಿವೆ?

* ಕೊರೊನಾವೈರಸ್‌ ವೈರಾಣುವಿನಿಂದ ಗಂಭೀರವಾದ ರೋಗಿಗಳಲ್ಲಿ ವಿಟಮಿನ್ ಡಿ ಕೊರತೆ ಇರುವುದು ಪತ್ತೆಯಾಗಿದೆ. ವಿಟಮಿನ್ ಡಿ ಕೊರತೆ ಇಲ್ಲದವರಲ್ಲಿ ಕೊರೊನಾವೈರಸ್‌ ಸೋಂಕಿದರೂ ಬೇಗನೆ ಗುಣಮುಖರಾಗುತ್ತಿದ್ದಾರೆ.

* ವಿಟಮಿನ್‌ ಡಿ ಕೊರತೆಯಿರುವವರು ಇತರರಿಗಿಂತ ಬೇಗನೆ ಸೋಂಕಿಗೆ ತುತ್ತಾಗುತ್ತಿದ್ದಾರೆ.

* ವಿಟಮಿನ್ ಡಿ ಸಪ್ಲಿಮೆಂಟ್‌ ಅನ್ನು ಕೋವಿಡ್ 19 ರೋಗಿಗಳಿಗೆ ನೀಡಿದಾಗ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಗಳಲ್ಲಿ ಚೇತರಿಕೆ ಕಂಡು ಬಂದಿರುವುದಾಗಿ ಅಧ್ಯಯನಗಳು ಹೇಳಿವೆ.

* ತೀವ್ರ ಉಸಿರಾಟದ ವಿರುದ್ಧ ವಿಟಮಿನ್ ಡಿ ರಕ್ಷಣೆಯನ್ನು ನೀಡುತ್ತದೆ. ವಿಟಮಿನ್ ಡಿ ಕೊರತೆಯಲ್ಲಿ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುವುದು. ಕೊರೊನಾವೈರಸ್‌ ಸೋಂಕು ವಯಸ್ಸಾದವರನ್ನೇ ಹೆಚ್ಚಾಗಿ ಬಲಿ ತೆಗೆದುಕೊಂಡಿದೆ.

* ಚೀನಾ, ಫ್ರಾನ್ಸ್, ದಕ್ಷಿಣ ಕೊರಿಯಾ, ಇಟಲಿ, ಸ್ಪೇನ್, ಯುಕೆ, ಯುಎಸ್‌,ಸ್ವಿಜರ್ಲೆಂಡ್ ಮುಂತಾದ ದೇಶಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ನೋಡುವುದಾದರೆ ವಿಟಮಿನ್ ಡಿ ಅಧಿಕವಿರುವ ರಾಷ್ಟ್ರಕ್ಕಿಂತ, ಇದರ ಕೊರತೆ ಇರುವ ದೇಶಗಳಲ್ಲಿಯೇ ಹೆಚ್ಚಿನ ಸಾವು ಸಂಭವಿಸಿರುವುದಾಗಿ ಅಂಕಿ ಅಂಶಗಳು ಹೇಳಿವೆ.

ವಿಟಮಿನ್ ಡಿ ಮತ್ತು ಸೈಟೋಕೈನ್‌ ಸ್ಟ್ರೋಮ್ ನಡುವಿನ ಸಂಬಂಧ

ವಿಟಮಿನ್ ಡಿ ಮತ್ತು ಸೈಟೋಕೈನ್‌ ಸ್ಟ್ರೋಮ್ ನಡುವಿನ ಸಂಬಂಧ

ಸೈಟೋಕೈನ್ ಸ್ಟ್ರೋಮ್ ಎನ್ನುವುದು ನಮ್ಮ ದೇಹದಲ್ಲಿ ಬಿಡುಗಡೆಯಾಗುವ ಒಂದು ಬಗೆಯ ಪ್ರೊಟೀನ್ ಆಗಿದ್ದು ಇದು ದೇಹದ ಅಂಗಾಂಗಗಳಲ್ಲಿ ಬಿಡುಗಡೆಯಾಗಿ ವೈರಾಣುಗಳ ವಿರುದ್ಧ ಹೋರಾಡುವಂತೆ ದೇಹವನ್ನು ಸಜ್ಜುಗೊಳಿಸುತ್ತದೆ.

ಸೈಟೋಕೈನ್‌ ಉತ್ಪತ್ತಿ ಹಾಗೂ ವಿಟಮಿನ್ ಡಿ ನಡುವೆ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ.

ಕೊರೊನಾವೈರಸ್ ದೇಹವನ್ನು ಸೇರಿದಾಗ ಶ್ವಾಸಕೋಶದಲ್ಲಿ ದ್ರವ ತುಂಬುವಂತೆ ಮಾಡಿ ಉಸಿರಾಟಕ್ಕೆ ತೊಂದರೆ ಉಂಟು ಮಾಡುವುದು. ಇದರಿಂದಾಗಿ ಗಂಟಲಿನಲ್ಲಿ ಉರಿಯೂತ ಉಂಟಾಗುವುದು, ಇನ್ನು ಕೆಲವರಲ್ಲಿ ಇದು ತೀವ್ರವಾಗಿ ಸಾವು ಕೂಡ ಸಂಭವಿಸವುದು

ಸೈಟೋಕೈನ್ ಸ್ಟ್ರೋಮ್ ಪ್ರೊಟೀನ್ ಕೋವಿಡ್‌ 19 ರೋಗಿಗಳಲ್ಲಿ ಮಾತ್ರವಲ್ಲ ಸಾರ್ಸ್‌, MERS ಮುಂತಾದ ಉಸಿರಾಟದ ಕಾಯಿಲೆ ವಿರುದ್ಧ ಹೋರಾಡುವಲ್ಲಿಯೂ ಸಹಕಾರಿ.

ಆದ್ದರಿಂದ ವಿಟಮಿನ್ ಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಕಣಗಳು ಸಕ್ರಿಯವಾಗಿರುವಂತೆ ಮಾಡುವುದು ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡುವುದು.

ಬಿಸಿಲ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಕಡಿಮೆ

ಬಿಸಿಲ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಕಡಿಮೆ

ಉತ್ತರ ಯುರೋಪಿಯನ್‌ ರಾಷ್ಟ್ರಗಳಾದ ಫೈನ್‌ಲ್ಯಾಂಡ್, ನಾರ್ವೆ, ಡೆನ್ಮಾರ್ಕ್, ಸ್ವೀಡನ್ ಇಲ್ಲಿಯ ಜನರಿಗೆ ವಿಟಮಿನ್ ಡಿ ಅಧಿಕವಾಗಿ ದೊರೆಯುತ್ತಿದ್ದು ಆ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಅದೇ ವಿಟಮಿನ್ ಡಿ ಕೊರತೆ ಇರುವ ರಾಷ್ಟ್ರಗಳಾದ ಸ್ಪೇನ್, ಇಟಲಿಯಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದೆ. ಹಾಗಾಗಿ ಕೊರೊನಾವೈರಸ್‌ನಿಂದ ಉಂಟಾಗುತ್ತಿರುವ ಸಾವು ಹಾಗೂ ವಿಟಮಿನ್‌ ಡಿಗೆ ಸಂಬಂಧವಿದೆ ಎನ್ನುತ್ತಿವೆ ಅಧ್ಯಯನ ವರದಿಗಳು.

ವಿಟಮಿನ್ ಡಿ ಸಪ್ಲಿಮೆಂಟ್‌ನಿಂದ ಪ್ರಯೋಜನವಿದೆಯೇ?

ವಿಟಮಿನ್ ಡಿ ಸಪ್ಲಿಮೆಂಟ್‌ನಿಂದ ಪ್ರಯೋಜನವಿದೆಯೇ?

ವಿಟಮಿನ್ ಡಿ ಸೂರ್ಯನ ಕಿರಣಗಳಿಂದ ದೊರೆಯುತ್ತದೆ ಹಾಗೂ ಕೆಲವೊಂದು ಆಹಾರಗಳಲ್ಲಿ ದೊರೆಯುತ್ತದೆ. ವಿಟಮಿನ್ ಡಿ ಕೊರತೆ ಇಲ್ಲದವರು ವಿಟಮಿನ್ ಡಿ ಸಪ್ಲಿಮೆಂಟ್‌ ತೆಗೆದುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತಾರೆ ತಜ್ಞರು.

ವಿಟಮಿನ್‌ ಡಿ ಸಪ್ಲಿಮೆಂಟ್‌ ಎಲ್ಲಾ ಕೋವಿಡ್ 19 ರೋಗಿಗಳಿಗೆ ನೀಡಲು ಸಾಧ್ಯವಿಲ್ಲ, ಏಕೆಂದರೆ ಕೊರತೆ ಇಲ್ಲದವರಿಗೆ ಇದನ್ನು ನೀಡುವುದರಿಂದ ಪ್ರಯೋಜವಿಲ್ಲ. ಆದರೆ ವಿಟಮಿನ್ ಡಿ ಕೊರತೆ ಇರುವವರಿಗೆ ನೀಡಿದರೆ ಸಾವಿನ ಸಂಖ್ಯೆ ತಗ್ಗಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ವಿಟಮಿನ್ ಡಿ ಹೆಚ್ಚಾದರೆ ಏನಾಗುತ್ತೆ:

ವಿಟಮಿನ್ ಡಿ ಹೆಚ್ಚಾದರೆ ಏನಾಗುತ್ತೆ:

ವಿಟಮಿನ್ ಡಿ ಸಪ್ಲಿಮೆಂಟ್‌ ಅಧಿಕವಾದರೂ ತೊಂದರೆ ತಪ್ಪಿದ್ದಲ್ಲ. ಇದರಿಂದಾಗಿ

*ಹೊಟ್ಟೆ ಹಾಳಾಗುವುದು, ಅಧಿಕ ರಕ್ತದೊತ್ತಡ, ಗೊಂದಲ ಸಮಸ್ಯೆ ಉಂಟಾಗುವುದು

* ಕಿಡ್ನಿ ಹಾಳಾಗುವುಉದ

* ಮೂಳೆಗಳು ಬಲಹೀನವಾಗುವುದು

* ಶ್ವಾಸಕೋಶದ ತೊಂದರೆ ಉಂಟಾಗುವುದು

* ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು

* ತಲೆಸುತ್ತು

* ವಾಂತಿ

* ಹೊಟ್ಟೆ ನೋವು

* ಪ್ಯಾಂಕ್ರಿಯಾಟೈಟಿಸ್

 ಸೂಚನೆ:

ಸೂಚನೆ:

ಕೋವಿಡ್ 19 ಗೆ ಹೆದರಿ ಅನಗ್ಯತವಾಗಿ ವಿಟಮಿನ್‌ ಡಿ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಮಾಡಬೇಡಿ. ಬಿಸಿಲಿನಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ನಿಲ್ಲುವುದರಿಂದ ಹಾಗೂ ಮೀನು, ಅಣಬೆ, ಅಗಸೆ ಬೀಜ ಈ ಆಹಾರಗಳನ್ನು ಸೇವಿಸುವುದರಿಂದ ನೈಸರ್ಗಿಕವಾಗಿ ವಿಟಮಿನ್ ಡಿ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದು.

English summary

Can The Vitamin D Prevent Coronavirus Death?

Vitamin D is a fat-soluble vitamin that is different from other vitamins because the human body can absorb most of this vitamin when exposed to sunlight. It acts as a pro-hormone, which affects the hormone balance and immune regulation of the body.
X
Desktop Bottom Promotion