For Quick Alerts
ALLOW NOTIFICATIONS  
For Daily Alerts

ಪುರುಷರು ಅತಿ ಹೆಚ್ಚು ಉಪ್ಪಿನಕಾಯಿ ತಿಂದ್ರೆ ಏನಾಗುತ್ತೆ ಗೊತ್ತಾ?

|

ಉಪ್ಪಿನಕಾಯಿಯ ರುಚಿ ಎಂತದ್ದು ಎಂಬುದನ್ನು ಬಾಯಿಬಿಟ್ಟು ಹೇಳಬೇಕಾಗಿಲ್ಲ. ಹೆಸರು ಹೇಳಿದ ಕೂಡಲೇ ಬಾಯಲ್ಲಿ ನೀರೂರುತ್ತೆ. ಉಪ್ಪಿನಕಾಯಿ ಇಲ್ಲದ ಊಟ ಸಪ್ಪೆ ಸಪ್ಪೆ ಎಂಬ ಮಾತೇ ಇದೆ. ಉಪ್ಪಿನಕಾಯಿ ರುಚಿಯೆಂದು ಅತಿಯಾಗಿ ತಿಂದರೆ ನಿಮ್ಮ ಆರೋಗ್ಯದ ಮೇಲೂ ಹಾನಿ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಪುರುಷರು ಅತಿಯಾಗಿ ಉಪ್ಪಿನಕಾಯಿ ಸೇವಿಸುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಕ್ಕೆ ಕಾರಣವಾಗುತ್ತದೆ.

Pickles Dangerous For Men

ಮಾವಿನಕಾಯಿ ಸೀಸನ್ ಪ್ರಾರಂಭವಾಗಿದೆ. ಹೆಚ್ಚಿನವರು ಮಾವಿನಕಾಯಿ ಉಪ್ಪಿನಕಾಯಿ ತಯಾರಿಯಲ್ಲಿ ಬ್ಯುಸಿ ಆಗಿರಬಹುದು. ಹುಳಿಹುಳಿ ಮಾವಿನಕಾಯಿಯ ಉಪ್ಪಿನಕಾಯಿಯ ರುಚಿ ನಿಜಕ್ಕೂ ಅಧ್ಬುತ ಎಂಬುದರಲ್ಲಿ ಎರಡು ಮಾತಿಲ್ಲ.

ಉಪ್ಪಿನಕಾಯಿ ಬಗ್ಗೆ ನೀವು ತಿಳಿಯಲೇಬೇಕಾದ ಅಚ್ಚರಿಯ ಸಂಗತಿಗಳು

ಉಪ್ಪಿನಕಾಯಿ ಬಗ್ಗೆ ನೀವು ತಿಳಿಯಲೇಬೇಕಾದ ಅಚ್ಚರಿಯ ಸಂಗತಿಗಳು

ಆದರೆ ಈ ಉಪ್ಪಿನಕಾಯಿ ಪುರುಷರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಉಪ್ಪಿನಕಾಯಿ ಸೇವನೆಯು ಯಾವೆಲ್ಲಾ ರೀತಿಯ ಕೆಟ್ಟ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಸಿಟ್ರಸ್ ಅಂಶ ಅಪಾಯಕಾರಿ

ಸಿಟ್ರಸ್ ಅಂಶ ಅಪಾಯಕಾರಿ

ಪುರುಷರು ಮಾವಿನಕಾಯಿ ಉಪ್ಪಿನಕಾಯಿ ಸೇವಿಸುವುದನ್ನು ನಿಷೇಧಿಸುವುದು ಒಳ್ಳೆಯದು. ಕೆಲವರು ಎಷ್ಟೇ ಹೇಳಿದರೂ ಇದೆಲ್ಲಾ ಸುಳ್ಳೆಂದು ಭಾವಿಸಬಹುದು. ಆದರೆ ಒಂದು ಅಧ್ಯಯನವು ಹೇಳುವ ಪ್ರಕಾರ ನಿರಂತರವಾಗಿ ಪುರುಷರು ಸಿಟ್ರಸ್ ಅಂಶದ ಸೇವನೆಯನ್ನು ಮಾಡುತ್ತಿದ್ದಲ್ಲಿ ಅದನ್ನು ಇಂದೇ ನಿಲ್ಲಿಸುವುದು ಒಳ್ಳೆಯದು.

ಲೈಂಗಿಕ ದುರ್ಬಲತೆ

ಲೈಂಗಿಕ ದುರ್ಬಲತೆ

ಒಂದು ವೇಳೆ ಸಿಟ್ರಸ್ ಅಂಶವನ್ನು ಅತಿಯಾಗಿ ಸೇವಿಸಿದರೆ ಲೈಂಗಿಕ ದುರ್ಬಲತೆಯ ಲಕ್ಷಣಗಳು ಅವರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಅಪರೂಪಕ್ಕೆ ಉಪ್ಪಿನಕಾಯಿ ಸೇವಿಸುವುದರಿಂದ ಯಾವುದೇ ಇಲ್ಲವಾದರೂ, ಉಪ್ಪಿನಕಾಯಿ ಇಲ್ಲದೆ ಊಟವೇ ಸೇರುವುದಿಲ್ಲ ಎನ್ನುವವರಲ್ಲಿ ಈ ಸಮಸ್ಯೆ ಖಂಡಿತ ಕಾಡಲಿದೆ.

ಉಪ್ಪಿನಕಾಯಿಯಲ್ಲಿ ಇರಲಿದೆ ಅಸಟಾಮಿಪ್ರಿಡ್

ಉಪ್ಪಿನಕಾಯಿಯಲ್ಲಿ ಇರಲಿದೆ ಅಸಟಾಮಿಪ್ರಿಡ್

ಮಾವಿನಕಾಯಿ ಉಪ್ಪಿನಕಾಯಿಯ ಮೇಲೆ ನಡೆದ ಸಂಶೋಧನೆಯೊಂದು ಪುರುಷರು ಹೆಚ್ಚು ಮಾವಿನಕಾಯಿ ಉಪ್ಪಿನಕಾಯಿ ಯಾಕೆ ಸೇವಿಸಬಾರದು ಎಂದು ವಿವರಿಸಿದೆ. ಅಸಟಾಮಿಪ್ರಿಡ್(Acetamiprid) ಪ್ರಮಾಣವಿದ್ದರೆ ಮಾತ್ರ ಮಾವಿನಕಾಯಿ ಉಪ್ಪಿನಕಾಯಿ ನಿಮಗೆ ಹಾನಿಯಾಗಲಿದೆ.

ಸಾವಯವ ಸಂಯುಕ್ತ

ಸಾವಯವ ಸಂಯುಕ್ತ

ಅಸಟಾಮಿಪ್ರಿಡ್(Acetamiprid) ಒಂದು ಸಾವಯವ ಸಂಯುಕ್ತವಾಗಿದೆ. ಮಾವಿನಹಣ್ಣನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುವ ಸಲುವಾಗಿ ಇದನ್ನು ಔಷಧಿಯಂತೆ ಬಳಕೆ ಮಾಡಲಾಗುತ್ತದೆ. ನಿತ್ಯ ಇದನ್ನು ಬಳಕೆ ಮಾಡುವ ಪರಿಣಾಮದಿಂದಾಗಿ ಪುರುಷರ ಲೈಂಗಿಕ ಆಸಕ್ತಿ ಕುಂಠಿತವಾಗುತ್ತದೆ. ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗುತ್ತದೆ.

ಅತಿಯಾಗಿ ತಿನ್ನುವುದನ್ನು ನಿಲ್ಲಿಸಿ

ಅತಿಯಾಗಿ ತಿನ್ನುವುದನ್ನು ನಿಲ್ಲಿಸಿ

ಇಂದಿನ ಜಮಾನದಲ್ಲಿ ರಾಸಾಯನಿಕವಿಲ್ಲದೆ ಯಾವುದೇ ಹಣ್ಣು-ತರಕಾರಿಗಳನ್ನೂ ಕೂಡ ಬೆಳೆಯುತ್ತಿಲ್ಲ. ಮಾವಿನಕಾಯಿಯೂ ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಮಾವಿನಕಾಯಿ ಉಪ್ಪಿನಕಾಯಿಯೂ ಕೂಡ ಕೆಮಿಕಲ್ ಮಿಶ್ರಿತವಾಗಿದೆ. ಇನ್ನು ಉಪ್ಪಿನಕಾಯಿ ಹೆಚ್ಚು ಕಾಲ ಬಾಳಿಕೆ ಬರುವ ಸಲುವಾಗಿಯೂ ಕೂಡ ರಾಸಾಯನಿಕ ಬಳಸಿರುವ ಸಾಧ್ಯತೆ ಇರುತ್ತದೆ.

ಹಾಗಾಗಿ ಆದಷ್ಟು ಉಪ್ಪಿನಕಾಯಿ ಬಳಕೆ ಮಾಡುವುದನ್ನು ತಪ್ಪಿಸಿ. ಬದಲಾಗಿ ಫ್ರೆಶ್ ಚಟ್ನಿ,ಸಲಾಡ್ ಅಥವಾ ಸಾಸ್ ಇತ್ಯಾದಿಗಳ ರೂಪದಲ್ಲಿ ಬಳಸಿ. ನಿಮ್ಮ ಆಹಾರವನ್ನು ಉತ್ತಮವಾಗಿಸಿಕೊಂಡು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

English summary

Are Pickles Dangerous For Men

Here we are discussing about are pickles dangerous for men. The intake of salt in high quantities can also significantly increase blood pressure, which can be a serious problem for people who have medical conditions sensitive to blood pressure. Read more.
X
Desktop Bottom Promotion