For Quick Alerts
ALLOW NOTIFICATIONS  
For Daily Alerts

ಈ ಆರೋಗ್ಯ ಸಮಸ್ಯೆಯಿದ್ದರೆ ಅಡುಗೆಗೆ ಸಾಸಿವೆ ಎಣ್ಣೆ ಬಳಸಿ

|

ಒಂದೊಂದು ಕಡೆ ಅಡುಗೆಗೆ ಒಂದೊಂದು ಬಗೆಯ ಎಣ್ಣೆ ಬಳಕೆ ಮಾಡುತ್ತಾರೆ. ಕೆಲವರು ಸೂರ್ಯಕಾಂತಿ ಎಣ್ಣೆ, ಕಡ್ಲೆ ಎಣ್ಣೆ ಅಡುಗೆಗೆ ಬಳಸಿದರೆ ಮಂಗಳೂರು, ಕೇರಳ ಕಡೆ ತೆಂಗಿನೆಣ್ಣೆ ಬಳಸುತ್ತಾರೆ. ಉತ್ತರ ಭಾರತದ ಕಡೆ ಸಾಸಿವೆ ಎಣ್ಣೆ ಹೆಚ್ಚಾಗಿ ಬಳಸುತ್ತಾರೆ. ಎಣ್ಣೆ ಬದಲಾದಂತೆ ಅಡುಗೆಯ ಸ್ವಾದವೂ ಬದಲಾಗುತ್ತದೆ.

mustard oil

ಇಲ್ಲಿ ನಾವು ಸಾಸಿವೆ ಎಣ್ಣೆ ಅಡುಗೆಗೆ ಬಳಸುವುದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಹೇಳಿದ್ದೇವೆ. ಸಾಸಿವೆ ಎಣ್ಣೆಯಲ್ಲಿ ಮೋನೋಸ್ಯಾಚುರೇಟಡ್ ಕೊಬ್ಬಿನ ಆಮ್ಲ(59ಗ್ರಾಂ), ಸ್ಯಾಚುರೇಟಡ್‌ ಕೊಬ್ಬಿನ ಆಮ್ಲ (11ಗ್ರಾಂ) ಮತ್ತು ಪಾಲಿಅನ್‌ಸ್ಯಾಚುರೇಟಡ್ ಕೊಬ್ಬಿನ ಆಮ್ಲ(21ಗ್ರಾಂ) ಇದ್ದು ಈ ರೀತಿಯ ಆರೋಗ್ಯ ಸಮಸ್ಯೆ ಇರುವವರು ಅಡುಗೆಗೆ ಸಾಸಿವೆ ಎಣ್ಣೆ ಬಳಸಿ ತಿಂದರೆ ಒಳ್ಳೆಯದು.
1. ಹೃದಯ ಸಮಸ್ಯೆ ಇದ್ದರೆ

1. ಹೃದಯ ಸಮಸ್ಯೆ ಇದ್ದರೆ

ಹೃದಯ ಸಮಸ್ಯೆ ಇರುವವರು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು, CHD(Coronary heart disease)ಅಪಾಯವನ್ನು ತಗ್ಗಿಸಬೇಕು. ಅಧ್ಯಯನ ಪ್ರಕಾರ ಸಾಸಿವೆ ಎಣ್ಣೆಯಲ್ಲಿ ಮೋನೋಸ್ಯಾಚುರೇಟಡ್ ಕೊಬ್ಬಿನಂಶವಿದ್ದು ಹೃದಯ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕಾರಿ.

2. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ

2. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ

ಸಾಸಿವೆ ಎಣ್ಣೆಯಲ್ಲಿ ಒಮೆಗಾ 3 ಪಾಲಿಸ್ಯಾಚುರೇಟಡ್ ಕೊಬ್ಬಿನ ಆಮ್ಲ ಇದ್ದು ಇದು ಕರುಳಿನ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಸಹಕಾರಿಯಾಗಿದೆ. ಇನ್ನು ಕರುಳಿನಲ್ಲಿ ಗಡ್ಡೆ ಬಂದು ಕ್ಯಾನ್ಸರ್ ಆಗುವುದನ್ನು ತಡೆಗಟ್ಟುವಲ್ಲಿ ಮೀನಿನ ಎಣ್ಣೆ, ಜೋಳದ ಎಣ್ಣೆಗೆ ಹೋಲಿಸಿದರೆ ಶೇ. 50ರಷ್ಟು ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ.

3. ಜಠರದ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ

3. ಜಠರದ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ

ಸಾಸಿವೆ ಎಣ್ಣೆಯಲ್ಲಿ ಅಲೈಲ್ ಐಸೊಥಿಯೊಸೈನೇಟ್ ಅಂಶವಿದ್ದು ಜಠರದ ಕ್ಯಾನ್ಸರ್ 34.5%ರಷ್ಟು ಕಡಿಮೆ ಮಾಡುತ್ತದೆ. ಸಾಸಿವೆ ಎಣ್ಣೆಯಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಡುವ ಗುಣದ ಜೊತೆಗೆ ಅದರ ವಾಸನೆ ಕೂಡ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕರಿ.

4. ಜೀರ್ಣಕ್ರಿಯೆ ವೃದ್ಧಿಸಲು ಸಹಕಾರಿ

4. ಜೀರ್ಣಕ್ರಿಯೆ ವೃದ್ಧಿಸಲು ಸಹಕಾರಿ

ಅಜೀರ್ಣ ಸಮಸ್ಯೆ ಕಾಡುತ್ತಿದ್ದಾರೆ ಅಡುಗೆ ಎಣ್ಣೆಯನ್ನು ಬದಲಾಯಿಸಿ. ಇದು ಹಲ್ಲುಗಳಲ್ಲಿರುವ ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ಕೊಲ್ಲಲು ಕೂಡ ಸಹಕಾರಿ. ಇದು ಜೀರ್ಣಕ್ರಿಯೆಗೆ ಸಹಾಯ ಜೀರ್ಣಾಂಗವ್ಯೂಹ ಉತ್ತಮ ಕಾರ್ಯನಿರ್ವಹಿಸುವಂತೆ ಮಾಡಿ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ.

5. ತೂಕ ಇಳಿಕೆಗೆ ಸಹಕಾರಿ

5. ತೂಕ ಇಳಿಕೆಗೆ ಸಹಕಾರಿ

ಸಾಸಿವೆ ಎಣ್ಣೆಯಲ್ಲಿ diacylglycerol ಅಂಶ ಅಧಿಕವಿರುವುದರಿಂದ ತೂಕ ಇಳಿಕೆಗೆ ಸಹಕಾರಿ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ ಆದ HDLಯನ್ನು ಹೆಚ್ಚು ಮಾಡುತ್ತದೆ. ತೂಕ ಇಳಿಕೆಗೆ ಪ್ರಯತ್ನಿಸುವವರು ಸಾಸಿವೆ ಎಣ್ಣೆ ಬಳಸಿದರೆ ಮೈ ತೂಕವೂ ಕಡಿಮೆಯಾಗುವುದು, ಬಾಯಿಗೆ ರುಚಿ-ರುಚಿಯಾದ ಖಾದ್ಯವೂ ದೊರೆಯುವುದು.

6. ಉರಿಯೂತ ಕಡಿಮೆ ಮಾಡುತ್ತದೆ

6. ಉರಿಯೂತ ಕಡಿಮೆ ಮಾಡುತ್ತದೆ

ಉರಿಯೂತ ಸಮಸ್ಯೆ ಇರುವವರು ಸಾಸಿವೆ ಎಣ್ಣೆ ಬಳಸುವುದು ಒಳ್ಳೆಯದು. ಸಾಸಿವೆ ಎಣ್ಣೆ ನರಗಳಲ್ಲಿ ಉರಿಯೂತ ಉಂಟಾಗುವುದನ್ನು ಕಡಿಮೆ ಮಾಡುತ್ತದೆ ಹಾಗೂ ಸಾಸಿವೆ ಎಣ್ಣೆಯಲ್ಲಿರುವ ಅಲೈಲ್ ಐಸೊಥಿಯೊಸೈನೇಟ್ ಉರಿಯೂತ ಕಡಿಮೆಯಾಗುವುದು.

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿವು?

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿವು?

1. ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರ ಆರೋಗ್ಯಕರವೇ?

ಅಡುಗೆ ಎಣ್ಣೆ ಹೃದಯ, ಮೂಳೆ, ಜೀರ್ಣಾಂಗ ವ್ಯೂಹ, ನರಗಳು ಇವುಗಳ ಆರೋಗ್ಯಕ್ಕೆ ಒಳ್ಳೆಯದು, ಏಕೆಂದರೆ ಈ ಎಣ್ಣೆಯಲ್ಲಿ ಮೋನೋಸ್ಯಾಚುರೇಟಡ್, ಪಾಲಿ ಸ್ಯಾಚುರೇಟಡ್ ಅಂಶವಿದೆ.

2. ಸಾಸಿವೆ ಎಣ್ಣೆಯಲ್ಲಿ ತಿಂಡಿ ಕರಿಯಬಹುದೇ?

ಸಾಸಿವೆ ಎಣ್ಣೆ ತಿಂಡಿ ಕರಿಯಬಹುದು, ಏಕೆಂದರೆ ಈ ಎಣ್ಣೆಯನ್ನು ಕಾಯಿಸಿದಾಗ ಬೇಗನೆ ಹೊಗೆ ಬರುವುದಿಲ್ಲ.

3. ಸಾಸಿವೆ ಎಣ್ಣೆ ತ್ವಚೆ ಕಪ್ಪಾಗಿಸುತ್ತದೆಯೇ?

ಇಲ್ಲ, ಇದೊಂದು ತಪ್ಪು ಕಲ್ಪನೆ. ಸಾಸಿವೆ ಎಣ್ಣೆ ತ್ವಚೆಗೆ ತುಂಬಾ ಒಳ್ಳೆಯದು. ಇದನ್ನು ಮಸಾಜ್‌ನಲ್ಲಿ, ಮಕ್ಕಳಿಗೆ ಮಸಾಜ್ ಮಾಡುವಾಗ ಬಳಸಬಹುದು.

English summary

Amazing Health Benefits Of Cooking In Mustard Oil

Mustard oil is among the commonly used oils for culinary and therapeutic purposes. The versatility of mustard oil is highly praised. Take a look at the benefits of mustard oil for cooking.
Story first published: Tuesday, March 3, 2020, 15:25 [IST]
X
Desktop Bottom Promotion