For Quick Alerts
ALLOW NOTIFICATIONS  
For Daily Alerts

Heart Tests: ಹೃದಯಕ್ಕೆ ಸಂಬಂಧಿಸಿದ ಈ ಪರೀಕ್ಷೆಗಳನ್ನು ಮಾಡಿಸಿದರೆ ಆಯುಷ್ಯ ಹೆಚ್ಚುತ್ತದೆ

|

ವಿಶ್ವದಾದ್ಯಂತ ಸಂಭವಿಸುವ ಒಟ್ಟಾರೆ ಸಾವುಗಳಲ್ಲಿ ಶೇಕಡಾ 31ರಷ್ಟು ಸಾವುಗಳಿಗೆ ಹೃದಯಸಂಬಂಧಿ ತೊಂದರೆಗಳು ಕಾರಣವಾಗಿದ್ದು ಇದರಲ್ಲಿ ಶೇಕಡಾ 85ರಷ್ಟು ಹೃದಯಾಘಾತದಿಂದ ಸಂಭವಿಸಿವೆ. ನಡುವಯಸ್ಸು ದಾಟಿದ ಬಳಿಕ ದೇಹಕ್ಕೆ ಎದುರಾಗುವ ಕಾಯಿಲೆಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಏಕೆಂದರೆ ಉಳಿದ ಅಂಗಗಳಿಗಿಂತಲೂ ಹೃದಯದ ವೈಫಲ್ಯಕ್ಕೆ ಎದುರಾಗುವ ಕಾರಣಗಳು ಹಲವಾರಿವೆ.

ಹಾಗಾಗಿ ನಡುವಯಸ್ಸು ದಾಟಿದ ಪ್ರತಿ ವ್ಯಕ್ತಿಯೂ ತಮ್ಮ ಕುಟುಂಬ ವೈದ್ಯರ ಬಳಿ ಕಾಲಕಾಲಕ್ಕೆ ತಮ್ಮ ಆರೋಗ್ಯವನ್ನು ತಪಾಸಣೆಗೊಳಪಡಿಸಿಕೊಳ್ಳುತ್ತಾ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಮುಂದಿನ ಜೀವನವನ್ನು ಸುಖಕರವಾಗಿಸಬಹುದು. ಆರೋಗ್ಯವೇ ಭಾಗ್ಯ ಎಂಬ ಗಾದೆಮಾತಿನ ಪ್ರಕಾರ, ಹೃದಯದ ಆರೋಗ್ಯ ಚೆನ್ನಾಗಿದ್ದರೆ ಅದೇ ದೊಡ್ಡ ಭಾಗ್ಯವೆಂದೇ ಹೇಳಬಹುದು. ಆದರೆ ಯಾವ ಪರೀಕ್ಷೆಗಳನ್ನು ಮಾಡಿಸಬೇಕು? ಮೊದಲಾದ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಅಮೂಲ್ಯ ಮಾಹಿತಿಯನ್ನು ಒದಗಿಸಲಾಗಿದೆ. ಇದರ ಜೊತೆಗೇ ನಿಮ್ಮ ಕುಟುಂಬ ವೈದ್ಯರು ನೀಡುವ ಸಲಹೆಯನ್ನು ಪಾಲಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

These Five Heart Tests Can Save Your Life

ಅಧ್ಯಯನದ ಪ್ರಕಾರ ಈ ಐದು ಸರಳ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತೋರದವರು ಉಳಿದವರಿಗಿಂತ ಹೃದಯದ ತೊಂದರೆಗಳನ್ನು ಎದುರಿಸುವ ಸಾಧ್ಯತೆ ಇಪ್ಪತ್ತು ಪಟ್ಟು ಹೆಚ್ಚಿದೆ. ಈ ಪರೀಕ್ಷೆಗಳ ಮೂಲಕ ಪಡೆಯುವ ಮಾಹಿತಿಗಳು ಇತರ ಸಾಮಾನ್ಯ ವಿಧಾನಗಳಾದ ರಕ್ತದೊತ್ತಡ ಮಾಪನ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ಪರಿಶೀಲನೆಗಿಂತಲೂ ಹೆಚ್ಚು ನಿಖರವಾದ ವಿವರಗಳನ್ನು ನೀಡುತ್ತವೆ. ಅಲ್ಲದೇ ಈ ಪರೀಕ್ಷೆಗಳು ವ್ಯಕ್ತಿ ನಡೆಸುತ್ತಿರುವ ಜೀವನಕ್ರಮದಲ್ಲಿ ಬದಲಾವಣೆಯನ್ನೂ ಸೂಚಿಸುವ ಮೂಲಕ ಹೃದಯದ ಆರೋಗ್ಯವನ್ನು ಉತ್ತಮಗೊಳಿಸಲು ಯತ್ನಿಸುತ್ತವೆ. ಹಾಗಿದ್ದರೆ ದೀರ್ಘಾಯುಷ್ಯಕ್ಕೆ ಯಾವ ಪರೀಕ್ಷೆಗಳು ಅಗತ್ಯ, ಯಾವ ಪರೀಕ್ಷೆಗಳಿಂದ ಯಾವ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿಯಬಹುದು, ಈ ಕೂಡಲೇ ನಿಮ್ಮ ವೈದ್ಯರಲ್ಲಿ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಮುಂದೆ ಓದಿ.

1) ಇಸಿಜಿ ಅಥವಾ ಎಲೆಕ್ಟ್ರೋಕಾರ್ಡಿಯೋಗ್ರಾಂ (Electrocardiogram)

1) ಇಸಿಜಿ ಅಥವಾ ಎಲೆಕ್ಟ್ರೋಕಾರ್ಡಿಯೋಗ್ರಾಂ (Electrocardiogram)

ಇದೊಂದು ಸರಳ ಹನ್ನೆರಡು ಲಾಳಗಳಂತಹ ವಿದ್ಯುತ್ ಪ್ರೇಕ್ಷಕಗಳನ್ನು ಹೊಂದಿರುವ, ದೇಹಕ್ಕೆ ಯಾವುದೇ ಬಗೆಯಲ್ಲಿ ಚುಚ್ಚದ ಮತ್ತು ನೋವುರಹಿತ ವಿಧಾನವಾಗಿದ್ದು ಸುಮಾರು ಐದರಿಂದ ಹತ್ತು ನಿಮಿಷ ಮಾತ್ರವೇ ಈ ಪರೀಕ್ಷೆಗೆ ಸಮಯ ತೆಗೆದುಕೊಳ್ಳುತ್ತದೆ. ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಕಂಡುಹಿಡಿಯುವಲ್ಲಿ ಇದು ಅತ್ಯುತ್ತಮ ವಿಧಾನ ಎನ್ನಲಾಗುತ್ತದೆ. ವೈದ್ಯರು ಈ ಉಪಕರಣದ ಸುಮಾರು ಹತ್ತು ಪ್ರೇಕ್ಷಕಗಳನ್ನು ರೋಗಿಯ ದೇಹದ ವಿವಿಧ ಭಾಗಗಳಿಗೆ, ಅಂದರೆ ಹೃದಯದ ಬಡಿತವನ್ನು ಗ್ರಹಿಸಬಲ್ಲ ಸ್ಥಳಗಳಲ್ಲಿ ಅಂಟಿಸಿ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಯಾವುದೇ ಭಾಗದಲ್ಲಿ ಅಸಹಜವಾದ ಬಡಿತ ಕಂಡುಬಂದರೆ ಈ ಯಂತ್ರ ನಿಖರವಾದ ಮಾಹಿತಿಯನ್ನು ನೀಡುತ್ತದೆ. ವಿಶೇಷವಾಗಿ ಹೃದಯಾಘಾತ, ಹೃದಯ ಬಡಿತದ ತಾಳ ತಪ್ಪಿರುವುದು (arrhythmia) ಮತ್ತು ಇತರ ಮಾರಕ ಹೃದಯಸಂಬಂಧಿ ತೊಂದರೆಗಳ ಇರುವಿಕೆಯನ್ನೂ ಸೂಚಿಸುತ್ತದೆ.

2) ಕೋರೋನರಿ ಕ್ಯಾಲ್ಸಿಯಂ ಸ್ಕ್ಯಾನ್

2) ಕೋರೋನರಿ ಕ್ಯಾಲ್ಸಿಯಂ ಸ್ಕ್ಯಾನ್

ಇದೊಂದು ಕಡಿಮೆ-ವಿಕಿರಣ ಸೂಸುವ ಸಿಟಿ (Computed tomography) ಸ್ಕ್ಯಾನ್ ಉಪಕರಣವಾಗಿದ್ದು ಇದನ್ನು ಸಾಮಾನ್ಯವಾಗಿ ಹೃದಯದ ಸ್ಕ್ಯಾನ್ ಎಂದೂ ಕರೆಯಲಾಗುತ್ತದೆ. ಇದು ನಿಮ್ಮ ಪರಿಧಮನಿಯ ಅಪಧಮನಿಗಳಲ್ಲಿ ಕ್ಯಾಲ್ಸಿಯಂ ಎಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿದೆ ಎಂದು ತಿಳಿಸುತ್ತದೆ. ನಾವು ಹೃದಯದ ನರಗಳಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ನೋಡುವ ಅರ್ಥವೇನೆಂದರೆ ಇಲ್ಲಿ ನರಗಳು ಪೆಡಸಾಗಿರುವ ಅಥವಾ ಅಪಧಮನಿಕಾಠಿಣ್ಯ ಇರುವಿಕೆಯನ್ನು ತೋರಿಸುತ್ತದೆ. ಈ ಮೂಲಕ ಇದು ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ ಮತ್ತು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೂ ಕಾರಣವಾಗಬಹುದು.

3) ಸಿಆರ್ ಪಿ ರಕ್ತಪರೀಕ್ಷೆ (Blood Test for C-Reactive Protein)

3) ಸಿಆರ್ ಪಿ ರಕ್ತಪರೀಕ್ಷೆ (Blood Test for C-Reactive Protein)

ನಿಮ್ಮ ರಕ್ತದಲ್ಲಿ ಉರಿಯೂತವುಂಟಾದಾಗ ಎಷ್ಟು ಪ್ರಮಾಣದ ಸಿಆರ್ ಪಿ-C-reactive protein (CRP)ಯ ಮಟ್ಟ ಹೆಚ್ಚುತ್ತದೆ ಎಂಬುದನ್ನು ಈ ಪರೀಕ್ಷೆ ತಿಳಿಸುತ್ತದೆ. ಏಕೆಂದರೆ ಇದು ಹೃದಯದ ಕಾಯಿಲೆಯ ಸಹಿತ ಇನ್ನೂ ಪ್ರಕಟಗೊಂಡಿರದ ಕೆಲವಾರು ತೊಂದರೆಗಳ ಇರುವಿಕೆಯನ್ನು ತೋರ್ಪಡಿಸುತ್ತದೆ. ಸಿಆರ್ ಪಿ ಪರೀಕ್ಷೆಗಳನ್ನು ಭಾರತೀಯರಿಗೆ ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸುವುದಿಲ್ಲ. ವೈರಲ್ ಸೋಂಕುಗಳು, ಮಧುಮೇಹ, ಕೀಲು ನೋವು ಇತ್ಯಾದಿಗಳ ಹರಡುವಿಕೆ ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದರಿಂದ ಸಿಆರ್ ಪಿಯ ಮೂಲ ಮೌಲ್ಯವು ಭಾರತೀಯರಿಗೆ ಹೆಚ್ಚಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಆದ್ದರಿಂದ, ಸಿಆರ್ ಪಿ ಸಾಮಾನ್ಯವಾಗಿ ಉತ್ಪ್ರೇಕ್ಷೆಯಾಗಿದೆ ಮತ್ತು ಜೀವನಶೈಲಿ ಸ್ಥಿತಿ, ಸೋಂಕು ಅಥವಾ ಹೃದ್ರೋಗದಿಂದಾಗಿ ಈ ಪರೀಕ್ಷೆಯ ಉತ್ತರ ಹೆಚ್ಚಾಗಿ ಕಂಡುಬಂದರೆ ಇದು ಯಾವುದರಿಂದ ಬಂದದ್ದೆಂದು ಗುರುತಿಸುವುದು ಕಷ್ಟವಾಗುತ್ತದೆ ಎನ್ನಲಾಗುತ್ತದೆ.

4) ಟ್ರೋಪೋಪಿನ್ ರಕ್ತಪರೀಕ್ಷೆ (High-Sensitivity Blood Test for Troponin T ಅಥವಾ Troponin I)

4) ಟ್ರೋಪೋಪಿನ್ ರಕ್ತಪರೀಕ್ಷೆ (High-Sensitivity Blood Test for Troponin T ಅಥವಾ Troponin I)

ಟ್ರೋಪೋನಿನ್ ಟಿ ಮತ್ತು ಟ್ರೋಪೋನಿನ್ ಐ, ಇವೆರಡೂ ನಿಮ್ಮ ಹೃದಯವು ಗಮನಾರ್ಹ ಒತ್ತಡವನ್ನು ಎದುರಿಸಿದಾಗ ಅಥವಾ ಹಾನಿಗೊಳಗಾದಾಗ ಬಿಡುಗಡೆಯಾಗುವ ಪ್ರೋಟೀನ್‌ಗಳಾಗಿವೆ. ಈ ವಿಶಿಷ್ಟವಾದ ಟ್ರೋಪೋನಿನ್ ಪರೀಕ್ಷೆಯ ಮೂಲಕ ನಿಮ್ಮ ಹೃದಯಕ್ಕೆ ಒತ್ತಡದ ಘಟನೆಗಳ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದರೆ ಕಂಡುಕೊಳ್ಳಬಹುದು. ಉದಾಹರಣೆಗೆ ಮ್ಯಾರಥಾನ್ ಓಡುವುದು ಅಥವಾ ಹೃದಯಾಘಾತದಿಂದ ಬಳಲುತ್ತಿರುವಂತಹ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್‌ ಉತ್ಪತ್ತಿಯಾಗುತ್ತದೆ. ಆದರೆ, 2017ರ ಜನವರಿಯಲ್ಲಿ ಅಂಗೀಕರಿಸಲ್ಪಟ್ಟ ಹೊಸ ಅತಿ-ಸೂಕ್ಷ್ಮಸಂವೇದಿ ಆವೃತ್ತಿಯಲ್ಲಿ ಟ್ರೋಪೋನಿನ್ ಟಿ ಅಥವಾ ಐ ನ ಕಡಿಮೆ ಮಟ್ಟದಲ್ಲಿದ್ದರೂ ಪತ್ತೆ ಮಾಡುತ್ತದೆ, ಇದು ವೈದ್ಯರಿಗೆ ಆರಂಭಿಕ ಹಂತದಲ್ಲಿಯೇ ಕಾಯಿಲೆಯನ್ನು ಗುರುತು ಹಚ್ಚಿ ಚಿಕಿತ್ಸೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.

5) ಬಿಎನ್ ಪಿ ರಕ್ತಪರೀಕ್ಷೆ (Blood Test for NT-proBNP ಅಥವಾ BNP)

5) ಬಿಎನ್ ಪಿ ರಕ್ತಪರೀಕ್ಷೆ (Blood Test for NT-proBNP ಅಥವಾ BNP)

ಬಿಎನ್ ಪಿ - ಬ್ರೇನ್ ನ್ಯಾಟ್ರಿಯುರೆಟಿಕ್ ಪೆಪ್ಟೈಡ್ (Brain natriuretic peptide (BNP)): ರಕ್ತನಾಳದಲ್ಲಿ ಸುಗಮ ರಕ್ತಹರಿವಿಗೆ ಕಷ್ಟವಾಗುತ್ತಿದ್ದರೆ ಇದಕ್ಕೆ ಹೃದಯ ಪ್ರತಿಕ್ರಿಯೆ ನೀಡುವ ರೂಪದಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಅಥವಾ ರಸದೂತವಾಗಿದೆ. ರಕ್ತಪ್ರವಾಹದಲ್ಲಿ ಹೆಚ್ಚಿನ ಪ್ರಮಾಣದ ಎನ್‌ಟಿ-ಪ್ರೋಬಿಎನ್ ಪಿ ಅಥವಾ ಬಿಎನ್ ಪಿ ಇದ್ದರೆ ಇದು ಅಪಾಯದ ಸೂಚನೆಯಾಗಿದ್ದು ಅದು ನಿಮ್ಮ ಹೃದಯದ ಸ್ನಾಯುಗಳನ್ನು ಗಟ್ಟಿಯಾಗಿಸುತ್ತದೆ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದಿಲ್ಲ ಅಥವಾ ದುರ್ಬಲಗೊಂಡಿರಬಹುದು, ಇನ್ನು ಮುಂದೆ ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. (ಅಗತ್ಯಕ್ಕೆ ತಕ್ಕಷ್ಟು ನಿಯಮಿತ ದೈಹಿಕ ಚಟುವಟಿಕೆಯ ಕೊರತೆಯಿಂದಲೂ ಈ ಪರಿಣಾಮ ಎದುರಾಗುತ್ತದೆ) ಅಧಿಕೃತವಾಗಿ ಡಯಾಸ್ಟೊಲಿಕ್ ಅಪಸಾಮಾನ್ಯ ಕ್ರಿಯೆ ಎಂದು ಕರೆಯಲ್ಪಡುವ ಈ ಸ್ಥಿತಿಯು ಹೃದಯ ವೈಫಲ್ಯದ ಆರಂಭಿಕ ಮುನ್ಸೂಚಕವಾಗಬಹುದು. ಉಸಿರಾಟದ ಬಗ್ಗೆ ದೂರು ನೀಡುವ ರೋಗಿಗಳನ್ನು ನಿಖರವಾಗಿ ಪತ್ತೆಹಚ್ಚಲು ಎನ್‌ಟಿ-ಪ್ರೋಬಿಎನ್ ಪಿ ಪರಿಣಾಮಕಾರಿ ಪರೀಕ್ಷೆ. ಉಸಿರಾಟ ದುರ್ಬಲಗೊಳ್ಳಲು ದುರ್ಬಲ ಹೃದಯ ಕಾರಣವೇ ಅಥವಾ ಶ್ವಾಸಕೋಶದ ಸ್ಥಿತಿಯಿಂದ ಉಂಟಾಗಿದೆಯೇ ಎಂದು ನಿರ್ಣಯಿಸುವುದು ಬಹಳ ಮುಖ್ಯ, ಏಕೆಂದರೆ ಎರಡೂ ಸ್ಥಿತಿಗಳಿಗೆ ವಿಭಿನ್ನ ರೀತಿಯ ಚಿಕಿತ್ಸೆಗಳೇ ಬೇಕಾಗುತ್ತವೆ.

6) ಸಿಟಿ ಆಂಜಿಯೋಗ್ರಫಿ (CT Angiography)

6) ಸಿಟಿ ಆಂಜಿಯೋಗ್ರಫಿ (CT Angiography)

ಭಾರತದಲ್ಲಿ ಕಂಪ್ಯೂಟೆಡ್ ಟೊಮೊಗ್ರಫಿ ಆಂಜಿಯೋಗ್ರಫಿ (ಸಿಟಿಎ) ಕ್ರಮದ ಮೂಲಕ ಒಂದಕ್ಕಿಂತಲೂ ಹೆಚ್ಚು ಬಗೆಯ ಅಪಾಯಕಾರಿ ಕಾಯಿಲೆಗಳನ್ನು ಹೊಂದಿರುವ ರೋಗಿಗಳನ್ನು ಪರೀಕ್ಷಿಸಲು ನಡೆಸುವ ಜನಪ್ರಿಯ ಪರೀಕ್ಷೆಯಾಗಿದೆ. ಅಯೋಡಿನ್ ಭರಿತ ಬಣ್ಣದ ದ್ರವವನ್ನು ರೋಗಿಯ ತೋಳಿನ ರಕ್ತನಾಳಕ್ಕೆ ಚುಚ್ಚಲಾಗುತ್ತದೆ. ಇದು ಅಪಧಮನಿಗಳ ವಿವರವಾದ ಚಿತ್ರಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಪರಿಧಮನಿಯಲ್ಲಿರುವ ತಡೆಗಳು ಶೇಕಡಾ 70ಕ್ಕಿಂತ ಹೆಚ್ಚಿದ್ದರೆ ಮಾತ್ರ stress ECHO ಪತ್ತೆಹಚ್ಚಬಲ್ಲದು. ಆದರೆ ಇದಕ್ಕೂ ಕಡಿಮೆ ಶೇಖಡಾ ತಡೆ ಇದ್ದರೂ ಈ ವಿಧಾನ ನಿಖರ ಮಾಹಿತಿಯನ್ನು ನೀಡುತ್ತದೆ. ನೀವು ಯಾವುದೇ ರೋಗಲಕ್ಷಣಗಳನ್ನು ಪ್ರದರ್ಶಿಸದಿದ್ದರೂ ಸಹ ಇದು ಹೃದ್ರೋಗವನ್ನು ಮೊದಲೇ ಕಂಡುಹಿಡಿಯಲು ಸಹಾಯ ಮಾಡುತ್ತದೆ. ಆದರೆ, ಬಣ್ಣಗಳಿಗೆ ಪ್ರತಿಕೂಲವಾಗಿ ಪ್ರತಿಕ್ರಿಯಿಸುವ ಜನರ ಮೇಲೆ ಮತ್ತು ತೀವ್ರತರದ ಮೂತ್ರಪಿಂಡದ ಕಾಯಿಲೆ ಅಥವಾ ತೀವ್ರ ಮಧುಮೇಹ ಇರುವವರ ಮೇಲೆ ಇದನ್ನು ನಡೆಸಲಾಗುವುದಿಲ್ಲ.

English summary

These Five Heart Tests Can Save Your Life

These heart tests can help you introduce lifestyle changes to protect your heart. If you smoke, are overweight, have a family history of heart problems or any other health risks, ask your doctor about these tests. these five heart test can save our life. which test want to know? Read on.
X
Desktop Bottom Promotion