For Quick Alerts
ALLOW NOTIFICATIONS  
For Daily Alerts

ರಾತ್ರಿ ಹೊತ್ತಿನಲ್ಲಿ ಹೃದಯಾಘಾತವಾದರೆ ಕ್ಷಣಾರ್ಧದಲ್ಲಿ ಸಾವು ಸಂಭವಿಸುವುದು

|

'ರಾತ್ರಿ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿತ್ತು, ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಹೋಗ್ಬಿಟ್ಟರು' ಎಂದು ಹೇಳುವುದನ್ನು ಕೇಳಿರಬಹುದು. ಅದರಲ್ಲೂ ಮಹಿಳೆಯರು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಹಾರ್ಟ್ ರಿದಮ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ರಾತ್ರಿ ಹೊತ್ತು ಹೃದಯಾಘಾತದಿಂದ ಸಾವನ್ನಪ್ಪಿದವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಅಧಿಕ ಎಂದು ಹೇಳಿದೆ.

ವೈದ್ಯಕೀಯ ತಜ್ಞರ ಪ್ರಕಾರ ಅನೇಕ ರೋಗಿಗಳಲ್ಲಿ ರಾತ್ರಿ ಹೊತ್ತಿನಲ್ಲಿ ದೇಹ ವಿಶ್ರಾಂತಿಯಲ್ಲಿರುತ್ತದೆ, ಚಯಪಚಯ ಕ್ರಿಯೆ, ಹೃದಯ ಬಡಿತ, ರಕ್ತದೊತ್ತಡ ನಿಧಾನವಾಗುತ್ತದೆ, ಇದು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಕಾರಣವಾಗಿದೆ.

ಇದ್ದಕ್ಕಿದ್ದಂತೆ ರಾತ್ರಿ ಹೊತ್ತಿನಲ್ಲಿ ಹೃದಯಾಘಾತ ಕಾಣಿಸಿಕೊಂಡರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಇದ್ದಕ್ಕಿದ್ದಂತೆ ಹೃದಯ ಬಡಿತ ನಿಂತು ಹೋಗುತ್ತದೆ, ಆಗ ಮೆದುಳಿಗೆ ರಕ್ತ ಸಂಚಾರ ನಿಂತು ಹೋಗುತ್ತದೆ, ಆಗ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು.

ಈ ರೀತಿ ಆದಾಗ ತಕ್ಷಣವೇ ಚಿಕಿತ್ಸೆ ದೊರೆತರೆ ಬದುಕಿಳಿಯುವ ಸಾಧ್ಯತೆ ಹೆಚ್ಚು, ಆದರೆ ಇವೆಲ್ಲಾ ಕ್ಷಣಗಳಲ್ಲಿ ನಡೆದು ಹೋಗುವುದರಿಂದ ವ್ಯಕ್ತಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಬದುಕುಳಿಯುವ ಸಾಧ್ಯತೆ ತುಂಬಾನೇ ಕಡಿಮೆ.

ರಾತ್ರಿ ಹೊತ್ತಿನಲ್ಲಿ ಹೃದಯಾಘಾತ ಸಂಭವಿಸಿದವರಲ್ಲಿ ಶೇ.80ರಷ್ಟು ಜನ ಸಾವನ್ನಪ್ಪಿದ್ದಾರೆ.

ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಲು ಕಾರಣಗಳು

ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಲು ಕಾರಣಗಳು

ಈ ಕೆಳಗಿನ ಅಂಶಗಳು ಹೃದಯಾಘಾತ ಉಂಟು ಮಾಡುವ ಸಾಧ್ಯತೆ ಹೆಚ್ಚು. ಅವುಗಳೆಂದರೆ...

1. ಅತ್ಯಧಿಕ ಮೈ ತೂಕ

ಅಧಿಕ ಮೈ ತೂಕ ಹೃದಯಾಘಾತಕ್ಕೆ ಒಂದು ಸಾಮಾನ್ಯ ಕಾರಣವಾಗಿದೆ. ಮೈ ತೂಕ ಹೆಚ್ಚಾದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ, ಮೈ ತೂಕ ಹೆಚ್ಚಾದಂತೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು.

2. ಮದ್ಯಪಾನ

ತುಂಬಾ ಮದ್ಯಪಾನ ಮಾಡುವ ಅಭ್ಯಾಸ ಇದ್ದರೆ ಅವರಿಗೆ ಹೃದಯಾಘಾತ ಕಾಣಿಸಿಕೊಳ್ಳುವುದು, ಮದ್ಯಪಾನ ಕರುಳಿನ ಕ್ಯಾನ್ಸರ್ ಕೂಡ ತರುತ್ತದೆ.

3. ಜೀವನ ಶೈಲಿ

ತುಂಬಾ ಮಾನಸಿಕ ಒತ್ತಡ, ಆರೋಗ್ಯಕರವಲ್ಲದ ಆಹಾರಕ್ರಮ, ಕೆಟ್ಟ ಚಟಗಳು ಇವೆಲ್ಲಾ ಆರೋಗ್ಯವನ್ನು ಹಾಳು ಮಾಡುತ್ತದೆ. ಅನಾರೋಗ್ಯಕರ ಜೀವನಶೈಲಿಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಹಗಲು ಹೊತ್ತಿನಲ್ಲಿ ಹೃದಯಾಘಾತ ಸಂಭವಿಸಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು

ಹಗಲು ಹೊತ್ತಿನಲ್ಲಿ ಹೃದಯಾಘಾತ ಸಂಭವಿಸಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು

ಇತ್ತೀಚೆಗೆ ಒಂದು ಅಧ್ಯಯನ ನಡೆಸಲಾಗಿತ್ತು, ಅದರಲ್ಲಿ 4,126 ಹೃದಯಾಘಾತ ಸಂಭವಿಸಿದ ರೋಗಿಗಳ ದಾಖಲೆಯನ್ನು ಪರಿಶೀಲಿಸಲಾಯಿತು, ಅವಗಳಲ್ಲಿ 3,208 ರೋಗಗಳಿಗೆ ಹಗಲಿನಲ್ಲಿ ಹೃದಯಾಘಾತ ಕಾಣಿಸಿಕೊಂಡಿದ್ದರೆ 918 ಜನರಿಗೆ ರಾತ್ರಿ ಹೊತ್ತಿನಲ್ಲಿ ಹೃದಯಾಘಾತ ಕಾಣಿಸಿಕೊಂಡಿತ್ತು.

ರಾತ್ರಿ ಹೊತ್ತಿನಲ್ಲಿ ಹೃದಯಾಘಾತ ಕಾಣಿಸಿಕೊಂಡವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದ್ದು ಬದುಕಿಳಿದರ ಸಂಖ್ಯೆ ಶೆ.20 ಆಗಿದೆ.

ಶ್ವಾಸಕೋಶದ ಸಮಸ್ಯೆ, ಅಸ್ತಮಾ ಇಂಥ ರೋಗಿಗಳಿಗೆ ರಾತ್ರಿ ಹೊತ್ತಿನಲ್ಲಿ ಹೃದಯಾಘಾತ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಔಷಧ ಸೇವನೆಯಿಂದ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಉಸಿರಾಟಕ್ಕೆ ತೊಂದರೆಯಾಗುವುದು. ಆಗ ರಾತ್ರಿ ಹೊತ್ತಿನಲ್ಲಿ ಹೃದಯಾಘಾತ ಸಂಭವಿಸುವುದು.

ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸುವ ಮುನ್ನ ಕಂಡು ಬರುವ ಲಕ್ಷಣಗಳು

ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸುವ ಮುನ್ನ ಕಂಡು ಬರುವ ಲಕ್ಷಣಗಳು

* ಜೋರಾದ ಎದೆ ಬಡಿತ

* ಬೆವರುವುದು

* ಉಸಿರಾಟದಲ್ಲಿ ತೊಂದರೆ

* ಪ್ರಜ್ಞೆ ತಪ್ಪು ವುದು

* ಎದೆಯಲ್ಲಿ ಬಿಗಿತ

ಈ ಎಲ್ಲಾ ಲಕ್ಷಣಗಳು ಕೆಲವೇ ನಿಮಿಷಗಳಲ್ಲಿ ಕಂಡು ಬರುತ್ತದೆ.

ಹೃದಯದ ಆರೋಗ್ಯ ಜೋಪಾನ ಮಾಡುವುದು ಹೇಗೆ?

ಹೃದಯದ ಆರೋಗ್ಯ ಜೋಪಾನ ಮಾಡುವುದು ಹೇಗೆ?

* ಮದ್ಯಪಾನ ಅಭ್ಯಾಸಿದ್ದರೆ ಮಿತಿಯಲ್ಲಿ ಮಾಡುವುದು

* ಧೂಮಪಾನ ಬಿಡಿ

* ಆರೋಗ್ಯಕರ ಜೀವನಶೈಲಿ ಪಾಲಿಸಿ.

* ಮೈ ತೂಕ ಕಡಿಮೆ ಮಾಡಿ

* ಉಸಿರಾಟದ ವ್ಯಾಯಾಮ ಮಾಡಿ.

* ರೋಗ ನಿರೋಧಕ ಶಕ್ತಿ ಹೆಚ್ಚಿಸಿ.

English summary

Sudden cardiac arrest In Night Causes, Risk Factors, Symptoms, and Treatment in Kannada

Sudden cardiac arrest in night Causes, Risk Factors, Symptoms, and Treatment, Read on,
X