For Quick Alerts
ALLOW NOTIFICATIONS  
For Daily Alerts

ಹೃದಯಾಘಾತದಿಂದ ಬೇಗನೆ ಚೇತರಿಸಿಕೊಳ್ಳಲು ಸೆಕ್ಸ್ ಸಹಕಾರಿ

|

ಹೃದಯಾಘಾತಕ್ಕೆ ಒಳಗಾದ ಬಳಿಕ ಹೆಚ್ಚಿನವರು ಹೃದಯಕ್ಕೆ ಹೊರೆ ನೀಡುವ ಯಾವುದೇ ಚಟುವಟಿಕೆ ನಡೆಸಲು ಹಿಂಜರಿಯುವುದು ಸಹಜ. ಓಡುವುದು, ಮೆಟ್ಟಿಲೇರುವುದು ಮೊದಲಾದವುಗಳ ಜೊತೆಗೇ ಲೈಂಗಿಕ ಚಟುವಟಿಕೆಗೂ ಹಿಂದೇಟು ಹಾಕುವುದನ್ನು ಹೆಚ್ಚಿನ ರೋಗಿಗಳಲ್ಲಿ ಕಾಣಬಹುದು. ಆದರೆ ಇತ್ತೀಚಿನ ಹೊಸ ಸಂಶೋಧನೆಯೊಂದು ಇದಕ್ಕೆ ವ್ಯತಿರಿಕ್ತವಾದ ಪರಿಣಾಮವನ್ನು ಪ್ರಕಟಿಸಿದೆ.

ಇಸ್ರೇಲ್ ನಲ್ಲಿ ನಡೆದ ಸಂಶೋಧನೆಯ ಪ್ರಕಾರ, ಹೃದಯಾಘಾತವಾದ ಬಳಿಕದ ತಿಂಗಳುಗಳಲ್ಲಿ ಹಿಂದಿನಂತೆಯೇ ಲೈಂಗಿಕ ಜೀವನವನ್ನು ಮುಂದುವರೆಸುವುದರಿಂದ ಚೇತರಿಕೆ ಇನ್ನಷ್ಟು ಶೀಘ್ರವಾಗುತ್ತದೆ.

ಈ ಸಂಶೋಧನೆಯ ಪ್ರಮುಖರಾಗಿರುವ ಹಾಗೂ ಟೆಲ್ ಅವೀವ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮುಖ್ಯಸ್ಥರಾಗಿರುವ ಯಾರಿವ್ ಗರ್ಬರ್ ರವರ ಪ್ರಕಾರ ಇದರ ಪ್ರಯೋಜನ ವ್ಯಕ್ತಿಯ ನಂಬಿಕೆಯಲ್ಲಿ ಅಡಗಿದೆ.

"ಲೈಂಗಿಕತೆ ಮತ್ತು ಲೈಂಗಿಕ ಕ್ರಿಯೆ ಆತ್ಮೀಯ ಭಾವನೆಯನ್ನು ಸೃಷ್ಟಿಸುತ್ತವೆ, ಹೃದಯಾಘಾತದ ಕೊಂಚ ಸಮಯದ ಬಳಿಕವೇ ಹಿಂದಿನಂತೆ ಲೈಂಗಿಕ ಕ್ರಿಯೆಯನ್ನು ಮುಂದುವರೆಸುವ ಮೂಲಕ ವ್ಯಕ್ತಿ ತನ್ನ ಬಗ್ಗೆ ಪಡೆಯುವ ಆತ್ಮವಿಶ್ವಾಸವೇ ಈ ವ್ಯಕ್ತಿಯಲ್ಲಿ ತಾರುಣ್ಯ, ಆರೋಗ್ಯ, ಕಾರ್ಯ ನಿರ್ವಹಿಸುವ ಹುಮ್ಮಸ್ಸು ಮತ್ತು ಚೈತನ್ಯವನ್ನು ನೀಡುತ್ತದೆ" ಎಂದು ಗರ್ಬರ್ ವಿವರಿಸುತ್ತಾರೆ.

ಅಧ್ಯಯನ ವರದಿ

ಅಧ್ಯಯನ ವರದಿ

ಈ ಅಧ್ಯಯನದಲ್ಲಿ ಗರ್ಬರ್ ರವರ ತಂಡ ಅವರತ್ತೈದು ಅಥವಾ ಇದರ ಆಸುಪಾಸಿನಲ್ಲಿರುವ ಹಾಗೂ 1992 ಅಥವಾ 1993 ರಲ್ಲಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಾಗೂ ಬಳಿಕ ಲೈಂಗಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಸುಮಾರು ಐನೂರಕ್ಕೂ ಹೆಚ್ಚು ವ್ಯಕ್ತಿಗಳ ಆರೋಗ್ಯ ಮಾಹಿತಿಯನ್ನು ಕಲೆ ಹಾಕಿ ವಿಶ್ಲೇಷಿಸಿದ್ದರು.

ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಸತತವಾಗಿ ಈ ವ್ಯಕ್ತಿಗಳ ಆರೋಗ್ಯ ಮಾಹಿತಿಗಳನ್ನು ದಾಖಲಿಸಲಾಯಿತು. ಈ ವ್ಯಕ್ತಿಗಳಲ್ಲಿ ಇದುವರೆಗೆ 43% ವ್ಯಕ್ತಿಗಳು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಆದರೆ ಅಧ್ಯಯನದ ಪ್ರಕಾರ, ಹೃದಯಾಘಾತದ ಬಳಿಕದ ಮೊದಲ ಆರು ತಿಂಗಳುಗಳಲ್ಲಿ ತಮ್ಮ ಎಂದಿನ ಲೈಂಗಿಕ ಚಟುವಟಿಕೆಯನ್ನು ಮುಂದುವರೆಸಿಕೊಂಡ ಅಥವಾ ಹಿಂದಿನಕ್ಕಿಂತಲೂ ಹೆಚ್ಚಿಸಿಕೊಂಡ ವ್ಯಕ್ತಿಗಳು ಸಾವಿಗೀಡಾಗುವ ಸಾಧ್ಯತೆಯನ್ನು ಈ ಕ್ರಮ ಅನುಸರಿಸದ ಇತರರಿಗಿಂತಲೂ 35% ಕಡಿಮೆ ಹೊಂದಿದ್ದರು.

ಈ ಪ್ರಯೋಜನ ಕೇವಲ ಹೃದಯ ಸಂಬಂಧಿತ ರೋಗಕ್ಕೆ ಮಾತ್ರವೇ ಸೀಮಿತವಾಗಿಲ್ಲ, ಬದಲಿಗೆ ಇತರ ಕಾಯಿಲೆಗಳು, ಉದಾಹರಣೆಗೆ ಕ್ಯಾನ್ಸರ್ ಸಂಬಂಧಿಸಿದ ಕಾಯಿಲೆಗಳಿಂದ ಎದುರಾಗುವ ಸಾವಿನ ಸಾಧ್ಯತೆಯೂ ಕಡಿಮೆಯಾಗಿದೆ.

ಇದರ ಅರ್ಥ, ಹೃದಯಾಘಾತವಾದ ತಕ್ಷಣವೇ ಲೈಂಗಿಕ ಚಟುವಟಿಕೆಗೆ ಹಿಂದಿರುಗಿದರೆ ದೀರ್ಘಾಯಸ್ಸು ಬಂದೇ ಬಿಡುತ್ತದೆ ಎಂದು ಸರ್ವಥಾ ಅರ್ಥವಲ್ಲ, ಬದಲಿಗೆ ಇವೆರಡಕ್ಕೂ ಸಂಬಂಧ ಇದೆ ಎಂದೇ ಅರ್ಥ.

ಈ ವರದಿಯನ್ನು ಕಳೆದ ಸೆಪ್ಟೆಂಬರ್ 23 ರಂದು ಯೂರೋಪಿಯನ್ ಜರ್ಲನ್ ಆಫ್ ಕಾರ್ಡಿಯಾಲಜಿ ಎಂಬ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.

 ಲೈಂಗಿಕ ಚಟುವಟಿಕೆ ಒಂದು ವ್ಯಾಯಾಮ

ಲೈಂಗಿಕ ಚಟುವಟಿಕೆ ಒಂದು ವ್ಯಾಯಾಮ

ಸಂಶೋಧಕರ ವಿವರಣೆಯ ಪ್ರಕಾರ, ಲೈಂಗಿಕ ಚಟುವಟಿಕೆಯೂ ಒಂದು ವ್ಯಾಯಾಮವೇ ಆಗಿದ್ದು ಹೃದಯದ ಬಡಿತದ ಗತಿಯನ್ನು ಹೆಚ್ಚಿಸುತ್ತದೆ ಹಾಗೂ ಒತ್ತಡವನ್ನೂ ಅಗತ್ಯ ಮಟ್ಟಿಗೆ ಏರಿಸುತ್ತದೆ. ಕೆಲವೊಮ್ಮೆ ಅತಿಯಾದ ವ್ಯಾಯಾಮ ಹೃದಯದ ಮೇಲಿನ ಒತ್ತಡವನ್ನು ಅತಿಯಾಗಿ ಹೆಚ್ಚಿಸುವಂತೆಯೇ ವ್ಯಾಯಾಮಗಳನ್ನು ವಿಪರೀತವಾಗಿ ಮಾಡದೇ ನಿಯಮಿತವಾಗಿ ಮತ್ತು ಆರೋಗ್ಯಕರ ಒತ್ತಡದ ಮಿತಿಗಳಲ್ಲಿ ನಿರ್ವಹಿಸಿದಾಗ ಆರೋಗ್ಯ ಉತ್ತಮವಾಗಿಯೇ ಇರುತ್ತದೆ. ಇದೇ ಪ್ರಕಾರ, ಲೈಂಗಿಕ ಕ್ರಿಯೆಯಿಂದಲೂ ಹೃದಯಾಘಾತಕ್ಕೆ ಪ್ರಚೋದನೆ ಸಿಗಬಹುದಾದರೂ, ನಿಯಮಿತ ವ್ಯಾಯಾಮದಿಂದ ಈ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು.

ಹಿಂಜರಿಕೆ ಬೇಡ

ಹಿಂಜರಿಕೆ ಬೇಡ

ಸಾಮಾನ್ಯವಾಗಿ ಇದೇ ಕಾರಣಕ್ಕೆ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗಳು ಲೈಂಗಿಕ ಕ್ರಿಯೆಗೆ ಒಳಗಾಗಲು ಹಿಂಜರಿಯುತ್ತಾರೆ. ಆದರೆ ಎಷ್ಟು ಬೇಗನೇ ಲೈಂಗಿಕ ಚಟುವಟಿಕೆಗೆ ಹಿಂದಿರುಗಲು ಸಾಧ್ಯವಾಗುತ್ತದೆಯೋ ಅಷ್ಟೂ ಮಟ್ಟಿಗೆ ಚೇತರಿಕೆ ಶೀಘ್ರವಾಗಲು ಸಾಧ್ಯವಾಗುತ್ತದೆ.

ಇದರಿಂದ ಈ ಪ್ರಯೋಜನದ ಹೊರತಾಗಿ ಇನ್ನೂ ಕೆಲವಾರು ಪ್ರಯೋಜನಗಳಿವೆ. ಉತ್ತಮಗೊಳ್ಳುವ ದೈಹಿಕ ದಾರ್ಢ್ಯತೆ, ಉತ್ತಮಗೊಳ್ಳುವ ಸಂಗಾತಿಯೊಂದಿಗಿನ ಸಂಬಂಧ ಹಾಗೂ ಹೃದಯಾಘಾತಕ್ಕೆ ಒಳಗಾದ ಬಳಿಕ ಎದುರಾದ ಮಾನಸಿಕ ಆಘಾತದಿಂದ ಶೀಘ್ರ ಚೇತರಿಸಿ ಸಾಮಾನ್ಯ ಜೀವನಕ್ಕೆ ಮರಳುವ ಸಂಭವ ಹಾಗೂ ಮುಖ್ಯವಾಗಿ ಹೆಚ್ಚುವ ಆತ್ಮವಿಶ್ವಾಸ ಇವು ಉಲ್ಲೇಖಾರ್ಹವಾಗಿವೆ.

ಇನ್ನೊಂದು ಕಡೆಯಲ್ಲಿ, ತಾವು ತೀರಾ ದುರ್ಬಲರಾಗಿದ್ದೇವೆ ಎಂದು ಅಂದುಕೊಂಡ ವ್ಯಕ್ತಿಗಳು ಲೈಂಗಿಕ ಜೀವನಕ್ಕೆ ಮರಳಲು ಹಿಂದೇಟು ಹಾಕಬಹುದು, ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇವರು ಕ್ಯಾನ್ಸರ್ ಪತ್ತೆಹಚ್ಚುವಿಕೆಯ ಪರೀಕ್ಷೆಗಳು ಮತ್ತು ಇತರ ರಕ್ಷಣಾತ್ಮಕ ಕ್ರಮಗಳನ್ನೂ ಅನುಸರಿಸಲು ಹಿಂದೇಟು ಹಾಕಬಹುದು. ಇದು ಲೈಂಗಿಕ ಚಟುವಟಿಕೆಯನ್ನು ಮತ್ತೆ ಆರಂಭಿಸುವ ಮತ್ತು ಕ್ಯಾನ್ಸರ್ ಕಾರಣದಿಂದ ಸಂಭವಿಸುವ ಸಾವುಗಳ ನಡುವಿನ ಬಲವಾದ ವಿಲೋಮ ಸಂಬಂಧವನ್ನು ವಿವರಿಸುತ್ತದೆ.

ಯಾವುದನ್ನೂ ಪರಿಗಣಿಸಿದರೂ, ಹೃದಯಾಘಾತದ ಬಳಿಕ ಲೈಂಗಿಕ ಜೀವನಕ್ಕೆ ಹಿಂದಿನಂತೆ ಮರಳುವುದು ಈ ಹೊಸ ಸಂಶೋಧನೆಯ ವಿವರಗಳು ಈ ವ್ಯಕ್ತಿಗಳಿಗೆ ಪ್ರೋತ್ಸಾಹದಾಯಕವೇ ಆಗಿವೆ ಎಂದು ಗರ್ಬರ್ ವಿವರಿಸುತ್ತಾರೆ.

ನ್ಯೂಯಾರ್ಕ್ ನಗರದ ಮ್ಯಾನ್‌ಹ್ಯಾಸೆಟ್‌ನ ನಾರ್ತ್‌ವೆಲ್ ಹೆಲ್ತ್‌ನ ಸಾಂಡ್ರಾ ಅಟ್ಲಾಸ್ ಬಾಸ್ ಹಾರ್ಟ್ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿರುವ ಡಾ. ಗೈ ಮಿಂಟ್ಜ್ ರವರು ಈ ಸಂಶೋಧನೆಯಲ್ಲಿ ನೇರವಾಗಿ ಭಾಗಿಯಾಗಿಲ್ಲದಿದ್ದರೂ "ಹೃದಯಾಘಾತದ ನಂತರದ ಲೈಂಗಿಕ ಜೀವನ ನಡೆಸುವುದು ಅಪಾಯಕಾರಿ" ಎಂಬ ಪೂರ್ವಾಗ್ರಹ ನಂಬಿಕೆಯನ್ನು ನಿವಾರಿಸಲು ಈ ಸಂಶೋಧನೆ ನೆರವಾಗಬೇಕು ಎಂದು ವಿವರಿಸುತ್ತಾರೆ.

ಅವರ ಪ್ರಕಾರ, ಇಸ್ರೇಲ್ ನ ಈ ಅಧ್ಯಯನ ಅಗತ್ಯದ ಮಿತಿಯನ್ನು ಮುಟ್ಟಿದೆ. ಈ ಅಧ್ಯಯನ ಸರಾಸರಿ 53 ವರ್ಷದ ವ್ಯಕ್ತಿಗಳನ್ನು ಆಧರಿಸಿದ್ದು ಇತರ ವಯೋಮಾನ ಅಥವಾ ಮಹಿಳೆಯರನ್ನು ಕುರಿತಾಗಿಲ್ಲ. 90% ಕ್ಕೂ ಹೆಚ್ಚಿನ ವ್ಯಕ್ತಿಗಳು ಪುರುಷರೇ ಆಗಿರುವ ಕಾರಣ ಈ ಅಧ್ಯಯನ ಪರಿಪೂರ್ಣವಲ್ಲ.

 ವೈದ್ಯರ ಸಲಹೆ ಪಡೆಯಿರಿ

ವೈದ್ಯರ ಸಲಹೆ ಪಡೆಯಿರಿ

ಹೃದಯಾಘಾತದ ಬಳಿಕ ಸಹಜ ಲೈಂಗಿಕ ಜೀವನಕ್ಕೆ ಮರಳಲು ತಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಏರುವ ಹೃದಯದ ಒತ್ತಡ ಮತ್ತು ಬಡಿತದ ಗತಿ ಇವರು ಸಹಿಸಲು ಸಾಧ್ಯವೋ ಎಂಬುದನ್ನು ಆಯಾ ವ್ಯಕ್ತಿಯ ಆರೋಗ್ಯವನ್ನು ಪರಿಗಣಿಸಿ ವೈದ್ಯರೇ ಸರಿಯಾದ ಸಲಹೆ ನೀಡಬಹುದು.

ಆದರೂ, ಹೆಚ್ಚಿನ ವ್ಯಕ್ತಿಗಳಲ್ಲಿ, ಹೃದಯಾಘಾತದ ಬಳಿಕ ಸಹಜ ಲೈಂಗಿಕ ಜೀವನಕ್ಕೆ ಮರಳುವುದರಿಂದ ಆತ್ಮವಿಶ್ವಾಸ ಹೆಚ್ಚಲು ಹಾಗೂ ತಮ್ಮ ಮೌಲ್ಯವನ್ನು ಗುರುತಿಸಿಕೊಳ್ಳಲು, ಉತ್ತಮ ಆರೋಗ್ಯ ಹಾಗೂ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಲೈಂಗಿಕ ಜೀವನದ ಮರು ಆರಂಭ ಎಂದೂ ಅಪಾಯಕಾರಿಯಲ್ಲ ಹಾಗೂ ದೀರ್ಘಾವಧಿಯಲ್ಲಿ ನೆರವು ನೀಡುತ್ತದೆ ಎಂದು ಮಿಂಟ್ಜ್ ರವರು ವಿವರಿಸುತ್ತಾರೆ.

English summary

Resuming Sex After Heart Attack May Help Recovery

Resuming sex after heart attack may help recovery, read on...
X