For Quick Alerts
ALLOW NOTIFICATIONS  
For Daily Alerts

ಪ್ಲೆರಿಸಿ (ಶ್ವಾಸಕೋಶದಲ್ಲಿ ಉರಿ, ಉಸಿರಾಟಕ್ಕೆ ತೊಂದರೆ)ಗೆ ಕಾರಣ ಮತ್ತು ಲಕ್ಷಣಗಳೇನು?

|

ಪ್ಲೆರಿಸಿ (Pleurisy) ಅಂದರೆ ಶ್ವಾಸಕೋಶದಲ್ಲಿ ಉರಿ ಹಾಗೂ ಉಸಿರಾಟಕ್ಕೆ ತೊಂದರೆ ಉಂಟಾಗುವ ಕಾಯಿಲೆಯಾಗಿದೆ. . ಇದು ನಿಮ್ಮ ಎದೆಯ ಗೂಡಿನಿಂದ ನಿಮ್ಮ ಶ್ವಾಸಕೋಶವನ್ನು ಬೇರ್ಪಡಿಸುವ ಪ್ಲೆರಾ (ಅಂಗಾಂಶಗಳ ತೆಳುವಾದ ಪದರ) ಸೋಂಕು ಆಗಿದೆ. ಪ್ಲೆರಾ ಪದರಗಳ ನಡುವೆ ನೀರು ತುಂಬಿಕೊಂಡು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

Pleurisy (Inflammation Of The Lung Lining): Symptoms, Causes, Treatments and Prevention

ಈ ತೊಂದರೆಯನ್ನು ನಿರ್ಲಕ್ಷ್ಯ ಮಾಡಿದರೆ ಸಾವು ಕೂಡ ಸಂಭವಿಸಬಹದು, ಅದರಲ್ಲೂ 65 ವರ್ಷ ಮೇಲ್ಪಟ್ಟವರಿಗೆ ಈ ಸಮಸ್ಯೆಯಿಂದ ಅಪಾಯ ಹೆಚ್ಚು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ ನೋಡಿ:
ಕಾರಣಗಳು

ಕಾರಣಗಳು

  • ಎದೆ ಅಥವಾ ಶ್ವಾಸಕೋಶದ ಗಡ್ಡೆ (ಟ್ಯೂಮರ್)
  • ಪಕ್ಕೆಲುಬುಗಳು ಮುರಿದರೆ
  • ಬ್ರಾಂಕೈಟಿಸ್
  • ಇನ್‌ಫ್ಲೇಮಟರಿ ಬೌಲ್ ಸಿಂಡ್ರಮ್
  • ಎದೆಯಲ್ಲಿ ಗಾಯ
  • ಅಪಧಮನಿಗಳು ಬ್ಲಾಕ್ ಆಗುವುದು
  • ಲೂಪಸ್ ಮತ್ತು ರುಮಟಾಯ್ಡ್ ಸಂಧಿವಾತ
  • ಕೆಲವೊಂದು ಔಷಧಗಳ ಅಡ್ಡಪರಿಣಾಮ
  • ಶ್ವಾಸಕೋಶದ ಕ್ಯಾನ್ಸರ್
  • ವಂಶಪಾರಂಪರ್ಯವಾದ ಕಾಯಿಲೆ
  • ಪ್ಲೆರಿಸಿ ಲಕ್ಷಣಗಳು

    ಪ್ಲೆರಿಸಿ ಲಕ್ಷಣಗಳು

    • ಉಸಿರಾಡುವಾಗ, ಕೆಮ್ಮುವಾಗ, ಸೀನಿದಾಗ ತುಂಬಾ ಎದೆನೋವು
    • ಎದೆ ಬಡಿತ
    • ಇದ್ದಕ್ಕಿದ್ದಂತೆ ತೂಕ ಇಳಿಕೆ
    • ಎದೆಗೆ ಗುದ್ದಿದ್ದಂತೆ ನೋವು
    • ಚಳಿಜ್ವರ
    • ಬೆನ್ನು ಹಾಗೂ ಭುಜದಲ್ಲಿ ನೋವು
    • ಗಂಟಲು ಕೆರೆತ
    • ಸ್ನಾಯುಗಳಿಗೆ ನೋವು
    • ಯಾರಿಗೆ ಅಪಾಯ?

      ಯಾರಿಗೆ ಅಪಾಯ?

      • ಶ್ವಾಸಕೋಶದ ಕ್ಯಾನ್ಸರ್ ಇರುವವರಿಗೆ
      • 65 ವರ್ಷ ಮೇಲ್ಪಟ್ಟವರಿಗೆ
      • ಅಟೋಇಮ್ಯೂನ್‌ ಕಾಯಿಲೆ ಇರುವವರಿಗೆ
      • ಪತ್ತೆ ಹೇಗೆ?

        ಪತ್ತೆ ಹೇಗೆ?

        ಕಾಯಿಲೆ ಬಗ್ಗೆ ಮಾಹಿತಿ: ವೈದ್ಯರು ಹಲವಾರು ಪ್ರಶ್ನೆಗಳನ್ನು ಕೇಳಿ ಕಾಯಿಲೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ.

        • ಎಕ್ಸ್‌ರೇ
        • ಸಿಟಿ ಸ್ಕ್ಯಾನ್‌ ಮತ್ತು ಅಲ್ಟ್ರಾಸೌಂಡ್
        • ರಕ್ತ ಪರೀಕ್ಷೆ
        • ಬಯೋಸ್ಪೈ
        • ಈ ಪರೀಕ್ಷೆಗಳನ್ನು ಮಾಡಿಸಿದರೆ ಪ್ಲೆರಿಸಿ ಬಗ್ಗೆ ತಿಳಿದು ಬರುವುದು.

           ಚಿಕಿತ್ಸೆ ಮತ್ತು ತಡೆಗಟ್ಟುವುದು ಹೇಗೆ?

          ಚಿಕಿತ್ಸೆ ಮತ್ತು ತಡೆಗಟ್ಟುವುದು ಹೇಗೆ?

          ಚಿಕಿತ್ಸೆ

          ರಕ್ತ ಹೆಪ್ಪುಗಟ್ಟದಿರಲು ಬ್ಲಡ್‌ ಥಿನ್ನರ್, ಕಾರ್ಟಿಸ್ಟಿರಾಯ್ಡ್, Anti-inflammatory drugs, Bronchodilators, Pleural effusio ಈ ಬಗೆಯ ಔಷಧಗಳನ್ನು ನೀಡಲಾಗುವುದು.

          ಪ್ಲೆರಿಸಿ ತಡೆಗಟ್ಟುವುದು ಹೇಗೆ?

          ಫ್ಲೆರಿಸಿ ಲಕ್ಷಣಗಳು ಕಂಡು ಬಂದರೆ ಧೂಮಪಾನ ಅಭ್ಯಾಸವಿದ್ದರೆ ಅದನ್ನು ಬಿಡಿ

          • ಆರೋಗ್ಯಕರ ಆಹಾರ ಸೇವಿಸಿ
          • ಸಾಕಷ್ಟು ವಿಶ್ರಾಂತಿ ಪಡೆಯಿರಿ
          • ವೈದ್ಯರು ನೀಡಿರುವ ಸಲಹೆಗಳನ್ನು ಪಾಲಿಸಿ.
English summary

Pleurisy (Inflammation Of The Lung Lining): Symptoms, Causes, Treatments and Prevention

Pleurisy, also named as pleuritis, is an inflammatory condition of the lungs that causes severe chest pain and shortness of breath.
X
Desktop Bottom Promotion