For Quick Alerts
ALLOW NOTIFICATIONS  
For Daily Alerts

ನೀವು ಈ ಆಹಾರಗಳನ್ನು ತಿಂದರೆ ಬಿಪಿ ಸಮಸ್ಯೆಯೇ ಬರಲ್ಲ

|

ವಯಸ್ಸು 30 ದಾಟುತ್ತಿದ್ದಂತೆ ಅಧಿಕ ರಕ್ತದೊತ್ತಡ(ಬಿಪಿ), ಮಧುಮೇಹ ಈ ರೀತಿಯ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಕಾರಣವೇನು ನೋಡಿದರೆ ಪ್ರಮುಖ ಕಾರಣ ನಮ್ಮ ಆಹಾರಶೈಲಿ ಹಾಗೂ ಜೀವನಶೈಲಿಯಾಗಿದೆ.

ಬಿಪಿ ಅಥವಾ ರಕ್ತದೊತ್ತಡ ಗಂಭೀರವಾದ ಆರೋಗ್ಯ ಸಮಸ್ಯೆ ಅಲ್ಲವಾದರೂ ಇದನ್ನು ನಿರ್ಲಕ್ಷ್ಯ ಮಾಡಿದರೆ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ.

ದೇಹದಲ್ಲಿ ಗ್ಲೋಕೋಸ್‌ ಹಾಗೂ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಾ ಹೋದಂತೆ ರಕ್ತವು ಹೃದಯಕ್ಕೆ ಸಂಚಲನವಾಗುವುದು ಕಡಿಮೆಯಾಗುವುದು ಅಥವಾ ಅಧಿಕವಾಗುವುದು ಇದರಿಂದ ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡ ಉಂಟಾಗುವುದು. ಈ ರೀತಿ ಉಂಟಾಗುವುದರಿಂದ ಹೃದಯಾಘಾತ ಕೂಡ ಸಂಭವಿಸುವುದು.

ನಾವು ನಮ್ಮ ಆಹಾರ ಶೈಲಿಯ ಮೂಲಕ ಇಂಥ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಕಾರ್ಬೋಹೈಡ್ರೇಟ್ಸ್ ಹಾಗೂ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಆಹಾರಗಳ ಸೇವನೆ ಕಡಿಮೆ ಮಾಡಿದರೆ ಬಿಪಿ ಬಾರದಂತೆ ತಡೆಗಟ್ಟಬಹುದು.

ನೀವು ನಿಮ್ಮ ಆಹಾರಶೈಲಿ ಹಾಗೂ ಜೀವನಶೈಲಿ ಈ ರೀತಿ ಪಾಲಿಸಿದ್ದೇ ಆದರೆ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುವುದಿಲ್ಲ, ಹೀಗಾಗಿ ಹೃದಯಾಘಾತ, ಮಧುಮೇಹದಂಥ ಅಪಾಯವನ್ನು ಕೂಡ ತಪ್ಪಿಸಬಹುದು.

ಅಕ್ಕಿ, ಗೋಧಿ ಕಡಿಮೆ ಮಾಡಿ ಸಿರಿಧಾನ್ಯ ಬಳಸಿ

ಅಕ್ಕಿ, ಗೋಧಿ ಕಡಿಮೆ ಮಾಡಿ ಸಿರಿಧಾನ್ಯ ಬಳಸಿ

ಅಕ್ಕಿ, ಗೋಧಿ ನೀವು ಹೆಚ್ಚಾಗಿ ಬಳಸುತ್ತಿದ್ದರೆ ಇವುಗಳ ಬಳಕೆ ಕಡಿಮೆ ಮಾಡಿ ಬದಲಿಗೆ ಸಿರಿಧಾನ್ಯಗಳಾದ ನವಣೆ, ಸಾಮೆ, ಕೊರ್ಲೆ, ಆರ್ಕ, ಊದುರು ಬಳಸಿ. ಈ ಸಿರಿಧಾನ್ಯಗಳನ್ನು ನೀವು ಪ್ರತಿನಿತ್ಯ ಬಳಸಿದ್ದೇ ಆದರೆ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಬೊಜ್ಜು ಮೈ ಸಮಸ್ಯೆ ಇರಲ್ಲ, ಕೊಲೆಸ್ಟ್ರಾಲ್‌ ಸಮಸ್ಯೆ ಇರಲ್ಲ. ದೇಹದಲ್ಲಿ ಸಕ್ಕರೆಯಂಶ, ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಈ ಸಿರಿಧಾನ್ಯಗಳನ್ನು ಪುಡಿ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಸೇವಿಸಬಹುದು ಹಾಗೂ ಉಪ್ಪಿಟ್ಟು, ರೊಟ್ಟಿ ಮುಂತಾದ ಆಹಾರ ಪದಾರ್ಥಗಳನ್ನು ಮಾಡಿ ಸೇವಿಸಬಹುದು.

 ರಕ್ತದೊತ್ತಡ ಬಾರದಂತೆ ತಡೆಯುವ ತರಕಾರಿಗಳು

ರಕ್ತದೊತ್ತಡ ಬಾರದಂತೆ ತಡೆಯುವ ತರಕಾರಿಗಳು

ನೀವು ನಿಮ್ಮ ಆಹಾರದಲ್ಲಿ ಸೋರೆಕಾಯಿ, ಕುಂಬಳಕಾಯಿ, ಹೀರೇಕಾಯಿ, ಸೌತೆಕಾಯಿ ಇವುಗಳನ್ನು ಹೆಚ್ಚಾಗಿ ಬಳಸಿ., ಈ ತರಕಾರಿಗಳಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು, ದೇಹಕ್ಕೆ ಅಗ್ಯತವಾದ ಪೋಷಕಾಂಶಗಳು ದೊರೆಯುತ್ತದೆ.

ಯಾವ ಸೊಪ್ಪು ಸೇವನೆ ಒಳ್ಳೆಯದು?

ಯಾವ ಸೊಪ್ಪು ಸೇವನೆ ಒಳ್ಳೆಯದು?

ಎಲ್ಲಾ ಬಗೆಯ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅದರಲ್ಲೂ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಸಬ್ಸಿಗೆ ಸೊಪ್ಪು, ಪಾಲಾಕ್ ಸೊಪ್ಪು ಈ ರೀತಿಯ ಸೊಪ್ಪುಗಳನ್ನು ಹೆಚ್ಚಾಗಿ ಬಳಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ತಿಂದರೆ ತುಂಬಾ ಒಳ್ಳೆಯದು.

ಜೀವನಶೈಲಿ ಹೇಗಿರಬೇಕು?

ನಿಮ್ಮ ಆಹಾರದಲ್ಲಿ ಸೋಡಿಯಂ ತೆಗೆದುಕೊಳ್ಳುವ ಪ್ರಮಾಣ ಕಡಿಮೆ ಮಾಡಿ

ನಿಮ್ಮ ಆಹಾರದಲ್ಲಿ ಸೋಡಿಯಂ ತೆಗೆದುಕೊಳ್ಳುವ ಪ್ರಮಾಣ ಕಡಿಮೆ ಮಾಡಿ

ಯಾವುದೇ ಆಹಾರ ತೆಗೆದುಕೊಳ್ಳುವ ಮುನ್ನ ಅದರ ಲೇಬಲ್‌ ಓದಿ, ಸಾಮಾನ್ಯವಾಗಿ ದಿನದಲ್ಲಿ 2,300 ಮಿ.ಗ್ರಾಂನಷ್ಟು ಸೋಡಿಯಂ ಸೇವಿಸುತ್ತಾರೆ, ಅದನ್ನು 1500ಮಿ.ಗ್ರಾಂಗೆ ಇಳಿಸಿದರೆ ತುಂಬಾ ಒಳ್ಳೆಯದು. ಸಂಸ್ಕರಿಸಿದ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಡಿ.

ಧೂಮಪಾನ, ಮದ್ಯಪಾನ, ಕೆಫೀನ್ ಪದಾರ್ಥಗಳ ಸೇವನೆ ಇವುಗಳಿಂದ ದೂರವಿರಿ

ಧೂಮಪಾನ, ಮದ್ಯಪಾನ, ಕೆಫೀನ್ ಪದಾರ್ಥಗಳ ಸೇವನೆ ಇವುಗಳಿಂದ ದೂರವಿರಿ

ಧೂಮಪಾನ ಅಭ್ಯಾಸ ಬಿಡುವುದು ಶ್ವಾಸಕೋಶದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಮದ್ಯಪಾನ ಹಾಗೂ ಟೀ, ಕಾಫಿ ಮಿತಿಯಲ್ಲಿ ಸೇವಿಸಿ.

ಸಮತೂಕದ ಮೂಕಟ್ಟು ನಿಮ್ಮದಾಗಿಸಿ

ಸಮತೂಕದ ಮೂಕಟ್ಟು ನಿಮ್ಮದಾಗಿಸಿ

ಬೊಜ್ಜು ಇದ್ದರೆ ಅದನ್ನು ವ್ಯಾಯಾಮ ಹಾಗೂ ಆಹಾರಕ್ರಮದಿಂದ ಕರಗಿಸಿ, ಸಮತೂಕದ ಮೈಕಟ್ಟು ನಿಮ್ಮದಾಗಿಸಿ. ಪುರುಷರ ಸೊಂಟದ ಸುತ್ತಳತೆ 40 ಇಂಚು ಅಂದರೆ 102 ಸೆ.ಮೀ ಇದ್ದರೆ ಮಹಿಳೆಯರ ಸೊಂಟದ ಸುತ್ತಳತೆ 35 ಇಂಚು ಅಂದರೆ 89ಸೆ. ಮೀನಷ್ಟು ಇದ್ದರೆ ಸಮತೂಕದ ಮೈಕಟ್ಟು ನಿಮ್ಮದಾಗಿದೆ.

 ಮಾನಸಿಕ ಒತ್ತಡ ಕಡಿಮೆ ಮಾಡಿ

ಮಾನಸಿಕ ಒತ್ತಡ ಕಡಿಮೆ ಮಾಡಿ

ಇನ್ನು ನಮ್ಮ ಆರೋಗ್ಯ ಸಮಸ್ಯೆಗೆ ಒಂದು ಪ್ರಮುಖ ಕಾರಣ ಅತ್ಯಧಿಕ ಮಾನಸಿಕ ಒತ್ತಡ. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಧ್ಯಾನ ಮಾಡುವುದು, ಯೋಗ, ಪ್ರಾಣಯಾಮ ಮಾಡಿ , ಸಂಗೀತ ಕೇಳಿ ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.

ಈ ಜೀವನಶೈಲಿ ಹಾಗೂ ಆಹಾರಶೈಲಿ ನಿಮ್ಮದಾಗಿದ್ದರೆ ಬಿಪಿ, ಮಧುಮೇಹ ಇಂಥ ಯಾವ ಸಮಸ್ಯೆಯೂ ಕಾಡಲ್ಲ ನೋಡಿ.

English summary

Foods and Life Style Changes to Lower Your Blood Pressure in Kannada

If you follow this diet and lifestyle and lifestyle no need to worry about Blood Pressure problem, Have a look.
X