For Quick Alerts
ALLOW NOTIFICATIONS  
For Daily Alerts

ಒಂದೇ ಒಂದು ಎಕ್ಸ್ ರೇಯಿಂದ 10 ವರ್ಷದ ಮೊದಲೇ ಸಿಗುತ್ತೆ ಹೃದಯಾಘಾತ ಮುನ್ಸೂಚನೆ !

|

ಹೃದಯಾಘಾತದ ಲಕ್ಷಣಗಳನ್ನು ಮೊದಲೇ ಗುರುತಿಸಿದರೆ ಪ್ರಾಣಾಪಾಯದಿಂದ ಪಾರಾಗಬಹುದೆಂದು ವೈದ್ಯರು ಹೇಳುತ್ತಾರೆ, ಆದರೆ ಹೃದಯಾಘಾತಕ್ಕೆ ಮುನ್ನ ಅದು ಹೃದಯಾಘಾತದ ಸೂಚನೆ ಎಂದು ತಿಳಿಯದೆ ಸ್ವಲ್ಪ ನಿರ್ಲಕ್ಷ್ಯ ಮಾಡುತ್ತೇವೆ, ಅದುವೇ ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ.

Artificial Intelligence to predict the risk of a heart attack or stroke using only a single x-ray; Know details in kannada

ಸಾಮಾನ್ಯ ಜನರು ಹೇಳುವ ಪ್ರಕಾರ ಅಷ್ಟು ಚೆನ್ನಾಗಿದ್ದರು, ಕೂತಲ್ಲಿಯೇ ಪ್ರಾಣ ಬಿಟ್ಟರು, ಮಲಗಿದ್ದರು ಹಾಗೆಯೇ ಹೋಗ್ಬಿಟ್ಟರು, ಹಾರ್ಟ್ ಅಟ್ಯಾಕ್‌ನ ಒಂದಿಷ್ಟು ಸುಳಿವೂ ಇರಲಿಲ್ಲ ಎಂದು ಹೇಳುತ್ತಾರೆ. ಹೌದು ಹೃದಯಾಘಾತದ ಲಕ್ಷಣಗಳಾದ ಭುಜನೋವು, ಸ್ವಲ್ಪ ಸುಸ್ತಾಗುವುದು, ಮೈ ಬೆವರುವುದು ಈ ಅಂಶಗಳೆನ್ನೆಲ್ಲಾ ದೊಡ್ಡ ಸಮಸ್ಯೆಯಾಗಿ ನಾವು ತೆಗೆದುಕೊಳ್ಳುವುದೇ ಇfಲಲ, ಹಾಗಾಗಿ ಈ ಸೈಲೆಂಟ್‌ ಕಿಲ್ಲರ್ ಅಟ್ಯಾಕ್‌ ಮಾಡುವವರಿಗೆ ತಿಳಿಯುವುದೇ ಇಲ್ಲ.

ಆದರೆ ಈ ಸೈಲೆಂಟ್‌ ಕಿಲ್ಲರ್‌ನನ್ನು ಕಂಡು ಹಿಡಿಯುವಲ್ಲಿ ವಿಜ್ಞಾನ ಸಾಧನೆ ಮಾಡಿದೆ. ಹೌದು ಹೃದಯಾಘಾತ, ಪಾರ್ಶ್ವವಾಯು ಇಂಥ ಕಾಯಿಲೆ ಬರಬಹುದೇ ಎಂಬುವುದನ್ನು ಮೊದಲೇ ಪತ್ತೆಹಚ್ಚುವ ತಂತ್ರಜ್ಞಾನ ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ಎದೆಯ ಎಕ್ಸ್‌ರೇ ಒಮ್ಮೆ ಮಾಡಿಸಿದರೆ ತಿಳಿಯುತ್ತೆ

ವಿಜ್ಞಾನಿಗಳು ಒಂದು ಮಾಡೆಲ್ ಸಿದ್ಧಪಡಿಸಿದ್ದು ಅದರಲ್ಲಿ ಎದೆಯ ಭಾಗದ ಒಂದು ಎಕ್ಸ್‌ರೇ ತೆಗೆಯುವ ಮೂಲಕ ಪಾರ್ಶ್ವವಾಯು ಅಥವಾ ಹೃದಯಾಘಾತದ ಸಾದ್ಯತೆ ಇದೆಯೇ ಎಂದು ತಿಳಿಯಬಹುದು.

ಹೃದಯಾಘಾತ, ಸ್ಟ್ರೋಕ್ ಸಂಭವಿಸುವ 10 ವರ್ಷದ ಮೊದಲೇ ಕಂಡು ಹಿಡಿಯಬಹುದು

ಈ ತಂತ್ರಜ್ಞಾನದಲ್ಲಿ ಎಕ್ಸ್‌ರೇ ತೆಗೆದು 10 ವರ್ಷಗಳ ಮೊದಲೇ ಹೃದಯಾಘಾತ ಸಂಭವಿಸಬಹುದೇ ಎಂದು ಹೇಳಬಹುದೆಂದು bgr.com ಹೇಳಿದೆ. ಸಂಶೋಧಕರು ಈ ತಂತ್ರಜ್ಞಾನವನ್ನು Radiological Society of North America's annual meeting (RSNA)ನಲ್ಲಿ ಕೂಡ ಪ್ರಸ್ತುತ ಪಡಿಸಿದ್ದರು. ವಿಜ್ಞಾನಿಗಳು ಸೆಕೆಂಡ್‌ ಇಂಡಿಪೆಂಡೆಂಟ್ ಕೋರ್ಹೆಟ್ ಮಾಡೆಲ್ ಬಳಸಿ 11,430 ಜನರ ಎದೆಯ ಭಾಗದ ಎಕ್ಸ್‌ರೇ ತೆಗೆದು ಪರೀಕ್ಷಿಸಲಾಯಿತು.

ಈ ತಂತ್ರಜ್ಞಾನ ಭವಿಷ್ಯದಲ್ಲಿ ಸಾಕಷ್ಟು ಜನರ ಪ್ರಾಣ ಉಳಿಸಲು ಸಹಕಾರಿಯಾಗಲಿದೆ

ಈಗ ಕಂಡು ಹಿಡಿದಿರುವ ತಂತ್ರಜ್ಞಾನ ಮನುಷ್ಯರ ಪಾಲಿನ ವರವೆಂದು ಹೇಳಬಹುದು. ಹೃದಯಾಘಾತವಾದಾಗ ಗೋಲ್ಡನ್‌ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿದರೆ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ, ಹೀಗಿರುವಾಗ ಕೆಲವು ವರ್ಷಗಳ ಮೊದಲೇ ಗೊತ್ತಾದರೆ ಸಾಕಷ್ಟು ಮುನ್ನೆಚ್ಚರಿಕೆವಹಿಸಿ, ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿ ಈ ಅಪಾಯದಿಂದ ಪಾರಾಗಬಹುದು, ಈ ದೃಷ್ಟಿಯಿಂದ ಈ ತಂತ್ರಜ್ಞಾನ ಭವಿಷ್ಯದಲ್ಲಿ ತುಂಬಾನೇ ಪ್ರಯೋಜನಕಾರಿಯಾಗಿದೆ.

ಹೃದಯಾಘಾತದ ಲಕ್ಷಣಗಳು

* ಎದೆ ಬಿಗಿಯಾದ ಅನುಭವ, ಸ್ವಲ್ಪ ನೋವು
* ಆ ನೋವು ಭುಜ, ಕೈ, ಕುತ್ತಿಗೆ, ದವಡೆ, ಹಲ್ಲಿಗೂ ಹರಡುವುದು. ಕೆಲವರಿಗೆ ಮೇಲ್ಭಾಗದ ಹೊಟ್ಟೆ ಭಾಗದಲ್ಲಿ ನೋವು ಕಂಡು ಬರುವುದು.
* ಬೆವರುವುದು
* ತಲೆಸುತ್ತು
* ಎದೆಯುರಿ-ಅಜೀರ್ಣ
* ತಲೆಭಾರ
* ವಾಂತಿ
* ಉಸಿರಾಟಕ್ಕೆ ತೊಂದರೆ
ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ, ಸಮೀಪದ ಸುಸಜ್ಜಿತ ಆಸ್ಪತ್ರೆಗೆ ಹೋಗಿ ಇಸಿಜಿ ಮಾಡಿಸಿ, ಅಗ್ಯತ ಬಿದ್ದರೆ ಅಡ್ಮಿಟ್ ಆಗಿ.

ಯಾರಲ್ಲಿ ಹೃದಯಾಘಾತದ ಅಪಾಯ ಹೆಚ್ಚು?

* ಅತ್ಯಧಿಕ ಮೈ ತೂಕ ಹೊಂದಿದ್ದರೆ
* ಪ್ರರತಿನಿತ್ಯ ವ್ಯಾಯಾಮ ಮಾಡದಿದ್ದರೆ
* ಅತ್ಯಧಿಕ ರಕ್ತದೊತ್ತಡ ಇದ್ದರೆ
* ಅತ್ಯಧಿಕ ಕೊಲೆಸ್ಟ್ರಾಲ್ ಇದ್ದರೆ
* ರಕ್ತದಲ್ಲಿ ಸಕ್ಕರೆಯಂಶ ಅಧಿಕವಿದ್ದರೆ
* ಅತ್ಯಧಿಕ ಮಾನಸಿಕ ಒತ್ತಡಕ್ಕೆ ಒಳಗಾದರೆ
* ಕುಟುಂಬದ ಇತಿಹಾಸವಿದ್ದರೆ
* 45 ವರ್ಷದ ಮೇಲ್ಪಟ್ಟವರಲ್ಲಿ
* ಕೋವಿಡ್ 19 ಸೋಂಕು ತಗುಲಿದ್ದರೆ

ಹೃದಯಾಘಾತದ ಅಪಾಯ ಹೇಗೆ ತಡೆಗಟ್ಟಬಹುದು?

* ಪ್ರತಿನಿತ್ಯ ವ್ಯಾಯಾಮ ಮಾಡಿ
* ಧೂಮಪಾನ ಮಾಡುವುದನ್ನು ಬಿಡಿ
* ಆರೋಗ್ಯಕರ ಆಹಾರ ಸೇವಿಸಿ.
* ಆರೋಗ್ಯಕರ ಮೈ ತೂಕ ಹೊಂದಿ.

ವ್ಯಕ್ತಿಗೆ ಹಾರ್ಟ್ ಅಟ್ಯಾಕ್‌ ಆದಾಗ ಏನು ಮಾಡಬೇಕು?

ಕೂಡಲೇ ಅತಿ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಬೇಕು. ಹೃದಯಾಘಾತವಾದಾಗ ಒಂದೊಂದು ಕ್ಷಣವೂ ತುಂಬಾನೇ ಮುಖ್ಯವಾಗಿರುತ್ತದೆ,
* ವ್ಯಕ್ತಿಗೆ ಆಮ್ಲಜನಕ ನೀಡಬೇಕು, ಅವರ ಬಾಯಿಗೆ ಬಾಯಿಟ್ಟು ಊದುತ್ತಾ ಆಮ್ಲಜನಕ ನೀಡಬೇಕು.

English summary

Artificial Intelligence to predict the risk of a heart attack or stroke using only a single x-ray; Know details in kannada

Study says artificial intelligence to predict heart attack and stork using single X ray, here are more information, read on...
Story first published: Monday, December 5, 2022, 16:36 [IST]
X
Desktop Bottom Promotion