For Quick Alerts
ALLOW NOTIFICATIONS  
For Daily Alerts

ಹೃದಯಘಾತ ಸೂಚನೆ- ಪುರುಷರಿಗೂ ಮಹಿಳೆಯರಿಗೂ ಬೇರೆ ಬೇರೆಯಾಗಿರುತ್ತದೆಯೇ?

By Arshad
|

ಈ ಜಗತ್ತಿನ ಪ್ರತಿ ಜೀವಿಗೂ ಸಾವು ಖಚಿತ. ನಮಗೆಲ್ಲರಿಗೂ ಸಾವಿನ ಬಗ್ಗೆ ಹೆದರಿಕೆಯಂತೂ ಇದ್ದೇ ಇರುತ್ತದೆ. ಪುರುಷರಿಗೇ ಆಗಲಿ, ಮಹಿಳೆಯರಿಗೇ ಆಗಲಿ, ಮಕ್ಕಳಿಗೇ ಆಗಲಿ, ಎಲ್ಲರಿಗೂ ತಮ್ಮನ್ನ ಕಾಡುವ ಕಾಯಿಲೆ ಹಾಗೂ ಸಾವಿನ ಬಗ್ಗೆ ಹೆದರಿಕೆ ಇರುತ್ತದೆ ಹಾಗೂ ಈ ಬಗ್ಗೆ ನಮ್ಮೆಲ್ಲರ ಸುಪ್ತ ಮನಸ್ಸುಗಳಲ್ಲಿ ಅರಿವೂ ಇರುತ್ತದೆ.

ಮಕ್ಕಳಿದ್ದಾಗಿನಿಂದಲೂ ನಮ್ಮೆಲ್ಲರಿಗೂ ನಮ್ಮ ಹಿರಿಯರು ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಈ ಮೂಲಕ ಸಾವಿಗೆ ಕಾರಣವಾಗುವ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಸಲಹೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಹಿರಿಯರ ಇತರ ಮಾತುಗಳನ್ನು ಉಪೇಕ್ಷಿಸಿದಂತೆಯೇ ನಾವು ಈ ಮಾತುಗಳನ್ನೂ ಉಪೇಕ್ಷಿಸುವ ಮೂಲಕ ಕೆಲವಾರು ಕಾಯಿಲೆಗಳನ್ನು ನಾವಾಗಿಯೇ ದೂರದಿಂದ ಆಹ್ವಾನಿಸುತ್ತಿದ್ದೇವೆ.

ವಯಸ್ಸಾಗುತ್ತಿದ್ದಂತೆಯೇ 'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬ ಗಾದೆ ಮಾತಿನಂತೆ ಹಿರಿಯರು ಹೇಳಿದ ಮಾತುಗಳು ನಿಜವಾಗುತ್ತಿರುವುದನ್ನು ಕಂಡುಕೊಳ್ಳುತ್ತೇವೆ ಹಾಗೂ ಈ ಮಾರಣಾಂತಿಕ ಕಾಯಿಲೆಗಳ ಬಗ್ಗೆ ಹೆಚ್ಚು ಮಾಹಿತಿ ಹಾಗೂ ಈ ಕಾಯಿಲೆಗಳು ಉಂಟುಮಾಡುವ ಕಹಿಪರಿಣಾಮಗಳನ್ನೂ ಇದರಿಂದ ಎದುರಾಗಬಹುದಾದ ಸಾವಿನ ಕುರಿತು ಕಾಳಜಿಯನ್ನೂ ವ್ಯಕ್ತಪಡಿಸುತ್ತೇವೆ.

Heart Attack

ನಮಗೆ ಆವರಿಸಿದ ಕಾಯಿಲೆಯ ಬಗ್ಗೆ ಮಾತ್ರವಲ್ಲ, ನಮ್ಮ ಆಪ್ತರಿಗೆ ಎದುರಾದ ಕಾಯಿಲೆಗಳೂ ನಮ್ಮಲ್ಲಿ ವ್ಯಾಕುಲತೆ ಹುಟ್ಟಿಸುತ್ತವೆ ಹಾಗೂ ಈ ಕಾಯಿಲೆಗೆ ಎದುರಾದ ಕಾರಣಗಳ ಬಗ್ಗೆ ಅರಿತ ಬಳಿಕವಂತೂ ಇವುಗಳಿಂದ ದೂರವಿರಲು ನಮ್ಮಲ್ಲಿ ನಾವೇ ಹೇಳಿಕೊಳ್ಳುತ್ತೇವೆ. ಯಾವುದೇ ಕಾಯಿಲೆಗಳನ್ನು ಅವುಗಳ ಸೂಚನೆಗಳಿಂದಲೇ ವೈದ್ಯರು ಅರಿಯುತ್ತಾರೆ ಹಾಗೂ ಪರೀಕ್ಷೆಗಳ ಮೂಲಕ ಖಚಿತಪಡಿಸಿಕೊಳ್ಳುತ್ತಾರೆ. ಯಾವುದೇ ಕಾಯಿಲೆ ನಮ್ಮ ದೇಹದ ಮೇಲೆ ಒಂದಕ್ಕಿಂತ ಹೆಚ್ಚು ಸೂಚನೆಗಳನ್ನು ನೀಡುತ್ತದೆ. ಹೆಚ್ಚು ಹೆಚ್ಚು ಸೂಚನೆಗಳು ದೊರಕಿದಂತೆ ಈ ಕಾಯಿಲೆಯ ಖಚಿತತೆಯನ್ನು ಸ್ಪಷ್ಟಪಡಿಸಬಹುದು ಹಾಗೂ ಕಾಯಿಲೆ ಉಲ್ಬಣಗೊಳ್ಳದಂತೆ ತಡೆಯಬಹುದು.

ಹೃದ್ರೋಗ ಬರದಂತೆ ತಡೆಯಲು ಟಿಪ್ಸ್

ಉದಾಹರಣೆಗೆ, ಒಂದು ವೇಳೆ ನಿಮಗೆ ಸತತವಾಗಿ ಹೊಟ್ಟೆನೋವು ಕಾಡುತ್ತಿದ್ದರೆ ಹಾಗೂ ಇದನ್ನು ಅಜೀರ್ಣತೆಯ ಪರಿಣಾಮ ಎಂದು ನೀವು ಗುರುತಿಸಲು ಸಾಧ್ಯವಾಗಿ ಇದಕ್ಕೆ ನೀವೇ ಚಿಕಿತ್ಸೆ ಒದಗಿಸಿಕೊಳ್ಳುವ ಬದಲು ತಕ್ಷಣ ವೈದ್ಯರ ಬಳಿ ಚಿಕಿತ್ಸೆಗಾಗಿ ಧಾವಿಸುವುದು ಅನಿವಾರ್ಯ. ಏಕೆಂದರೆ ನೀವು ಗುರುತಿಸಿದ ಲಕ್ಷಣಗಳು ನೀವು ಅನುಮಾನಿಸಿದ ಕಾಯಿಲೆಗೆ ಸಂಬಂಧವೇ ಇಲ್ಲದೇ ಬೇರೊಂದು ಕಾಯಿಲೆಯ ಲಕ್ಷಣವಾಗಿರಬಹುದು ಹಾಗೂ ನೀವೇ ಪ್ರಯೋಗಿಸಿದ ಔಷಧಿ ಕಾಯಿಲೆಯನ್ನು ಗುಣಪಡಿಸುವ ಬದಲು ಉಲ್ಬಣಗೊಳಿಸಬಹುದು. ಆದ್ದರಿಂದ ಕಾಯಿಲೆಗಳ ಲಕ್ಷಣವನ್ನು ಸರಿಯಾಗಿ ಅರಿತು ಯಾವ ಕಾಯಿಲೆ ಎಂದು ಗುರುತಿಸುವುದು ವೈದ್ಯರಿಗೆ ಎದುರಾಗುವ ಮೊದಲ ಸವಾಲು.

Heart Attack

ಇದೊಂದು ಪತ್ತೇದಾರಿಕೆಗಿಂತ ಕಡಿಮೆಯೇನೂ ಅಲ್ಲ! ನಮ್ಮ ದೇಹದಲ್ಲಿರುವ ಪಂಚ ಪ್ರಮುಖ ಅಂಗಗಳಾದ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಯಕೃತ್ ಹಾಗೂ ಮೆದುಳುಗಳಿಗೆ ಕೊಂಚವೇ ಹಾನಿಯಾದರೂ ಇದು ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು. ಪರಿಣಾಮವಾಗಿ ಸಾವೂ ಎದುರಾಗಬಹುದು! ಇದರಲ್ಲಿ ಪ್ರಮುಖವಾದ ಹೃದಯದ ಸ್ತಂಭನದ ಸೂಚನೆಗಳು ಪುರುಷರಿಗೂ ಮಹಿಳೆಯರಿಗೂ ಒಂದೇ ಬಗೆಯದ್ದಾಗಿರುತ್ತದೆಯೇ, ಭಿನ್ನವೇ ಎಂಬುದನ್ನು ಇಂದು ಅರಿಯೋಣ....ಪುರುಷರಿಗೂ ಮಹಿಳೆಯರಿಗೂ ಎದುರಾಗುವ ಹೃದಯಸ್ತಂಭನದ ಸೂಚನೆಗಳ ವ್ಯತ್ಯಾಸಗಳು:

ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣ ಹೃದಯಕ್ಕೆ ತಲುಪಬೇಕಾದ ಆಮ್ಲಜನಕಸಹಿತ ರಕ್ತ ತಲುಪದೇ ಇರುವುದು. ಇದಕ್ಕೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಪ್ರಮುಖ ಕಾರಣ. ಈ ಸ್ಥಿತಿ ಎದುರಾದರೆ ರೋಗಿ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಇಂದಿನ ದಿನಗಳಲ್ಲಿ ಈ ಸ್ಥಿತಿಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಹೃದಯಸ್ತಂಭನಕ್ಕೂ ಮುನ್ನ ದೇಹ ನೀಡುವ ಸೂಚನೆಗಳಲ್ಲಿ ಕೆಲವು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಸಮಾನವಾಗಿ ಕಂಡುಬರುತ್ತದೆ. ಆದರೆ ಇತ್ತೀಚಿನ ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಇದರಲ್ಲಿ ಮೂರು ಸೂಚನೆಗಳು ಕೇವಲ ಪುರುಷರಲ್ಲಿ ಅಥವಾ ಮಹಿಳೆಯರಲ್ಲಿ ಮಾತ್ರವೇ ಕಂಡುಬರುತ್ತವೆ. ನಾವೆಲ್ಲರೂ ಅರಿತಂತೆ ಪುರುಷರ ಹಾಗೂ ಮಹಿಳೆಯರ ದೇಹರಚನೆಯಲ್ಲಿ ಹಾಗೂ ಮಾನಸಿಕವಾಗಿ ಅಪಾರವಾದ ವ್ಯತ್ಯಾಸವಿದೆ. ಈ ವ್ಯತ್ಯಾಸಗಳನ್ನು ಆಧರಿಸಿ ದೇಹ ನೀಡುವ ಕೆಲವು ಸೂಚನೆಗಳೂ ಭಿನ್ನವಾಗಿರುತ್ತವೆ.

ಆದ್ದರಿಂದ, ಕೆಲವು ಕಾಯಿಲೆಗಳು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ನೀಡುವ ಸೂಚನೆಗಳಲ್ಲಿ ಕೊಂಚ ವ್ಯತ್ಯಾಸವಿದೆ. ಉದಾಹರಣೆಗೆ ಲೈಂಗಿಕವಾಗಿ ಹರಡು ವ ಕಾಯಿಲೆಗಳಾದ (STDs) ಕ್ಲಾಮೈಡಾ (chlamydia) ಮಹಿಳೆಯರಲ್ಲಿ ಕೆಳಹೊಟ್ಟೆ ನೋವಿನ ಸೂಚನೆ ನೀಡಿದರೆ ಇದೇ ಕಾಯಿಲೆ ಪುರುಷರಲ್ಲಿ ಬೇರೆಯೇ ಸೂಚನೆ ನೀಡುತ್ತದೆ. ಅಂತೆಯೇ ಹೃದಯ ಸ್ತಂಭನ ನೀಡುವ ಸೂಚನೆಯಲ್ಲಿಯೂ ಚಿಕ್ಕ ವ್ಯತ್ಯಾಸವಿದೆ.

ಆದ್ದರಿಂದ ಈ ಸುಚನೆಗಳನ್ನು ಪ್ರತ್ಯೇಕವಾಗಿ ಅರಿತುಕೊಂಡಷ್ಟೂ ಹಾಗೂ ಎಷ್ಟು ಬೇಗ ಕಂಡುಕೊಳ್ಳುತ್ತೀರೋ ಅಷ್ಟೂ ಬೇಗನೇ ಚಿಕಿತ್ಸೆಗೆ ಒಯ್ಯುವ ಮೂಲಕ ಅಮೂಲ್ಯ ಪ್ರಾಣವನ್ನುಳಿಸಬಹುದು. ನಮ್ಮಲ್ಲಿ ಹೆಚ್ಚಿನವರಿಗೆ ಹೃದಯಸ್ತಂಭನದ ಈ ಸೂಚನೆಯ ಚಿಕ್ಕ ವ್ಯತ್ಯಾಸದ ಬಗ್ಗೆ ಅರಿವಿರುವುದಿಲ್ಲ ಹಾಗೂ ನಾವು ಈ ಸೂಚನೆಗಳನ್ನು ಬೇರೆಯೇ ತೊಂದರೆಗಳ ಸೂಚನೆ ಇರಬಹುದೆಂದು ಉಪೇಕ್ಷಿಸುವ, ತನ್ಮೂಲಕ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಸಂಭವವೂ ಇದೆ.

ಈ ಬಗ್ಗೆ ನಡೆಸಿದ ಹಲವಾರು ವರ್ಷಗಳ ಸಂಶೋಧನೆ ಹಾಗೂ ಅಪಾರವಾದ ಮಾಹಿತಿಗಳ ಅಂಕಿ ಅಂಶವನ್ನು ಕಲೆಹಾಕುವ ಮೂಲಕ ಹೃದಯ ಸ್ತಂಭನದ ಸೂಚನೆಗಳು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಬೇರೆಬೇರೆಯಾಗಿರುವುದನ್ನು ಪತ್ತೆ ಹಚ್ಚಲಾಗಿದ್ದು ಈಗ ವೈದ್ಯರು ಇನ್ನೂ ಸುಲಭವಾಗಿ ಈ ಲಕ್ಷಣಗಳನ್ನು ಪರಿಗಣಿಸುವ ಮೂಲಕ ಸೂಕ್ತ ಕಾರಣವನ್ನು ಪತ್ತೆಹಚ್ಚಬಲ್ಲರು.

ಈ ವ್ಯತ್ಸಾಸಗಳಿಗೆ ದೇಹರಚನೆಯ ಸಹಿತ ರಸದೂತಗಳ ವ್ಯತ್ಯಾಸವೂ ಕಾರಣವಾಗಿದೆ. ಬನ್ನಿ, ಈ ಸೂಕ್ಷ್ಮ ವ್ಯತ್ಯಾಸಗಳು ಯಾವುವು ಎಂಬುದನ್ನು ನೋಡೋಣ. ಇದಕ್ಕೂ ಮೊದಲು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಸಮಾನವಾಗಿ ಕಾಣಬರುವ ಸೂಚನೆಗಳು ಯಾವುವು ಎಂಬುದನ್ನು ಮೊದಲು ನೋಡೋಣ: ಎದೆಯ ಮಧ್ಯಭಾಗದಲ್ಲಿ ಏನೋ ತುಂಬಿಕೊಂಡಂತೆ ಭಾಸವಾಗುವುದು, ತಲೆ ತಿರುಗುವುದು, ಕುತ್ತಿಗೆಯ ಭಾಗದಲ್ಲಿ ಭಾರೀ ನೋವು, ಎರಡೂ ಕೈಗಳಲ್ಲಿ ಹಾಗೂ ಭುಜಗಳಲ್ಲಿ ನೋವು, ಕೆಳದವಡೆಯಲ್ಲಿ ನೋವು, ವಾಕರಿಕೆ, ಚಳಿ, ನಡುಕ, ಬೆವರುವಿಕೆ, ಚರ್ಮ ತಣ್ಣಗಾಗುವುದು, ಚರ್ಮದ ಬಣ್ಣ ನೀಲಿಗಟ್ಟುವುದು (grey pallor), ಪ್ರಜ್ಞೆ ಕಳೆದುಕೊಂಡು ಬೀಳುವುದು ಮೊದಲಾದವು ಎರಡೂ ವರ್ಗಗಳಿಗೆ ಸಮಾನವಾಗಿದೆ.

ಮಹಿಳೆಯರಲ್ಲಿ ಮಾತ್ರವೇ ಕಂಡುಬರುವ ಸೂಚನೆಗಳು

ಗಂಟಲು ಬಿಗಿಯಾಗಿ ಅತ್ಯಂತ ಅಹಿತಕರವಾದ ಅನುಭವವಾಗುವುದು, ಎದೆಯ ಮೇಲೆ ಯಾವುದೇ ಅವ್ಯಕ್ತ ಶಕ್ತಿ ಒತ್ತುತ್ತಿರುವಂತೆ ಭಾವನೆಯಾಗುವುದು, ವಾಂತಿ, ಬೆನ್ನಿನ ನಡುವೆ ಹಾಗೂ ಮೇಲ್ಭಾಗದಲ್ಲಿ, ಭುಜಗಳ ನಡುವಣ ಭಾಗದಲ್ಲಿ ತೀವ್ರವಾದ ನೋವು, ಉಬ್ಬರವಿಳಿತ(palpitations), ಸತತ ಕೆಮ್ಮು ಮೊದಲಾದವು ಮಹಿಳೆಯರಲ್ಲಿ ಮಾತ್ರವೇ ಕಂಡುಬರುತ್ತವೆ.

Heart Attack

ಪುರುಷರಲ್ಲಿ ಮಾತ್ರವೇ ಕಂಡುಬರುವ ಸೂಚನೆಗಳು

ಎದೆಯ ಬಲಭಾಗದಲ್ಲಿ ಕಂಡುಬರುವ ನೋವು, ಇಡಿಯ ಎದೆಯಭಾಗದಲ್ಲಿ ಬಲಭಾಗಕ್ಕಿಂತ ಕಡಿಮೆ ನೋವು, ಅಜೀರ್ಣತೆ (ಹೃದಯಾಘಾತಕ್ಕೂ ಕೆಲವು ದಿನಗಳ ಮೊದಲೇ ಕಂಡುಬರುವ ಸೂಚನೆ), ಉಸಿರು ಎಳೆದುಕೊಳ್ಳಲು ಕಷ್ಟವಾಗುವುದು ಮೊದಲಾದವು ಆಗಿವೆ.

ಸೂಚನೆ:

ಮೇಲೆ ವಿವರಿಸಿರುವ ಸೂಚನೆಗಳು ಒಟ್ಟಾರೆ ಸಂಶೋಧನೆಯ ಮೂಲಕ ಕಂಡುಕೊಂಡ ಪ್ರಕಾರ ಸಾಮಾನ್ಯವಾಗಿ ಕಂಡುಬರುವ ಸೂಚನೆಗಳೇ ಆಗಿದ್ದು ಎಲ್ಲರಲ್ಲಿಯೂ ಇದೇ ಪ್ರಕಾರ ಕಂಡುಬರಬೇಕಿಲ್ಲ. ಕೆಲವು ಸಂದರ್ಭಗಳಲ್ಲಿ ಮಹಿಳೆಯರಿಗೆ ಕಂಡುಬರುವ ಸೂಚನೆಗಳು ಪುರುಷರಲ್ಲಿಯೂ ಅಂತೆಯೇ ಪುರುಷರ ಸೂಚನೆಗಳು ಮಹಿಳೆಯರಲ್ಲಿಯೂ ಕಂಡುಬರಬಹುದು. ಲಿಂಗ ಯಾವುದೇ ಇರಲಿ, ಈ ಸೂಚನೆಗಳಲ್ಲಿ ಯಾವುದೇ ಒಂದು ಕಂಡುಬಂದ ತಕ್ಷಣವೇ ವೈದ್ಯರ ಬಳಿ ಎಷ್ಟು ಬೇಗ ಕರೆದೊಯ್ಯಲು ಸಾಧ್ಯವೋ ಅಷ್ಟು ಬೇಗನೇ ಅವಸರಿಸಿದರೆ ಅಷ್ಟೂ ಮಟ್ಟಿಗೆ ಜೀವ ಉಳಿಸಲು ನೆರವಾಗುತ್ತದೆ....

English summary

Can Heart Attack Symptoms Be Different In Men And Women?

As humans, be it men, women or children, all of us would be certainly afraid of diseases and death, because we are wired that way in our subconscious mind. Even as children, if we can remember, we were always afraid of the possibility of being affected by dangerous diseases, as our elders taught us how devastating those diseases could be, even though we never fully grasped the concept. As we got older, after educating ourselves about diseases and how the body works, we would come to have a better idea about diseases and death.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more