ಮಹಿಳೆಯರಿಗೆ ಸೈಲೆಂಟಾಗಿ ಕಾಡುವ 'ಹೃದಯಾಘಾತ'! ಇಲ್ಲಿದೆ ನೋಡಿ ಲಕ್ಷಣಗಳು

By: Arshad
Subscribe to Boldsky

ಹೃದಯಾಘಾತಕ್ಕೂ ಮುನ್ನ ದೇಹ ಕಲವಾರು ತೀಕ್ಷ್ಣ ಸೂಚನೆಗಳನ್ನು ನೀಡುತ್ತದೆ. ಯಾವುದೇ ಕಾರಣಕ್ಕೂ ಈ ಸೂಚನೆಗಳನ್ನು ಅಲಕ್ಷಿಸಕೂಡದು. ಆದರೆ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಈ ಸೂಚನೆಗಳಲ್ಲಿ ಕೊಂಚ ವ್ಯತ್ಯಾಸವಿರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸೂಚನೆಗಳು ಕೆಲವು ಕಾಯಿಲೆಗಳ ರೂಪದಲ್ಲಿ ಪ್ರಕಟವಾಗುತ್ತವೆ.

ಹೃದಯ ರೋಗದ ಲಕ್ಷಣಗಳಿವು...ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಹೃದಯಾಘಾತಕ್ಕೆ ಒಳಗಾದ ಬಹುತೇಕ ಮಹಿಳೆಯರಲ್ಲಿ ಕೆಲವು ಸಮಾನ ಸೂಚನೆಗಳನ್ನು ವೈದ್ಯರು ಗಮನಿಸಿದ್ದು ಈ ಸೂಚನೆಗಳ ಬಗ್ಗೆ ಮುನ್ನರಿವು ಇದ್ದರೆ ಈ ಬಗ್ಗೆ ಸೂಕ್ತ ಕಾಳಜಿ ವಹಿಸುವ ಮೂಲಕ ಮುಂದೆ ಎದುರಾಗಬಹುದಾದ ಗಂಡಾಂತರವನ್ನು ತಪ್ಪಿಸಬಹುದಾಗಿದೆ. ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಯನ್ನು ಇಂದು ನೀಡಲಾಗಿದೆ.... 

ಬೆನ್ನು, ಕುತ್ತಿಗೆ, ಕೆಳದವಡೆ ಹಾಗೂ ತೋಳುಗಳಲ್ಲಿ ನೋವು

ಬೆನ್ನು, ಕುತ್ತಿಗೆ, ಕೆಳದವಡೆ ಹಾಗೂ ತೋಳುಗಳಲ್ಲಿ ನೋವು

ಈ ಭಾಗದಲ್ಲಿ ನಿಧಾನವಾಗಿ ಏರುತ್ತಾ ಹೋದಂತೆ, ಆಗಾಗ ಬರುವಂತೆ, ಚಿಕ್ಕದಾಗಿ ಅಥವಾ ಥಟ್ಟನೇ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ರೋಗಿ ಈ ನೋವುಗಳ ಅನುಭವದಿಂದ ರಾತ್ರೆ ನಿದ್ದೆಯಿಂದ ಎಚ್ಚರಾಗುತ್ತಾರೆ. ಈ ನೋವುಗಳು ಚಿಕ್ಕವೇ ಆಗಿರಬಹುದು, ಆದರೆ ಮರುದಿನ ಬೆಳಿಗ್ಗೆಯೇ, ಸಾಧ್ಯವಾದಷ್ಟು ಬೇಗನೇ ವೈದ್ಯರನ್ನು ಕಂಡು ಈ ಬಗ್ಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ವಿಶೇಷವಾಗಿ ಮಹಿಳೆಯರಲ್ಲಿ ಈ ಸೂಚನೆಗಳು ಹೆಚ್ಚು ಸ್ಪಷ್ಟವಾಗಿದ್ದು ಹೃದಯಾಘಾತದ ಮುನ್ನೆಚ್ಚರಿಕೆಯನ್ನು ನೀಡುತ್ತವೆ.

ತೀಕ್ಷ್ಣವಾಗ ಹೊಟ್ಟೆನೋವು ಅಥವಾ ಒತ್ತಡ

ತೀಕ್ಷ್ಣವಾಗ ಹೊಟ್ಟೆನೋವು ಅಥವಾ ಒತ್ತಡ

ಕೆಲವೊಮ್ಮೆ ಮಹಿಳೆಯರಿಗೆ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಒತ್ತಡ ಹಾಗೂ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತದೆ.

ತಣ್ಣೆನೆಯ ಬೆವರು

ತಣ್ಣೆನೆಯ ಬೆವರು

ಮಹಿಳೆಯರಲ್ಲಿ ಕಂಡುಬರುವ ಇನ್ನೊಂದು ಸೂಚನೆ ಎಂದರೆ ವಾತಾವರಣ ತಣ್ಣಗೇ ಇದ್ದರೂ ಮೈಯೆಲ್ಲಾ ಬೆವರುವುದು. ಈ ಸ್ಥಿತಿ ಕಂಡುಬಂದರೆ ತಕ್ಷಣ ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

 ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು ಅಥವಾ ತಲೆಸುತ್ತುವುದು

ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು ಅಥವಾ ತಲೆಸುತ್ತುವುದು

ಹೃದಯಾಘಾತದ ಇನ್ನೊಂದು ಮುನ್ಸೂಚನೆ ಎಂದರೆ ಉಸಿರಾಡಲು ಕಷ್ಟವಾಗುವುದು. ಹೃದಯಾಘಾತವನ್ನು ಅನುಭವಿಸಿ ಬದುಕುಳಿದ ಮಹಿಳೆಯರ ಅನುಭವದ ಪ್ರಕಾರ ಈ ಸಮಯದಲ್ಲಿ ಯಾವುದೋ ಮ್ಯಾರಾಥಾನ್ ನಲ್ಲಿ ಓಡಿ ಬಂದಷ್ಟು ಜೋರಾಗಿ ಓಡಿ ಬಂದಷ್ಟು ಸುಸ್ತು ಹಾಗೂ ಉಸಿರೆಳೆದುಕೊಳ್ಳಲೇ ಸಾಧ್ಯವಾಗದಿರುವುದು ಮತ್ತು ತಲೆ ಸುತ್ತುವಂತಾಗುತ್ತದೆ. ಈ ಸೂಚನೆಗಳು ಮಹಿಳೆಯರಿಗೆ ಸಂಭವಿಸುವ ಹೃದಯಾಘಾತದ ಪ್ರಮುಖ ಮುನ್ಸೂಚನೆಗಳಾಗಿವೆ.

ಸುಸ್ತು ಹೆಚ್ಚುವುದು

ಸುಸ್ತು ಹೆಚ್ಚುವುದು

ಎಷ್ಟು ಆರಾಮ ಮಾಡಿದರೂ ಸುಸ್ತೇ ಸುಸ್ತು, ನಾಲ್ಕು ಹೆಜ್ಜೆ ಇಡಲಿಕ್ಕೂ ಸಾಧ್ಯವಿಲ್ಲದಷ್ಟು ನಿತ್ರಾಣತೆ ಆವರಿಸಿ ನಿತ್ಯದ ಕೆಲಸಗಳನ್ನೂ ಮಾಡಲು ಸಾಧ್ಯವಿಲ್ಲದಂತೆ ಆಗಿದ್ದರೆ ತಕ್ಷಣ ಹೃದಯರಕ್ತನಾಳಗಳ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು.

ಎದೆಯ ಭಾಗದಲ್ಲಿ ಒತ್ತಡ ಮತ್ತು ನೋವು

ಎದೆಯ ಭಾಗದಲ್ಲಿ ಒತ್ತಡ ಮತ್ತು ನೋವು

ಎದೆಯ ಭಾಗದಲ್ಲಿ ಒತ್ತಿದಂತಾಗುವುದು ಅಥವಾ ಏನೋ ಸರಿ ಇಲ್ಲ ಎಂದೆನ್ನಿಸುವುದು ಹಾಗೂ ಸೂಜಿ ಚುಚ್ಚಿದಂತಹ ನೋವಾಗುವುದು ಸಹಾ ಪ್ರಮುಖ ಮುನ್ಸೂಚನೆಯಾಗಿದೆ. ಸಾಮಾನ್ಯವಾಗಿ ಹೃದಯದ ಭಾಗದಲ್ಲಿ ನೋವಿದ್ದರೆ ಮಾತ್ರವೇ ಹೃದಯಾಘಾತದ ಸೂಚನೆ ಎಂದು ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಹೃದಯಾಘಾತಕ್ಕೂ ಮುನ್ನ ಇಡಿಯ ಎದೆಯ ಭಾಗದಲ್ಲಿ ಸೂಜಿಗಳು ಚುಚ್ಚಿದಂತೆ ನೋವಾಗುತ್ತದೆ. ಈ ಸೂಚನೆ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಸಮಾನವಾಗಿ ಕಾಣಿಸಿಕೊಳ್ಳುತ್ತದೆ.

English summary

Top Symptoms Of Heart Attack That Occur Only In Women

There are certain signs of diseases that you need to watch out for, especially if you're a woman. There are certain symptoms of heart attack that can be seen mostly in women, which you should know about to keep this disease from you as far as possible. Read this article further to know the signs of heart attack in women
Subscribe Newsletter