For Quick Alerts
ALLOW NOTIFICATIONS  
For Daily Alerts

ಹೃದಯ ರೋಗದ ಲಕ್ಷಣಗಳಿವು,,,ಯಾವುದಕ್ಕೂ ಎಚ್ಚರಿಕೆಯಿಂದಿರಿ!

ನಮ್ಮ ಸಂಪೂರ್ಣ ದೇಹದಕ್ಕೆ ರಕ್ತ ಪರಿಚಲನೆಯಾಗಬೇಕಾದರೆ ಹೃದಯವು ಸರಿಯಾಗಿ ಕೆಲಸ ಮಾಡಬೇಕು. ಹೃದಯಕ್ಕೆ ಸ್ವಲ್ಪ ಸಮಸ್ಯೆಯಾದರೂ ಅದು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ....

By Jaya Subramanya
|

ನಮ್ಮ ದೇಹದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುವ ಹೃದಯ ತನ್ನ ಕ್ರಿಯೆಯನ್ನು ನಿರಂತರವಾಗಿ ನಡೆಸುತ್ತದೆ. ಆದರೆ ಈ ಮುಷ್ಟಿ ಗಾತ್ರದ ಹೃದಯಕ್ಕೆ ಏನಾದರೂ ಹಾನಿ ಸಂಭವಿಸಿತು ಎಂದಾದಲ್ಲಿ ನಾವು ಕಷ್ಟಕ್ಕೆ ಒಳಗಾಗುವುದು ಖಂಡಿತ. ನಿಯಮಿತವಾಗಿ ರಕ್ತವನ್ನು ಪಂಪು ಮಾಡುವ ಹೃದಯ ತನ್ನ ಕ್ರಿಯೆಯನ್ನು ಸ್ತಬ್ಧಗೊಳಿಸಿದರೆ ಮಾನವ ಜೀವನಕ್ಕೆ ಉಳಿಗಾಲವಿಲ್ಲ. ನೆನಪಿಡಿ: ಪುಟ್ಟ ಹೃದಯದ ಆರೋಗ್ಯವನ್ನು ಕಡೆಗಣಿಸದಿರಿ!

ಹೃದಯಕ್ಕೆ ಬರುವ ನೋವು ನಮಗೆ ಅರಿವಾಗುವುದು ಒಮ್ಮೊಮ್ಮೆ ಅದು ವಿಕೋಪಕ್ಕೆ ಹೋದಾಗ ಮಾತ್ರ. ಮೊದಲೆಲ್ಲಾ ವಯಸ್ಸಾದಾಗ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ಈ ಬೇನೆ ಇದೀಗ ಹದಿಹರೆಯದವರ ಪ್ರಾಣಕ್ಕೂ ಕುತ್ತು ತರುತ್ತಿದೆ. ಥಟ್ಟನೇ ಕಾಡುವ 'ಹೃದಯಾಘಾತ'! ತಿಳಿಯಲೇಬೇಕಾದ ಸತ್ಯ ಸಂಗತಿ

ಒಂದು ಸಮೀಕ್ಷೆಯ ಪ್ರಕಾರ ಬರಿಯ ಹೃದಯ ಸಂಬಂಧಿ ಕಾಯಿಲೆಗಳಿಂದ 20% ದಷ್ಟು ಜನರು ಮೃತರಾಗುತ್ತಿದ್ದಾರೆ ಎಂಬ ಸುದ್ದಿಯಿದೆ. ಆದರೆ ಇಂದು ಜನರು ಅನುಸರಿಸುತ್ತಿರುವ ಅನಾರೋಗ್ಯಕರ ಜೀವನ ಪದ್ಧತಿ, ವ್ಯಾಯಾಮದ ಕೊರತೆ ನಿಮ್ಮನ್ನು ಹೃದಯದ ಕಾಯಿಲೆಗಳಿಂದ ಬಳಲುವಂತೆ ಮಾಡುತ್ತದೆ. ಹಾಗಿದ್ದರೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸುವ ಸಮಯ ಇದೀಗ ಬಂದೊದಗಿದೆ ಎಂಬುದಂತೂ ಇದರಿಂದ ನಿಖರವಾಗಿ ತಿಳಿಯಲಾಗುತ್ತದೆ. ಅಂತೆಯೇ ನಿಮ್ಮ ಹೃದಯ ರೋಗದಿಂದ ಬಳಲುತ್ತಿದೆ ಎಂಬುದನ್ನು ದೃಢೀಕರಿಸುವ ಸಂಗತಿಗಳನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ. ಈ ಅಂಶಗಳು ನಿಮ್ಮನ್ನು ಕಾಡುತ್ತಿವೆ ಎಂದಾದಲ್ಲಿ ನೀವು ಹೃದಯ ರೋಗದಿಂದ ಬಳಲುತ್ತಿದ್ದೀರಿ ಎಂದರ್ಥ! ಮುಂದೆ ಓದಿ....


ದೈಹಿಕ ಚಟುವಟಿಕೆಯ ಸಮಯದಲ್ಲಿ ಸುಸ್ತು

ದೈಹಿಕ ಚಟುವಟಿಕೆಯ ಸಮಯದಲ್ಲಿ ಸುಸ್ತು

ನೀವು ಸ್ವಲ್ಪ ಸಮಯದ ದೈಹಿಕ ಚಟುವಟಿಕೆಗಳನ್ನು ಮಾಡಿದರೂ ಕೂಡ ನಿಶ್ಯಕ್ತಿ ನಿಮ್ಮನ್ನು ಕಾಡಬಹುದು. ಓಡುವುದು, ನಡಿಗೆ, ಸ್ವಚ್ಛತೆ ಮೊದಲಾದ ಕೆಲಸಗಳನ್ನು ಮಾಡುವಾಗ ಬಳಲಿಕೆ, ನಿತ್ರಾಣ ನಿಮ್ಮನ್ನು ಹಿಂಸಿಸಬಹುದು.

ಉಸಿರು ಕಟ್ಟುವುದು

ಉಸಿರು ಕಟ್ಟುವುದು

ಉಸಿರು ಕಟ್ಟುವುದು ಹೃದಯವು ನಿತ್ರಾಣವಾದಾಗ ಅದು ಶ್ವಾಸಕೋಶಕ್ಕೆ ಸರಿಯಾಗಿ ರಕ್ತಸಂಚಾರ ಮಾಡಲು ವಿಫಲವಾಗುತ್ತದೆ. ಇದರಿಂದ ಉಸಿರಾಟದಲ್ಲಿ ತೊಂದರೆಯಾಗುವುದು.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ದೀರ್ಘ ಸಮಯದಿಂದ ರಕ್ತದೊತ್ತಡ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಹೃದಯ ತೊಂದರೆಗೆ ಒಳಗಾಗುವ ಸಂಭವ ಇರುತ್ತದೆ. ಪ್ರತಿ ಸೆಕೆಂಡ್‌ಗೆ ಹೆಚ್ಚಿನ ಒತ್ತಡದಿಂದ ನಿಮ್ಮ ಹೃದಯ ರಕ್ತವನ್ನು ಪಂಪು ಮಾಡಬಹುದು. ಅಧಿಕ ರಕ್ತದೊತ್ತಡದ ಶಮನಕ್ಕೆ ಲಿಂಬೆಯ ಚಮತ್ಕಾರ

ನಿರಂತರ ಕೆಮ್ಮು

ನಿರಂತರ ಕೆಮ್ಮು

ರಕ್ತ ಕಟ್ಟಿದ ಹೃದಯ ಸ್ತಂಭನವನ್ನು ಹೊಂದಿದ್ದಲ್ಲಿ, ನಿಮ್ಮ ಹೃದಯದ ಮೂಲಕ ಕೆಲವೊಂದು ದ್ರವ್ಯಗಳು ಶ್ವಾಸಕೋಶದಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ಇದು ನಿರಂತರ ಕೆಮ್ಮಿಗೆ ಕಾರಣವಾಗುತ್ತದೆ. ಜನರು ಇದನ್ನು ಸಾಮಾನ್ಯ ಕೆಮ್ಮು ಎಂದೇ ಭಾವಿಸುತ್ತಾರೆ.ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!

ಊದಿಕೊಂಡ ಕೈಕಾಲುಗಳು

ಊದಿಕೊಂಡ ಕೈಕಾಲುಗಳು

ನಿಮ್ಮ ಕೈಗಳು ಮತ್ತು ಕಾಲುಗಳು ಆಗಾಗ್ಗೆ ಊದಿಕೊಳ್ಳುತ್ತಿದೆ ಎಂದಾದಲ್ಲಿ ನಿಮ್ಮ ಹೃದಯ ಸಮಸ್ಯೆಯಲ್ಲಿ ಇದೆ ಎಂದರ್ಥವಾಗಿದೆ. ನಿಮ್ಮ ಕೈಕಾಲುಗಳನ್ನು ತಲುಪಬಲ್ಲ ರಕ್ತವನ್ನು ಪಂಪು ಮಾಡಲು ಹೃದಯವು ಅಸಮರ್ಥಗೊಂಡಿರಬಹುದು. ಇದರಿಂದ ಅಭಿಧಮನಿಗಳು ದ್ರವಗಳನ್ನು ತಳ್ಳುತ್ತವೆ ಮತ್ತು ಈ ಕಾರಣದಿಂದ ನಿಮ್ಮ ಕೈಕಾಲುಗಳು ಊದಿಕೊಳ್ಳುತ್ತವೆ.

ಕುತ್ತಿಗೆ ನೋವು

ಕುತ್ತಿಗೆ ನೋವು

ನೀವು ನಿರಂತರ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಿ ಎಂದಾದಲ್ಲಿ, ನಿಮಗೆ ಹೃದಯ ಸಮಸ್ಯೆ ಇದೆ ಎಂದರ್ಥವಾಗಿದೆ ಏಕೆಂದರೆ ಈ ಸಮಯದಲ್ಲಿ ಕುತ್ತಿಗೆಗೆ ಮೇಲ್ಮುಖವಾಗಿ ಹೃದಯವು ರಕ್ತವನ್ನು ಪಂಪು ಮಾಡುತ್ತಿರಬಹುದು. ಬೆನ್ನೇರಿ ಕಾಡುವ ಕುತ್ತಿಗೆ ನೋವಿಗೆ ಸರಳ ಟಿಪ್ಸ್

ಊದಿಕೊಂಡಿರುವ ವಸಡುಗಳು

ಊದಿಕೊಂಡಿರುವ ವಸಡುಗಳು

ಹೃದಯ ಸಮಸ್ಯೆ ಇದೆ ಎಂದಾದಲ್ಲಿ ನಿಮ್ಮ ವಸಡುಗಳು ಊದಿಕೊಳ್ಳಬಹುದು. ವಸಡುಗಳಲ್ಲಿ ರಕ್ತ ಒಸರುತ್ತಿರಬಹುದು. ಆದ್ದರಿಂದ ನೀವು ಅದನ್ನು ಕಡೆಗಣಿಸಬಾರದು.

English summary

Silent Signs That Your Heart Could Be In Trouble!

Most of us would have heard of people suffering from various heart ailments, right? In fact, we could know someone with a heart ailment personally! Heart ailments are one of the major causes of death, globally. It is estimated that at least 20% of the people die every year, due to heart complications. So, here are a few subtle signs that say your heart could be in trouble; have a look!
X
Desktop Bottom Promotion