For Quick Alerts
ALLOW NOTIFICATIONS  
For Daily Alerts

ಪಾದದ ಕಾಲ್ಬೆರಳನ್ನು ಬಗ್ಗಿ ಮುಟ್ಟಿ ನೋಡಿ, ಹೃದಯ ಸಮಸ್ಯೆ ಇದ್ದರೆ ತಿಳಿಯುವುದು

By Divya Pandith
|

ಹೃದಯ ಎನ್ನುವುದು ಶರೀರದ ಪ್ರಮುಖ ಭಾಗ. ಹಾಗೊಮ್ಮೆ ಅದು ಕೆಲಸ ಮಾಡುವುದನ್ನು ನಿಲ್ಲಿಸಿತು ಎಂದರೆ ನಮ್ಮ ಶರೀರಕ್ಕೆ ಅಸ್ತಿತ್ವ ಎನ್ನುವುದೇ ಇರುವುದಿಲ್ಲ. ಕೆಲವೊಮ್ಮೆ ನಾವು ಸೇವಿಸುವ ಆಹಾರವು ಕಲುಷಿತವಾಗಿದ್ದರೆ ನಿಧಾನವಾಗಿ ಹೃದಯ ಸಂಬಂಧಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವು ನಮ್ಮ ಅರಿವಿಗೆ ಅಷ್ಟು ಸುಲಭವಾಗಿ ಬರದು. ಹಾಗಾಗಿ ಅನಿರೀಕ್ಷಿತವಾಗಿ ಹೃದಯಘಾತ ಉಂಟಾಗುವ ಸಾಧ್ಯತೆ ಇರುತ್ತದೆ. ಹೃದಯದ ಸಮಸ್ಯೆ ಇದೆಯೇ ಎನ್ನುವುದನ್ನು ಅರಿಯಬೇಕೆಂದರೆ ಆಗಾಗ ವೈದ್ಯರಲ್ಲಿ ತಪಾಸಣೆ ಮಾಡಿಸುತ್ತಿರಬೇಕು. ಹಣವನ್ನು ವ್ಯಯ ಮಾಡದೆ ಹೃದಯ ಸಮಸ್ಯೆ ಇದೆಯೇ? ಇಲ್ಲವೇ? ಎನ್ನುವುದನ್ನು ತಿಳಿಯಬೇಕೆಂದರೆ ಒಂದು ಮಾರ್ಗವಿದೆ. ಅದೇನೆಂದರೆ ನೀವು ಬಗ್ಗಿ ನಿಮ್ಮ ಕಾಲಿನ ಹೆಬ್ಬರಳನ್ನು ಮುಟ್ಟುವುದು.

ಅರೇ! ಹೌದಾ? ಎನ್ನುವ ಕುತೂಹಲ ಹಾಗೂ ಆಶ್ಚರ್ಯ ನಿಮಗೆ ಉಂಟಾಗಬಹುದು. ಇದು ನಿಜ. ಎಲ್ಲಾ ವಯಸ್ಸಿನವರೂ ಈ ಪರೀಕ್ಷೆಯ ಮೂಲಕ ಹೃದಯ ಸಮಸ್ಯೆಯನ್ನು ಅರಿಯಬಹುದು. ಇಳಿಯವಯಸ್ಸಿನವರು ಸಹ ಈ ಪರೀಕ್ಷೆ ನಡೆಸಬಹುದು ಎಂದು ಹೇಳಲಾಗುತ್ತದೆ? ಹಾಗಾದರೆ ಆ ವಿಧಾನಗಳು ಯಾವವು ಎನ್ನುವ ಸೂಕ್ತ ವಿವರಣೆ ಹೀಗಿದೆ ನೋಡಿ.

ಪರೀಕ್ಷೆಯ ಹಂತಗಳು ಬಹಳ ಸುಲಭವಾಗಿದೆ. ನೆಲಕ್ಕೆ ಕುಳಿತು ಕಾಲನ್ನು ಮುಂದಕ್ಕೆ ನೀಡಬೇಕು. ನೇರವಾದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ನಂತರ ನಿಧಾನವಾಗಿ ಬಾಗಿ ಹೆಬ್ಬೆರಳನ್ನು ಕೈಗಳಿಂದ ಸ್ಪರ್ಶಿಸಿ. ಈ ವಿಧಾನವು ನಿಮಗೆ ಬಹಳ ಸುಲಭ ಹಾಗೂ ಮೃದುವಾದ ರೀತಿಯಲ್ಲಿಯೇ ಬೆರಳನ್ನು ಸ್ಪರ್ಶಿಸಿದ್ದೀರಿ ಎಂದರೆ ನಿಮಗೆ ಯಾವುದೇ ಹೃದಯ ಸಮಸ್ಯೆ ಇಲ್ಲ ಎಂಬುದನ್ನು ತಿಳಿಯಬಹುದು...

ಸಂಶೋಧನೆಯ ಪ್ರಕಾರ

ಸಂಶೋಧನೆಯ ಪ್ರಕಾರ

ಸಂಶೋಧನೆಗೆ ಸುಮಾರು 500ಕ್ಕೂ ಹೆಚ್ಚು ಜನರನ್ನು ಒಳಪಡಿಸಲಾಗಿತ್ತು. ಅದರಲ್ಲಿ 20 ರಿಂದ 83 ವರ್ಷ ವಯಸ್ಸಿನವರು ಒಳಪಟ್ಟಿದ್ದರು. ಪ್ರತಿಯೊಬ್ಬರ ರಕ್ತದೊತ್ತಡ ಮತ್ತು ಹೃದಯ ಚಟುವಟಿಕೆಯನ್ನು ಅಳೆಯಲಾಗುತ್ತದೆ. ಹಾಗೆ ಭಾಗವಹಿಸಿದವರು ತಮ್ಮ ದೇಹದ ನಮ್ಯತೆ ಅಥವಾ ಫ್ಲೆಕ್ಸಿಬಲ್ ಇರುವ ಮಟ್ಟವನ್ನು ಪರೀಕ್ಷೆಗೆ ಒಳಪಟ್ಟರು. ಇದರಲ್ಲಿ 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ತಮ್ಮ ಕಾಲಿನ ಹೆಬ್ಬೆರಳನ್ನು ಸ್ಪಶಿಸಲು ಸ್ವಲ್ಪ ಕಷ್ಟಪಟ್ಟರು. ಸಾಕಷ್ಟು ಜನರಿಗೆ ಈ ಪ್ರಕ್ರಿಯೆಯು ಅಷ್ಟು ಸುಲಭವಾಗಿ ಆಗಿಲ್ಲ ಎನ್ನುವುದನ್ನು ಸಂಶೋಧಕರು ತಿಳಿದುಕೊಂಡರು.

ಅವರಲ್ಲಿ ಸಮಸ್ಯೆ ಇತ್ತು

ಅವರಲ್ಲಿ ಸಮಸ್ಯೆ ಇತ್ತು

ದೇಹವು ನಮ್ಯತೆಯ ಪರೀಕ್ಷೆಯಲ್ಲಿ ವಿಫಲರಾದವರು ಮತ್ತು ಕಾಲಿನ ಹೆಬ್ಬೆರಳನ್ನು ಸ್ಪರ್ಶಿಸಲು ಸಾಧ್ಯವಾಗದವರಲ್ಲಿ ನಿಜವಾಗಿಯೂ ರಕ್ತನಾಳದ ಸಮಸ್ಯೆಯನ್ನು ಹೊಂದಿದ್ದರು. ಇದರರ್ಥ ಹೃದಯವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಮತ್ತು ಹೃದಯ ರೋಗದ ಅಪಾಯವೂ ಅಧಿಕವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಉತ್ತಮ ಸ್ಥಿತಿಯಲ್ಲಿದೆ

ಉತ್ತಮ ಸ್ಥಿತಿಯಲ್ಲಿದೆ

ನೀವು ನೇರವಾಗಿ ಕುಳಿತು, ನಿಮ್ಮ ಕಾಲಿನ ಮೇಲೆ ಒರಗಿಕೊಂಡು ನಿಮ್ಮ ಕಾಲಿನ ಹೆಬ್ಬೆರಳನ್ನು ಮುಟ್ಟಲು ಸಾಧ್ಯವಾಯಿತು, ಯಾವುದೇ ಸಮಸ್ಯೆ ಎನಿಸಿಲ್ಲ ಎಂದಾದರೆ ನಿಮ್ಮ ಹೃದಯವು ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಬಹುದು. ಈ ಪರೀಕ್ಷೆಯು ನಿಮಗೆ ಕಷ್ಟವಾಗಿದೆ ಎಂದರೆ ನೀವು ಹೃದಯ ತಜ್ಞರನ್ನು ಭೇಟಿಯಾಗಿ, ಪರೀಕ್ಷೆಗೆ ಒಳಗಾಗುವುದು ಸೂಕ್ತ.

ತೊಂದರೆ ಇದೆ

ತೊಂದರೆ ಇದೆ

ಕುಳಿತುಕೊಂಡು ಬಾಗಿ ನಿಮ್ಮ ಕಾಲು ಬೆರಳಿನ ತುದಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ ಎಂದಾದರೆ ಹೃದಯಾಘಾತ ಮತ್ತು ಇನ್ನಿತರ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎನ್ನುವ ಅರ್ಥವನ್ನು ನೀಡುತ್ತದೆ. ಸುಲಭವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ, ತೊಂದರೆ ಉಂಟಾಗುತ್ತಿದೆ ಎಂದರೆ ಅಪಧಮನಿಗಳು ತಮ್ಮ ನಮ್ಯತೆಯನ್ನು ಕಳೆದುಕೊಂಡಿದೆ ಹಾಗೂ ಹೃದಯ ಸಮಸ್ಯೆ ಅಧಿಕವಾಗಿರುತ್ತದೆ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ. ಆರೋಗ್ಯಕರ ಅಪಧಮನಿಗಳು ಸ್ಥಿತಿಸ್ಥಾಪಕತ್ವವನ್ನು ಪಡೆದುಕೊಳ್ಳುತ್ತದೆ. ಇದು ರಕ್ತದೊತ್ತಡವು ಸಾಮಾನ್ಯವಾಗಿರಿಸುತ್ತದೆ. ಅಪಧಮನಿಗಳ ವಯಸ್ಸಿಗೆ ಸಂಬಂಧಿಸಿದ ತೀವ್ರತೆ ಅಪಧಮನಿಯ ಸಮಗ್ರತೆಗೆ ಕಾರಣವಾಗುತ್ತದೆ. ಅನುಕೂಲಕರ ಭಂಗಿಯು ಆರೋಗ್ಯಕರವಾಗಿರುವ ಸೂಚನೆಯನ್ನು ಸೂಚಿಸುತ್ತದೆ.

ಕಾಡುವ ಪ್ರಶ್ನೆ

ಕಾಡುವ ಪ್ರಶ್ನೆ

ಸಾಮಾನ್ಯವಾಗಿ ವಯಸ್ಸಾದಂತೆ ದೇಹವು ಕೆಲವು ವ್ಯಾಯಾಮಗಳಿಗೆ ಒಗ್ಗುವುದಿಲ್ಲ ಎನ್ನುವುದು. ವ್ಯಾಯಾಮವನ್ನು ವಿಸ್ತರಿಸಿದರೆ ಎಲ್ಲಾ ವಯಸ್ಸಿನಲ್ಲೂ ದೇಹವು ಫ್ಲೆಕ್ಸಿಬಲ್ ಅಥವಾ ನಮ್ಯತೆಯನ್ನು ಪಡೆದುಕೊಂಡಿರುತ್ತದೆ. ಮಧ್ಯ ವಯಸ್ಕರಲ್ಲಿ ಮತ್ತು ವಯಸ್ಕರಲ್ಲಿ ಅಪಧಮನಿಯು ಗಟ್ಟಿಗೊಳಿಸುವಿಕೆಯ ಮಾರ್ಪಾಡನ್ನು ವ್ಯಾಯಾಮವು ಹೆಚ್ಚಿಸುವುದು ಎಂದು ಅಧ್ಯಯನವು ದೃಢಪಡಿಸಿದೆ.

ಕಾಡುವ ಪ್ರಶ್ನೆ

ಕಾಡುವ ಪ್ರಶ್ನೆ

ಸಾಮಾನ್ಯವಾಗಿ ವಯಸ್ಸಾದಂತೆ ದೇಹವು ಕೆಲವು ವ್ಯಾಯಾಮಗಳಿಗೆ ಒಗ್ಗುವುದಿಲ್ಲ ಎನ್ನುವುದು. ವ್ಯಾಯಾಮವನ್ನು ವಿಸ್ತರಿಸಿದರೆ ಎಲ್ಲಾ ವಯಸ್ಸಿನಲ್ಲೂ ದೇಹವು ಫ್ಲೆಕ್ಸಿಬಲ್ ಅಥವಾ ನಮ್ಯತೆಯನ್ನು ಪಡೆದುಕೊಂಡಿರುತ್ತದೆ. ಮಧ್ಯ ವಯಸ್ಕರಲ್ಲಿ ಮತ್ತು ವಯಸ್ಕರಲ್ಲಿ ಅಪಧಮನಿಯು ಗಟ್ಟಿಗೊಳಿಸುವಿಕೆಯ ಮಾರ್ಪಾಡನ್ನು ವ್ಯಾಯಾಮವು ಹೆಚ್ಚಿಸುವುದು ಎಂದು ಅಧ್ಯಯನವು ದೃಢಪಡಿಸಿದೆ.

ಹೃದಯವನ್ನು ಆರೋಗ್ಯದಿಂದ ಇಡಬೇಕಾದರೆ...

ಹೃದಯವನ್ನು ಆರೋಗ್ಯದಿಂದ ಇಡಬೇಕಾದರೆ...

ಇನ್ನು ಕಾಯಿಲೆಗಳನ್ನು ದೂರವಿಟ್ಟು ಹೃದಯವನ್ನು ಆರೋಗ್ಯದಿಂದ ಇಡಬೇಕಾದರೆ ಆಯುರ್ವೇದದಲ್ಲಿ ಸೂಚಿಸಿರುವಂತಹ ಕೆಲವೊಂದು ಆಹಾರವನ್ನು ಸೇವಿಸಬೇಕು. ಈ ಲೇಖನದಲ್ಲಿ ಹೃದಯದ ಆರೋಗ್ಯಕ್ಕೆ ಸೂಚಿಸಲಾಗಿರುವ ಕೆಲವೊಂದು ಆಹಾರಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನು ತಿಳಿದುಕೊಂಡು ಅದನ್ನು ಪಾಲಿಸಿಕೊಂಡು ಹೋದರೆ ಆರೋಗ್ಯವಂತ ಹೃದಯವು ನಿಮ್ಮದಾಗುವುದು....

ಗಿಡಮೂಲಿಕೆಗಳು ಮತ್ತು ಮಸಾಲೆಗಳು

ಗಿಡಮೂಲಿಕೆಗಳು ಮತ್ತು ಮಸಾಲೆಗಳು

ಆಯುರ್ವೇದದ ಪ್ರಕಾರ ಮಸಾಲೆ ಮತ್ತು ಗಿಡಮೂಲಿಕೆಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇವುಗಳು ಉಪ್ಪಿಗಿಂತಲೂ ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ. ಆದ್ದರಿಂದ ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ದಾಲ್ಚಿನ್ನಿ ಪುಡಿ ಅಥವಾ ಖಾರದ ಮತ್ತು ಉಪ್ಪಿನಂಶವಿರುವ ಕೆಂಪು ಮೆಣಸಿನ ಪುಡಿ, ದಾಲ್ಚಿನ್ನಿ ಎಲೆ, ಬೆಳ್ಳುಳ್ಳಿಯ ಒಣ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಲಿಂಬೆರಸ, ಸೂರ್ಯಕಾಂತಿ ಬೀಜದ ತಿರುಳಿನ ಪುಡಿ ಮೊದಲಾದವುಗಳನ್ನು ಬಳಸಬಹುದು.

ಆಲಿವ್ ತೈಲ

ಆಲಿವ್ ತೈಲ

ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆ ಅಂದರೆ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ (cold process) ಆಲಿವ್ ಎಣ್ಣೆ. ಇದರಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಟ್ಟಾರೆ ನಿಮ್ಮ ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಎಣ್ಣೆ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಕಡಿಮೆ ಕೊಬ್ಬಿನ ಪ್ರೋಟೀನ್ ನ್ನು ಒಳಗೊಂಡಿರುವ ಸಾಲ್ಮನ್ ನಲ್ಲಿ ಒಮೆಗಾ3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಸಾಲ್ಮನ್ ಅಥವಾ ಒಮೆಗಾ 3 ಕೊಬ್ಬಿನಾಮ್ಲವನ್ನು ಹೊಂದಿರುವ ಮೀನನ್ನು ವಾರದಲ್ಲಿ ಎರಡು ಸಲ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬಾರ್ಲಿ

ಬಾರ್ಲಿ

ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ.

ಮೊಸರು

ಮೊಸರು

ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಗಳಿವೆ. ಆದರೆ ಜೊತೆಗೇ ಕೊಬ್ಬು ಸಹಾ ಇದೆ. ಹೃದಯಕ್ಕೆ ಮೊಸರಿನ ಮೊದಲ ಅಂಶಗಳು ಉತ್ತಮವಾದರೂ ಕೊಬ್ಬು ಉತ್ತಮವಲ್ಲ! ಈ ನಿಜವನ್ನು ಪರಿಗಣಿಸಿದ ಡೈರಿ ಸಂಸ್ಥೆಗಳು ಈಗ ಈ ಕೊಬ್ಬಿನ ಪ್ರಮಾಣವನ್ನು ಸಾಕಷ್ಟು ನಿವಾರಿಸಿ ಲೋ ಫ್ಯಾಟ್ ಅಥವಾ ಕಡಿಮೆ ಕೊಬ್ಬಿನ ರೂಪದಲ್ಲಿ ಮಾರಾಟ ಮಾಡುತ್ತಿವೆ. ಇದರಲ್ಲಿ ಸಕ್ಕರೆ ಬೆರೆಸದ ಮೊಸರನ್ನು ನಿಮ್ಮ ನಿತ್ಯದ ಆಹಾರದ ಒಂದು ಭಾಗವನ್ನಾಗಿಸುವ ಮೂಲಕ ಮೊಸರಿನ ಎಲ್ಲಾ ಆರೋಗ್ಯಕರ ಅಂಶಗಳನ್ನು ಪಡೆಯಬಹುದು.

English summary

A Quick Test of Heart Disease Risk: Can You Touch Your Toes

To know the work of the heart if it is still good or not, then an easy guide is to touch the tip of your toes. In one of the journals it was explained that by testing one of the elements of the body, which are the toes, it can help us detect if we have a heart problem or not. Even when you're in the middle of a holiday, you can check if you have a heart problem or not.
X
Desktop Bottom Promotion