For Quick Alerts
ALLOW NOTIFICATIONS  
For Daily Alerts

ಹೃದಯಾಘಾತದಿಂದ ರಕ್ಷಿಸಿಕೊಳ್ಳುವುದು ಹೇಗೆ?

|

ಹೃದಯ ಸಮಸ್ಯೆ, ಹೃದಯಾಘಾತಗಳು ಇಂದು ಸಾಮಾನ್ಯ ಕಾಯಿಲೆಯಾಗಿದೆ. ಸೂಕ್ತ ಚಿಕಿತ್ಸೆ ಸೂಕ್ತ ನೆರವು ಹೃದಯಾಘಾತದ ಸಮಯದಲ್ಲಿ ನೆರವಿಗೆ ಬರುತ್ತದೆ. ಪ್ರಥಮ ಚಿಕಿತ್ಸೆಯನ್ನು ಹೃದಯಾಘಾತವುಂಟಾದ ವ್ಯಕ್ತಿಗೆ ನೀಡುವುದರಿಂದ ಸಾಯುವಂತಹ ಪರಿಸ್ಥಿತಿ ರೋಗಿಗೆ ಕಡಿಮೆ ಇರುತ್ತದೆ.

ಕೆಲಸಂದರ್ಭದಲ್ಲಿ ನಾವು ಒಂಟಿಯಾಗಿ ಇರುವ ಸಂಭವ ಹೆಚ್ಚಾಗಿರುತ್ತದೆ. ಯಾರ ನೇರವೂ ನಮಗೆ ಆ ಸಮಯದಲ್ಲಿ ದೊರಕುವುದಿಲ್ಲ. ನಮ್ಮ ಜೀವವನ್ನು ನಾವೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಮ್ಮದಾಗಿರುತ್ತದೆ. ಹೆಚ್ಚಿನ ಜನರು ತಾವು ಒಂಟಿಯಾಗಿರುವಾಗಲೇ ಹೃದಯಾಘಾತಕ್ಕೆ ಒಳಗಾಗುತ್ತಾರೆ. ಆ ಸಮಯದಲ್ಲಿ ಯಾರ ನೆರವಿಲ್ಲದೆ ವಿಧಿವಶರಾದ ಸಂಗತಿಗಳೂ ಇರುತ್ತವೆ.

HOW TO SURVIVE A HEART ATTACK WHEN YOU ARE ALONE?

ಯಾರ ನೆರವಿಲ್ಲದೆ ಈ ಸಮಸ್ಯೆಯಿಂದ ಹೊರಬರುವುದು ಈಗ ಕಷ್ಟಕರವಾಗಿಲ್ಲ. ಯಾರೊಬ್ಬರ ನೆರವಿಲ್ಲದೆ ಹೃದಯಾಘಾತಕ್ಕೊಳಗಾದ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಅದು ಹೇಗೆಂದು ಇಲ್ಲಿ ನಾವು ತಿಳಿಸುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಿತ್ತಜನಕಾಂಗದ ರೋಗಕ್ಕೆ ಪರಿಣಾಮಕಾರಿ ಮನೆ ಮದ್ದುಗಳು

ಹೃದಯಾಘಾತವುಂಟಾದಾಗ ಪದೇ ಪದೇ ಮತ್ತು ಬಹಳ ಬಲವಾಗಿ ಕೆಮ್ಮುವುದು ವ್ಯಕ್ತಿಯ ಸಹಾಯಕ್ಕೆ ಬರುತ್ತದೆ. ಪ್ರತೀ ಬಾರಿ ಕೆಮ್ಮುವಾಗ ಕೂಡ ಆಳವಾಗಿ ಉಸಿರನ್ನು ತೆಗೆದುಕೊಳ್ಳಬೇಕು ಕೆಮ್ಮು ದೀರ್ಘವಾಗಿದ್ದು ಬಲವಾಗಿರಬೇಕು.

ಯಾರಾದರೂ ಸಹಾಯಕ್ಕೆ ಬರುವವರೆಗೆ ಕೆಮ್ಮು ಮತ್ತು ದೀರ್ಘ ಉಸಿರಾಟ ಪ್ರಕ್ರಿಯೆಯನ್ನು ನಿಲ್ಲಿಸದಿರಿ. ಈ ಕ್ರಿಯೆಯನ್ನು ಹೃದಯ ಬಡಿತ ಸಾಮಾನ್ಯವಾಗುವವರೆಗೆ ನೀವು ಮಾಡುತ್ತಿರಬೇಕು. ಆಳವಾದ ಉಸಿರಾಟವು ಶ್ವಾಸಕೋಶಗಳಿಗೆ ಆಕ್ಸಿಜನ್ ಅನ್ನು ಒದಗಿಸುತ್ತವೆ ಮತ್ತು ಕೆಮ್ಮು ಹೃದಯವನ್ನು ಹಿಂಡಿ ರಕ್ತ ಪರಿಚಲನೆಯುಂಟಾಗುವಂತೆ ಮಾಡುತ್ತದೆ.

ಕೆಮ್ಮುವುದರಿಂದ ಹೃದಯಕ್ಕೆ ಹಿಂಡುವ ಶಕ್ತಿ ಪ್ರಬಲವಾಗಿ ಉಸಿರಾಟವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಈ ಸಮಯದಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಬಹುದು ಮತ್ತು ಪ್ರಾಣಹಾನಿ ಉಂಟಾಗುವುದಿಲ್ಲ.

ದೀರ್ಘವಾಗಿ ಉಸಿರಾಡುವುದು ರೋಗಿಗೆ ಉಸಿರಾಟದ ಅಭಾವವನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶಗಳಿಗೆ ಸಾಂತ್ವಾನವನ್ನು ಉಂಟು ಮಾಡುತ್ತದೆ. ರಕ್ತ ಪರಿಚನೆ ಸುಲಭವಾಗಿ ನಿಮ್ಮ ಹೃದಯದ ಲಯ ಸಾಮಾನ್ಯವಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಈ ವಿಧಾನವನ್ನು ನೀವು ಹೆಚ್ಚಿನ ಜನರಿಗೆ ತಿಳಿಸುವುದರಿಂದ ಅವರಿಗೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳಬಹುದು. ಹೃದಯ ತಜ್ಞರು ಹೇಳುವಂತೆ, ಈ ವಿಧಾನವನ್ನು ನೀವು ನಾಲ್ಕಾರು ಜನರಿಗೆ ಹಂಚಿಕೊಳ್ಳುವದರಿಂದ ಕನಿಷ್ಟ ಪಕ್ಷ ಒಂದು ಜೀವವಾದರೂ ಉಳಿದುಕೊಳ್ಳಬಹುದು. ನಗೆಚಟಾಕಿಗಳನ್ನು ಹಂಚಿಕೊಳ್ಳುವುದರಿಂದ ಇಂತಹ ಉಪಯುಕ್ತ ಮಾಹಿತಿಯನ್ನು ನೀವು ಎಸ್‌ಎಮ್ಎಸ್, ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳಿ.

English summary

HOW TO SURVIVE A HEART ATTACK WHEN YOU ARE ALONE?

Since many people are alone when they suffer a heart attack, without help,the person whose heart is beating improperly and who begins to feel faint, has only about 10 seconds left before losing consciousness.
X
Desktop Bottom Promotion