For Quick Alerts
ALLOW NOTIFICATIONS  
For Daily Alerts

ಅಧಿಕ ರಕ್ತದೊತ್ತಡ ತಡೆಯಲು ಗಿಡಮೂಲಿಕೆಗಳು

By Super
|

ಅಧಿಕ ರಕ್ತದೊತ್ತಡ ಪ್ರಸ್ತುತ, ವಿಶ್ವದಾದ್ಯಂತ ಕಂಡು ಬರುತ್ತಿರುವ ಒಂದು ಸಾಂಕ್ರಾಮಿಕ ರೋಗ ಎನಿಸಿಕೊಂಡಿದೆ. ಫಾಸ್ಟ್ ಫುಡ್, ಸೋಡಾ ಮತ್ತು ಒತ್ತಡದ ಜೀವನದಿಂದಾಗಿ ಇಂದು ಭಾರತದಲ್ಲಿ ಸರಾಸರಿ ಪ್ರತಿ ಮೂರು ಜನರಲ್ಲಿ ಒಬ್ಬರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುತ್ತಿದ್ದಾರೆ. ಇದು ಹೃದಯ ಖಾಯಿಲೆ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ಖಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ಆದರೆ ಇಂಥ ಆರೋಗ್ಯ ಸಮಸ್ಯೆಗಳು ಉಂಟಾದರೆ ನಾವು ಮೊದಲು ಔಷಧಗಳನ್ನು ಸೇವಿಸುತ್ತೇವೆ. ಔಷಧಗಳಿಂದ ಕೆಲವು ಖಾಯಿಲೆಗಳು ತತ್ ಕ್ಷಣಕ್ಕೆ ಗುಣವಾದಂತೆ ಅನ್ನಿಸಿದರೂ ಅದರಿಂದ ಇತರ ತೊಂದರೆಗಳೂ ಅಧಿಕ. ಆದ್ದರಿಂದ ಇಂತಹ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ರಕ್ತದೊತ್ತಡ ಖಾಯಿಲೆಯನ್ನು ನಿಯಂತ್ರಿಸಬಹುದಾದ ಕೆಲವು ಗಿಡಮೂಲಿಕೆಗಳ ಚಿಕಿತ್ಸೆಗಳು ಇಲ್ಲಿವೆ.

ರಕ್ತದೊತ್ತಡಕ್ಕೆ ಗಿಡಮೂಲಿಕೆಯ ಔಷಧಗಳು

ಬೆಳ್ಳುಳ್ಳಿ

ಬೆಳ್ಳುಳ್ಳಿ

ಸಾಮಾನ್ಯವಾಗಿ ಮಧ್ಯಮ ಪ್ರಮಾಣದಲ್ಲಿ ರಕ್ತದೊತ್ತಡವುಂಟಾಗಿರುವ ವ್ಯಕ್ತಿಯು ಬೆಳ್ಳುಳ್ಳಿ ಸೇವನೆಯಿಂದ ತಾಳ್ಮೆಯನ್ನು ತಂದುಕೊಳ್ಳಬಹುದು. ಬೆಳ್ಳುಳ್ಳಿಯಲ್ಲಿರುವ ಆಲಸಿನ್ ಅಂಶ ನೈಟ್ರಿಕ್ ಆಕ್ಸೈಡ್ ಉತ್ವಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ರಕ್ತದೊತ್ತಡದ ಪ್ರಮಾಣ ಕಡಿಮೆಯಾಗಿ ಅಪಧಮನಿಯ ಸ್ನಾಯುಗಳು ಸಡಿಲವಾಗುತ್ತವೆ.

ಕರ್ಪೂರವಲ್ಲಿ/ದೊಡ್ಡಪತ್ರೆ

ಕರ್ಪೂರವಲ್ಲಿ/ದೊಡ್ಡಪತ್ರೆ

ಸಾಮಾನ್ಯವಾಗಿ ದಕ್ಷಿಣ ಭಾರತದ ಎಲ್ಲಾ ಮನೆಗಳ ತೋಟಗಳಲ್ಲಿ ದೊಡ್ದಪತ್ರೆ ಸಸ್ಯವನ್ನು ಕಾಣಬಹುದು. ಸಂಶೋಧನೆ ಹೇಳುವಂತೆ, ಈ ಸಸ್ಯವು ನಮ್ಮ ದೇಹದಲ್ಲಿ ಅಪಧಮನಿಯ ಮೆದು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ರಕ್ತದೊತ್ತಡವು ಕಡಿಮೆಯಾಗುತ್ತದೆ.

ಈರುಳ್ಳಿ

ಈರುಳ್ಳಿ

ಈರುಳ್ಳಿಯು ಹೃದಯ ರೋಗ ಮತ್ತು ಪಾರ್ಶ್ವವಾಯು ತಡೆಗಟ್ಟುವ antioxidants ಫ್ಲೇವೋನಾಯ್ಡ್ ಹೊಂದಿದೆ.

ಚಕ್ಕೆ

ಚಕ್ಕೆ

ಇದು ಹೃದಯರೋಗವನ್ನು ಮಾತ್ರವಲ್ಲದೇ ಮಧುಮೇಹವನ್ನು ತಡೆಗಟ್ಟುತ್ತದೆ. ದಿನವೂ ನೀರಿನಲ್ಲಿ ಚಕ್ಕೆಯನ್ನು ಹಾಕಿ ಅದರ ನೀರು ಕುಡಿದರೆ ಅಧಿಕ ರಕ್ತದೊತ್ತಡ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

English summary

10 Herbal remedies for High BP | Tips For Health | ಅಧಿಕ ರಕ್ತದೊತ್ತಡವನ್ನು 10 ಮನೆಮದ್ದು ! | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Several herbs have been used in traditional medicine to treat hypertension and here we present a few such remedies.
X
Desktop Bottom Promotion