For Quick Alerts
ALLOW NOTIFICATIONS  
For Daily Alerts

ಹಾಲಿಗೂ, ಸೋಯಾಗೂ ಬಿಪಿಗೂ ಏನು ಸಂಬಂಧ?

|
Milk and Soy Protein for BP Control
ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ನಿಮ್ಮ ಬಿಪಿ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಕಾ? ಹಾಗಾದರೆ ಸೋಯಾ ಮತ್ತು ಕಡಿಮೆ ಕೊಬ್ಬಿನಂಶದ ಹಾಲನ್ನು ನಿಮ್ಮ ಆಹಾರದೊಂದಿಗೆ ಸೇರಿಸಿಕೊಳ್ಳಿ.

ಸೋಯಾ ಮತ್ತು ಹಾಲಿನ ಪ್ರೊಟೀನ್ ಹೆಚ್ಚಿರುವ ಆಹಾರದ ಸೇವನೆಯಿಂದ ರಕ್ತದೊತ್ತಡ ಬರುವುದನ್ನು ತಡೆಯುವುದಲ್ಲದೆ ಅಧಿಕ ರಕ್ತದೊತ್ತಡವಿದ್ದರೆ ಅದರ ನಿಯಂತ್ರಣಕ್ಕೂ ಸಹಕಾರಿಯಾಗಿದೆ ಎಂದು ನೂತನ ಅಧ್ಯಯನ ತಿಳಿಸಿದೆ.

ಅಧ್ಯಯನದಲ್ಲಿ ಭಾಗವಹಿಸಿದ್ದ ಕೆಲವರು ಹಾಲಿನ ಪ್ರೊಟೀನ್ ಸೇವಿಸಿದ್ದರಿಂದ 2.3 ಮಿಲಿಮೀಟರ್ ಮರ್ಕ್ಯುರಿ ಇದ್ದು, ರಕ್ತದೊತ್ತಡ ಕಡಿಮೆಗೊಂಡಿರುವುದು ಕಂಡುಬಂದಿದೆ. ಸೋಯಾ ಪ್ರೊಟೀನ್ ಸೇವಿಸಿದವರಲ್ಲಿ ಇದು 2.0 ಎಂಎಂ Hg ಇದೆ. ಕಡಿಮೆ ಕಾರ್ಬೊಹೈಡ್ರೇಡ್ ಡಯಟ್ ಗಿಂತ ಸೋಯಾ ಅಥವಾ ಕಡಿಮೆ ಕೊಬ್ಬಿನಂಶದ ಹಾಲು ರಕ್ತದೊತ್ತಡ ನಿವಾರಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧಕ ಜಯಾಂಗ್ ಹಿ ತಿಳಿಸಿದ್ದಾರೆ.

English summary

Milk and Soy Protein for BP Control | Controlling BP | ಬಿಪಿ ನಿಯಂತ್ರಣಕ್ಕೆ ಹಾಲು ಮತ್ತು ಸೋಯಾ ಪ್ರೊಟೀನ್ | ರಕ್ತದೊತ್ತಡದ ನಿಯಂತ್ರಣ

If you need to lower your blood pressure, replace your refined carbohydrates with soy or low fat dairy in diet. Have a look how soy or milk can lower BP level.
Story first published: Tuesday, December 6, 2011, 18:14 [IST]
X
Desktop Bottom Promotion