For Quick Alerts
ALLOW NOTIFICATIONS  
For Daily Alerts

ವಿಶ್ವ ಮಧುಮೇಹ ದಿನ 2022: ಈ ಸರಳ ಯೋಗ ಭಂಗಿ ಮಾಡಿದವರಿಗೆ ಮಧುಮೇಹದ ಅಪಾಯವಿಲ್ಲ

|

ನವೆಂಬರ್ 14 ಮಧುಮೇಹ ನಿಯಂತ್ರಣ ದಿನ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಾಮಾನ್ಯ ಸಮಸ್ಯೆಯಂತಾಗಿದೆ. ಮೊದಲೆಲ್ಲಾ 40 ವರ್ಷ ಮೇಲ್ಪಟ್ಟವರಲ್ಲಿ ಮಧುಮೇಹದ ಸಮಸ್ಯೆ ಕಂಡು ಬರುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ವಯಸ್ಸು 25 ದಾಟುತ್ತಿದ್ದಂತೆ ಮಧುಮೇಹ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿಯೇ. ಇನ್ನು ಕೆಲವು ಮಕ್ಕಳಲ್ಲಿ ಟೈಪ್‌ 1 ಮಧುಮೇಹದ ಸಮಸ್ಯೆ ಕಂಡು ಬರುತ್ತಿದೆ.

World Diabetes Day 2022

ಈಗೀನ ಜೀವನಶೈಲಿ, ಆಹಾರಶೈಲಿ ಮಧುಮೇಹ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಕೆಲವರಿಗೆ ವಂಶವಾಹಿಯಾಗಿ ಮಧುಮೇಹದ ಅಪಾಯವಿದ್ದರೂ ನಿಮ್ಮ ಜೀವನಶೈಲಿ ಚೆನ್ನಾಗಿ ಇಟ್ಟುಕೊಂಡರೆ ಖಂಡಿತ ನಿಯಂತ್ರಣದಲ್ಲಿಡಬಹುದು. ಇನ್ನು ರಕ್ತದಲ್ಲಿ ಸಕ್ಕರೆಯಂಶ ಸ್ವಲ್ಪ ಸಕ್ಕರೆಯಂಶ ಹೆಚ್ಚಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ನಿಮ್ಮ ಆಹಾರಶೈಲಿ, ವ್ಯಾಯಾಮದ ಮೂಲಕ ನಿಯಂತ್ರಣ ಮಾಡಿ.

ವ್ಯಾಯಾಮ ಅಂತ ಹೇಳುವಾಗ ಯೋಗಾಸನ ತುಂಬಾನೇ ಪರಿಣಾಮಕಾರಿಯಾಗಿದೆ. ಅದರ ಕಲೆವೊಂದು ಆಸನಗಳನ್ನು ಅಭ್ಯಾಸ ಮಾಡುತ್ತಿದ್ದರೆ ನಿಮ್ಮ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಾಧ್ಯವಾಗುವುದು.

ಮಧುಮೇಹ ಬರುವುದನ್ನು ತಡೆಯಲು, ಮಧುಮೇಹ ಬಂದವರು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ

ಯೋಗಾಸನ ಅಭ್ಯಾಸ ಮಾಡಿಸಿ:
ಸೂಚನೆ: ಈ ವ್ಯಾಯಾಮಗಳು ತುಂಬಾ ಸರಳವಾಗಿರುವುದರಿಂದ ಯಾವುಏ ವಯಸ್ಸಿನವರು, ಯಾವುದೇ ಆರೋಗ್ಯ ಸಮಸ್ಯೆ ಇರುವವರು ಮಾಡಬಹುದು. ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಕಾಲನ್ನು ಮೇಲಕ್ಕೆ ಎತ್ತುವ ವ್ಯಾಯಾಮ ಮಾಡಬೇಡಿ, ಉಳಿದವುಗಳನ್ನು ಮಾಡಬಹುದು. ಇನ್ನು ಗರ್ಭಿಣಿಯರು ನಿಮ್ಮ ತಜ್ಞರ ಸಲಹೆ ಮೇರೆಗಷ್ಟೇ ಮಾಡಿ.

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ

ಬೆಳಗ್ಗೆ ಎದ್ದು 6 ಅಥವಾ 12 ರೌಂಡ್‌ ಸೂರ್ಯ ನಮಸ್ಕಾರ ಮಾಡಿ. ಸೂರ್ಯ ನಮಸ್ಕಾರ ಮಾಡುವುದರಿಂದ ನಿಮ್ಮ ದೇಹಕ್ಕೆ ಫ್ಲೆಕ್ಸಿಬಲ್ ದೊರೆಯುವುದರ ಜೊತೆಗೆ ತುಂಬಾನೇ ಪ್ರಯೋಜನವಿದೆ. ನೀವು ಸೂರ್ಯ ನಮಸ್ಕಾರ ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಸ್ನಾಯುಗಳಿಗೆ ಬಲ ಸಿಗುತ್ತದೆ. ತ್ವಚೆ ಚೆನ್ನಾಗಿರುತ್ತದೆ, ತೂಕ ಇಳಿಕೆಯಾಗುವುದು, ಮಾನಸಿಕ ಒತ್ತಡ ಕಡಿಮೆಯಾಗುವುದು, ದೇಹದಲ್ಲಿರುವ ಕಶ್ಮಲ ಹೊರ ಹಾಕಲು ಸಹಕಾರಿ.

 ಧನುರಾಸನ

ಧನುರಾಸನ

ಈ ಧನುರಾಸನ ಪ್ರತಿನಿತ್ಯ ಮಾಡುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳು ಬಲವಾಗುತ್ತೆ, ಮಲಬದ್ಧತೆ ಸಮಸ್ಯೆ ಶುರುವಾಗುವುದು, ಮೇಧೋಜೀರಕ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸುವುದು, ಇದು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ.

ಪಶ್ಚಿಮ ಉತ್ತಾಸನ

ಪಶ್ಚಿಮ ಉತ್ತಾಸನ

ಮಧುಮೇಹ ನಿಯಂತ್ರಣ ಮಾಡಲು ಪಶ್ಚಿಮ ಉತ್ತಾಸನ ಕೂಡ ಅತ್ಯುತ್ತಮವಾದ ಭಂಗಿಯಾಗಿದೆ. ಇದು ಮಧುಮೇಹ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಅಲ್ಲದೆ ಈ ಭಂಗಿ ಅಧಿಕ ಮಾನಸಿಕ ಒತ್ತಡ, ತಲಡನೋವು, ತಲೆಸುತ್ತು, ಆತಂಕ ಎಲ್ಲವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಒತ್ತಡ ಅಧಿಕವಾಗುವುದರಿಂದ ಕೂಡ ಮಧುಮೇಹದ ಅಪಾಯ ಹೆಚ್ಚು, ಆದ್ದರಿಂದ ಮಾನಸಿಕ ಒತ್ತಡ ಹೊರ ಹಾಕುವ ಈ ವ್ಯಾಯಾಮ ಮಾಡಿ.

ವಿಪರೀತಕರಣಿ

ವಿಪರೀತಕರಣಿ

ವಿಪರೀತಕರಣಿ ತುಂಬಾ ಪರಿಣಾಮಕಾರಿಯಾದ ವ್ಯಾಯಾಮವಾಗಿದೆ. ಮಹಿಳೆಯರು ಮುಟ್ಟಿನ ಸಮಯದಲ್ಲಿ ಈ ವ್ಯಾಯಾಮ ಮಾಡಬಾರದು. ಉಳಿದಂತೆ ಪ್ರತಿನಿತ್ಯ ಅಭ್ಯಾಸ ಮಾಡಿ. ಈ ವ್ಯಾಯಾಮ ಮಾನಸಿಕ ಒತ್ತಡ ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ. ಇದು ದೇಹಕ್ಕೆ ಚೈತನ್ಯ ತುಂಬುವುದು. ಕೆಲಸದಿಂದ ಮನೆಗೆ ಮರಳಿದಾಗ ತುಂಬಾ ಸುಸ್ತಾಗಿರುತ್ತೇವೆ, ಆಗ ಈ ಭಂಗಿಯಲ್ಲಿ 5 ನಿಮಿಷ ಇದ್ದರೆ ಸಾಕು ನಂತರ ನಿಮಗೆ ಸುಸ್ತು ಅನಿಸುವುದೇ ಇಲ್ಲ.

ಭುಜಾಂಗಾಸನ

ಭುಜಾಂಗಾಸನ

ನೀವು ಈ ಆಸನ ಅಭ್ಯಾಸ ಮಾಡುವುದರಿಂದ ನಿಮ್ಮ ಸ್ನಾಯುಗಳ ಬಲವಾಗುವುದು, ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ, ಈ ಭಂಗಿ ಅಸ್ತಮ ರೋಗಿಗಳಿಗೆ ತುಂಬಾನೇ ಒಳ್ಳೆಯದು.

 ಶವಾಸನ

ಶವಾಸನ

ಮೇಲಿನ ಆಸನಗಳನ್ನೆಲ್ಲಾ ಮಾಡುವಾಗ ಒಂದು ಭಂಗಿಯಿಂದ ಮತ್ತೊಂದು ಭಂಗಿ ಮಾಡುವ ಮುನ್ನ 1 ನಿಮಿಷ ಶವಾಸನದಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಎಲ್ಲಾ ಆಸನಗಳನ್ನು ಮಾಡಿದ ಬಳಿಕ 5 ನಿಮಿಷ ಶವಾಸನದಲ್ಲಿ ಮಲಗಿ ವಿಶ್ರಾಂತಿ ಪಡೆಯಿರಿ. ಇದು ಮನಸ್ಸು ಹಾಗೂ ದೇಹಕ್ಕೆ ವಿಶ್ರಾಂತಿಯ ಅನುಭವ ನೀಡುವುದರ ಜೊತೆಗೆ ನಿಮ್ಮೆಲ್ಲಾ ಮಾನಸಿಕ ಒತ್ತಡ ಹೊರ ಹಾಕುತ್ತದೆ, ಇದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಧ್ಯಾನ ಮಾಡಿ

ಧ್ಯಾನ ಮಾಡಿ

ನಂತರ 5 ನಿಮಿಷ ಕೈ ಮಗಿದು, ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡಿ ನಂತರ ಕೈಗಳನ್ನು ಉಜ್ಜಿ, ಕಣ್ಣಿಗೆ ಒತ್ತಿ, ನಂತರ ನಿಧಾನಕ್ಕೆ ಕಣ್ಣು ಬಿಡಿ.

ಈ ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡಿ, ಬದಲಾವಣೆ ಕಾಣುವಿರಿ.

English summary

World Diabetes Day 2022:Yoga Asanas that will Help with Diabetes in Kannada

World Diabetes Day 2022: What are the yoga poses will help to control blood sugar, read on....
X
Desktop Bottom Promotion