For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕಾಯಿಲೆ ಬೀಳುವುದನ್ನು ತಪ್ಪಿಸುವ ಆಹಾರಗಳು

|

ಭಾರತೀಯ ಆಹಾರಶೈಲಿಯೆಂದ್ರೆ ಅಲ್ಲಿ ಮಸಾಲೆಗೆ ತುಂಬಾ ಪ್ರಾಮುಖ್ಯತೆ. ಉಪ್ಪು, ಹುಳಿ ಜೊತೆಗೆ ಸ್ವಲ್ಪ ಅಧಿಕ ಖಾರ ಇದು ನಮ್ಮೆಲ್ಲರ ಆಹಾರ ಪದ್ಧತಿಯಾಗಿದೆ.

ಚಕ್ಕೆ, ಲವಂಗ, ಕಾಳು ಮೆಣಸು, ಶುಂಠಿ ಹೀಗೆ ಮಸಾಲೆಯಿಲ್ಲದೆ ನಮ್ಮ ಆಹಾರ ರುಚಿಸುವುದೇ ಇಲ್ಲ ಅಲ್ಲವೇ? ಕೆಲವು ಕಡೆ ಎಷ್ಟು ಖಾರ ತಿನ್ನುತ್ತಾರೆ ಅಂದ್ರೆ ಖಾರ ಅಭ್ಯಾಸವಿಲ್ಲದವರು ಸ್ವಲ್ಪ ತೆಗೆದು ನಾಲಗೆಯಲ್ಲಿ ಇಟ್ಟರೆ ಸಾಕು ಹೂ.. ಆ.. ನೀರು-ನೀರು ಅಂತ ಕಿರುಚಾಡಲಾರಂಭಿಸುತ್ತಾರೆ, ಅಷ್ಟರಮಟ್ಟಿಗೆ ಖಾರವಾಗಿರುತ್ತೆ. ಮಸಾಲೆ ಹೆಚ್ಚು ತಿನ್ನುವುದು ಒಳ್ಳೆಯದೇ ಇಲ್ಲವೇ ಎಂದು ನೋಡುವುದಾದರೆ ಅದು ನಿಮ್ಮ ದೇಹ ಹಾಗೂ ಕಾಲವನ್ನು ಅವಲಂಬಿಸಿರುತ್ತದೆ.

ಇದೀಗ ಮಳೆಗಾಲ, ಮಳೆಗಾಲದಲ್ಲಿ ನಿಮ್ಮ ಆಹಾರಶೈಲಿ ಬೇಸಿಗೆಗಿಂತ ಬದಲಾಗುವುದು. ಮಳೆಗಾಲದಲ್ಲಿ ಬಿಸಿ ಬಿಸಿ ಆಹಾರ ತಿನ್ನಬೇಕು ಅಲ್ಲದೆ ಮಸಾಲೆ ಹಾಕಿದ ಆಹಾರ ಸೇವನೆ ಒಳ್ಳೆಯದು.

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಸ್ವಲ್ಪ ಕುಗ್ಗುವುದು. ವಾತ ದೋಷ ಹೆಚ್ಚಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು. ಆದ್ದರಿಂದ ಈ ಸಮಯದಲ್ಲಿ ಲಘು ಆಹಾರ ಸೇವನೆ ಮಾಡಬೇಕು ಅಲ್ಲದೆ ಮಸಾಲೆಯನ್ನು ಬಳಸುವುದರಿಂದ ಬೇಧಿ, ಶೀತ, ಡೆಂಗ್ಯೂ ಮುಂತಾದ ಮಳೆಗಾಲದ ಕಾಯಿಲೆಗಳನ್ನು ತಡೆಗಟ್ಟಬಹುದು. ಮಳೆಗಾಲದ ಆಹಾರ ಪದ್ಧತಿಯಲ್ಲಿ ಯಾವ ಮಸಾಲೆಗಳನ್ನು ಸೇರಿಸಿದರೆ ಒಳ್ಳೆಯದು ಎಂದು ನೋಡೋಣ:

1. ಇಂಗು:

1. ಇಂಗು:

ನಿಮ್ಮ ಸಾಂಬಾರ್‌ನಲ್ಲಿ ಇದನ್ನು ಬಳಸಲು ಮರೆಯಬೇಡಿ. ಇದು ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಲ್ಲದೆ ಹೊಟ್ಟೆ ನೋವು ಕಡಿಮೆ ಮಾಡಲು ಮನೆಮದ್ದಾಗಿ ಇದನ್ನು ಬಳಸಬಹುದು. ಮಕ್ಕಳ ಹೊಟ್ಟೆ ಉಬ್ಬಿದ್ದರೆ ಅಥವಾ ಅಜೀರ್ಣದಿಂದ ಹೊಟ್ಟೆನೋವು ಆದಾಗ ಸ್ವಲ್ಪ ಇಂಗು ಎದೆ ಹಾಲಿನಲ್ಲಿ ಅಥವಾ ನೀರಿನಲ್ಲಿ ಕಲೆಸಿ ಕುಡಿಸಿದರೆ ಕಡಿಮೆಯಾಗುವುದು. ಇದು ಹೆಚ್‌1ಎನ್‌1 ವಿರುದ್ಧ ಕೂಡ ಹೋರಾಡುತ್ತೆ. 1918ರಲ್ಲಿ ಸ್ಪಾನಿಷ್‌ ಫ್ಲೂ ಗುಣ ಪಡಿಸಲು ಬಳಸಲಾಗುತ್ತು. ಆದ್ದರಿಂದ ಇಂಗು ಮಳೆಗಾಲದಲ್ಲಿ ಸಾಮಾನ್ಯವಾಗಿ ತಡೆಗಟ್ಟುವ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ.

2. ಶುಂಠಿ

2. ಶುಂಠಿ

ಮಳೆಗಾಲದಲ್ಲಿ ಶುಂಠಿ ಬೇಕೇ ಬೇಕು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ-ಕೆಮ್ಮು ತಡೆಗಟ್ಟುವಲ್ಲಿ ಶುಂಠಿ ಸಮರ್ಥವಾಗಿದೆ. ಇದನ್ನು ಅಡುಗೆಯಲ್ಲಿ ಬಳಸಿ. ಅಲ್ಲದೆ ಮಳೆಗಾಲದಲ್ಲಿ ದಿನಾ ಒಂದು ಶುಂಠಿ ಚಹಾ ಮಾಡಿ ಕುಡಿಯುವುದು ಕೂಡ ಒಳ್ಳೆಯದೇ.

3. ಅಜ್ವೈನ್‌

3. ಅಜ್ವೈನ್‌

ಅಜ್ವೈನ್‌ ಕೂಡ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಜ್ವೈನ್‌ ಅನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಅಜ್ವೈನ್ ಸಮಸ್ಯೆ ಇಲ್ಲವಾಗುವುದು.

4. ಸೋಂಪು

4. ಸೋಂಪು

ಹೋಟೆಲ್‌ಗಳಲ್ಲಿ, ಸಮಾರಂಭಗಳಲ್ಲಿ ಊಟವಾದ ಬಳಿಕ ತಿನ್ನಲು ಸೋಂಪು ಇಟ್ಟಿರುತ್ತಾರೆ. ಸೋಂಪು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಇದನ್ನು ಆಹಾರದ ಜೊತೆ ಸೇರಿಸಿ ಅಥವಾ ಆಹಾರ ತಿಂದ ಬಳಿಕ ಸ್ವಲ್ಪ ತಿನ್ನಿ.

5. ಜೀರಿಗೆ

5. ಜೀರಿಗೆ

ಜೀರಿಗೆ ನಮ್ಮ ಬಹುತೇಕ ಅಡುಗೆಗಳಲ್ಲಿ ಇರುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು ಅಲ್ಲದೆ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಸುವುದು. ಆದ್ದರಿಂದ ಇದನ್ನು ನಿಮ್ಮ ಅಡುಗೆಯಲ್ಲಿ ಸೇರಿಸಿ.

6. ಚಕ್ಕೆ

6. ಚಕ್ಕೆ

ಚಕ್ಕೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ ಇರುವುದರಿಂದ ಉರಿಯೂತ ಕಡಿಮೆ ಮಾಡುತ್ತದೆ. ಹಾನಿಗೊಳಗಾದ ದೇಹದ ನರಗಳನ್ನು ಸರಿಪಡಿಸುತ್ತೆ, ಅಲ್ಲದೆ ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದು.

7. ಬೆಳ್ಳುಳ್ಳಿ

7. ಬೆಳ್ಳುಳ್ಳಿ

ಮಳೆಗಾಲದಲ್ಲಿ ಬೆಳ್ಳುಳ್ಳಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ನಿಮ್ಮ ದಿನ ನಿತ್ಯದ ಆಹಾರದಲ್ಲಿ ಇದನ್ನು ಸೇರಿಸಿ. ಇದು ಮೈಯನ್ನು ಬೆಚ್ಚಗೆ ಇಡುವುದರಿಂದ ಕೆಮ್ಮು, ಶೀತ ಈ ರಿತಿಯ ಸಮಸ್ಯೆ ತಡೆಗಟ್ಟುತ್ತದೆ.

8. ಅರಿಶಿಣ

8. ಅರಿಶಿಣ

ಅರಿಶಿಣ ಇಲ್ಲದೇ ಇರುವ ಅಡುಗೆ ಮನೆಯೇ ಇರಲ್ಲ, ಅರಿಶಿಣವನ್ನು ಬಳಸುವುದರಿಂದ ರೋಗ ನಿರೋಧ ಶಕ್ತಿ ಹೆಚ್ಚುವುದು. ಅಷ್ಟು ಮಾತ್ರವಲ್ಲದೆ ಮಳೆಗಾಲದಲ್ಲಿ ಬಿಸಿ ನೀರಿಗೆ ಅಥವಾ ಹಾಲಿಗೆ ಸ್ವಲ್ಪ ಅರಿಶಿಣ ಪುಡಿ ಸೇರಿಸಿ ಕುಡಿಯುವುದು ಒಳ್ಳೆಯದು.

English summary

Why You Should Not Avoid Spices In Monsoon in Kannada

Why You Should Not Avoid Spices In Monsoon in Kannada, read on...
Story first published: Monday, June 14, 2021, 16:26 [IST]
X
Desktop Bottom Promotion