For Quick Alerts
ALLOW NOTIFICATIONS  
For Daily Alerts

ಆ್ಯಪಲ್ ಶೇಪ್‌ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?

|

ಆ್ಯಪಲ್ ಶೇಪ್‌ ದೇಹಕ್ಕೆ ತುಂಬಾನೇ ಕಾಯಿಲೆ ಬರುತ್ತದೆ ಅಲ್ಲದೆ ಈ ಬಗೆಯ ದೇಹದವರಿಗೆ ಮಧುಮೇಹ, ಕೊಲೆಸ್ಟ್ರಾಲ್ ಹೃದಯಾಘಾತದ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಹೇಳಿವೆ. ಈ ಬಗೆಯ ದೇಹದವರು ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಅದಕ್ಕೆ ಅವರ ದೇಹದ ಆಕಾರ ಕಾರಣ.

ಆ್ಯಪಲ್ ಶೇಪ್‌ನ ದೇಹ ಎಂದರೇನು? ಏಕೆ ಈ ಬಗೆಯ ದೇಹದವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುವುದು ಎಂದು ನೋಡೋಣ:

ಆ್ಯಪಲ್ ಶೇಪ್‌ನ ದೇಹ ಎಂದರೇನು?

ಆ್ಯಪಲ್ ಶೇಪ್‌ನ ದೇಹ ಎಂದರೇನು?

ಕೆಲವರಿಗೆ ಸೊಂಟದ ಸುತ್ತಲೂ ತುಂಬಾನೇ ಬೊಜ್ಜು ಶೇಖರವಾಗುವುದು. ಸೊಂಟದ ಭಾಗದಲ್ಲಿ ಕೊಬ್ಬಿನಂಶ ಹೆಚ್ಚಾಗಿ ಸಂಗ್ರಹವಾದಾಗ ದೇಹ ಆ್ಯಪಲ್ ಶೇಪ್‌ನಲ್ಲಿ ಕಾಣುವುದು. ಯಾರಿ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸವಿರುತ್ತದೋ ಅವರಲ್ಲಿ ಈ ಬಗೆಯ ದೇಹ ಕಂಡು ಬರುವುದು.

ಆ್ಯಪಲ್ ಶೇಪ್‌ಗಿಂತ ದೇಹ ಪಿಯರ್‌ ಶೇಪ್‌ನಲ್ಲಿದ್ದರೆ ಆರೋಗ್ಯಕರ ಎಂದು ಹೇಳಲಾಗುವುದು. ಸೊಂಟದ ಗಾತ್ರ ಕಿರಿದಾಗಿ ಇದ್ದಷ್ಟೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

 ಆ್ಯಪಲ್ ಶೇಪ್‌ನ ದೇಹದವರಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಂಡು ಬರುವುದೇಕೆ?'

ಆ್ಯಪಲ್ ಶೇಪ್‌ನ ದೇಹದವರಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಂಡು ಬರುವುದೇಕೆ?'

ಆ್ಯಪಲ್ ಶೇಪ್‌ನ ದೇಹ ಹೊಂದಿರುವ ಪುರುಷರಲ್ಲಿ ಹೃದಯಾಘಾತದ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಅಧ್ಯಯನ ವರದಿ ಹೇಳಿದೆ. ಅದೇ ರೀತಿ ಆ್ಯಪಲ್ ಶೇಪ್‌ನ ದೇಹವನ್ನು ಹೊಂದಿರುವ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ 8 ಪಟ್ಟು ಅಧಿಕ ಎಂದು ಅಧ್ಯಯನ ವರದಿ ಹೇಳಿದೆ.

ಆ್ಯಪಲ್ ಶೇಪ್‌ನ ದೇಹವನ್ನು ಹೊಂದಿರುವವರಲ್ಲಿ ಹೃದಯಾಘಾತ, ಮಧುಮೇಹ, ಕೊಲೆಸ್ಟ್ರಾಲ್‌ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಸೊಂಟದ ಸುತ್ತ ಕೊಬ್ಬಿನಂಶ ಸಂಗ್ರಹವಾದಾಗ ಹೊಟ್ಟೆಯಲ್ಲಿರುವ ಅಂಗಾಂಗಗಳಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ತೊಂದರೆಯಾಗುವುದು, ಹೀಗಾಗಿ ಆರೋಗ್ಯ ಸಮಸ್ಯೆ ಹೆಚ್ಚುವುದು.

ಆ್ಯಪಲ್ ಶೇಪ್ ದೇಹವನ್ನು ಹೊಂದಲು ಕಾರಣವೇನು?

ಆ್ಯಪಲ್ ಶೇಪ್ ದೇಹವನ್ನು ಹೊಂದಲು ಕಾರಣವೇನು?

ಆರೋಗ್ಯಕರವಲ್ಲದ ಜೀವನಶೈಲಿ ಈ ಬಗೆಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಅಧಿಕ ದೈಹಿಕ ವ್ಯಾಯಾಮವಿಲ್ಲದೆ ಒಂದೇ ಕಡೆ ಕೂತು ಕೆಲಸ ಮಾಡುವುದರಿಂದ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಈ ಬಗೆಯ ಸಮಸ್ಯೆ ಹೆಚ್ಚುವುದು.

ವಾರದಲ್ಲಿ 150 ನಿಮಿಷಗಳ ದೈಹಿಕ ವ್ಯಾಯಾಮ ಮಾಡಬೇಕು, ಯಾರು ಅದು ಮಾಡುವುದಿಲ್ಲವೋ ಅವರಲ್ಲಿ ಈ ಬಗೆಯ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುವುದು.

ಆ್ಯಪಲ್ ಶೇಪ್‌ನ ದೇಹ ಹೊಂದಿದ್ದರೆ ಈ ಬಗೆಯ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು

ಆ್ಯಪಲ್ ಶೇಪ್‌ನ ದೇಹ ಹೊಂದಿದ್ದರೆ ಈ ಬಗೆಯ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು

* ನಿದ್ರಾಹೀನತೆ

* ಹೃದಯ ಸಂಬಂಧಿ ಸಮಸ್ಯೆ (ರಕ್ತನಾಳಗಳು ಬ್ಲಾಕ್ ಆಗುವುದು)

* ಕಿಡ್ನಿ ಸಮಸ್ಯೆ

* ಮಧುಮೇಹದ ಸಮಸ್ಯೆ

* ಚಯಪಚಯ ಕ್ರಿಯೆಯಲ್ಲಿ ತೊಂದರೆ

* ಕರುಳಿನ ಕ್ಯಾನ್ಸರ್

* ಕೊಲೆಸ್ಟ್ರಾಲ್

* ಸ್ತನ ಕ್ಯಾನ್ಸರ್

ಈ ಬಗೆಯ ವ್ಯಾಯಾಮಗಳು ಸೊಂಟದ ಬೊಜ್ಜು ಕರಗಿಸಲು ಸಹಕಾರಿ

ಈ ಬಗೆಯ ವ್ಯಾಯಾಮಗಳು ಸೊಂಟದ ಬೊಜ್ಜು ಕರಗಿಸಲು ಸಹಕಾರಿ

1. ಕ್ರಂಚಸ್‌: ದಿನದಲ್ಲಿ 10 ಕ್ರಂಚಸ್‌ ಮಾಡಿ

2. ನೇರವಾಗಿ ನಿಂತು ಒಂದು ಬದಿಗೆ ಬಾಗುವುದು: ಇದನ್ನು ಸೈಡ್‌ ಪುಲ್ಲಿಂಗ್ ಅಂತ ಕರೆಯಲಾಗುವುದು. ಈ ಬಗೆಯ ವ್ಯಾಯಾಮ ಎಡ ಬದಿ 10 ಬಾರಿ, ಬಲ ಬದಿ 10 ಬಾರಿ ಮಾಡಿ

3. ಏರ್‌ ಸೈಕ್ಲಿಂಗ್‌: ಮಲಗಿ ಕಾಲಿನಲ್ಲಿಯೇ ಸೈಕ್ಲಿಂಗ್ ಮಾಡಿ, ಹೊಟ್ಟೆ ಹಾಗೂ ಸೊಂಟದ ಬೊಜ್ಜು ಕರಗಲು ಸಹಕಾರಿ.

4. ಲೆಗ್ ಲಿಫ್ಟ್‌: ಬೆನ್ನು ಮೇಲೆ ಮಲಗಿ ನಿಮ್ಮ ಕಾಲುಗಳನ್ನು 30, 60, 90 ಡಿಗ್ರಿಯಂತೆ ಎತ್ತಿ ನಂತರ 90ರಿಂದ 60 ಡಿಗ್ರಿ ನಂತರ 30 ಡಿಗ್ರಿಗೆ ತಂದು ನಂತರ ಶವಾಸನದಲ್ಲಿ ರೆಸ್ಟ್ ಮಾಡಿ.

5. ಟ್ವಿಸ್ಟಿಂಗ್: ಇದನ್ನು ಯಾವಾಗ ಬೇಕಾದರೂ ಮಾಡಬಹುದು, ನಿಂತಲ್ಲಿಯೇ ಮೈ ತಿರುಗಿಸಿ. ಕಾಲುಗಳನ್ನು ಮುಂದಕ್ಕೆ ಇಟ್ಟು ದೇಹವನ್ನು ತಿರುಗಿಸಿ ಹಿಂತಿರುಗಿ ನೀಡುವುದು

6. ದಂಡಾಸನ: ದಂಡಾಸನ ಕೂಡ ಸೊಂಟದ ಬೊಜ್ಜು ಕರಗಿಸುತ್ತದೆ

7. ಸಿಟ್ಟಿಂಗ್: ಚೇರ್‌ನಲ್ಲಿ ಕೂತಂತೆ ಗಾಳಿಯಲ್ಲಿ ಕೂತು ಹೇಳುವುದು 5 ಬಾರಿ ಮಾಡಿ.

ಈ ರೀತಿ ಮಾಡಿದರೆ ಹೊಟ್ಟೆ ಹಾಗೂ ಸೊಂಟದ ಸುತ್ತಲಿನ ಬೊಜ್ಜು ಕರಗುವುದು.

ಆಹಾರಕ್ರಮ

* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಹಾಕಿ ಕುಡಿದು ನಂತರ ವ್ಯಾಯಾಮ ಮಾಡಿ

* ವ್ಯಾಯಾಮದ ಬಳಿಕ ಗ್ರೀನ್‌ ಟೀ ಕುಡಿಯಿರಿ

ಆರೋಗ್ಯಕರ ಆಹಾರದ ಕಡೆ ಗಮನ ನೀಡಿ.

English summary

What are the Health Risks Of Apple Shaped Body in Kannada

Why apple shaped body (large waist) more prone to health risk read on....
X
Desktop Bottom Promotion