For Quick Alerts
ALLOW NOTIFICATIONS  
For Daily Alerts

ಪ್ರೊಟೀನ್ ಕೊರತೆಯ ಅಪಾಯವನ್ನು ಹೇಳುವ ಲಕ್ಷಣಗಳಿವು

|

ನಮ್ಮ ದೇಹದಲ್ಲಿ ಕಬ್ಬಿಣದಂಶ, ಕ್ಯಾಲ್ಸಿಯಂ, ಪ್ರೊಟೀನ್ ತುಂಬಾ ಅವಶ್ಯಕ. ಇವುಗಳ ಕೊರತೆ ಉಂಟಾದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು. ಇತ್ತೀಚೆಗೆ ನಗರ ಪ್ರದೇಶದಲ್ಲಿ ಪ್ರೊಟೀನ್ ಕೊರತೆ ಹೆಚ್ಚಾಗುತ್ತಿದೆ. ಅದರಲ್ಲೂ ನಗರದಲ್ಲಿ ಫಾಸ್ಟ್‌ ಫುಡ್, ಪಿಜ್ಜಾ, ಬರ್ಗರ್‌, ಸಂಸ್ಕರಿಸಿದ ಆಹಾರಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಶೇ.73ರಷ್ಟು ಜನರಲ್ಲಿ ಪ್ರೊಟೀನ್‌ ಕೊರತೆ ಕಂಡು ಬರುತ್ತಿದೆ. ಈ ಕುರಿತು ನಡೆದ ಸಮೀಕ್ಷೆಯಲ್ಲಿ ಭಾರತದ ಲಕ್ನೋ ನಗರದಲ್ಲಿ ಈ ಸಮಸ್ಯೆ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

ಭಾರತೀಯರ ಆಹಾರದಲ್ಲಿ ಬೇಳೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಬೇಳೆಯಲ್ಲಿ ಪ್ರೊಟೀನ್ ಅಂಶವಿದ್ದರೂ ದೇಹಕ್ಕೆ ಅಗ್ಯತವಾದ ಪ್ರೊಟೀನ್‌ಗಾಗಿ ಬರೀ ಬೇಳೆ ಸಾರು ಸಾಕಾಗುವುದಿಲ್ಲ. ಬರೀ ಬೇಳೆ ಮಾತ್ರ ತಿಂದರೆ ಮೆತಿಯೋನೈನ್ ಹಾಗೂ ಅಮೈನೋ ಆಮ್ಲದ ಕೊರತೆ ಉಂಟಾಗುತ್ತದೆ. ಆಹಾರಕ್ರಮದಲ್ಲಿ ನಾವು ಮಾಡುವ ಪ್ರೊಟೀನ್ ತಪ್ಪುಗಳು ಪ್ರೊಟೀನ್ ಕೊರತೆಗೆ ಕಾರಣವಾಗಿದೆ.

ಏನಿದು ಪ್ರೊಟೀನ್ ಕೊರತೆ?

ಬರೀ ಬೇಳೆ ತಿಂದರೆ ಸಾಕು ದೇಹಕ್ಕೆ ಅಗ್ಯತವಾದ ಪ್ರೊಟೀನ್‌ ಸಿಗುತ್ತದೆ ಎಂದು ಕೆಲವರು ಭಾವಿಸುತ್ತಾರೆ ಇದರಿಂದ ದೇಹಕ್ಕೆ ಪ್ರೊಟೀನ್ ಕೊರತೆ ಉಂಟಾಗುತ್ತದೆ. ಬೇಳೆ ಜತೆಗೆ ಧಾನ್ಯಗಳು, ಪ್ರಾಣಿಗಳ ಪ್ರೊಟೀನ್ ಆದ ಹಾಲಿನ ಉತ್ಪನ್ನಗಳು, ಮೊಟ್ಟೆ, ಮಾಂಸಾಹಾರ ಸೇವನೆಯಿಂದ ಪ್ರೊಟೀನ್ ಕೊರತೆ ಉಂಟಾಗುವುದಿಲ್ಲ.

ದೇಹಕ್ಕೆ ಎಷ್ಟು ಪ್ರೊಟೀನ್ ಅವಶ್ಯಕ?

ನಮ್ಮ ದೇಹದ ತೂಕಕ್ಕೆ ತಕ್ಕಂತೆ ಪ್ರೊಟೀನ್ ಬೇಕಾಗುತ್ತದೆ. ಒಂದು ಕೆಜಿ ತೂಕಕ್ಕೆ 1ಗ್ರಾಂ ಪ್ರೊಟೀನ್ ಬೇಕು. ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪ್ರೊಟೀನ್ ಅವಶ್ಯಕತೆಯಿದ್ದು, ಇತರರಿಗಿಂತ ಶೇ. 36ರಷ್ಟು ಪ್ರೊಟೀನ್ ಹೆಚ್ಚು ಬೇಕಾಗುತ್ತದೆ.

ಎಷ್ಟು ಪ್ರೊಟೀನ್ ದೇಹಕ್ಕೆ ಅವಶ್ಯಕ?

ಒಂದು ಕೆಜಿ ತೂಕಕ್ಕೆ 1ಗ್ರಾಂ ಪ್ರೊಟೀನ್ ಬೇಕು. ನೀವು 60 ಕೆಜಿ ತೂಕವಿದ್ದರೆ 60 ಗ್ರಾಂ ಪ್ರೊಟೀನ್ ಅವಶ್ಯಕ. ಇನ್ನು ದೈಹಿಕ ಶ್ರಮದಾಯಕ ಕೆಲಸ ಮಾಡುವವರಿಗೆ ಹಾಗೂ ಗರ್ಭಿಣಿಯರಿಗೆ ಇನ್ನೂ ಹೆಚ್ಚಿನ ಪ್ರೊಟೀನ್ ಅವಶ್ಯಕ. ಗರ್ಭಿಣಿಯರಿಗೆ ಇತರರಿಗಿಂತ ಶೇ. 36ರಷ್ಟು ಪ್ರೊಟೀನ್ ಹೆಚ್ಚು ಬೇಕಾಗುವುದು.

ಪ್ರೊಟೀನ್ ಕೊರತೆ ಉಂಟಾದರೆ ಕಂಡು ಬರುವ ಲಕ್ಷಣಗಳು

1. ತ್ವಚೆ, ಕೂದಲು, ಹಾಗೂ ಉಗುರಿನ ತೊಂದರೆ ಉಂಟಾಗುತ್ತದೆ

1. ತ್ವಚೆ, ಕೂದಲು, ಹಾಗೂ ಉಗುರಿನ ತೊಂದರೆ ಉಂಟಾಗುತ್ತದೆ

ಪ್ರೊಟೀನ್ ಕೊರತೆ ಉಂಟಾದರೆ ಚರ್ಮ, ಕೂದಲು ಹಾಗೂ ಉಗುರು ನೋಡಿ ಕಂಡು ಹಿಡಿಯಬಹುದಾಗಿದೆ. ಕೂದಲು ಉದುರುವುದು, ಕೂದಲಿನ ಬಣ್ಣ ಮಂಕಾಗಿ ಕಾಣುವುದು ತ್ವಚೆಯಲ್ಲಿ ಕೆಂಪು ಗುಳ್ಳೆಗಳು ಏಳುವುದು, ಉಗುರಿನಲ್ಲಿ ಬಿರುಕು ಉಂಟಾಗುವುದು ಇವೆಲ್ಲಾ ಪ್ರೊಟೀನ್ ಕೊರತೆಯ ಲಕ್ಷಣಗಳಾಗಿವೆ.

2. ಸ್ನಾಯುಗಳು ಸಡಿಲವಾಗುವುದು

2. ಸ್ನಾಯುಗಳು ಸಡಿಲವಾಗುವುದು

ಬಿಗಿಯಾದ ಸ್ನಾಯುಗಳು ಬೇಕು, ಮಸಲ್ಸ್ ಬೇಕು ಎಂದು ಜಿಮ್‌ಗೆ ಹೋಗುವವರು ವ್ಯಾಯಾಮದ ಜತೆಗೆ ಪ್ರೊಟೀನ್ ಶೇಕ್ಸ್ ತೆಗೆದುಕೊಳ್ಳುತ್ತಾರೆ. ಏಕೆಂದರೆ ಸ್ನಾಯುಗಳು ದೃಢವಾಗಲು, ದಷ್ಟಪುಷ್ಟವಾಗಲು ಪ್ರೊಟೀನ್ ಅವಶ್ಯಕ. ಸ್ನಾಯುಗಳು ಸಡಿಲವಾದರೆ ದೇಹವು ನಿಶ್ಯಕ್ತಿ ರೀತಿ ಕಾಣುವುದು. ಸ್ನಾಯುಗಳು ಸಡಿಲವಾಗುವುದು ಪ್ರೊಟೀನ್ ಕೊರತೆಯ ಲಕ್ಷಣವಾಗಿದೆ.

3. ಮೂಳೆ ಮುರಿತ, ಮೂಳೆ ಸಂಬಂಧಿತ ಸಮಸ್ಯೆ ಹೆಚ್ಚಾಗುವುದು

3. ಮೂಳೆ ಮುರಿತ, ಮೂಳೆ ಸಂಬಂಧಿತ ಸಮಸ್ಯೆ ಹೆಚ್ಚಾಗುವುದು

ಬರೀ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಮಾತ್ರವಲ್ಲ, ಪ್ರೊಟೀನ್ ಕೊರತೆ ಉಂಟಾದಾಗಲು ಮೂಳೆಗಳಿಗೆ ಹಾನಿಯುಂಟಾಗುತ್ತವೆ. ಪ್ರೊಟೀನ್ ಕೊರತೆಯಿಂದ ಮೂಳೆಗಳು ಬಲಹೀನವಾಗುತ್ತವೆ, ಚಿಕ್ಕ ಪೆಟ್ಟಾದರೂ ಮೂಳೆ ಮುರಿತ ಉಂಟಾಗುತ್ತದೆ.

4. ಹಸಿವು ಹೆಚ್ಚುತ್ತದೆ, ಇದರಿಂದ ಅಧಿಕ ಕ್ಯಾಲೋರಿ ತಿನ್ನುತ್ತೇವೆ

4. ಹಸಿವು ಹೆಚ್ಚುತ್ತದೆ, ಇದರಿಂದ ಅಧಿಕ ಕ್ಯಾಲೋರಿ ತಿನ್ನುತ್ತೇವೆ

ಪ್ರೊಟೀನ್ ಅಧಿಕವಿರುವ ಆಹಾರವನ್ನು ಸೇವಿಸಿದರೆ ಬೇಗನೆ ಹಸಿವು ಉಂಟಾಗುವುದಿಲ್ಲ. ಇದರಿಂದ ಮೈ ತೂಕ ಹೆಚ್ಚಾಗುವುದಿಲ್ಲ. ದೇಹದಲ್ಲಿ ಪ್ರೊಟೀನ್ ಕೊರತೆ ಉಂಟಾದರೆ ಬೇಗನೆ ಹಸಿವು ಉಂಟಾಗುತ್ತದೆ. ಇದರಿಂದ ಹೆಚ್ಚು ತಿನ್ನುತ್ತೇವೆ, ಹೀಗಾಗಿ ಪ್ರೊಟೀನ್ ಕೊರತೆಯಿಂದ ಮೈ ತೂಕ ಕೂಡ ಹೆಚ್ಚಾಗುವುದು.

5. ಸೋಂಕಿನ ಅಪಾಯ ಹೆಚ್ಚು

5. ಸೋಂಕಿನ ಅಪಾಯ ಹೆಚ್ಚು

ಪ್ರೊಟೀನ್ ಕೊರತೆ ಉಂಟಾದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಇದರಿಂದ ನಿಶ್ಯಕ್ತಿ ಉಂಟಾಗುತ್ತದೆ. ಇದರಿಂದ ನಮ್ಮ ದೇಹವು ಸೋಂಕಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದರಿಂದ ಆಗಾಗ ಕಾಯಿಲೆ ಬೀಳುತ್ತೇವೆ.

6. ಫ್ಯಾಟಿ ಲಿವರ್ ಸಮಸ್ಯೆ

6. ಫ್ಯಾಟಿ ಲಿವರ್ ಸಮಸ್ಯೆ

ಪ್ರೊಟಿನ್ ಕೊರತೆಯಿಂದ ಉಂಟಾಗುವ ಮತ್ತೊಂದು ಸಮಸ್ಯೆಯೆಂದರೆ ಫ್ಯಾಟಿ ಲಿವರ್. ಫ್ಯಾಟಿ ಲಿವರ್‌ನಿಂದ ಯಕೃತ್ತ್‌ಗೆ ಹಾನಿಯುಂಟಾಗಿ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು, ಮುಖದ ಮೇಲೆ ವೈಟ್‌ ಪ್ಯಾಚಸ್ ಸಮಸ್ಯೆ ಉಂಟಾಗುವುದು, ಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು, ಬಾಯಲ್ಲಿ ಕಹಿ ನೀರು ಬರುವುದು ಮುಂತಾದ ಸಮಸ್ಯೆ ಕಂಡು ಬರುವುದು.

7. ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ

7. ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ

ಮಕ್ಕಳ ಬೆಳವಣಿಗೆಗೆ ಪ್ರೊಟೀನ್ ತುಂಬಾ ಅವಶ್ಯಕ. ಪ್ರೊಟೀನ್ ಕೊರತೆ ಉಂಟಾದರೆ ಮಕ್ಕಳ ಬೆಳವಣಿಗೆ ಕುಂಠಿತವಾಗುವುದು, ಮೂಳೆಗಳು ಬಲಹೀನವಾಗುವುದು. ಆದ್ದರಿಂದ ಮಕ್ಕಳ ಆಹಾರಕ್ರಮದಲ್ಲಿ ಫಾಸ್ಟ್‌ ಫುಡ್‌ ಬದಲಿಗೆ ಸೋಯಾ, ಒಟ್ಟೆ, ಬೀನ್ಸ್, ಹಾಲು, ಚೀಸ್, ಮೊಸರು, ಬಾದಾಮಿ, ಓಟ್ಸ್, ಚಿಕನ್, ಕಾಟೇಜ್ ಚೀಸ್, ಬ್ರೊಕೋಲಿ, ತುನಾ, ನವಣೆ, ಧಾನ್ಯಗಳು, ಕುಂಬಳಕಾಯಿ ಬೀಜ, ಅಗಸೆ ಬೀಜ, ಸೂರ್ಯಕಾಂತಿ ಬೀಜ, ಮೀನು ಇವುಗಳನ್ನು ಸೇರಿಸಿದರೆ ಮಕ್ಕಳಿಗೆ ಪ್ರೊಟೀನ್ ಕೊರತೆ ಉಂಟಾಗುವುದಿಲ್ಲ.

ಅತ್ಯಧಿಕ ಪ್ರೊಟೀನ್ ಸೇವನೆಯಿಂದ ಏನಾಗುತ್ತದೆ?

ದಿನದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರೊಟೀನ್ ಸೇವನೆ ಕೂಡ ಒಳ್ಳೆಯದಲ್ಲ. ಅತ್ಯಧಿಕ ಪ್ರೊಟೀನ್ ಸೇವನೆ ಮಾಡಿದರೆ ಕಿಡ್ನಿ ಹಾಗೂ ಲಿವರ್‌ನ ಮೇಲೆ ಹೆಚ್ಚಿನ ಒತ್ತಡ ಹಾಕುತ್ತದೆ, ಇನ್ನು ಪ್ರೊಟೀನ್ ಹೆಚ್ಚಾದರೆ ಮೈಯಲ್ಲಿ ಕೊಬ್ಬಿನಂಶ ಹೆಚ್ಚಾಗುವುದು.

English summary

what are symptoms of protein deficiency

Protein deficiency is increasing in urban area mainly because of their diet. If you are deficient, your body may show some signs and symptoms, Here We have given what are the symptoms of protein deficiency, Take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more