For Quick Alerts
ALLOW NOTIFICATIONS  
For Daily Alerts

ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು

|

ವ್ಯಾಯಾಮ ಮಾಡಲು ಸಮಯವಿಲ್ಲ, ಡಯಟ್‌ ಫಾಲೋ ಮಾಡಲು ಕಷ್ಟ, ಆದರೂ ತೂಕ ಕಡಿಮೆ ಮಾಡಬೇಕು ಎಂದು ಬಯಸುತ್ತಿದ್ದೀರಾ? ಈ ರೀತಿ ಬಯಸುವುದು ನೀವೊಬ್ಬರೇ ಅಲ್ಲ ಅಧ್ಯಯನ ಪ್ರಕಾರ ಮೂರನೇ ಎರಡು ಭಾಗದಷ್ಟು ಭಾರತೀಯರು ಇದೇ ರೀತಿ ಆಲೋಚಿಸುತ್ತಾರಂತೆ.

weight loss tips

ಡಯಟ್‌ ಬೇಕಾಗಿಲ್ಲ, ವ್ಯಾಯಾಮ ಮಾಡಬೇಕಾಗಿಲ್ಲ ಈ ಪುಡಿ ತಗೊಳ್ಳಿ, ಈ ಮಾತ್ರೆ ತಗೊಳ್ಳಿ ತೂಕ ಕಡಿಮೆಯಾಗುತ್ತೀರಾ ಎಂಬ ಜಾಹೀರಾತಿಗೆ ಮರುಳಾಗಿ ಅಂಥ ವಸ್ತುಗಳನ್ನು ತೆಗೆದುಕೊಂಡರೆ ನಿಮ್ಮ ಅನಾರೋಗ್ಯಕ್ಕೆ ನೀವೇ ಜವಾಬ್ದಾರಿ, ಆದ್ದರಿಂದ ತೂಕ ಕಡಿಮೆಯಾಗಲು ಈ ಬಗೆಯ ಅಡ್ಡದಾರಿ ಹಿಡಿಯಲೇಬೇಡಿ.

ನಿಮಗೆ ವೈಜ್ಞಾನಿಕವಾಗಿ ಸಾಬೀತಾಗಿರುವ ಆರೋಗ್ಯಕರವಾದ ಟಿಪ್ಸ್ ಒಂದನ್ನು ನೀಡುತ್ತಿದ್ದೇವೆ. ಇದು ನಿಮಗೆ ಮೈ ತೂಕ ನಿಯಂತ್ರಣದಲ್ಲಿಡಲು ಸಹಕಾರಿಯಾದೀತು ನೋಡಿ, ಅದುವೇ ಚಯಪಚಯ ಕ್ರಿಯೆ ಉತ್ತಮಪಡಿಸುವುದು.

ಮೈ ತೂಕ ನಿಯಂತ್ರಣಕ್ಕೆ ಚಯಪಚಯಕ್ರಿಯೆ ಉತ್ತಮವಾಗಿರಬೇಕು
ನಿಮ್ಮ ದೇಹದಲ್ಲಿ ಚಯಪಚಯ ಕ್ರಿಯೆ ಚೆನ್ನಾಗಿ ನಡೆಯುತ್ತಿಲ್ಲ ಎಂದಾದರೆ ಮೈ ತೂಕ ಹೆಚ್ಚಾಗುವುದು. ಚಯಪಚಯಕ್ರಿಯೆ ಸರಿಯಾಗಿ ನಡೆದರೆ ಮೈ ತೂಕ ನಿಯಂತ್ರಣದಲ್ಲಿರುತ್ತದೆ, ನಿಮ್ಮ ಚಯಪಚಯಕ್ರಿಯೆ ಉತ್ತಮ ಪಡಿಸುವುದು ಹೇಗೆ ಎಂದು ನೋಡೋಣ:

ಮನೆಯೊಳಗಡೆ ಲೈಟ್‌ ಬದಲಾಯಿಸಿ
* ಏನು ಮನೆಯೊಳಗಡೆ ಲೈಟ್ ಬದಲಾಯಿಸಬೇಕಾ? ಲೈಟ್‌ಗೂ ತೂಕ ನಿಯಂತ್ರಣಕ್ಕೂ ಸಂಬಂಧವೇನು ಎಂದು ಯೋಚಿಸುತ್ತಿರಬಹುದು ಅಲ್ವಾ? Diabetologia ಜರ್ನಲ್‌ನಲ್ಲಿ ಹೇಳಿರುವ ಪ್ರಕಾರ ನಿಮ್ಮ ಇನ್‌ಡೋರ್‌ ಲೈಟಿಂಗ್ ಚಯಪಚಯ ಕ್ರಿಯೆ ಮೇಲೆ ಪರಿಣಾಮ ಬೀರಿ ಮೈ ತೂಕ ನಿಯಂತ್ರಣದಲ್ಲಿಡುತ್ತದೆ, ಹೇಗೆ?

ಅಧ್ಯಯನದಲ್ಲಿ 40-60 ವರ್ಷದೊಳಗಿನ ಅತ್ಯಧಿಕ ಮೈ ತೂಕದ 14 ಪುರುಷ ಹಾಗೂ ಮಹಿಳೆಯರನ್ನು ದಿನದಲ್ಲಿ ಡಿಮ್‌ ಲೈಟ್‌ನಲ್ಲಿ ಹಾಗೂ ಇನ್ನು ಕೆಲವರನ್ನು ದಿನದಲ್ಲಿ ಅಧಿಕ ಬೆಳಕಿನಲ್ಲಿ ಇರಿಸಲಾಗಿತ್ತು. ಯಾರು ಅತ್ಯಧಿಕ ಬೆಳಕಿನಲ್ಲಿದ್ದರೋ ಅವರ ರಕ್ತದಲ್ಲಿ ಗ್ಲುಕೋಸ್‌ ಕಡಿಮೆ ಇತ್ತು ಅಲ್ಲದೆ ನಿದ್ದೆ ಮಾಡಿದಾಗ ಅವರ ಕ್ಯಾಲೋರಿ ಸ್ವಲ್ಪ ಕಡಿಮೆಯಾಗಿತ್ತು.

ಈ ಅಧ್ಯಯನದಲ್ಲಿ ಭಾಗವಹಿಸಿದವರನ್ನು ಒಂದು ನಿರ್ಧಿಷ್ಟ ಬೆಳಕಿನಲ್ಲಿ ಇರಿಸಲಾಗಿತ್ತು ಅವರು ಆಹಾರಕ್ರಮದ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ, ಆದರೂ ಅವರಲ್ಲಿ ಕ್ಯಾಲೋರಿ ಕಡಿಮೆಯಾಗಿತ್ತು.

ಚಯಪಚಯ ಕ್ರಿಯೆ ನಿಧಾನವಾದರೆ ಮೈ ತೂಕ ಹೆಚ್ಚುವುದು
ಯಾರಿಗೆ ಚಯಪಚಯ ಕ್ರಿಯೆ ನಿಧಾನವಾಗಿ ನಡೆಯುವುದೋ ಅವರಲ್ಲಿ ಮೈ ತೂಕ ಹೆಚ್ಚಾಗುವುದು..ಅದೇ ಯಾರಲ್ಲಿ ಚಯಪಚಯ ಕ್ರಿಯೆ ವೇಗವಾಗಿ ನಡೆಯುವುದೋ ಅವರು ಎಷ್ಟೇ ತಿಮದರೂ ದಪ್ಪಗಾಗುವುದಿಲ್ಲ.

ಚಯಪಚಯ ಕ್ರಿಯೆ ಚೆನ್ನಾಗಿದ್ದರೆ ಮಾತ್ರ ವಿಶ್ರಾಂತಿಯಲ್ಲಿದ್ದಾಗ ಹಾಗೂ ಚಟುವಟಿಕೆಯಲ್ಲಿದ್ದಾಗ ಕ್ಯಾಲೋರಿ ಕರಗುವುದು. ಯಾರಿಗೆ ಚಯಪಚಯ ಕ್ರಿಯೆ ವೇಗವಾಗಿ ಇರುವುದೋ ಅವರು ಅಧಿಕ ಕ್ಯಾಲೋರಿಯ ಆಹಾರ ಸೇವಿಸಬೇಕು. ಯಾರಿಗೆ ಚಯಪಚಯ ಕ್ರಿಯೆ ಕಡಿಮೆ ಇರುತ್ತದೋ ಅವರು ಕಡಿಮೆ ಕ್ಯಾಲೋರಿಯ ಆಹಾರ ಸೇವಿಸಬೇಕು.

ಚಯಪಚಯ ಕ್ರಿಯೆಯ ಕಾರ್ಯವೇನು?
ಎದೆಬಡಿತ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ
ದೇಹಕ್ಕೆ ರಕ್ತ ಸಂಚಾರ ಮಾಡುತ್ತದೆ
ಜೀರ್ಣಕ್ರಿಯೆಗೆ ಅವಶ್ಯಕ
ಹಾನಿಗೊಳಗಾದ ಕಣಗಳನ್ನು ಸರಿಪಡಿಸುತ್ತದೆ
ದೇಹದ ಉಷ್ಣಾಂಶವನ್ನು ಸರಿಯಾದ ರೀತಿಯಲ್ಲಿ ಇಡುತ್ತದೆ
ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸವಾದರೆ ದೇಹದಲ್ಲೂ ವ್ಯತ್ಯಾಸವಾಗುವುದು.

ನಮ್ಮ ಚಯಪಚಯಕ್ರಿಯೆ ನಿಧಾನವಿದೆ ಎಂದು ತಿಳಿಯುವುದು ಹೇಗೆ?
ನಮ್ಮ ದೇಹದಲ್ಲಿ ಚಯಪಚಯ ಕ್ರಿಯೆ ನಿಧಾನವಾದಾಗ ಈ ಲಕ್ಷಣಗಳು ಕಂಡು ಬರುವುದು:
* ಇದ್ದಕ್ಕಿದ್ದಂತೆ ತೂಕ ಹೆಚ್ಚಾಗುವುದು ಅಥವಾ ತುಂಬಾ ಕಡಿಮೆಯಾಗುವುದು
* ಬೇಗನೆ ಸುಸ್ತಾಗುವುದು
* ಕೂದಲು ಉದುರುವುದು

ಚಯಪಚಯ ಕ್ರಿಯೆ ವೇಗವಾಗಿ ನಡೆಯುತ್ತಿದ್ದರೆ ದೇಹದಲ್ಲಿ ಈ ಬದಲಾವಣೆ ಕಂಡು ಬರುವುದು
* ತೂಕ ಇಳಿಕೆ
* ರಕ್ತ ಹೀನತೆ
* ತಲೆಸುತ್ತು
* ಜೋರಾದ ಎದೆಬಡಿತ
* ತುಂಬಾ ಸೆಕೆ ಅನಿಸುವುದು
8 ತುಂಬಾ ಹಸಿವು

ಚಯಪಚಯ ಕ್ರಿಯೆ ಸರಿಪಡಿಸುವುದು ಹೇಗೆ?
* ಪ್ರತಿಬಾರಿ ಆಹಾರ ಸೇವಿಸಿದಾಗ ನಿಮ್ಮ ಆಹಾರದಲ್ಲಿ ಪ್ರೊಟೀನ್ ಅಧಿಕವಿರಲಿ: ಪ್ರೊಟೀನ್‌ ಕಡಿಮೆಯಾದರೆ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸವಾಗುವುದು, ಆದ್ದರಿಂದ ಪ್ರೊಟೀನ್‌ ಅಂಶದ ಆಹಾರದ ಕಡೆಗೆ ಗಮನ ನೀಡಿ.
* ಸಾಕಷ್ಟು ನೀರು ಕುಡಿಯಿರಿ: ದಿನಾ 8 ಲೋಟ ನೀರು ಕುಡಿಯಬೇಕು
* ದಿನದಲ್ಲಿ ಅರ್ಧಗಂಟೆ ವ್ಯಾಯಾಮ ಮಾಡಿ: ವಾಕಿಂಗ್ ಅಥವಾ ನಿಮಗಿಷ್ಟವಾದ ವ್ಯಾಯಾಮ ಮಾಡಿ.
* ಭಾರವಾದ ವಸ್ತುಗಳನ್ನು ಎತ್ತಿ: ದೈಹಿಕ ಶ್ರಮದಿಂದ ಚಯಪಚಯ ಕ್ರಿಯೆ ಉತ್ತಮವಾಗುವುದು
* ಆಗಾಗ ನಿಲ್ಲುವುದು, ಕೂರುವುದು ಮಾಡಿ: ಒಂದೇ ಕಡೆ ತುಂಬಾ ಹೊತ್ತು ಕೂರಬೇಡಿ
* ಗ್ರೀನ್ ಟೀ ಕುಡಿಯಿರಿ
* ಮಸಾಲೆ ಪದಾರ್ಥಗಳನ್ನು ಸೇವಿಸಿ: ಚಕ್ಕೆ, ಲವಂಗ, ಏಲಕ್ಕಿ ಈ ಬಗೆಯ ಮಸಾಲೆ ಪದಾರ್ಥಗಳು ಆಹಾರದಲ್ಲಿರಲಿ
* ಚೆನ್ನಾಗಿ ನಿದ್ದೆ ಮಾಡಿ: ದಿನಾ ಒಂದೇ ಸಮಯಕ್ಕೆ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

English summary

Weight Loss Tips: Small Change In Your Daily Routine to Help You Burn More Calories

Weight Loss Tips: How these small changes help to loose weight read on..
X
Desktop Bottom Promotion