For Quick Alerts
ALLOW NOTIFICATIONS  
For Daily Alerts

ಚೀಸ್‌ ಪ್ರಿಯರೇ... ಚೀಸ್‌ ಹೀಗೆ ಬಳಸಿದರೆ ದಪ್ಪಗಾಗಲ್ಲ

|

ಚೀಸ್ ಹಾಲಿನ ಉತ್ಪನ್ನವಾಗಿದ್ದು ಸ್ವಾಭಾವಿಕವಾಗಿಯೇ ತೂಕ ಹೆಚ್ಚಿಸುವ ಗುಣ ಹೊಂದಿದೆ. ಆದರೆ ಇದೇ ಕಾರಣಕ್ಕಾಗಿ ಇದರ ರುಚಿಯನ್ನು ತ್ಯಾಗ ಮಾಡುವುದು ನಮಗೆ ಇಷ್ಟವಾಗುವುದಿಲ್ಲ. ಸ್ವಾದಿಷ್ಟ ಪಿಚ್ಚಾ ಮತ್ತು ಫ್ರೈಗಳು ಇಲ್ಲದೇ ನಮ್ಮ ಜಿಹ್ವಾ ಚಾಪಲ್ಯ ತಣಿಯುವುದಿಲ್ಲ. ರುಚಿಗೆ ಸೋತು ತಿಂದ ಬಳಿಕ ತೂಕ ಏರಿತಲ್ಲಾ ಎಂದು ಮರುಗುವವರೂ ನಾವೇ. ಆದರೆ, ಕೊಂಚ ಜಾಣತನದ ಕ್ರಮ ಕೈಗೊಂಡರೆ ಚೀಸ್ ತಿಂದೂ ತೂಕ ಏರದೇ ಇರದಂತೆ ನೋಡಿಕೊಳ್ಳಬಹುದು.

ಅಷ್ಟಕ್ಕೂ, ಚೀಸ್ ಒಂದೇ ತೂಕ ಏರಿಕೆಗೆ ಕಾರಣವಲ್ಲ, ಬದಲಿಗೆ, ಚೀಸ್ ಹೆಚ್ಚಿನ ಪ್ರಮಾಣದಲ್ಲಿ ತಿಂದೂ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (ಬಿ ಎಂ ಐ) ಅಥವಾ ಎತ್ತರಕ್ಕೆ ತಕ್ಕನಾದ ತೂಕವನ್ನು ಪಡೆದಿರುವ ವ್ಯಕ್ತಿಗಳಿದ್ದಾರೆ.

ತೂಕ ಇಳಿಕೆ ಸಾಧ್ಯವಾಗಬೇಕಾದರೆ ಚೀಸ್ ಅನ್ನು ಈ ಕ್ರಮದಲ್ಲಿ ಸೇವಿಸಿ:

ಉಪಾಹಾರಕ್ಕಾಗಿ ಮೋಜರೆಲ್ಲಾ ಚೀಸ್ ಸೇವಿಸಿ:

ಉಪಾಹಾರಕ್ಕಾಗಿ ಮೋಜರೆಲ್ಲಾ ಚೀಸ್ ಸೇವಿಸಿ:

ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರೀಶನ್ ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಅಧಿಕ ಪ್ರೋಟೀನ್ ಮತ್ತು ಮಧ್ಯಮ ಕ್ಯಾಲೋರಿಗಳ ಚೀಸ್ ಅನ್ನು ಉಪಾಹಾರದಲ್ಲಿ ಸೇವಿಸಿದರೆ ಇವರು ಮುಂದಿನ ಊಟದ ಸಮಯದಲ್ಲಿ ಕಡಿಮೆ ಪ್ರಮಾಣವನ್ನು ಸೇವಿಸುತ್ತಾರೆ. ಅಲ್ಲದೇ ಉಪಾಹಾರದ ಸಮಯದಲ್ಲಿ ಚೀಸ್ ನಿಂದ ದೊರಕುವ ಕ್ಯಾಲೋರಿಗಳು ಎಷ್ಟು ಉಪಯಕ್ತವಾಗಿವೆ ಎಂದು ನಾವು ಅರಿತಿಲ್ಲವೇ?

ಮಹಿಳೆಯರ ಆರೋಗ್ಯ ಮಾಧ್ಯಮದಲ್ಲಿಯೂ ಈ ಬಗೆಯ ವರದಿ ಪ್ರಕಟಗೊಂಡಿದೆ "ಒಂದು ವೇಳೆ ಇಡಿಯ ಹಾಲಿನಿಂದ ತಯಾರಿಸಲಾದ ಚೀಸ್ ಆಯ್ದುಕೊಂಡರೂ, ಈ ಮೋಜರೆಲ್ಲಾ ಚೀಸ್ ನ ಒಂದು ಔನ್ಸ್ ನಷ್ಟು ಪ್ರಮಾಣವನ್ನು ತಾಜಾ ರೂಪದಲ್ಲಿ ಸೇವಿಸುವುದರಿಂದ ಕೇವಲ 85 ಕ್ಯಾಲೋರಿಗಳು ದೊರಕುತ್ತವೆ ಅಷ್ಟೇ. ನೀವು ಟೀವಿ ನೋಡುವಾಗ ಸೇವಿಸುವ ಆಲುಗಡ್ಡೆಯ ಚಿಪ್ಸ್ ಮೊದಲಾದ ಕುರುಕು ತಿಂಡಿಗನ್ನು ಅಷ್ಟೇ ಪ್ರಮಾಣದಲ್ಲಿ ಸೇವನೆದಾಗ 200ಕ್ಕೂ ಹೆಚ್ಚಿನ ಕ್ಯಾಲೋರಿಗಳು ದೇಹ ಸೇರುತ್ತವೆ, ಅಲ್ಲದೇ ಉಪ್ಪು ಸಹಾ ಹೆಚ್ಚಾಗಿ ಸಂಗ್ರಹವಾಗುತ್ತದೆ.

ನಿಮ್ಮ ಮಾಯೋನ್ನೀಸ್ ಅನ್ನು ಚೀಸ್ ಗೆ ಬದಲಿಸಿಕೊಳ್ಳಿ.

ನಿಮ್ಮ ಮಾಯೋನ್ನೀಸ್ ಅನ್ನು ಚೀಸ್ ಗೆ ಬದಲಿಸಿಕೊಳ್ಳಿ.

ನಿಮ್ಮ ಬ್ರೆಡ್ ಮತ್ತು ಬನ್ ಗಳಿಗೆ ಮಾಯೋನ್ನೀಸ್ ಹಚ್ಚಿ ಸೇವಿಸುವ ಅಭ್ಯಾಸವಿದ್ದರೆ, ಇದನ್ನು ಚೀಸ್ ಗೆ ಬದಲಿಸಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಒಂದು ದೊಡ್ಡ ಚಮಚ ಮಾಯೋನ್ನೀಸ್ ನಲ್ಲಿ 94 ಕ್ಯಾಲೋರಿ ಮತ್ತು ಹತ್ತು ಗ್ರಾಂ ಕೊಬ್ಬು ಇರುತ್ತದೆ. ಇದೇ ಪ್ರಮಾಣದ ವ್ಹಿಪ್ಡ್ ಕ್ರೀಂ ಚೀಸ್ ನಲ್ಲಿ 30 ಕ್ಯಾಲೋರಿಗಳೂ ಮತ್ತು ಕೇವಲ ಎರಡೂವರೆ ಗ್ರಾಂ ಕೊಬ್ಬು ಇರುತ್ತದೆ - ಇದು ಸಾಮಾನ್ಯ ಮಾಯೋನ್ನೀಸ್ ಗೆ ಹೋಲಿಸಿದರೆ ತುಂಬಾ ಕಡಿಮೆ ಪ್ರಮಾಣವಾಗಿದೆ. ಈ ಬದಲಾವಣೆಯಿಂದ ನಿಮ್ಮ ದೇಹ ಸೇರುವ ದೈನಂದಿನ ಕ್ಯಾಲೋರಿಗಳ ಪ್ರಮಾಣ ಖಂಡಿತವಾಗಿಯೂ ಕಡಿಮೆಯಾಗುತ್ತದೆ.

ಮನೆಯಲ್ಲಿ ಮಾಡುವ ಸಾಲಾಡ್ ಮತ್ತು ಪಿಜ್ಜಾಗಳಿಗೆ ಫೆಟಾ ಚೀಸ್ ಬಳಸಿ

ಮನೆಯಲ್ಲಿ ಮಾಡುವ ಸಾಲಾಡ್ ಮತ್ತು ಪಿಜ್ಜಾಗಳಿಗೆ ಫೆಟಾ ಚೀಸ್ ಬಳಸಿ

ಮೆಡಿಟರೇನಿಯನ್ ಆಹಾರಕ್ರಮದಲ್ಲಿ ಈ ಚೀಸ್ ಅವಿಭಾಜ್ಯ ಅಂಗವಾಗಿದೆ. ಇದರ ಸೇವನೆಯಿಂದ ಹೃದಯದ ಆರೋಗ್ಯ ಸಂಬಂಧಿ ಕಾಯಿಲೆಗಳು ಆವರಿಸುವ ಸಾಧ್ಯತೆ ತಗ್ಗುತ್ತದೆ ಹಾಗೂ ಉಳಿದೆರಡು ಚೀಸ್ ಗಳಿಗೆ ಹೋಲಿಸಿದರೆ ಇದರಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇದೆ.

ಸೆಂಟರ್ ಫಾರ್ ಮೆಡಿಕಲ್ ವೇಯ್ಟ್ ಲಾಸ್ (Centre For Medical Weight Loss (CMWL)) ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ "ಇದರ ಹುಳಿಮಿಶ್ರಿತ ಉಪ್ಪಿನ ರುಚಿಯಿಂದಾಗಿ, ಇದನ್ನು ಕೊಂಚವೇ ಪ್ರಮಾಣದಲ್ಲಿ ಸಾಲಾಡ್ ಅಥವಾ ಚಪಾತಿಯ ಸುರುಳಿ ಸುತ್ತಿದ ಸ್ಯಾಂಡ್ವಿಚ್ ಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಬಳಸಿದರೆ ಸಾಕಾಗುತ್ತದೆ. ಅಲ್ಲದೇ ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ವಿಟಮಿನ್ ಸಿ ಮೂಳೆಗಳನ್ನು ದೃಢವಾಗಿರಿಸಲು ನೆರವಾಗುತ್ತದೆ. ಕೇವಲ ಒಂದೇ ಪ್ರಮಾಣದಲ್ಲಿ ದೈನಂದಿನ ಅಗತ್ಯದ ಹದಿನಾಲ್ಕು ಶೇಖಡಾ ಈ ಅಲ್ಪ ಪ್ರಮಾಣದಿಂದಲೇ ಲಭಿಸುತ್ತದೆ"

ಉತ್ತಮ ಆರೋಗ್ಯಕರ ಜೀವನಕ್ಕಾಗಿ ಕಾಟೇಜ್ ಚೀಸ್ ಅಥವಾ ಪನೀರ್ ಬಳಸಿ

ಉತ್ತಮ ಆರೋಗ್ಯಕರ ಜೀವನಕ್ಕಾಗಿ ಕಾಟೇಜ್ ಚೀಸ್ ಅಥವಾ ಪನೀರ್ ಬಳಸಿ

ನಾವು ಪನೀರ್ ಎಂದು ಕರೆಯುವ ಕಾಟೇಜ್ ಚೀಸ್ ಪ್ರೋಟೀನಿನ ಉತ್ತಮ ಮೂಲವಾಗಿದೆ. ನಿಮಗೆ ಎಲ್ಲೆಲ್ಲಿ ಇತರ ಬಗೆಯ ಚೀಸ್ ತಿನ್ನಲು ಇಷ್ಟವಾಗುವುದಿಲ್ಲವೋ ಅಲ್ಲೆಲ್ಲಾ ಪನೀರ್ ಬಳಸಿ. ಒಂದು ಬೋಗುಣಿ ಹಣ್ಣುಗಳ ಜೊತೆಗೇ ಕೆಲವು ಚಿಕ್ಕ ತುಂಡುಗಳಷ್ಟು ಪನೀರ್ ಇರಿಸಿದರೆ ಸ್ವಾದವೂ ಹೆಚ್ಚುತ್ತದೆ ಹಾಗೂ ಪೋಷಕಾಂಶಗಳಿಂದ ತುಂಬಿದ ಉಪಾಹಾರ ಸೇವಿಸಲು ಸಾಧ್ಯವಾಗುತ್ತದೆ.

ಚೆಡ್ಡಾರ್ ಚೀಸ್ ಗೆ ಭವ್ಯ ಸ್ವಾಗತ ನೀಡಿ

ಚೆಡ್ಡಾರ್ ಚೀಸ್ ಗೆ ಭವ್ಯ ಸ್ವಾಗತ ನೀಡಿ

ಇದಕ್ಕೂ ಮುನ್ನ ಈ ಬಗೆಯ ಚೀಸ್ ಸೇವಿಸಿದೇ ಇದ್ದಲ್ಲಿ ಈ ಬಾರಿ ಖಂಡಿತಾ ಯತ್ನಿಸಿ. ಇದು ಅದ್ಭುತ ರುಚಿ ಹೊಂದಿರುವುದು ಮಾತ್ರವಲ್ಲ, ಕಡಿಮೆ ಕ್ಯಾಲೋರಿಯ ಆಯ್ಕೆಯನ್ನೂ ಒದಗಿಸುತ್ತದೆ. ಎಲ್ಲೆಲ್ಲಿ ಸಂತೃಪ್ತ ಕೊಬ್ಬುಗಳಿರುವ ಎಣ್ಣೆಗಳನ್ನು ಬಳಸುತ್ತೀರೋ, ಅಲ್ಲೆಲ್ಲಾ ಈ ಚೀಸ್ ಅನ್ನು ಪರ್ಯಾಯವಾಗಿ ಬಳಸಬಹುದು. ನಿಮ್ಮ ನಿತ್ಯದ ಸ್ಯಾಂಡ್ವಿಚ್ಚುಗಳ ಜೊತೆಗೆ ಅಥವಾ ಚಪಾತಿ ಮತ್ತು ಪರೋಟಾಗಳಿಗೆ ಸವರಿಕೊಂಡೂ ಸೇವಿಸಬಹುದು.

English summary

Ways Of Eating Cheese Can Help You Lose Weight

Here are ways of eating cheese can help you lose weight, read on...
X
Desktop Bottom Promotion