Just In
Don't Miss
- Movies
Hamsa Narayan: 'ಪುಟ್ಟಕ್ಕನ ಮಗಳ' ಮದುವೆಯಲ್ಲಿ ರಾಜೇಶ್ವರಿ ಮಿಂಚಿದ್ದೇಗೆ ಗೊತ್ತಾ..?
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೇಗನೇ ತೂಕ ಇಳಿಸಿಕೊಳ್ಳಲು ಈ ಹೊರಾಂಗಣ ಆಟಗಳನ್ನು ಆಡಿ
ತೂಕ ಇಳಿಸೋಕೆ ವಾಕಿಂಗ್, ಜಿಮ್, ಡಯಟ್ ಮೊರೆ ಹೋಗೋದು ಸಹಜ. ಜಿಮ್ ಒಳಗೆ ವ್ಯಾಯಾಮ ಮಾಡೋದು ಒಳ್ಳೆಯದಾದರೂ ನಾಲ್ಕು ಗೋಡೆಗಳ ಹೊರಗೆ ದೈಹಿಕ ವ್ಯಾಯಾಮ ಮಾಡೋದು ಇನ್ನಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೇ ಹೊರಗೆ ವ್ಯಾಯಾಮ ಮಾಡೋದು ಶೇ10ರಷ್ಟು ಹೆಚ್ಚು ಕ್ಯಾಲೋರಿ ಬರ್ನ್ ಮಾಡುತ್ತೆ.
ಹಾಗಾಗಿ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬೇಕೆಂದಿದ್ದರೆ ಹೊರಾಂಗಣದಲ್ಲಿ ವ್ಯಾಯಾಮವನ್ನು ಮಾಡಬೇಕು. ಹೊರಾಂಗಣ ವ್ಯಾಯಾಮವೆಂದರೆ ಯಾವುದೇ ಜಿಮ್ ಎಕ್ವಿಪ್‌ಮೆಂಟ್ಸ್ ಬೇಕಾಗಿಲ್ಲ. ಈ ಹೊರಾಂಗಣಗಳನ್ನು ಆಟಗಳನ್ನು ಆಡಿದರೆ ನೀವು ಬೇಗನೆ ತೂಕ ಕಳೆದುಕೊಳ್ಳುವುದು ಪಕ್ಕಾ.. ಆ ಔಟ್‌ಡೋರ್ ಗೇಮ್ಸ್ ಯಾವ್ಯಾವುದು ನೋಡಿ.

ಹೂಲಾ ಹೂಪ್ಸ್
ಒಂದು ಗಂಟೆಯ ಕಾಲ ಹೂಲಾ ಹೂಪ್ಸ್ ಮಾಡೋದು ಕಷ್ಟವಾದ್ರೂ, ದೈಹಿಕವಾಗಿ ನಿಮಗೆ ತೂಕ ಕಳೆದುಕೊಳ್ಳಲು ಹೆಚ್ಚು ಸಹಾಯ ಮಾಡುತ್ತೆ. ಇದನ್ನು ನೀವು ಮನೆಯ ಹೊರಗೆ ಅಥವಾ ಪಾರ್ಕ್‌ನಲ್ಲಾದರೂ ಮಾಡಬಹುದು. ನೀವು ಮೊದಲನೇ ಬಾರಿ ಹೂಲಾ ಹೂಪ್ಸ್ ಮಾಡುತ್ತಿದ್ದರೆ ನೀವು ತೂಕವಿರುವ ಹೂಪ್ ಬಳಸಿ. ಯಾಕೆಂದರೆ ಇದು ಸುತ್ತ ತಿರುಗಿಸಲು ಸುಲಭ. ನಿಮಗೆ ರೂಢಿಯಾಗುತ್ತಿದ್ದಂತೆ ಹಗುರವಾದ ಹೂಪ್ ಬಳಸಬಹುದು ಇದು ಸ್ಪಿನ್ ಮಾಡಲು ಹೆಚ್ಚುವರಿ ಶ್ರಮವನ್ನು ಹಾಕಬೇಕಾಗುತ್ತದೆ. ಇದು ಹೆಚ್ಚು ಕ್ಯಾಲೋರಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ವಯಸ್ಸಾವರೂ ಕೂಡಾ ಹೂಲಾ ಹೂಪ್ಸ್ ಮಾಡಬಹುದು.

ಬ್ಯಾಡ್ಮಿಂಟನ್
ಇಷ್ಟಗಲ ಜಾಗವಿದ್ದರೆ ಸಾಕು ಎಲ್ಲಿ ಬೇಕಾದರೂ ಆಡಬಹುದಾದ ಆಟ ಬ್ಯಾಡ್ಮಿಂಟನ್. ಈ ಆಟ ಸರಳವಾದರೂ ಒಮ್ಮೆ ಆಟವಾಡಲು ಪ್ರಾರಂಭಿಸಿದರೆ ಸಾಕು ನಂತರದಲ್ಲಿ ಈ ಆಟಕ್ಕೆ ಅಡಿಕ್ಟ್ ಆಗುವಿರಿ. ಬ್ಯಾಸ್ಕೆಟ್ ಬಾಲ್, ಟೆನ್ನಿಸ್ ಮತ್ತು ಕ್ರಿಕೆಟ್‌ನಂತಹ ಆಟಗಳನ್ನು ಆಡಬಹುದಾದರೂ, ಇವುಗಳಿಗೆ ಹೆಚ್ಚಿನ ಸ್ಥಳಾವಕಾಶದ ಜೊತೆಗೆ, ಆಟವಾಡುವವರೂ ಹೆಚ್ಚು ಮಂದಿ ಇರಬೇಕು. ಬ್ಯಾಡ್ಮಿಂಟನ್ ನೆಟ್ ಇಲ್ಲದೇಯೂ ಆಡಬಹುದು. ಆದರೆ ಹೆಚ್ಚಿನ ಶಕ್ತಿ, ಆಸಕ್ತಿಯೊಂದಿಗೆ ಆಡುವಾಗ ಆಚೀಚೆ ಓಡಾಡುವುದು ಹೆಚ್ಚು ಪ್ರಯೋಜನವನ್ನು ನೀಡುತ್ತದೆ.

ಸ್ಕೇಟಿಂಗ್
ಆರಂಭದಲ್ಲಿ ಸ್ಕೇಟಿಂಗ್ ಮಾಡಿ ಬಿದ್ದರೂ, ಈ ಆಟವು ಖುಷಿ ನೀಡುತ್ತದೆ. ಕೆಲವರಿಗೆ ಇದರ ಬಗ್ಗೆ ತಿಳಿಯದೇ ಇರಬಹುದು. ಸ್ಕೇಟಿಂಗ್ ತೂಕವನ್ನೂ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಒಂದು ಗಂಟೆಯಲ್ಲಿ 500 ಕ್ಯಾಲೊರಿ ಬರ್ನ್ ಮಾಡುತ್ತದೆ. ತೂಕ ಕಳೆದುಕೊಳ್ಳುವುದು ಮಾತ್ರವಲ್ಲ, ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ ಹೃದಯದ ಆರೋಗ್ಯಕ್ಕೂ ಉತ್ತಮ. ಓಟಕ್ಕೆ ಹೋಲಿಸಿದರೆ ಇದು ಉತ್ತಮ ಆದರೆ ಇದಕ್ಕೆ ಬೇಕಾಗಿರುವುದು ಸಮತಟ್ಟಾದ ಮೇಲ್ಮೈ ಮತ್ತು ಓಪನ್ ಸ್ಪೇಸ್ ಅಷ್ಟೇ.

ಜಂಪ್ ರೋಪ್
ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ನಾವು ಚಿಕ್ಕವರಿದ್ದಾಗಿನಿಂದ ಆಡುತ್ತಿದ್ದ ಆಟವೆನ್ನುವುದು ನಿಮಗೂ ನೆನಪಿರಬಹುದು. ಇದು ತೂಕ ಇಳಿಸಲು ನೆರವಾಗುವಂತಹ ಸರಳವಾದ ಹೊರಾಂಗಣ ಆಟವಾಗಿದೆ. ಇದು ಕಾಲುಗಳಿಗೆ ಕೆಲಸ ನೀಡಲು ಉತ್ತಮ ಮಾರ್ಗವಾಗಿದೆ. ನಿಮ್ಮ ದೈನಂದಿನ ಫಿಟ್‌ನೆಟ್ ದಿನಚರಿಯಲ್ಲಿ ಸ್ಕಿಪ್ಪಿಂಗ್ ಅನ್ನು ಸೇರಿಸಿಕೊಂಡರೆ ನೀವು ಫಿಟ್ ಆಗಿ ಇರಬಹುದು. ಹೆಚ್ಚು ಕ್ಯಾಲೋರಿ ಬರ್ನ್ ಮಾಡಲು ಹಗ್ಗದ ಸಹಾಯದಿಂದ 15ರಿಂದ 20 ನಿಮಿಷಗಳ ಕಾಲ ತಡೆರಹಿತವಾಗಿ ಜಿಗಿಯಬೇಕು.

ಸೈಕ್ಲಿಂಗ್
ಕಾಲು ಹಾಗೂ ಕಾಲಿನ ಸ್ನಾಯುಗಳಿಗೆ ಉತ್ತಮ ವ್ಯಾಯಾಮವನ್ನು ನೀಡುವ ಆಟವೆಂದರೆ ಸೈಕ್ಲಿಂಗ್. ಜಿಮ್‌ನೊಳಗೆ ಸೈಕ್ಲಿಂಗ್ ಮಾಡುವುದಕ್ಕಿಂತಲೂ ಹೊರಾಂಗಣದದಲ್ಲಿ ಸೈಕ್ಲಿಂಗ್ ಮಾಡುವುದು ಮನಸ್ಸಿಗೂ ಖುಷಿ ನೀಡುತ್ತೆ. ನೀವು ಬೇಗನೆ ತೂಕ ಕಳೆದುಕೊಳ್ಳಬೇಕೆಂದಿದ್ದರೆ ಕಠಿಣವಾದ ಮಾರ್ಗಗಳು ಮತ್ತು ಏರು ದಾರಿಗಳಲ್ಲಿ ಸೈಕ್ಲಿಂಗ್ ಮಾಡಿ. ಇದು ಸ್ನಾಯುಗಳ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ. ಉದಾಹರಣೆಗೆ ಕಡಿದಾದ ಬೆಟ್ಟದ ಏರಿಳಿತ ಹಾಗೂ ನೇರವಾದ ರಸ್ತೆಗಳಲ್ಲಿ ವೇಗವಾಗಿ ಪೆಡಲ್ ಮಾಡಿ.

ಈಜು
ಈಜುವುದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತೆ ಎನ್ನುವುದನ್ನು ನೀವು ಕೇಳಿರಬಹುದು. ಇನ್ಯಾಕೆ ತಡ.. ಎರಡು ಮನಸ್ಸು ಮಾಡದೇ ನೀರಲ್ಲಿ ಧುಮುಕಿ ಈಜಾಡಲು ಆರಂಭಿಸಿ. ಇದು ತೂಕ ಕಳೆದುಕೊಳ್ಳಲು ಉತ್ತಮ ಆಯ್ಕೆಯಾಗಬಹುದು. ನಿಮಗೆ ಬರೀ ಈಜಾಡುವುದು ಬೋರ್ ಆದರೆ ಕ್ಯಾಚ್ ಆಥವಾ ನೀರಲ್ಲಿ ವಾಲಿಬಾಲ್ ಕೂಡಾ ಆಡಬಹುದು.

ಫ್ರಿಸ್ಬೀ
ನಿಮಗೆ ಸಂಗಾತಿ ಇದ್ದರೆ ಅಥವಾ ನೀವು ಶ್ವಾನಪ್ರಿಯರಾಗಿದ್ದರೆ ಫ್ರಿಸ್ಬೀ ಆಟವು ನಿಮಗೆ ಬೆಸ್ಟ್. ವಾರಾಂತ್ಯದಲ್ಲಿ ನೀವು ಮನೆಮಂದಿಯೊಂದಿಗೆ ಮಾತ್ರವಲ್ಲ ಸ್ನೇಹಿತರೊಂದಿಗೂ ಈ ಆಟವನ್ನು ಆಡಬಹುದು.ಫ್ರಿಸ್ಬೀ ಆಡುವಾಗ ಓಡುವುದರಿಂದ, ಹಿಡಿಯುವುದು ಹಾಗೂ ಎಸೆಯುವುದರಿಂದ ನಿಮ್ಮ ದೇಹವು ಎಲ್ಲಾ ರೀತಿಯ ಪ್ರಯೋಜನ ಪಡೆಯುತ್ತದೆ. ಮೂವತ್ತು ನಿಮಿಷಗಳ ಫ್ರಿಸ್ಬೀ ಆಟವು 100 ಕ್ಯಾಲೊರಿ ಬರ್ನ್ ಮಾಡುತ್ತೆ. ನೀವು ಫ್ರಿಸ್ಬೀ ಬದಲಿಗೆ ವಾಲಿಬಾಲ್ ಆಟವನ್ನೂ ಆಡಬಹುದು.

ಬೀಚ್ ವಾಲಿಬಾಲ್
ನೀವು ಸಮುದ್ರತೀರದಲ್ಲಿ ವೀಕೆಂಡ್ ಕಳೆಯಬಯಸುತ್ತಿದ್ದರೆ ನಿಮಗೆ ಮೋಜಿನ ಜೊತೆಗೆ ಕ್ಯಾಲೊರಿ ಬರ್ನ್ ಮಾಡುವ ಆಟವೆಂದರೆ ಬೀಚ್ ವಾಲಿಬಾಲ್. ಅದೂ ಬೀಚ್‌ನಲ್ಲಿ ವಾಲಿಬಾಲ್ ಆಡುವುದು ಇನ್ನೂ ಹೆಚ್ಚು ಪ್ರಯೋಜನ ನೀಡುತ್ತೆ. ಇದು ದೇಹಕ್ಕೆ ಕಂಪ್ಲೀಟ್ ವರ್ಕ್‌ಔಟ್ ನೀಡುವುದರ ಜೊತೆಗೆ ತೂಕವನ್ನು ಇಳಿಸಲೂ ಸಹಾಯ ಮಾಡುತ್ತದೆ. ಸಾದಾ ನೆಲದಲ್ಲಿ ಆಡುವುದಕ್ಕಿಂತ ಬೀಚ್‌ನಲ್ಲಿ ಮರಳಿನಲ್ಲಿ ವಾಲಿಬಾಲ್ ಆಡುವುದು ಸ್ವಲ್ಪ ಕಷ್ಟ. ಆದರೆ ಇದೇ ದೇಹಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ. ಬೀಚ್ ವಾಲಿಬಾಲ್ ಅತ್ಯುತ್ತಮ ಕಾರ್ಡಿಯೋವ್ಯಾಸ್ಕುಲರ್ ವ್ಯಾಯಾಮವಾಗಿದ್ದುಇದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಮತ್ತು ಎಲ್ಲಾ ಋತುವಿನಲ್ಲೂ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಜಿಮ್‌ನಲ್ಲಿ ಬೆವರು ಸುರಿಸುವುದಕ್ಕಿಂತ ಶುದ್ಧಗಾಳಿ ಬೀಸುವ ಹೊರಾಂಗಣ ವಾತಾವರಣದಲ್ಲಿ ಬೆವರು ಸುರಿಸುವುದು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.