For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಹೀಗೆ ಸೇವಿಸಿ

|

ಮಳೆಗಾಲದಲ್ಲಿ ಕಾಯಿಲೆ ಬೀಳುವುದನ್ನು ತಪ್ಪಿಸಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಮಳೆಗಾಲದಲ್ಲಿ ನಾವು ತಿನ್ನುವ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

Food Habits You Should Follow In Rainy Season

ಮಳೆಗಾಲದಲ್ಲಿ ಪ್ರಮುಖವಾಗಿ ನಾವು ಮಾಡಬೇಕಾಗಿರುವುದು ನಮ್ಮ ದೇಹ ಬೆಚ್ಚಗೆ ಇರುವಂತೆ ನೋಡಿಕೊಳ್ಳುವುದು. ಇನ್ನು ಈ ಸಮಯದಲ್ಲಿ ಸಿಗುವ ಸೀಸನ್‌ ಫುಡ್ಸ್ ಕೂಡ ದೇಹವನ್ನು ಬೆಚ್ಚಗೆ ಇಡುವಂತೆ ಮಾಡುತ್ತದೆ. ಮಳೆಗಾಲದಲ್ಲಿ ನೀವು ಈ ಆಹಾರ ಅಭ್ಯಾಸ ಪಾಲಿಸಿದ್ದೇ ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು.

1. ನೀರನ್ನು ಕುದಿಸಿ ಕುಡಿಯಬೇಕು

1. ನೀರನ್ನು ಕುದಿಸಿ ಕುಡಿಯಬೇಕು

ನಿಮಗೆ ತಣ್ಭೀರು ಕುಡಿಯುವ ಅಭ್ಯಾಸವಿದ್ದರೂ ಮಳೆಗಾಲದಲ್ಲಿ ಹಾಗೆ ಕುಡಿಯಲು ಹೋಗಬೇಡಿ. ಇದರಿಂದ ನೀರಿನಿಂದ ಬರುವ ಸಮಸ್ಯೆ ಕಾಲರಾ ಮುಂತಾದ ರೋಗ ಬರುವ ಅಪಾಯ ಹೆಚ್ಚು. ನೀರನ್ನು ಕುದಿಸಿ ಬಿಸಿ ಬಿಸಿ ಕುಡಿಯಿರಿ. ಬಿಸಿ ನೀರು ಕುಡಿಯಲು ಇಷ್ಟವಿಲ್ಲದಿದ್ದರೆ ಅದನ್ನು ಆರಿಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.

2. ತುಂಬಾ ಉಪ್ಪಿನಂಶವಿರುವ ಆಹಾರ ಸೇವಿಸಬೇಡಿ

2. ತುಂಬಾ ಉಪ್ಪಿನಂಶವಿರುವ ಆಹಾರ ಸೇವಿಸಬೇಡಿ

ಮಳೆಗಾಲದಲ್ಲಿ ಸಾಮಾನ್ಯವಾಗಿ ಕುರುಕುಲು ತಿಂಡಿಗಳನ್ನು ತಿನ್ನುವ ಬಯಕೆ ಹೆಚ್ಚಾಗುವುದು. ಅದರಲ್ಲೂ ಪಾಪ್‌ಕಾರ್ನ್‌, ಮತ್ತಿತರ ಚಿಪ್ಸ್ ತಿನ್ನುವ ಅಭ್ಯಾಸವಿದ್ದರೆ ಅವುಗಳನ್ನು ನಿಲ್ಲಿಸಿ. ಅಲ್ಲದೆ ಎಣ್ಣೆ ಪದಾರ್ಥ ತಿನ್ನಲು ಇಷ್ಟವಾದರೂ ತುಂಬಾ ಎಣ್ಣೆ ಪದಾರ್ಥ ತಿನ್ನುವುದು ಒಳ್ಳೆಯದಲ್ಲ. ಇದರಿಂದ ಮೈ ತೂಕ ಹೆಚ್ಚಾಗುವುದರ ಜೊತೆಗೆ ಹೆಚ್ಚಿನ ರಕ್ತದೊತ್ತಡ ಹೆಚ್ಚುವುದು.

3. ಹಸಿ ಆಹಾರ ಸೇವನೆ ಮಾಡಬೇಡಿ

3. ಹಸಿ ಆಹಾರ ಸೇವನೆ ಮಾಡಬೇಡಿ

ಮಳೆಗಾಲದಲ್ಲಿ ತರಕಾರಿಯನ್ನು ಚೆನ್ನಾಗಿ ಬೇಯಿಸಿ ತಿನ್ನಿ, ಏಕೆಂದರೆ ಮಳೆಗಾಲದಲ್ಲಿ ಜೀರ್ಣಕ್ರಿಯೆಯ ಸಾಮಾರ್ಥ್ಯ ಕಡಿಮೆ ಇರುತ್ತದೆ. ಇನ್ನು ಹೊರಗಡೆ ಹೋಗಿ ಆಹಾರ ಸೇವನೆ ಮಾಡಬೇಡಿ. ಆದಷ್ಟು ಮನೆಯಲ್ಲಿಯೇ ಆಹಾರ ಸೇವಿಸಿ.

4. ಯಾವ ತರಕಾರಿ ಸೇವನೆ ಒಳ್ಳೆಯದು

4. ಯಾವ ತರಕಾರಿ ಸೇವನೆ ಒಳ್ಳೆಯದು

ಹಾಗಾಲಕಾಯಿ, ಸೋರೆಕಾಯಿ, ಸಿಹಿ ಕುಂಬಳಕಾಯಿ ಈ ರೀತಿಯ ಆಹಾರ ಪದಾರ್ಥಗಳನ್ನು ಮಳೆಗಾಲದಲ್ಲಿ ಹೆಚ್ಚಾಗಿ ಸೇವಿಸಬೇಕು. ಅಲ್ಲದೆ ಪಾಲಾಕ್ ಸೊಪ್ಪು ಮುಂತಾದ ಸೊಪ್ಪು ತಂದು ಅಡುಗೆ ಮಾಡುವಾಗ ಚೆನ್ನಾಗಿ ಉಪ್ಪು ನೀರಿನಲ್ಲಿ ಹಾಕಿ ತೊಳೆದು ಮಾಡಬೇಕು. ಏಕೆಂದರೆ ಮಳೆಗಾಲದಲ್ಲಿ ಎಲೆಯಲ್ಲಿ ಸೂಕ್ಷಾಣು ಜೀವಿಗಳ ಚಟುವಟಿಕೆ ಅಧಿಕವಿರುತ್ತದೆ. ಇದನ್ನು ತಿಂದಾಗ ಆರೋಗ್ಯ ಸಮಸ್ಯೆ ಉಂಟಾಗಬಹುದು.

5. ಮಾಂಸಾಹಾರ ಸೇವಿಸುವವರು ಈ ಅಂಶಗಳನ್ನು ಗಮನಿಸಿ

5. ಮಾಂಸಾಹಾರ ಸೇವಿಸುವವರು ಈ ಅಂಶಗಳನ್ನು ಗಮನಿಸಿ

ನಿಮಗೆ ಅರ್ಧ ಬೇಯಿಸಿದ ಮೊಟ್ಟೆ (ಹಾಫ್‌ ಬಾಯ್ಲ್ಡ್ ಎಗ್) ತಿನ್ನುವುದು ಇಷ್ಟವಾದರೂ ಮಳೆಗಾಲದಲ್ಲಿ ಹಾಗೇ ತಿನ್ನಲು ಹೋಗಬೇಡಿ, ಮೊಟ್ಟೆ, ಮೀನು, ಮಾಂಸ ಏನೇ ಆಗಲಿ ಚೆನ್ನಾಗಿ ಬೇಯಿಸಿ ತಿನ್ನಬೇಕು. ನಮ್ಮ ದೇಹದಲ್ಲಿ ಮಳೆಗಾಲದಲ್ಲಿ ಜೀರ್ಣ ಸಾಮಾರ್ಥ್ಯ ಕಡಿಮೆ ಇರುತ್ತದೆ. ನಾವು ಸರಿಯಾಗಿ ಮಾಂಸಾಹಾರ ತಿಂದಾಗ ಅಜೀರ್ಣ ಉಂಟಾಗುವುದು.

6. ಯಾವ ಹಣ್ಣುಗಳನ್ನು ತಿನ್ನಬಾರದು

6. ಯಾವ ಹಣ್ಣುಗಳನ್ನು ತಿನ್ನಬಾರದು

ಸೀಸನಲ್ ಫುಡ್ಸ್ ತಿನ್ನಿ. ಈ ಸಮಯದಲ್ಲಿ ಹಲಸಿನ ಹಣ್ಣು ಸಿಗುತ್ತದೆ, ಮಾವಿನ ಹಣ್ಣು ಸಿಗುತ್ತದೆ. ಆದರೆ ಕಲ್ಲಂಗಡಿ, ಕರ್ಬೂಜ , ದ್ರಾಕ್ಷಿಈ ರೀತಿಯ ಹಣ್ಣುಗಳನ್ನು ತಿನ್ನಲು ಹೋಗಬೇಡಿ.

7. ಹರ್ಬಲ್ ಟೀ, ಕಷಾಯ ಕುಡಿಯಿರಿ

7. ಹರ್ಬಲ್ ಟೀ, ಕಷಾಯ ಕುಡಿಯಿರಿ

ನೀವು ಮಾಮೂಲಿ ಟೀ ಕುಡಿಯುವ ಬದಲು ಶುಂಠಿ ಟೀ, ಚಮೋಯಿಲ್ ಟೀ ಹೀಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟೀ ಕಷಾಯ ಕುಡಿಯಿರಿ.

8. ಖಾರವಿರುವ ಹಾಗೂ ಹುಳಿ ಇರುವ ಆಹಾರ ಸೇವಿಸಬೇಡಿ

8. ಖಾರವಿರುವ ಹಾಗೂ ಹುಳಿ ಇರುವ ಆಹಾರ ಸೇವಿಸಬೇಡಿ

ತುಂಬಾ ಖಾರವಿರುವ ಹಾಗೂ ಹುಳಿ ಇರುವ ಆಹಾರ ಸೇವಿಸಬೇಡಿ

ಮಳೆಗಾಲದಲ್ಲಿ ಕೆಲವರು ಆರೋಗ್ಯಕ್ಕೆ ಒಳ್ಳೆಯದು ಎಂದು ತುಂಬಾ ಖಾರ ಪದಾರ್ಥಗಳನ್ನು ತಿನ್ನುತ್ತಾರೆ. ಆದರೆ ಅದು ಒಳ್ಳೆಯದಲ್ಲ. ಖಾರ ಮತ್ತು ಹುಳಿ ಮಿತಿಯಲ್ಲಿರಲಿ, ಇಲ್ಲದಿದ್ದರೆ ಅದು ತ್ವಚೆ ಅಲರ್ಜಿ ಉಂಟು ಮಾಡುವುದು.

ಸಲಹೆ: ಮಳೆಗಾಲದಲ್ಲಿ ಬಿಸಿಲು ಕಡಿಮೆ ಇರುತ್ತದೆ, ದೇಹಕ್ಕೆ ವಿಟಮಿನ್ ಡಿ ಅವಶ್ಯಕವಿರುವುದರಿಂದ ಅಂತಹ ಆಹಾರ ಸೇವಿಸಿ, ಸ್ವಲ್ಪ ಹೊತ್ತು ಬಿಸಿಲು ಬಂದಾಗ ಅದಕ್ಕೆ ಮೈಯೊಡ್ಡಿ, ಇವೆಲ್ಲಾ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

English summary

The Food Habits You Should Follow In Rainy Season To Boost Immunity

Here are food habits you should follow in rainy season to boost immunity, read on,
X
Desktop Bottom Promotion